Search
  • Follow NativePlanet
Share
» »ವಿಶಿಷ್ಟ ಸಂಸ್ಕೃತಿಯ ಪುಷ್ಕರ್ ಒಂಟೆ ಮೇಳ

ವಿಶಿಷ್ಟ ಸಂಸ್ಕೃತಿಯ ಪುಷ್ಕರ್ ಒಂಟೆ ಮೇಳ

By Vijay

ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ.

ಹಿಂದೂ ಧರ್ಮದವರು ನಡೆದುಕೊಳ್ಳುವ ಐದು ಪವಿತ್ರ ನಗರಗಳ ಪೈಕಿ ಒಂದಾಗಿರುವ ಪುಷ್ಕರ್, ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯಲ್ಲಿದೆ. ಪುಷ್ಕರ್ ಪಟ್ಟಣ ರಚಿತ ಅಥವಾ ನಿರ್ಮಾಣಗೊಂಡ ಕಾಲದ ಬಗ್ಗೆ ನಿಖರವಾದ ಯಾವುದೆ ಐತಿಹಾಸಿಕ ಪುರಾವೆಗಳಿಲ್ಲ. ಆದರೆ ದಂತಕಥೆಯ ಪ್ರಕಾರ, ಸ್ವತಃ ಬ್ರಹ್ಮ ದೇವರಿಂದಲೆ ಈ ಪಟ್ಟಣ ನಿರ್ಮಾಣವಾದುದು ಎನ್ನಲಾಗಿದೆ. [ಭಾರತದ ಪ್ರಾಚೀನ ನಗರಗಳು]

ಚಿತ್ರಕೃಪೆ: Manuel Menal ಪುಷ್ಕರ್ ಆಕರ್ಷಣೆಗಳು

ಪುಷ್ಕರ್ ಪಟ್ಟಣವು ಪುಷ್ಕರ್ ಕೆರೆಯ ತಟದಲ್ಲಿ ನೆಲೆಸಿದ್ದು ಈ ಕೆರೆಯ ನೀರು ಮಾನಸ ಸರೋವರದ ನೀರಿನಷ್ಟೆ ಪವಿತ್ರವಾದುದು ಎಂದು ನಂಬಲಾಗಿದೆ. ಆದ್ದರಿಂದಲೆ ಎಷ್ಟೊ ಜನ ಈ ಕ್ಷೇತ್ರವನ್ನು ತೀರ್ಥ ರಾಜ ಅಂದರೆ ತೀರ್ಥ ಕ್ಷೇತ್ರಗಳ ರಾಜನೆಂದೂ ಸಹ ಸಂಭೋದಿಸುತ್ತಾರೆ. ಪ್ರತಿ ವರ್ಷವು ಇಲ್ಲಿನ ಪುಷ್ಕರ್ ಕೆರೆಯ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಪುಷ್ಕರ್ ಮೇಳವು ಪ್ರವಾಸಿ ಆಕರ್ಷಣೆಯ ಉತ್ಸವವಾಗಿದೆ.

ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಒಂಟೆಗಳ ಉತ್ಸವ ಪೈಕಿ ಒಂದಾಗಿರುವ ಪುಷ್ಕರ್ ಒಂಟೆ ಉತ್ಸವವು ಇತ್ತೀಚೆಗೆ ಕೇವಲ ಒಂಟೆಗಳು ಮಾತ್ರವಲ್ಲದೆ ಇತರೆ ವೈವಿಧ್ಯಮಯ ಕಾರ್ಯಕ್ರಮಗಳಿಂದಲೂ ಸಹ ಆಕರ್ಷಕವಾಗುತ್ತಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರ ನೆಚ್ಚಿನ ಉತ್ಸವವಾಗಿ ಈ ಪುಷ್ಕರ್ ಮೇಳವು ಇಂದು ಕಂಗೊಳಿಸುತ್ತಿದೆ.

ಚಿತ್ರಕೃಪೆ: Jason Rufus

ವರ್ಷದಲ್ಲಿ ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮುಖ್ಯವಾಗಿ ಒಂಟೆಗಳ ವ್ಯಾಪಾರವು ಪ್ರಥಮ ಆಕರ್ಷಣೆಯಾಗಿದೆ. ಕಾಲ ಉರುಳಿದಂತೆ ಈ ಉತ್ಸವವು ಕೇವಲ ಒಂಟೆಗಳಿಗೆ ಸೀಮತವಾಗಿರದೆ ಇತರೆ ಹಲವು ವಿವಿಧ ಸ್ಪರ್ಧೆಗಳು ಪ್ರವರ್ಧಮಾನಕ್ಕೆ ಬಂದಿವೆ. ಉದಾಹರಣೆಯಾಗಿ "ಮಟ್ಕಾ ಫೋಡ್" (ಗಡಿಗೆ ಒಡೆಯುವುದು), ಉದ್ದ ಮೀಸೆಯ ಸ್ಪರ್ಧೆ, ವಧು ಸ್ಪರ್ಧೆ ಹೀಗೆ ಹಲವು ಆಕರ್ಷಕ ಸ್ಪರ್ಧೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಚಿತ್ರಕೃಪೆ: Manuel Menal

ಹಿಂದೂ ಕ್ಯಾಲೆಂಡರಿನ ಅನುಸಾರ ಕಾರ್ತಿಕ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯವರೆಗೂ ನಡೆಯುವ ಈ ಉತ್ಸವವು ಒಂಟೆಗಳ ಓಟದ ಸ್ಪರ್ಧೆಯ ಮೂಲಕ ಆರಂಭಗೊಳ್ಳುತ್ತದೆ. ಪ್ರಸ್ತುತ ವರ್ಷದ ಪುಷ್ಕರ್ ಮೇಳವು ಅಕ್ಟೋಬರ್ 30 ರಿಂದ ನವಂಬ 6 ರ ವರೆಗೆ ನಡೆಯಲಿದೆ. ಪುಷ್ಕರ್ ಗೆ ಭೇಟಿ ನೀಡಿದಾಗ ಸಮ್ದರ್ಶಿಸಬೇಕಾದ ಒಂದು ಪ್ರಮುಖ ದೇವಾಲಯವೆಂದರೆ ಬ್ರಹ್ಮನ ದೇವಾಲಯ.

ಚಿತ್ರಕೃಪೆ: Koshy Koshy

ಬ್ರಹ್ಮ ದೇವಸ್ಥಾನವು ಪುಷ್ಕರ್ ಸರೋವರದ ದಂಡೆಯ ಮೇಲೆ ಸ್ಥಿತವಾಗಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಇನ್ನು ಪುಷ್ಕರ್ ಪಟ್ಟಣವು ಉತ್ತಮವಾದ ರಸ್ತೆ ಸಂಪರ್ಕ ಹೊಂದಿದ್ದು ಇಲ್ಲಿಗೆ ತೆರಳುವುದು ಸುಲಭವಾಗಿದೆ.

ವಿಶಿಷ್ಟ ಸಂಸ್ಕೃತಿಯ ಪುಷ್ಕರ್ ಒಂಟೆ ಮೇಳ

ಚಿತ್ರಕೃಪೆ: Meeta

ಪುಷ್ಕರ್ ಜಾತ್ರೆಯ ಸಂದರ್ಭದಲ್ಲಿ ಬಾನಂಗಳದಿ ಹಾಯಾಗಿ ವಿಹರಿಸುತ್ತಿರುವ ಬಿಸಿ ಗಾಳಿ ಬಲೂನು.

ಪುಷ್ಕರ್ ಪಟ್ಟಣಕ್ಕೆ ತೆರಳುವ ಬಗೆಗಳ ಕುರಿತು ಇಲ್ಲಿ ತಿಳಿಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X