Search
  • Follow NativePlanet
Share
ಮುಖಪುಟ » ಸ್ಥಳಗಳು» ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ: ಕಿರು ಪರಿಚಯ

ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಶ್ವೇತಮಯ ಹಾಗು ಹಸಿರುಮಯ ತಾಣವೆ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಈ ರಾಜ್ಯವು ತನ್ನ ಪ್ರಕೃತಿ ವೈಭವದಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ. ಈ ರಾಜ್ಯವು ಪ್ರಮುಖವಾಗಿ ಮೂರು ಭಾಗಗಳಲ್ಲಿ ವಿಂಗಡನೆಗೊಂಡಿದ್ದು, ಅವುಗಳೆಂದರೆ, ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್. ಈ ರಾಜ್ಯವು ಹಿಮಾಚಲ್ ಪ್ರದೇಶ ಮತ್ತು ಪಂಜಾಬ್ ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.ಭಾರತದಲ್ಲಿ ಅತ್ಯಂತ ಚಿರಪರಿಚಿತವಾಗಿರುವ ಈ ರಾಜ್ಯವು ಪ್ರತಿ ವರ್ಷವೂ ಸಹಸ್ರಾರು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ನಿಸರ್ಗ ಪ್ರೇಮಿ ಹಾಗು ಸಾಹಸಪ್ರಿಯರಿಗಂತೂ ಈ ತಾಣ ಸ್ವರ್ಗವೆ ಸರಿ. ಪ್ರಸಿದ್ಧ ಮುಘಲ್ ಅರಸು ಜಹಾಂಗೀರನು ಪ್ರಥಮವಾಗಿ ಈ ಪ್ರದೇಶವನ್ನು ಸಂದರ್ಶಿಸಿದಾಗ, 'ಭೂಮಿಯ ಮೇಲೆ ಸ್ವರ್ಗವೆಂಬುದಿದ್ದರೆ ಅದೇ ಈ ಸ್ಥಳ' ಎಂದು ಹಾಡಿ ಹೊಗಳಿದ್ದನು. ಅದ್ಭುತಮಯ ಪರ್ವತ ಶ್ರೇಣಿಗಳು, ಸ್ಫಟಿಕ ಶುದ್ಧ ನೀರಿನ ತೊರೆಗಳು, ಅಸಂಖ್ಯಾತ ಪವಿತ್ರ ದೇಗುಲಗಳು, ಹಿಮನದಿಗಳು ಮತ್ತು ಕಣ್ಣಿಗೆ ಮುದ ನೀಡುವ ಉದ್ಯಾನಗಳು ಇವೆಲ್ಲವೂ ಸೇರಿ ಒಟ್ಟಾರೆಯಾಗಿ ಈ ಪ್ರದೇಶವನ್ನು ಖಂಡಿತವಾಗಿ ಭೂಮಿಯ ಮೇಲಿನ ಸ್ವರ್ಗವನ್ನೆ ಆಗಿಸಿದೆ ಎಂದು ಹೇಳಬಹುದು.

ಹವಾಮಾನ

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವರ್ಷಪೂರ್ತಿ ಭೇಟಿ ನೀಡಬಹುದಾಗಿದೆ. ಆದರೂ ಕಾಶ್ಮೀರಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯವೆಂದರೆ ಮಾರ್ಚ್ ಮತ್ತು ಅಕ್ಟೋಬರ್ ನಲ್ಲಿನ ಮಧ್ಯದ ಅವಧಿ. ಈ ಸಂದರ್ಭದಲ್ಲಿ ಈ ಪ್ರದೇಶದ ವಾತಾವರಣವು ಆಹ್ಲಾದಕರವಾಗಿದ್ದು ಸ್ಥಳ ವೀಕ್ಷಣೆಗೆ ಅತಿ ಸೂಕ್ತವಾಗಿರುತ್ತದೆ. ಈ ರಾಜ್ಯದ ಬಹುತೇಕ ಪ್ರದೇಶವು ಡಿಸೆಂಬರ್ ನಿಂದ ಮಾರ್ಚ್ ಮಧ್ಯದಲ್ಲಿನ ಅವಧಿಯಲ್ಲಿ ಹಿಮದಿಂದ ಆವೃತವಾಗಿದ್ದು, ಕ್ರೀಡಾಪ್ರಿಯರಿಗೆ ಕೈಬಿಸಿ ಕರೆಯುತ್ತಿರುತ್ತದೆ. ಸೆಪ್ಟಂಬರ್ ನಿಂದ ಮಾರ್ಚ್ ಮಧ್ಯದಲ್ಲಿನ ಅವಧಿಯನ್ನು ಜಮ್ಮುವಿಗೆ ಭೇಟಿ ನೀಡಲು ಉತ್ತಮವಾದುದೆಂದು ಪರಿಗಣಿಸಲಾಗಿದೆ. ಇನ್ನು ಲಡಾಖ್ ಗೆ ಭೇಟಿ ನೀಡಲು ಬೇಸಿಗೆಯು ಹಿತಕರವಾದ ಸಮಯವಾಗಿದೆ. ಏಕೆಂದರೆ ಚಳಿಗಾಲದಲ್ಲಿ ಮೈಕೊರೆಯುವಂತಹ ಚಳಿ ಇಲ್ಲಿರುತ್ತದೆ.

ಭಾಷೆಗಳು

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಆಡಳಿತ ಭಾಷೆ ಉರ್ದು. ಇದನ್ನು ಪರ್ಷಿಯನ್ ಲಿಪಿಯಲ್ಲಿ ಬರೆಯಲಾಗುತ್ತದೆ. ಈ ಭಾಷೆಯು ರಾಜ್ಯದಲ್ಲಿ ಬಹುವಾಗಿ ಬಳಸಲ್ಪಡುತ್ತದಾದರೂ ಕಾಶ್ಮೀರದಲ್ಲಿ ಅತಿ ಪ್ರಮುಖವಾಗಿದೆ. ಇದಲ್ಲದೆ, ಈ ರಾಜ್ಯದಲ್ಲಿ ಬಳಸಲ್ಪಡುವ ಇತರೆ ಭಾಷೆಗಳೆಂದರೆ, ಕಾಶ್ಮೀರಿ, ಉರ್ದು, ಡೋಗ್ರಿ, ಪಹಾರಿ(ಡಿ), ಬಾಲ್ಟಿ, ಲಡಾಖಿ, ಗೋಜ್ರಿ, ಶಿನಾ ಮತ್ತು ಪಾಶ್ತೊ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ

ಪ್ರವಾಸ ಕ್ಷೇತ್ರದ ದೃಷ್ಟಿಯಿಂದ ಹೇಳುವುದಾದರೆ ಜಮ್ಮು ಮತ್ತು ಕಾಶ್ಮೀರವು ಭಾರತದ ಪ್ರಮುಖ ಪ್ರವಾಸಿವಲಯವಾಗಿದೆ. ಇಲ್ಲಿರುವ ಶ್ರೀನಗರವನ್ನು 'ಬೇಸಿಗೆಯ ರಾಜಧಾನಿ' ಎಂದು ಪರಿಗಣಿಸಲ್ಪಟ್ಟರೆ ಜಮ್ಮುವನ್ನು 'ಚಳಿಗಾಲದ ರಾಜಧಾನಿ' ಎಂದು ಕರೆಯಲಾಗುತ್ತದೆ. ಪೀರ್ ಪಾಂಜಾಲ್ ಹಾಗು ಹಿಮಾಲಯ ಪರ್ವತ ಶ್ರೇಣಿಗಳಿಂದ ಸುತ್ತುವರೆದಿರುವ ಈ ಪ್ರದೇಶವು ನಿಸರ್ಗ ಪ್ರೇಮಿಗಳಿಗೆ, ಸಾಹಸಪ್ರಿಯರಿಗೆ ಮತ್ತು ಧಾರ್ಮಿಕ ಯಾತ್ರಾರ್ಥಿಗಳಿಗೆ ಸಂತೃಪ್ತಗೊಳಿಸುವ ಎಲ್ಲ ರೀತಿಯ ತಾಣಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ.ಕಲಾಪ್ರಿಯರು ಇಷ್ಟಪಡುವ ಅಮರ್ ಮಹಲ್ ಮ್ಯೂಸಿಯಂ ಮತ್ತು ಡೋಗ್ರಾ ಆರ್ಟ್ ಮ್ಯೂಸಿಯಂ ಗಳನ್ನು ಜಮ್ಮುವಿನಲ್ಲಿ ಕಾಣಬಹುದಾಗಿದೆ.

ಇಲ್ಲಿರುವ ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳೆಂದರೆ, ವೈಷ್ಣೊ ದೇವಿ ದೇವಾಲಯ, ದರ್ಗಾ ಗರೀಬ್ ಶಾ, ಬಹು ದೇವಾಲಯ, ಝಿಯಾರತ್ ಬಾಬಾ ಬುಡ್ಡಾನ್ ಶಾ, ಶಿವ ಖೋರಿ ಮತ್ತಿ ಪೀರ್ ಖೊ ಗುಹಾ ದೇವಾಲಯ.ಪರ್ವತಗಳು, ಅಸಂಖ್ಯಾತ ಕೆರೆಗಳು ಹಾಗು ಅವುಗಳಲ್ಲಿನ ಸ್ವಚ್ಛ ನೀಲವರ್ಣಮಯ ನೀರು, ಹಿತಕರವಾದ ವಾತಾವರಣ ಇವೆ ಕೆಲವಾದವುಗಳು ಕಾಶ್ಮೀರ ಕಣಿವೆಯ ಮುಖ್ಯ ಲಕ್ಷಣಗಳು. ಸೇಬು ಮತ್ತು ಚೆರ್ರಿ ಹಣ್ಣಿನ ತೋಟಗಳು, ಶಿಖಾರಾ ರೈಡ್ ಗಳು, ಹೌಸ್ ಬೋಟ್ಸ್, ಗೊಂಡೋಲಾ, ಕಾಶ್ಮೀರಿ ಕಲಾವಸ್ತುಗಳು ಈ ಪ್ರದೇಶವನ್ನು ಅನನ್ಯವಾಗಿ ಬಿಂಬಿಸುವ ಕೆಲವು ಆಕರ್ಷಣೆಗಳು. ಅಷ್ಟೆ ಅಲ್ಲ, ಇದೊಂದು ಧಾರ್ಮಿಕ ಕ್ಷೇತ್ರವಾಗಿಯೂ ಪ್ರಾಮುಖ್ಯತೆಯನ್ನು ಪಡೆದಿದೆ.

ಇಲ್ಲಿ ಹಜರತ್ ಬಲ್ ಮಸೀದಿ, ಜಾಮಾ ಮಸೀದಿ, ಚಾರರ್ ಐ ಶರೀಫ್, ಖೀರ್ ಭವಾನಿ ದೇವಾಲಯ, ಮಾರ್ತಾಂಡ ಸೂರ್ಯ ದೇವಾಲಯ ಮತ್ತು ಶಂಕರಾಚಾರ್ಯರ ದೇವಾಲಯಗಳನ್ನು ನೋಡಬಹುದಾಗಿದೆ. ಪ್ರವಾಸಿಗರಿಗೆಂದೆ ವಿಹರಿಸಲು ಕೆಲವು ಉತ್ತಮವಾದ ಮುಘಲ್ ಉದ್ಯಾನಗಳು ಇಲ್ಲಿದ್ದು, ಅವುಗಳೆಂದರೆ, ನಿಶತ್ ಗಾರ್ಡನ್, ಶಾಲಿಮಾರ್ ಉದ್ಯಾನ ಮತ್ತು ಚಷ್ಮೆ ಶಾಹಿ ಉದ್ಯಾನ.  ಇಲ್ಲಿರುವ ಪಹಲ್ಗಾಮ್, ಸೊನಾಮಾರ್ಗ್, ಪತ್ನಿಟಾಪ್, ದ್ರಾಸ್, ಗುಲ್ಮಾರ್ಗ್ ಮತ್ತು ಕಾರ್ಗಿಲ್ ಗಳು ತಮ್ಮ ನಿಸರ್ಗ ಸೌಂದರ್ಯದಿಂದಾಗಿ ಪ್ರಖ್ಯಾತಿಯನ್ನು ಗಳಿಸಿವೆ. ದಾಲ್ ಮತ್ತು ನಾಗಿನ್ ಕೆರೆಗಳು ಈ ಪ್ರದೇಶದಲ್ಲಿ ಕಾಣಬಹುದಾದ ಅತಿ ಸುಂದರ ಹಾಗು ಜನಪ್ರಿಯ ಸರೋವರಗಳಾಗಿವೆ.

ಡಚಿಗಮ್ ವನ್ಯಜೀವಿಧಾಮ, ಗುಲ್ಮಾರ್ಗ್ ಬಯೋಸ್ಫೀಯರ್ ರಿಸರ್ವ್, ಹೆಮಿಸ್ ಹೈ ಅಲ್ಟಿಟ್ಯುಡ್ ವನ್ಯಜೀವಧಾಮ ಮತ್ತು ಒವೆರಾ ರಾಷ್ಟ್ರೀಯ ಉದ್ಯಾನ ಇವು ಇಲ್ಲಿ ಕಾಣಬಹುದಾದ ವೈವಿಧ್ಯಮಯ ಆಕರ್ಷಣೆಗಳು.ಸಾಹಸ ಹಾಗು ಕ್ರೀಡಾಪ್ರಿಯರಿಗೆ ಈ ಪ್ರದೇಶದಲ್ಲಿ ಹಲವಾರು ಆಸಕ್ತಿಭರಿತ ಆಯ್ಕೆಗಳು ಲಭ್ಯ. ಮೌಂಟೆನೀಯರಿಂಗ್ ನಿಂದ ಹಿಡಿದು ಹೈಕಿಂಗ್, ಟ್ರೆಕ್ಕಿಂಗ್, ರಾಫ್ಟಿಂಗ್, ಸ್ಕಿಯೀಂಗ್ ಮತ್ತು ಇತರೆ ಚಳಿಗಾಲದ ಕ್ರೀಡೆಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.

ಇಂತಹ ಚಟುವಟಿಕೆಗಳಿಗೆ ಹೆಸರುವಾಸಿಯಾದ ಇಲ್ಲಿನ ಕೆಲವು ಪ್ರದೇಶಗಳೆಂದರೆ, ಪತ್ನಿಟಾಪ್, ಗುಲ್ಮಾರ್ಗ್ ಕ್ರಿಮ್ಚಿ ಮತ್ತು ಕಿಶ್ತವಾರ್.ಇಲ್ಲಿರುವ ಮತ್ತೊಂದು ಪ್ರಖ್ಯಾತವಾದ ತಾಣ ಲಡಾಖ್, ತನ್ನಲ್ಲಿರುವ ಹಲವಾರು ಪುರಾತನ ಬೌದ್ಧ ಆಶ್ರಮಗಳು, ವಿವಿಧ ಕೌತುಕಮಯ ಸ್ಥಳಗಳು, ಅದ್ಭುತವಾದ ಚಾರಣಯೋಗ್ಯ ಮಾರ್ಗಗಳಿಂದಾಗಿ ಹೆಸರುವಾಸಿಯಾಗಿದೆ. ವಿವ್ವಾದಾಸ್ಪದ ಪಂಗೊಂಗ್ ಕೆರೆಯನ್ನು ಇಲ್ಲಿ ಕಾಣಬಹುದಾಗಿದೆ. ಇದಲ್ಲದೆ ಲಡಾಖ್ ತನ್ನ ಅನನ್ಯ ಸಂಸ್ಕೃತಿ ಮತ್ತು ಪಳಗಿಸಲಾಗದ ಪ್ರಕೃತಿ ಸೌಂದರ್ಯದಿಂದಾಗಿ ಜನಪ್ರಿಯವಾಗಿದೆ. ಹಾಗಿದ್ದರೆ, ಏಕೆ ತಡ..ಜಮ್ಮು ಕಾಶ್ಮೀರದ ಎಲ್ಲ ಸ್ಥಳಗಳ ಕುರಿತು ಎಲ್ಲ ಮಾಹಿತಿಯನ್ನು ಓದಿ ಮತ್ತು ಪ್ರವಾಸಕ್ಕೆ ಹೊರಡಲು ಸಜ್ಜಾಗಿ!

ಜಮ್ಮು ಮತ್ತು ಕಾಶ್ಮೀರ ಸ್ಥಳಗಳು

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu