ಈ ಗಿರಿಧಾಮಕ್ಕೆ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ನಿರಂತರವಾಗಿ ಬಸ್ಸು ಮತ್ತು ಟ್ಯಾಕ್ಸಿಗಳ ಸೌಕರ್ಯವಿದೆ. ಭಾರತದ ಪ್ರಮುಖ ನಗರಗಳಾದ ನವ ದೆಹಲಿ, ಮುಂಬೈ, ಜೈಪುರ್, ಉದಯ್ ಪುರ್ ಮತ್ತು ಅಹಮದಾಬಾದ್ ಗಳಿಂದ ಹಲವಾರು ಬಸ್ಸುಗಳು ಮೌಂಟ್ ಅಬುಗೆ ಹೋಗಿ ಬರುತ್ತಿರುತ್ತವೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ಸುಗಳು ದೈನಂದಿನ ಮತ್ತು ಸಾಪ್ತಾಹಿಕ ಟ್ರಿಪ್ ಗಳಲ್ಲಿ ಮೌಂಟ್ ಅಬು ಕಡೆಗೆ ಹೋಗುತ್ತವೆ. ಬಸ್ ದರವು ಅವು ಒದಗಿಸುವ ಸೌಕರ್ಯಗಳಿಗೆ ಸಂಬಂಧಿಸಿದಂತೆ ಇರುತ್ತವೆ.