
ಭಾರತದಲ್ಲಿ ಅನೇಕ ಪ್ರೇಕ್ಷಣಿಯ ತಾಣಗಳಿವೆ. ಒಂದೊಂದು ರಾಜ್ಯದಲ್ಲೂ ಒಂದು ವಿಶೇಷವಾದ ತಾಣಗಳಿವೆ. ಅವುಗಳನ್ನೆಲ್ಲಾ ಸುತ್ತಾಡೋದು ಒಂದು ರೀತಿಯಲ್ಲಿ ಮಜಾ ನೀಡುತ್ತದೆ. ಈ ಮೂಲಕ ನೀವು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಕಂಡುಕೊಂಡಂತಾಗುತ್ತದೆ. ಇಲ್ಲೊಬ್ಬ ಪಾನಕ ಕುಡಿಯುವ ನರಸಿಂಹ !

ಕಾಶ್ಮೀರ ಕಣಿವೆ
ಕಾಶ್ಮೀರ ಕಣಿವೆ ಹಿಮದಿಂದ ಆವೃತವಾದ ಪೀರ್ ಪಂಜಾಲ್ ಶ್ರೇಣಿಯು ಕಣಿವೆಯನ್ನು ಸಮತಟ್ಟು ಪ್ರದೇಶಗಳಿಂದ ಬೇರ್ಪಡಿಸುತ್ತದೆ.ಕಾಶ್ಮೀರ ಕಣಿವೆಅಥವಾ ಕಾಶ್ಮೀರದ ಕಣಿವೆ ಯು ಹಿಮಾಲಯ ಪರ್ವತ ಶ್ರೇಣಿ ಹಾಗೂ ಪೀರ‍್ ಪಂಜಾಲ್ ಶ್ರೇಣಿಯ ನಡುವಿನ ಒಂದು ಕಣಿವೆಯಾಗಿದೆ. ಇದು ಸುಮಾರು 135 ಕಿಮೀ ಉದ್ದ ಹಾಗೂ 32 ಕಿಮೀ ಅಗಲವಿದ್ದು, ಝೀಲಂ ನದಿಯಿಂದ ರೂಪುಗೊಂಡಿದೆ.

ಲಡಾಖ್
PC: wikipedia
ಸ್ನೇಹಿತರ ಜೊತೆ ತಿರುಗಾಡಲು ಉತ್ತಮ ತಾಣವಾಗಿದೆ. ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶವು ಮಂಗೋಲಿಯನ್ ಬುಡಕಟ್ಟಿನವರ ಪಾಳೆಯ. ಚೀನಾ ಟಿಬೆಟ್ ಪಾಕಿಸ್ತಾನಗಳಿಂದ ಸುತ್ತುವರಿದಿರುವ ಲಡಾಖ್ ಹಿಮಾಲಯದ ಮೇಲಿನ ಪ್ರಸ್ಥಭೂಮಿ. ಅಸಂಖ್ಯ ಕೊಳ್ಳಗಳಿಂದ ಕೂಡಿದ ಲಡಾಖನ್ನು ಚಂದ್ರ ಮುರಿದು ಬಿದ್ದ ತಾಣವೆಂದು ಬಣ್ಣಿಸುತ್ತಾರೆ. ಹಿಮಾಚ್ಛಾದಿತ ಗಿರಿಶಿಖರಗಳು ಬೆಳ್ಳನೆ ಹೊಳೆಯುವುದರಿಂದಲೂ ಈ ಹೋಲಿಕೆ ಅತ್ಯಂತ ಸಮಂಜಸವಾಗಿದೆ.

ಮುನ್ನಾರ್
ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ ತೆರೆದುಕೊಂಡಿರುವ ಭೂಭಾಗದಿಂದ ಸುತ್ತುವರೆದಿದೆ. "ಮುನ್ನಾರ್" ಎಂದರೆ "ಮೂರು ನದಿಗಳು" ಎಂದರ್ಥ. ಪರ್ವತಭಾಗಗಳನ್ನು ಹೊಂದಿ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುನ್ನಾರ್ ಕೇರಳ ರಾಜ್ಯಕ್ಕೆ ವಿಶ್ವದೆಲ್ಲೆಡೆಯಿಂದ ಮನ್ನಣೆ ದೊರೆಯಲು ಬಹುಪಾಲು ಕೊಡುಗೆಯನ್ನು ನೀಡಿದೆ.

ರಾನ್ ಆಫ್ ಕುಚ್
ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಥಾರ್ ಮರುಭೂಮಿಯಲ್ಲಿರುವ ಋತುಮಾನದ ಜವುಗು ಭೂಮಿಯೇ ಗ್ರೇಟರ್ ರಣ್. ಇದು ವಿಶ್ವದ ಅತೀ ದೊಡ್ಡ ಉಪ್ಪಿನ ಮರುಭೂಮಿ. ಗ್ರೇಟರ್ ರಣ್ ಸುಮಾರು 7505 ಕಿ.ಮೀ.ರನ್ನು ವ್ಯಾಪಿಸಿದೆ ಮತ್ತು ಕಛ್ ನ ಲಿಟ್ಲ್ ರಣ್ ಗೆ ಹೋಲಿಸಿದರೆ ಇದು ತುಂಬಾ ದೊಡ್ಡರು. ಇದು ಹಲವಾರು ವಿವಿಧ ಸಸ್ಯರಾಶಿ ಮತ್ತು ಪ್ರಾಣಿಸಂಕುಲಗಳಿಗೆ ನೆಲೆಯಾಗಿದೆ.ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ಮೇಘಾಲಯ
ಈಗಿನ ಕಾಲದಲ್ಲಂತೂ ರಸ್ತೆ ದಾಟಲು, ನದಿ ದಾಟಲು ಬ್ರಿಡ್ಜ್‌ನ್ನು ನಿರ್ಮಿಸಲಾಗುತ್ತಿದೆ. ಅದೇ ಹಿಂದಿನ ಕಾಲದಲ್ಲಿ ಈ ಬ್ರಿಡ್ಜ್‌ಗಳೆಲ್ಲಾ ಇರಲಿಲ್ಲ. ಆಗ ಜನರು ಯಾವ ರೀತಿ ನದಿ ದಾಟುತ್ತಿದ್ದರು ಎನ್ನುವುದು ನಿಮಗೆ ಗೊತ್ತಾ? ಮೇಘಾಲಯಕ್ಕೆ ಹೋದರೆ ಅಲ್ಲಿ ನಿಮಗೆ ಸಾಕಷ್ಟು ಪುರಾತನ ಬ್ರಿಡ್ಜ್‌ಗಳು ಕಾಣಸಿಗುತ್ತದೆ. ಅದು ಸಿಮೆಂಟ್, ಕಲ್ಲುಗಳಿಂದ ಕಟ್ಟಿರುವ ಬ್ರಿಡ್ಜ್ ಅಲ್ಲ. ಬದಲಾಗಿ ಮರದ ಬೇರುಗಳಿಂದ ನಿರ್ಮಿಸಿರುವ ಬ್ರಿಡ್ಜ್.

ಆಲಪ್ಪಿ
ಹಿನ್ನೀರಿನ ತಾಣವಾಗಿರುವ ಆಲಪ್ಪಿ ಕೇರಳದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು. ವಿಶ್ವದ ನಾನಾ ಭಾಗಗಳಿಂದ ದೊಣಿ ವಿಹಾರಕ್ಕಾಗಿಯೇ ಜಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೋಣಿ ವಿಹಾರವನ್ನು ನಡೆಸುವುದಕ್ಕೆಂದೇ ಹಲವಾರು ಕ್ಲಬ್‌ಗಳು ಇಲ್ಲಿವೆ. ನೆಹರೂ ಟ್ರೋಫಿ ಹೆಸರಿನಲ್ಲಿ ಪ್ರತಿವರ್ಷವೂ ದೋಣಿವಿಹಾರ ಸ್ಫರ್ಧೆಯನ್ನೂ ನಡೆಸಿ, ರೋಲಿಂಗ್ ಟ್ರೋಫಿ ನೀಡಲಾಗುತ್ತದೆ.

ಹಂಪಿ
ಹಂಪಿಯು ಕೇವಲ ವಾಸ್ತುಶಿಲ್ಪದ ದೄಷ್ಟಿಯಿಂದ ಮಾತ್ರವೆ ಅಲ್ಲದೆ, ಧಾರ್ಮಿಕ ಪರಂಪರೆಗೂ ಕೂಡ ಅಷ್ಟೆ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಹಲವು ಪ್ರಸಿದ್ಧವಾದ ದೇವಾಲಯಗಳು ಇಲ್ಲಿ ಇದ್ದು, ಅವುಗಳಲ್ಲಿ ವಿರೂಪಾಕ್ಷ ದೇವಸ್ಥಾನ, ವಿಟ್ಠಲ ದೇವಸ್ಥಾನ ಹಾಗು ಆಂಜನೇಯಾದ್ರಿ ದೇವಸ್ಥಾನಗಳು ಸೇರಿವೆ. ಹಂಪಿಯು ಯುನೆಸ್ಕೊದಿಂದ ವರ್ಲ್ದ್ ಹೆರಿಟೆಜ್ ಸೈಟ್ ಎಂಬ ಮನ್ನಣೆಯನ್ನು ಪಡೆದಿದ್ದು, ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ.

ಅಂಡಮಾನ್
ಭಾರತ ಉಪಖಂಡದ ಸುತ್ತಲು ಹರಡಿರುವ ಸಾಗರ, ಕಡಲಗಳ ಮೇಲೆ ಅಲ್ಲಲ್ಲಿ ನಿರ್ಮಿತವಾಗಿರುವ ದ್ವೀಪಗಳಿಗೆ ಪ್ರವಾಸ ಹೊರಡುವುದು ತನ್ನದೆ ಆದ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ದಕ್ಷಿಣ ಭಾರತದ ಎರಡು ಬದಿಗಳಲ್ಲಿರುವಅಂಡಮಾನ್ದ್ವೀಪಗಳು ಹಾಗು ಲಕ್ಷದ್ವೀಪಗಳು ಇಂತಹ ಒಂದು ವಿಶೀಷ್ಟ ಪ್ರವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿವೆ. ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ.

ಜೈಪುರ
ಜೈಪುರ ರಾಜಸ್ಥಾನ ರಾಜ್ಯದ ರಾಜಧಾನಿ. ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್, ಶೀಶ ಮಹಲ್, ಗಣೇಶ್ ಪೋಲ್ ಮತ್ತು ಜಲ ಮಹಲ್ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.


Click it and Unblock the Notifications



















