Search
  • Follow NativePlanet
Share
» »ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ರಾಜಸ್ತಾನದಲ್ಲಿರುವ ಮೌಂಟ್ ಅಬು ಬೆಟ್ಟವು ಅರಾವಳಿ ಪರ್ವತಗಳಲ್ಲೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದು ಹಿಂದುಗಳ ಜೊತೆಗೆ ಜೈನ ಸಮುದಾಯದವರ ತೀರ್ಥಸ್ಥಳವೂ ಆಗಿದೆ.ಗಿಡ, ಮರಗಳಿಂದ ಕೂಡಿರುವ ಈ ಕ್ಷೇತ್ರವು ರಾಜಸ್ತಾನದ ಕಡು ಬಿಸಿಲಿನ ನಡುವೆಯೂ ತಂಪನ್ನು ನೀಡುತ್ತದೆ. ಈ ಬೆಟ್ಟದಲ್ಲಿ ಒಂದು ಶಿವಾಲಯವಿದೆ. ಇಲ್ಲಿ ಶಿವನ ಪೂಜೆಯನ್ನು ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತದೆ.

ಮೋದಿ ಸರ್ಕಾರ ಬಿಡುಗಡೆ ಮಾಡಿರೋ 10 ರೂ. ನೋಟಿನಲ್ಲಿರೋದು ಯಾವ ಸ್ಥಳ ಗೊತ್ತಾ?

ಅಚಲ್‌ಗಡ್

ಅಚಲ್‌ಗಡ್

PC -Ranjith Kumar Inbasekaran

ಮೌಂಟ್ ಅಬು ಹಿಂದೂಗಳ ಜೊತೆಗೆ ಜೈನರ ತೀರ್ಥಸ್ಥಳ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಮೌಂಟ್ ಅಬುವಿನಲ್ಲಿ ಅಚಲ್‌ಗಡ್ ಎನ್ನುವ ಪ್ರದೇಶವಿದೆ. ಅಲ್ಲಿ ಶಿವನ ಒಂದು ಮಂದಿರವಿದೆ. ಈವರೆಗೂ ನೀವು ಶಿವನ ಪ್ರತಿಮೆ ಅಥವಾ ಶಿವಲಿಂಗದ ಪೂಜೆ ಮಾಡುವುದನ್ನು ನೋಡಿರಬಹುದು. ಆದರೆ ಈ ಶಿವಮಂದಿರದಲ್ಲಿ ಶಿವನ ಕಾಲಿನ ಹೆಬ್ಬೆರಳನ್ನು ಪೂಜಿಸಲಾಗುತ್ತದೆ.

ಬೆರಳನ್ನು ಯಾಕೆ ಪೂಜಿಸಲಾಗುತ್ತದೆ?

ಬೆರಳನ್ನು ಯಾಕೆ ಪೂಜಿಸಲಾಗುತ್ತದೆ?

PC- Raveesh Vyas

ಅಚಲೇಶ್ವರ್ ಮಹದೇವ ಮಂದಿರದಲ್ಲಿ ಶಿವನ ಕಾಲಿನ ಹೆಬ್ಬೆರಳಿನ ಗುರುತು ಇದೆ ಎನ್ನಲಾಗುತ್ತದೆ. ಇದನ್ನು ದೇವರ ಪ್ರತೀಕ ಎಂದು ಭಾವಿಸಿ ಪೂಜಿಸಲಾಗುತ್ತದೆ. ಅಲ್ಲದೆ ಶಿವನಿಗೆ ವಿಶೇಷ ಜಲಾಭಿಶೇಕ ಕೂಡಾ ಮಾಡಲಾಗುತ್ತದೆ. ಸ್ಥಳೀಯ ನಿವಾಸಿಗಳ ಪ್ರಕಾರ ಈ ಜಲ ಬಹಳ ಪವಿತ್ರವಾದದ್ದಾಗಿರುತ್ತದೆ. ಇಲ್ಲಿನ ಧಾರ್ಮಿಕ ಮಹತ್ವವನ್ನು ಕಂಡು ಮೌಂಟ್ ಅಬುವಿಗೆ ಅರ್ಧಕಾಶಿಯ ಸ್ಥಾನವನ್ನೂ ನೀಡಲಾಗಿದೆ. ಇಲ್ಲಿ ಶಿವನ 108 ಮಂದಿರಗಳಿವೆ.

ಶಿವ ದರ್ಶನ ನೀಡುತ್ತಾನೆ

ಶಿವ ದರ್ಶನ ನೀಡುತ್ತಾನೆ

ಸ್ಕಂದ ಪುರಾಣದ ಪ್ರಕಾರ ವಿಷ್ಣು ಹಾಗೂ ಶಿವ ಅರ್ಬುದ್ ಪರ್ವತದ ಪರ್ಯಟನೆ ಮಾಡುತ್ತಾರೆ. ಹಾಗಾಗಿ ನಿಮಗೆ ಶಿವನ ಕಾಲಿನ ಪೂಜೆ ಮಾಡುವ ಸಂತರು ಸಾಧುಗಳು ನಿಮಗೆ ಖಂಡಿತಾ ಕಾಣಸಿಗುತ್ತಾರೆ. ಶಿವನು ಮೌಂಟ್ ಅಬುವಿನ ಗುಹೆಯಲ್ಲಿ ಇಂದಿಗೂ ವಾಸಿಸುತ್ತಿದ್ದಾನೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಯಾವ ಭಕ್ತನ ಭಕ್ತಿಗೆ ಶಿವನು ಪ್ರಸನ್ನನಾಗುತ್ತಾನೋ ಅವರಿಗೆ ದರ್ಶನ ನೀಡುತ್ತಾನಂತೆ. ಶಿವನ ಈ ಅಚಲೇಶ್ವರ್‌ ಮಹದೇವ ಮಂದಿರಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ ಅಪಾರ ಭಕ್ತಿ ಇದೆ.

ಪೌರಾಣಿಕ ಮಹತ್ವ

ಪೌರಾಣಿಕ ಮಹತ್ವ

PC- Raveesh Vyas

ಶಿವನ ಈ ಭವ್ಯ ಮಂದಿರದಲ್ಲಿ ಅನೇಕ ಪೌರಾಣಿಕ ಮಾನ್ಯತೆಗಳು ಸೇರಿಕೊಂಡಿವೆ. ಶಿವರಾತ್ರಿ ಹಾಗೂ ಸೋಮವಾರದಂತಹ ವಿಶೇಷ ದಿನದಂದು ಭಕ್ತಿಯಿಂದ ಬೇಡಿಕೊಂಡಲ್ಲಿ ಅವರ ಬೇಡಿಕೆ ಈಡೆರುತ್ತಂತೆ. ಹಾಗಾಗಿ ಪರ್ವತ ಹಾಗೂ ನದಿಯನ್ನು ಉಳಿಸಲು ಶಿವನು ತನ್ನ ಕಾಲಿನ ಹೆಬ್ಬೆರಳಿನಿಂದ ಅಲುಗಾಡುತ್ತಿದ್ದ ಈ ಪರ್ವತವನ್ನು ಸ್ಥಿರವಾಗಿಸಿದನು ಎನ್ನಲಾಗುತ್ತದೆ. ಹಾಗಾಗಿ ಇಲ್ಲಿ ಶಿವನ ಕಾಲಿನ ಬೆರಳಿನ ಪೂಜೆ ಮಾಡಲಾಗುತ್ತದೆ.

ಅಚಲೇಶ್ವರ್ ಮಹದೇವ ಮಂದಿರಕ್ಕೆ ಹೋಗುವುದು ಹೇಗೆ?

ಅಚಲೇಶ್ವರ್ ಮಹದೇವ ಮಂದಿರಕ್ಕೆ ಹೋಗುವುದು ಹೇಗೆ?

ಅಚಲೇಶ್ವರ ಮಹದೇವ ಮಂದಿರ ಮೌಂಟ್ ಅಬು ಪರ್ವತದ ಮೇಲಿದೆ. ಹಾಗಾಗಿ ಮೊದಲು ನೀವು ಮೌಂಟ್ ಅಬು ತಲುಪಬೇಕು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಮದರೆ ಉದಯ್‌ಪುರ್. ರೈಲು ನಿಲ್ದಾಣವೆಂದರೆ ಮೋರ್‌ಥಲಾ ರೈಲು ನಿಲ್ದಾಣದ ಮೂಲಕ ತಲುಪಬಹುದು.

Read more about: india temple shiva
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more