Search
  • Follow NativePlanet
Share
» »ಇಲ್ಲೊಬ್ಬ ಪಾನಕ ಕುಡಿಯುವ ನರಸಿಂಹ !

ಇಲ್ಲೊಬ್ಬ ಪಾನಕ ಕುಡಿಯುವ ನರಸಿಂಹ !

ದೇವರಿಗೆ ಭಕ್ತರು ಏನೆಲ್ಲಾ ಅರ್ಪಿಸುತ್ತಾರೆ ಅಲ್ವಾ? ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ. ಹಾಗೆಯೇ ಪ್ರತಿಯೊಂದಕ್ಕೂ ವಿಶಿಷ್ಟತೆ ಇದೆ. ಈ ಹಿಂದೆ ನೀವು ವಿಸ್ಕಿ ಕುಡಿಯೋ ದೇವರ ಬಗ್ಗೆ ಕೇಳಿರುವಿರಿ. ಆದರೆ ಇದೀಗ ನಾವು ಹೇಳ ಹೊರಟಿರುವುದು ಪಾನಕ ಕುಡಿಯುವ ದೇವರ ಬಗ್ಗೆ. ಈ ನರಸಿಂಹ ದೇವಾಲಯದಲ್ಲಿ ನರಸಿಂಹ ಪಾನಕ ಕುಡಿಯುತ್ತಾನಂತೆ.

ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

ಬೆಲ್ಲದ ಪಾನಕ ಅರ್ಪಣೆ

ಬೆಲ್ಲದ ಪಾನಕ ಅರ್ಪಣೆ

PC: youtube

ಇಲ್ಲಿ ದೇವರಿಗೆ ಬೆಲ್ಲದ ಪಾನಕವನ್ನು ನೀಡಲಾಗುತ್ತದೆ. ಈ ದೇವಸ್ಥಾನದ ವಿಶೇಷತೆಯೆಂದರೆ ಪಾನಕವನ್ನು ದೇವರ ತೆರೆದಿರುವ ಬಾಯಿಯೊಳಗೆ ಹಾಕಲಾಗುತ್ತದೆ. ಭಕ್ತರು ಅಷ್ಟೊಂದು ಬೆಲ್ಲದ ಪಾನಕವನ್ನು ದೇವರಿಗೆ ಅರ್ಪಿಸಿದರೂ ಒಂದೇ ಒಂದು ಇರುವೆ ಕೂಡಾ ದೇವರ ಮೂರ್ತಿ ಹತ್ತಿರ ಸುಳಿಯುವುದಿಲ್ಲ.

ಬೆಲ್ಲದ ಪಾನಕ ಕುಡಿಯುವ ನರಸಿಂಹ

ಬೆಲ್ಲದ ಪಾನಕ ಕುಡಿಯುವ ನರಸಿಂಹ

PC:Adityamadhav83

ದೇವರು ಪಾನಕ ಕುಡಿಯುವ ಸದ್ದು ಕೇಳಿಸುತ್ತದೆ. ಸ್ವಲ್ಪಹೊತ್ತಿನ ನಂತರ ಆ ಸದ್ದು ನಿಲ್ಲುತ್ತದೆ. ದೇವರು ಕುಡಿದು ಉಳಿದ ಪಾನಕ ಹೊರಚೆಲ್ಲಲ್ಪಡುತ್ತದೆ. ಅದನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಈ ವಿಸ್ಮಯ ಕೇವಲ ದಿನದಲ್ಲಿ ಒಮ್ಮೆ ಮಾತ್ರ ನಡೆಯುವುದಲ್ಲ. ಭಕ್ತರು ಯಾವಾಗ ಯಾವಾಗ ಪಾನಕವನ್ನು ದೇವರಿಗೆ ಅರ್ಪಿಸುತ್ತಾರೋ ಪ್ರತೀ ಬಾರಿಯೂ ಇದೇ ರೀತಿ ಆಗುತ್ತದಂತೆ.

ಪಾನಕದ ಹಿಂದಿನ ಕಥೆ

ಪಾನಕದ ಹಿಂದಿನ ಕಥೆ

PC:Aniltech2017

ದೇವರಿಗೆ ಪಾನಕವನ್ನು ಅರ್ಪಿಸುವ ಹಿಂದೆಯೂ ಒಂದು ಕಥೆ ಇದೆ. ಈ ಬೆಟ್ಟವು ಹಿಂದೆ ಜ್ವಾಲಾಮುಖಿಯಾಗಿತ್ತು ಎನ್ನಲಾಗುತ್ತದೆ. ಬೆಲ್ಲದ ನೀರು ಜ್ವಾಲಾಮುಖಿಯಲ್ಲಿ ಕಂಡುಬರುವ ಸಲ್ಫರ್ ಸಂಯಕ್ತಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟವನ್ನು ತಡೆಯುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ಮೂರ್ತಿಗೆ ಬೆಲ್ಲದ ನೀರನ್ನು ಅರ್ಪಿಸಲಾಗುತ್ತದೆ.

ಲಕ್ಷ್ಮೀ ದೇವಿಯ ದೇವಾಲಯ

ಲಕ್ಷ್ಮೀ ದೇವಿಯ ದೇವಾಲಯ

ಈ ದೇವಸ್ಥಾನದ ಹಿಂಬದಿಯಲ್ಲಿ ಲಕ್ಷ್ಮೀ ದೇವಿಯ ದೇವಾಲಯವಿದೆ. ಅದರ ಪಶ್ಚಿಮಕ್ಕೆ ಒಂದು ಗುಹೆ ಇದೆ. ಇದು ಕೃಷ್ಣ ನದಿ ತೀರದಲ್ಲಿರುವ ಉಂಡವಲ್ಲಿ ಗುಹೆಗೆ ಸೇರಲ್ಪಡುತ್ತದೆ. ಆ ನದಿಯಲ್ಲಿ ಋಷಿಮುನಿಗಳು ಸ್ನಾನ ಮಾಡುತ್ತಿದ್ದರು ಎನ್ನಲಾಗುತ್ತದೆ. ಈಗ ಈ ಗುಹೆಯು ಕತ್ತಲೆಯಾವರಿಸಿದ್ದು, ದಾರಿಯೂ ಸರಿಯಾಗಿ ಕಾಣಿಸುತ್ತಿಲ್ಲ.

ಸ್ಥಾಪಿಸಿದ್ದು ಯಾರು?

ಸ್ಥಾಪಿಸಿದ್ದು ಯಾರು?

PC: Adityamadhav83

ಈ ದೇವಾಲಯವನ್ನು 1890ರಲ್ಲಿ ಚೆನ್ನಪ್ರಗಾದ ಬಲರಾಮ ದಾಸ ಎನ್ನುವವರು ನಿರ್ಮಿಸಿದ್ದರು. ಈ ದೇವಾಲಯಕ್ಕೆ ಹೋಗಲು ಭಕ್ತರಿಗೆ ಅನುಕೂಲವಾಗುವಂತೆ 2004ರಲ್ಲಿ ಘಾಟ್ ರಸ್ತೆ ನಿರ್ಮಿಲಾಗಿದೆ.

ಮಧ್ಯಾನದವರೆಗೆ ಮಾತ್ರ ದೇವಾಲಯ ತೆರೆದಿರುತ್ತದೆ

ಮಧ್ಯಾನದವರೆಗೆ ಮಾತ್ರ ದೇವಾಲಯ ತೆರೆದಿರುತ್ತದೆ

ಈ ದೇವಾಲಯವು ಕೇವಲ ಮಧ್ಯಾನದವರೆಗೆ ಮಾತ್ರ ತೆರೆದಿರುತ್ತದೆ. ಯಾಕೆಂದರೆ ರಾತ್ರಿ ಹೊತ್ತಿನಲ್ಲಿ ದೇವತೆಗಳು ಪೂಜಾ ಕಾರ್ಯ ಮಾಡುತ್ತಾರೆ ಎನ್ನುವುದು ಇಲ್ಲಿನ ನಂಬಿಕೆ.

Read more about: india temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X