Search
  • Follow NativePlanet
Share
» »ಈ ಬಾರಿಯ ಪ್ರೇಮಿಗಳ ದಿನದಂದು ಸಂಗಾತಿಯೊಂದಿಗೆ ಇಲ್ಲಿಗೆ ಹೋಗಿ

ಈ ಬಾರಿಯ ಪ್ರೇಮಿಗಳ ದಿನದಂದು ಸಂಗಾತಿಯೊಂದಿಗೆ ಇಲ್ಲಿಗೆ ಹೋಗಿ

ಪ್ರೇಮಿಗಳ ವಾರ ಆರಂಭವಾಗಿದೆ. ಫೆ. 14 ರಂದು ಪ್ರೇಮಿಗಳ ದಿನ. ಈಗಾಗಲೇ ಪ್ರೇಮಿಗಳು ಪ್ರೇಮಿಗಳ ದಿನದಂದು ಎಲ್ಲಿಗೆ ಹೋಗೋದು, ಏನು ಮಾಡೋದು ಅನ್ನೋ ಪ್ಲ್ಯಾನ್‌ನ್ನು ಹಾಕಿರುತ್ತಾರೆ. ಇನ್ನೂ ಕೆಲವರು ತನ್ನ ಸಂಗಾತಿಯನ್ನು ಯಾವ ರೀತಿ ಖುಷಿ ಪಡಿಸೋದು, ಎಲ್ಲಿಗೆ ಔಟಿಂಗ್ ಕರೆದುಕೊಂಡು ಹೋಗುವುದು ಎನ್ನುವ ಕನ್‌ಫ್ಯೂಷನ್‌ನಲ್ಲಿರುತ್ತಾರೆ. ಅಂತಹ ಕಪಲ್‌ಗಳಿಗಾಗಿ ನಾವಿಂದು ಕೆಲವು ರೊಮ್ಯಾಂಟಿಕ್ ತಾಣಗಳ ಬಗ್ಗೆ ತಿಳಿಸಲಿದ್ದೇವೆ.

ಹ್ಯಾವ್‌ಲಾಕ್‌ ದ್ವೀಪ

ಅಂಡಮಾನ್‌ನಲ್ಲಿರುವ ಹ್ಯಾವ್‌ಲಾಕ್‌ ದ್ವೀಪವು ಪ್ರವಾಸಿಗರಲ್ಲಿ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಸಮಯವನ್ನು ಕಳೆಯಬಹುದು. ಪ್ರೇಮಿಗಳ ದಿನದಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳು ಬರುತ್ತಾರೆ. ಹನಿಮೂನ್‌ಗೆ ಹೇಳಿಮಾಡಿಸಿದಂತಹ ತಾಣ ಇದಾಗಿದೆ. ಹ್ಯಾವ್ಲಾಕ್ ಅಂಡಮಾನ್ ಗುಂಪಿನಲ್ಲಿರುವ ಜನನಿಬಿಡ ದ್ವೀಪಗಳಲ್ಲಿ ಇದು ಒಂದಾಗಿದೆ. ಪೋರ್ಟ್ ಬ್ಲೇರ್‌ನಿಂದ 39 ಕಿ.ಮೀ.ಈಶಾನ್ಯದಲ್ಲಿದೆ. ಈ ದ್ವೀಪದ ವಿಶೇಷತೆ ಎಂದರೆ ಬೆಳಗ್ಗೆ ಈ ದ್ವಿಪದಲ್ಲಿ ನೀರಿರುತ್ತದೆ, ಸಂಜೆ ನೀರಿರುವುದಿಲ್ಲ.

ಕುಮಾರಕೋಣ, ಕೇರಳ

ಕೇರಳದಲ್ಲಿರುವ ಕುಮಾರಕೋಣವು ವೆಂಬಾನಂದ್‌ ಜಿಲ್ಲೆಯಲ್ಲಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ ಹಾಗೂ ಸೌಂದರ್ಯ ನಿಮ್ಮ ಮನಸಿನಲ್ಲಿ ಹಾಗೆಯೇ ಮನೆ ಮಾಡುತ್ತದೆ. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಬ್ಯಾಕ್‌ವಾಟರ್‌ ಬೋಟ್‌ನ್ನು ಆನಂದಿಸಬಹುದು. ಜೊತೆಗೆ ಬೋಟ್‌ ರೇಸ್‌, ಕ್ರೂಜ್ ಹಾಗೂ ಫಿಶಿಂಗ್‌ ಮಜಾವನ್ನೂ ಪಡೆಯಬಹುದು. ಕುಮಾರ ಕೋಣ ನೋಡಲು ಬಹಳ ಸಣ್ಣ ನಗರವಾಗಿದೆ ಆದರೆ ಇಲ್ಲಿನ ನೈಸರ್ಗಿಕ ಸೌಂದರ್ಯ ನಿಮ್ಮನ್ನು ರೋಮಾಂಚನಗೊಳಿಸುತ್ತದೆ.

ತಾಜ್‌ಮಹಲ್, ಆಗ್ರಾ

ಪ್ರೀತಿ, ಪ್ರೇಮ ರೋಮ್ಯಾನ್ಸ್‌ ವಿಷ್ಯ ಬಂದಾಗ ಆಗ್ರಾದ ತಾಜ್‌ ಮಹಲ್‌ನ್ನು ಹೇಗೆ ಮರೆಯಲು ಸಾಧ್ಯ ಹೇಳಿ. ಪ್ರೀತಿಯ ಪ್ರತೀಕವಾಗಿರುವ ತಾಜ್‌ಮಹಲ್‌ಗೆ ಈ ಬಾರಿಯ ಪ್ರೇಮಿಗಳ ದಿನದಂದು ಹೋಗಬಹುದು. ಅಲ್ಲಿ ರೊಮ್ಯಾಂಟಿಕ್‌ ಆಗಿ ಫೋಟೋ ಶೂಟ್ ಮಾಡಬಹುದು ಜೊತೆಗೆ ಉತ್ತಮ ಸಮಯವನ್ನು ಕಳೆಯಬಹುದು . ಪ್ರೇಮಿಗಳ ದಿನದಂದು ತಾಜ್‌ಮಹಲ್‌ನ್ನು ನೋಡುವ ಮಜಾನೇ ಬೇರೆ.

ಊಟಿ, ತಮಿಳುನಾಡು

ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು ಪ್ರಕೃತಿ ಸೌಂದರ್ಯದ ನಡುವೆ ಕಾಲ ಕಳೆಯಬೇಕೆಂದಿದ್ದರೆ ನೀವು ತಮಿಳುನಾಡಿನಲ್ಲಿರುವ ಊಟಿಗೆ ಹೋಗಬಹುದು. ಅಲ್ಲಿನ ತಂಪಾದ ವಾತಾವರಣದಲ್ಲಿ ನಿಮ್ಮ ರೋಮ್ಯಾಂಟಿಕ್‌ ಲೈಫ್‌ನ್ನು ಎಂಜಾಯ್ ಮಾಡಬಹುದು. ಹನಿಮೂನ್‌ಗೆ ಹೋಗುವ ಹೆಚ್ಚಿನ ಕಪಲ್‌ಗಳು ಊಟಿಯನ್ನೇ ಆಯ್ಕೆ ಮಾಡುತ್ತಾರೆ. ಪ್ರವಾಸಿಗರು ಊಟಿಯಲ್ಲಿನ ಎಲ್ಲಾ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು 3 ರಿಂದ 4 ದಿನಗಳವೆರಗೆ ಇರಬೇಕಾಗುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 7,500 ಅಡಿ ಎತ್ತರದಲ್ಲಿದೆ.

ಗೋವಾ

ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರೂ ಗೋವಾಕ್ಕೆ ಹೋಗಲು ಇಷ್ಟಪಡ್ತಾರೆ. ಗೋವಾದ ಕಡಲತೀರದಲ್ಲಿ ಶಾಂತವಾಗಿ ಕಾಲಕಳೆಯಲು ಇಚ್ಛಿಸುತ್ತಾರೆ. ಈ ಸ್ಥಳವು ಪಾರ್ಟಿ ಮಾಡಲು ಸೂಕ್ತವಾಗಿದೆ. ಗೋವಾವು ಸಂಗಾತಿಯೊಂದಿಗೆ ಕಾಲಕಳೆಯಲು, ಪಾರ್ಟಿ ಮಾಡಲು ಸೂಕ್ತ ವಾದ ತಾಣವಾಗಿದೆ. ಒಂದು ವೇಳೆ ನಿಮಗೆ ಪ್ರೈವೆಸಿ ಬೇಕೆಂದಿದ್ದರೆ ನೀವು ಪ್ರೈವೆಟ್ ಮನೆಗಳನ್ನೂ ಪಡೆಯಬಹುದು.

ಮುನ್ನಾರ್,ಕೇರಳ

ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ ತೆರೆದುಕೊಂಡಿರುವ ಭೂಭಾಗದಿಂದ ಸುತ್ತುವರೆದಿದೆ. ಕೇರಳದ ನೈರುತ್ಯ ಭಾರತದ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ಒಂದು ಗಿರಿಧಾಮವಾಗಿದೆ. ಮುನ್ನಾರ್ ಸರಾಸರಿ ಸಮುದ್ರ ಮಟ್ಟಕ್ಕಿಂತ ಸುಮಾರು 1,600 ಮೀಟರ್‌ಗಳಷ್ಟು ಎತ್ತರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X