ನೀವು ಬಣ್ಣ ಬದಲಾಯಿಸುವ ವಿನಾಯಕನ ಬಗ್ಗೆ ಕೇಳಿದ್ದೀರಾ? ತಮಿಳುನಾಡಿನಲ್ಲಿ ಇಂತಹ ಒಂದು ಗಣೇಶನ ದೇವಸ್ಥಾನವಿದೆ. ಅದು ಇರುವುದು ತಮಿಳುನಾಡಿನ ಕೇರಳಪುರಂನಲ್ಲಿ. ಹಾಗಾದ್ರೆ ಆ ವಿಶೇಷ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ... ಆರು ವರ್ಷಕ್ಕೊಮ್ಮೆ ಬಣ್ಣ ಬದಲಾಯಿಸುವ ಗಣೇಶನ ಬಗ್ಗೆ.

ಬಾವಿಯ ನೀರಿನ ಬಣ್ಣ ಕೂಡಾ ಬದಲಾಗುತ್ತದೆ
PC: youtube
ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷವಿದೆ. ಅದೇನೆಂದರೆ ಈ ಗಣೇಶನ ವಿಗ್ರಹ ಬಣ್ಣ ಬದಲಾಗುವಾಗ ಇಲ್ಲಿನ ಬಾವಿಯ ನೀರಿನ ಬಣ್ಣ ಕೂಡಾ ಬದಲಾಗುತ್ತಂತೆ. ಈ ದೇವಾಲಯದ ಆವರಣದಲ್ಲಿ ಒಂದು ಕುಡಿಯುವ ನೀರಿನ ಬಾವಿ ಇದೆ ಅದರಲ್ಲಿನ ನೀರು ಬಣ್ಣ ಬದಲಾಗುತ್ತದೆ.

ಎಷ್ಟು ಬಾರಿ ಪುನಃನಿರ್ಮಿಸಲಾಯಿತು
PC: youtube
ಸುಮಾರು 2300 ವರ್ಷಗಳ ಚರಿತ್ರೆ ಈ ದೇವಾಲಕ್ಕಿದೆಯಂತೆ. 1317ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇವಾಲಯದ ಪ್ರಾಂಗಣದಲ್ಲಿ ಒಂದು ಶಿವಾಲಯವಿದೆ. ಆ ನಂತರ ಇದನ್ನು ನಿರ್ಮಿಸಿದರಂತೆ ಹಾಗಾಗಿ ಇದನ್ನು ಮಹದೇವನ ಅತಿಶಯ ವಿನಾಯಕ ದೇವಾಲಯ ಎನ್ನಲಾಗುತ್ತದೆ.

ಈ ದೇವಾಲಯಕ್ಕೆ ಒಂದು ಚರಿತ್ರೆ ಕೂಡಾ ಇದೆ
PC: youtube
ಕೇರಳಪುರಂನ ರಾಜ ತನ್ನ ಪರಿವಾರದೊಂದಿಗೆ ತೀರ್ಥ ಯಾತ್ರೆಗೆ ರಾಮೇಶ್ವರಕ್ಕೆ ತೆರಳಿದಾಗ ಅಲ್ಲಿ ದಕ್ಷಿಣ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ನೀರಿನಲ್ಲಿ ಒಂದು ಗಣೇಶನ ವಿಗ್ರಹ ದೊರೆಯುತ್ತದೆ. ವಿಗ್ರಹ ಪ್ರತಿಷ್ಟಾಪಿಸಿದ ರಾಜ ಕೇರಳಪುರಂನ ರಾಜ ತನಗೆ ದೊರೆತ ಆ ವಿಗ್ರಹವನ್ನು ರಾಮೇಶ್ವರಂನ ರಾಜನಿಗೆ ನೀಡಿದರು ಆದರೆ ರಾಮೇಶ್ವರಂನ ರಾಜ ಆ ವಿಗ್ರಹವನ್ನು ಮರಳಿ ಕೇರಳಪುರಂನ ರಾಜನಿಗೆ ನೀಡಿ ದೊರೆತವರಿಗೆ ಈ ವಿಗ್ರಹ ಸೇರುವುದು ಉಚಿತ ಎಂದು , ಇನ್ನೊಂದು ವಿಗ್ರಹವನ್ನು ನೀಡಿದರು. ಕೇರಳಪುರಂ ರಾಜ ಆ ವಿಗ್ರಹವನ್ನು ತನ್ನ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಪ್ರತಿಷ್ಟಾಪಿಸಿದನು.

ತಲುಪುವುದು ಹೇಗೆ?
PC: youtube
ಕನ್ಯಾಕುಮಾರಿಯಿಂದ ಕೇರಳಪುರಂ ದೇವಾಲಯಕ್ಕೆ ಹೋಗಲು ಸಾಕಷ್ಟು ಬಸ್ಸುಗಳು ಇವೆ. ರೈಲು ಮೂಲಕ ಹೋಗುವುದಾದರೆ ಕನ್ಯಾಕುಮಾರಿ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ಸು ಇಲ್ಲವೆ ಟ್ಯಾಕ್ಸಿ ಹಿಡಿದುಕೊಂಡು ಹೋಗಬಹುದು. ಇನ್ನು ವಿಮಾನದಲ್ಲಿ ಹೋಗುವುದಾದರೆ ಅಲ್ಲಿಗೆ ಸಮೀಪವಿರುವ ಏರ್‍ಪೋರ್ಟ್ ಎಂದರೆ ತ್ರಿವೆಂಡ್ರಮ್ ಏರ್‍ಪೋರ್ಟ್.


Click it and Unblock the Notifications
















