Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಹವಾಮಾನ

ಮುನ್ನಾರ್ ಹವಾಮಾನ

ಮುನ್ನಾರಿನಲ್ಲಿ ವರ್ಷಪೂರ್ತಿ ಅತ್ಯಂತ ಆಹ್ಲಾದಕರವಾದ ಮಿತ ತಾಪಮಾನದ ಹವಾಗುಣವಿರುತ್ತದೆ. ಬೇಸಿಗೆಗಳು ಇಲ್ಲಿನ ಸ್ಥಳಗಳನ್ನು ನೋಡಲು ಉತ್ತಮವಾಗಿದ್ದರೆ, ಚಳಿಗಾಲದಲ್ಲಿ ಪ್ರವಾಸಿಗರು ವಿವಿಧ ಮನೋರಂಜನಾತ್ಮಕ ಹಾಗು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತಮ ಕಾಲವಾಗಿದೆ. ಮಳೆಗಾಲದಲ್ಲಿ ಇಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದಾಗಿ ಸ್ಥಳ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ಭ್ರಮರ ನಿರಸನವಾಗುತ್ತದೆ.

ಬೇಸಿಗೆಗಾಲ

ಬೇಸಿಗೆಗಳು ಮುನ್ನಾರಿನಲ್ಲಿ ಮಿತವಾದ ಬಿಸಿಲಿನಿಂದ ಕೂಡಿ ಹಿತಕರವಾಗಿರಿತ್ತವೆ. ಬೇಸಿಗೆ ಕಾಲವು ಮಾರ್ಚ್ ನಿಂದ ಮೇವರೆಗೆ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶವು 35°ಸೆಲ್ಶಿಯಸ್‍ನಿಂದ 19° ಸೆಲ್ಶಿಯಸ್‍ವರೆಗೆ ಇರುತ್ತವೆ. ದಿನದ ವೇಳೆಯಲ್ಲಿ ಇಲ್ಲಿನ ಉಷ್ಣಾಂಶವು ಮಿತವಾಗಿರುತ್ತದೆ. ಆದರೆ ರಾತ್ರಿ ಉಷ್ಣಾಂಶದಲ್ಲಿ ಕುಸಿತವಾಗುವ ಸಂಭವವಿರುತ್ತದೆ. ಇಲ್ಲಿನ ತೋಟಗಳಿಗೆ ಭೇಟಿ ಕೊಡಲು ಬೇಸಿಗೆಯು ಹೇಳಿ ಮಾಡಿಸಿದ ಸಮಯವಾಗಿದೆ.

ಮಳೆಗಾಲ

ದಟ್ಟವಾದ ಕಾಡುಗಳಿಗೆ ಸಮೀಪದಲ್ಲಿರುವ ಕಾರಣದಿಂದಾಗಿ ಮುನ್ನಾರಿನಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಬೀಳುತ್ತದೆ. ಇಲ್ಲಿ ಮಳೆಗಾಲವು ಜೂನ್‍ನಲ್ಲಿ ಶುರುವಾಗಿ ಸೆಪ್ಟಂಬರ‌ವರೆಗೆ ಇರುತ್ತದೆ. ಒತ್ತೊತ್ತಾಗಿ ಬೆಳೆದಿರುವ ಮರಗಳು ಮಳೆಯಲ್ಲಿ ನೆನೆಯುವುದನ್ನು ನೋಡುವುದೇ ಒಂದು ಚಂದ. ಆದರು ವಿಪರೀತವಾದ ಮಳೆಯಿಂದಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ. ಆಗಾಗಿ ಈ ಕಾಲದಲ್ಲಿ ಇಲ್ಲಿಗೆ ಬರುವುದನ್ನು ಮುಂದೂಡುವುದು ಉತ್ತಮ.

ಚಳಿಗಾಲ

ಚಳಿಗಾಲವು ಇಲ್ಲಿ ಡಿಸೆಂಬರ್‌ನಿಂದ ಶುರುವಾಗಿ ಫೆಬ್ರವರಿ ಅಂತ್ಯಭಾಗದವರೆಗೆ ಇರುತ್ತದೆ. ಆಗ ಇಲ್ಲಿನ ಹವಾಗುಣವು ತಂಪಾಗಿದ್ದು, ತಾಪಮಾನ 10 ಡಿಗ್ರಿಯವರೆಗೆ ಕುಸಿಯುತ್ತದೆ. ಈ ಸಮಯವು ಇಲ್ಲಿ ಚಾರಣ, ಶಿಖರಾರೋಹಣ ಮತ್ತು ಇನ್ನಿತರ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತವಾದ ಸಮಯವಾಗಿರುತ್ತದೆ. ಚಳಿಗಾಲದಲ್ಲಿ ಮುನ್ನಾರಿಗೆ ಭೇಟಿ ಕೋಡುವವರು ಚಳಿಗಾಲದಲ್ಲಿ ತೊಡುವ ಬೆಚ್ಚನೆಯ ಉಡುಗೆಗಳನ್ನು ಮರೆಯದೆ ತರುವುದು ಉತ್ತಮ.