Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಹವಾಮಾನ

ಅಜ್ಮೇರ್ ಹವಾಮಾನ

ಅಜ್ಮೇರಕ್ಕೆ ಪ್ರಯಾಣ ಮಾಡಲು ಸೂಕ್ತ ಕಾಲ ಅಕ್ಟೋಬರಿನಿಮದ ಮಾರ್ಚ್‌ ತಿಂಗಳಿನ ಅವಧಿ. ಈ ಅವಧಿಯಲ್ಲಿ ವಾತಾವರಣವು ತಂಪಾಗಿರುತ್ತದೆ. ಮಳೆಗಾಲದಲ್ಲಿಯೂ ಕೂಡಾ ಈ ನಗರದ ಪ್ರದೇಶಗಳನ್ನು ನೋಡಬಹುದು, ಆ ಸಂದರ್ಭದಲ್ಲಿ ನಗರ ಸುಂದರವಾಗಿ ಕಾಣುತ್ತದೆ. ಬೇಸಿಗೆ ಕಾಲದಲ್ಲಿ ಹೆಚ್ಚು ತಾಪಮಾನವಿರುವುದರಿಂದಾಗಿ, ಬೇಸಿಗೆಯಲ್ಲಿ ಅಜ್ಮೇರಕ್ಕೆ ಭೇಟಿ ನೀಡುವುದು ಸೂಕ್ತವಲ್ಲ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜುಲೈ): ರಾಜಸ್ತಾನದ ಇತರ ಭಾಗಗಳಂತೆ ಅಜ್ಮೇರವೂ ಕೂಡಾ ಬೇಸಿಗೆ ಕಾಲದಲ್ಲಿ ಹೆಚ್ಚಿನ ತಾಪಮಾನವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಉಷ್ಣಾಂಶವು 28º C ಇಂದ 40º C ತನಕ ಇರುತ್ತದೆ. ಅಜ್ಮೇರಕ್ಕೆ ಬೇಸಿಗೆಕಾಲದಲ್ಲಿ ಪ್ರಯಾಣ ಮಾಡುವುದನ್ನು ಪ್ರವಾಸಿಗರು ಮುಂದೂಡುವುದು ಸೂಕ್ತ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್): ಅಜ್ಮೇರವು ಮಳೆಗಾಲದಲ್ಲಿ ಸುಮಾರು ೫೫ ಸೆಂಟಿಮೀಟರಿನಷ್ಟು ಮಳೆಯನ್ನು ಪ್ರತಿವರ್ಷ ಪಡೆಯುತ್ತದೆ. ಇದು ಸಾಮಾನ್ಯವಾಗಿ ಜೂನ್‌ನಿಂದ ಸಪ್ಟೆಂಬರಿನವರೆಗೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಳೆಯ ಜೊತೆಗೆ ಬಿರುಸಾದ ಗಾಳಿಯೂ ಕೂಡಾ ಇರುತ್ತದೆ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ): ಅಜ್ಮೇರದ ಚಳಿಗಾಲವು ಪ್ರಶಾಂತವಾಗಿದ್ದು, ಸರಾಸರಿ ಉಷ್ಣಾಂಶವು 15º C ರಿಂದ 18º C ಇರುತ್ತದೆ. ಈ ತಿಂಗಳುಗಳಲ್ಲಿ ಒಣ ಹವೆ ಇರುವುದಿಲ್ಲ ಅಥವಾ ಕಡಿಮೆ ಇರುತ್ತದೆ. ಅಜ್ಮೇರಕ್ಕೆ ಪ್ರವಾಸ ಮಾಡುವುದಾದರೆ ಈ ವಾತಾವರಣವು ಅತ್ಯಂತ ಸೂಕ್ತವಾಗಿದೆ.