Search
  • Follow NativePlanet
Share
» »ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?

ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?

ದೇಶದ ಅತ್ಯಂತ ಶ್ರೀಮಂತ ದೇಶದಲ್ಲಿ ನಂಬರ್ 1 ಯಾವುದು ಹೇಳಿ? ದೇಶದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ಅನೇಕ ಶ್ರೀಮಂತ ದೇವಸ್ಥಾನಗಳಿವೆ. ದೇವಸ್ಥಾನಗಳಿಗೆ ಭಕ್ತರು ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತಾರೋ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಕಾಣಿಕೆಗಳೂ ಬರುತ್ತವೆ. ಕೆಲವು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಡೊನೇಶನ್ ಕೂಡಾ ಬರುತ್ತವೆ. ನೀವೂ ಊಹಿಸಲೂ ಸಾದ್ಯವಿಲ್ಲದಷ್ಟು ಸಂಪತ್ತು ಈ ದೇವಸ್ಥಾನದಲ್ಲಿದೆ. ಹಾಗಾದ್ರೆ ಟಾಪ್ 10 ದೇವಸ್ಥಾನಗಳಲ್ಲಿ ಯಾವೆಲ್ಲಾ ದೇವಸ್ಥಾನಗಳಿವೆ ನೋಡೋಣ...

200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

10. ಶಬರಿಮಲೆ

10. ಶಬರಿಮಲೆ

PC:AnjanaMenon

ಸ್ವಾಮಿ ಅಯ್ಯಪ್ಪನ ಸನ್ನಿಧಾನವಾಗಿರುವ ಶಬರಿಮಲೆ ಕ್ಷೇತ್ರವು ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಇದು ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ. ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ.ಲಕ್ಷಾಂತರ ಅಯ್ಯಪ್ಪ ಭಕ್ತರು ಪ್ರತಿವರ್ಷ ಶಬರಿಮಲೆಗೆ ಆಗಮಿಸುತ್ತಾರೆ.

9.ಅಮರನಾಥ ಗುಹೆ

9.ಅಮರನಾಥ ಗುಹೆ

PC:Nitjsandy

ಅಮರನಾಥ್ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆದೇವಾಲಯ. ಸುಮಾರು 5000 ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ.ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಂತಹ ಹಿಮದ 'ಶಿವಲಿಂಗ' ವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.

ಇದನ್ನೂ ಓದಿ: ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದುಇದನ್ನೂ ಓದಿ: ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

8. ಕಾಶಿ ವಿಶ್ವನಾಥ

8. ಕಾಶಿ ವಿಶ್ವನಾಥ

PC:Akshaypilot19

ಕಾಶಿ ವಿಶ್ವನಾಥದೇವಸ್ಥಾನ ಇರುವುದು ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಾಗು ಶಿವನ ದೇವಸ್ಥಾನಗಳಲ್ಲೇ ಪವಿತ್ರವಾದಕಾಶಿ ವಿಶ್ವನಾಥದೇವಸ್ಥಾನ ಗಂಗಾ ನದಿಯ ಪಶ್ಚಿಮ ದಡದ ಮೇಲಿದೆ. ಇಲ್ಲಿನ ಮುಖ್ಯ ದೇವರಾದ ಶಿವನನ್ನುವಿಶ್ವನಾಥಅಥವಾ ವಿಶ್ವೇಶ್ವರ ಎಂದು ಕರೆಯುತ್ತಾರೆ.1194ರಲ್ಲಿ ಮೊದಲ ಬಾರಿಗೆ ಕುತೂಬುದ್ದಿನ ಐಬಕ್ ಹಿಂದೂಗಳ ಪವಿತ್ರ ಕ್ಷೇತ್ರಕಾಶಿ ವಿಶ್ವನಾಥದೇವಾಲಯದ ಮೇಲೆ ದಾಳಿ ಮಾಡಿ ದೇವಾಲಯವನ್ನೂ ದ್ವಂಸಗೊಳಿಸಿದ್ದ ,1211ರಲ್ಲಿಕಾಶಿ ವಿಶ್ವನಾಥದೇವಾಲಯವನ್ನು ಪುನಃ ಗುಜರಾತ ಮೂಲದ ವ್ಯಾಪಾರಿ ಕಟ್ಟಿಸಿದರು

7. ಜಗನ್ನಾಥ ಪುರಿ

7. ಜಗನ್ನಾಥ ಪುರಿ

PC:Abhishek K Saxena

ಒರಿಸ್ಸಾದಲ್ಲಿರುವ ಜಗನ್ನಾಥ ಪುರಿ ಜಗನ್ನಾಥದೇವಾಲಯವು ಹಿಂದೂಗಳಿಗೆ ಪವಿತ್ರ ತೀರ್ಥಕ್ಷೇತ್ರವಾಗಿದೆ. ಈ ನಗರದ ಅತ್ಯಂತ ಪ್ರಸಿದ್ದಿಯ ಪುಣ್ಯ ಕ್ಷೇತ್ರ ಎಂದರೆ ಅದು ಜಗನ್ನಾಥನದೇವಾಲಯ. ಈ ಪುಣ್ಯ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯದಿದ್ದರೆ ತೀರ್ಥಯಾತ್ರೆಗಳು ಪೂರ್ಣಗೊಳ್ಳುವುದಿಲ್ಲ ಎಂಬ ಪ್ರತೀತಿ ಇದೆ. ಇಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಸಾಕಷ್ಟು ನಗ, ನಗದನ್ನು ನೀಡುತ್ತಾರೆ.

6.ಮದುರೈ ಮೀನಾಕ್ಷಿ

6.ಮದುರೈ ಮೀನಾಕ್ಷಿ

PC:Alfeena paskal

ತಮಿಳುನಾಡಿನ ಮದುರೈನಲ್ಲಿರುವ ಮೀನಾಕ್ಷಿ ದೇವಸ್ಥಾನಕ್ಕೆ ದಿನಕ್ಕೆ ಸುಮಾರು 20ಸಾವಿರ ಭಕ್ತರು ಆಗಮಿಸುತ್ತಾರೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ಮೊಘಲ್ ಮಲ್ಲಿಕಾಫುರ್ ಲೂಟಿ ಮಾಡಿದ್ದನು. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹತ್ತು ದಿನಗಳ ಕಾಲ ಉತ್ಸವ ಜರುಗುತ್ತದೆ. ಪ್ರತಿವರ್ಷ ಇಲ್ಲಿ 60 ಮಿಲಿಯನ್ ವರಮಾನ ಬರುತ್ತದೆ ಎನ್ನಲಾಗುತ್ತದೆ.

5. ಮುಂಬೈ ಸಿದ್ದಿವಿನಾಯಕ

5. ಮುಂಬೈ ಸಿದ್ದಿವಿನಾಯಕ

PC: youtube

ತಮ್ಮ ಜೀವನದ ಯಾವುದೇ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮುಂಬೈನ ಪ್ರತಿಯೊಬ್ಬ ಭಕ್ತರು ಹೋಗುವುದು ಸಿದ್ದೀವಿನಾಯಕನ ದರ್ಶನಕ್ಕೆ. ಇಲ್ಲಿಗೆ ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಗಣೇಶನ ಮೂರ್ತಿಯ ಗುಮ್ಮಟವು 3.7 ಕೆ.ಜಿ ಬಂಗಾರ ಲೇಪದಿಂದ ಮಾಡಲಾಗಿದೆ. ಇಲ್ಲಿಗೆ ಬರುವ ಭಕ್ತರು ಸಾಕಷ್ಟು ಡೊನೇಶನ್‌ನ್ನೂ ನೀಡುತ್ತಾರೆ.

4. ವೈಷ್ಣೋ ದೇವಿ

4. ವೈಷ್ಣೋ ದೇವಿ

PC: Abhishek Chandra

ಭಾರತದಲ್ಲಿ ಪವಿತ್ರ ಹಿಂದೂ ದೇವಾಲಯಗಳಲ್ಲಿ ಒಂದಾದವೈಷ್ಣೋ ದೇವಿದೇವಸ್ಥಾನ, ಕತ್ರಾದ ತ್ರಿಕುಟ ಬೆಟ್ಟದ ಮೇಲೆ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಜಮ್ಮು, ಕತ್ರಾ ಪಟ್ಟಣದಿಂದ 46 ಕಿ. ಮಿ ದೂರದಲ್ಲಿ ಇದೆ. ಈ ದೇವಾಲಯದಲ್ಲಿ ಹಿಂದೂ ದೇವತೆ, ವೈಷ್ಣೋ ದೇವಿಯನ್ನು ಪೂಜಿಸಲಾಗುತ್ತಿದ್ದು ಇದೊಂದು ಗುಹಾ ದೇವಾಲಯವಾಗಿದೆ.ವಾರ್ಷಿಕವಾಗಿ, ದೇಶಾದ್ಯಂತ ಸುಮಾರು 8 ಮಿಲಿಯನ್ ಭಕ್ತರು ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯ ಆಂಧ್ರ ಪ್ರದೇಶದ ತಿರುಮಲ ವೆಂಕಟೇಶ್ವರ ದೇವಸ್ಥಾನ ನಂತರ ರಾಷ್ಟ್ರದಲ್ಲೇ ಎರಡನೇ ಅತ್ಯಂತ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುವ ದೇವಾಲಯ ಎಂದು ಹೇಳಲಾಗುತ್ತದೆ. ಇದನ್ನೂ ಓದಿ :ಬಣ್ಣ ಬದಲಾಯಿಸುವ ಗಣಪನ ಬಗ್ಗೆ ಕೇಳಿದ್ದೀರಾ?

3. ಶಿರ್ಡಿ ಸಾಯಿಬಾಬಾ

3. ಶಿರ್ಡಿ ಸಾಯಿಬಾಬಾ

PC: Andreas Viklund

ಶಿರ್ಡಿ ಗ್ರಾಮದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ ಶಿರ್ಡಿ ಗ್ರಾಮಕ್ಕೆ 20,000 ಭಕ್ತರು ಶ್ರೀ ಸಾಯಿಬಾಬಾನ ದರ್ಶನಕ್ಕೆ ಭೇಟಿ ನೀಡುತ್ತಾರೆ. ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ. ಸಾಯಿಬಾಬ ಇಲ್ಲಿ 94 ಕಿ.ಜಿ ತೂಕದ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ,

2.ತಿರುಪತಿ ವೆಂಕಟರಮಣ

2.ತಿರುಪತಿ ವೆಂಕಟರಮಣ

PC: Kalyanigudimetla

ಆಂದ್ರಪ್ರದೇಶದಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನ ಶ್ರೀಮಂತ ದೇವಸ್ಥಾನಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಇಲ್ಲಿಗೆ ಹೋಗುವ ಭಕ್ತಾಧಿಗಳು ತಮಗೆ ದೇವರಿಗೆ ಕಾಣಿಕೆ ರೂಪದಲ್ಲಿ ಚಿನ್ನ ಬೆಳ್ಲಿಯನ್ನು ಅರ್ಪಿಸುತ್ತಾರೆ. ಹುಂಡಿಗೂ ಸಾಕಷ್ಟು ಹಣ ಬರುತ್ತದೆ. ತಿರುಪತಿ ಲಡ್ಡಿನಿಂದಲೇ ವರ್ಷಕ್ಕೆ ಮಿಲಿಯನ್ ಸಂಪಾದನೆಯಾಗುತ್ತಿದೆ. ದಿನಕ್ಕೆ ಸಾವಿರಾರು ಜನರು ಇಲ್ಲಿಗೆ ಆಗಸುತ್ತಿದ್ದು ಕೋಟ್ಯಂತರ ರೂಪಾಯಿ ಡೋನೇಶನ್ ರೂಪದಲ್ಲೇ ದೊರೆಯುತ್ತದೆ.

1. ಅನಂತ ಪದ್ಮನಾಭಸ್ವಾಮಿ ದೇವಸ್ಥಾನ

1. ಅನಂತ ಪದ್ಮನಾಭಸ್ವಾಮಿ ದೇವಸ್ಥಾನ

PC: Shishirdasika

ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ದೇವಸ್ಥಾನ ನಂಬರ್‌ 1 ಸ್ಥಾನದಲ್ಲಿದೆ. ಅನಂತ ಪದ್ಮನಾಭ ಸ್ವಾಮಿಯು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಈ ಹಿಂದೆ ತಿರುಪತಿಯನ್ನು ಅತ್ಯಂತ ಶ್ರೀಮಂತ ದೇವಸ್ಥಾನ ಎನ್ನಲಾಗುತ್ತಿತ್ತು. 500 ಕೋಟಿ ಬೆಲೆಬಾಳುವ ಮಹಾವಿಷ್ಣುವಿನ ಚಿನ್ನದ ಮೂರ್ತಿ ಇಲ್ಲಿದೆ. ಕೋಟ್ಯಾಂತರ ಬೆಲೆಬಾಳುವ ಚಿನ್ನ ಬೆಳ್ಳಿ, ವಜ್ರ ವೈಡುರ್ಯಗಳು ಇಲ್ಲಿವೆ.

Read more about: india temple travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X