Search
  • Follow NativePlanet
Share
» »ದ.ಭಾರತದಲ್ಲಿ ಭೇಟಿ ನೀಡಲೇಬೇಕಾದ ವಿಶೇಷ ಸ್ಥಳಗಳು

ದ.ಭಾರತದಲ್ಲಿ ಭೇಟಿ ನೀಡಲೇಬೇಕಾದ ವಿಶೇಷ ಸ್ಥಳಗಳು

By Vijay

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಈ ಐದೂ ರಾಜ್ಯಗಳೂ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಪಾಂಡಿಚೆರಿಯೂ ಸೇರಿ ದಕ್ಷಿಣ ಭಾರತ ಎಂದು ಕರೆಸಿಕೊಳ್ಳುತ್ತದೆ. ಭೌಗೋಲಿಕವಾಗಿ ಭಾರತ ದೇಶವು ಉತ್ತರದ ತುತ್ತ ತುದಿ ಕಾಶ್ಮೀರದಿಂದ ಹಿಡಿದು ದಕ್ಷಿಣದ ತುತ್ತುದಿಯಾದ ಕನ್ಯಾಕುಮಾರಿಯವರೆಗೆ ಸಾಕಷ್ಟು ವೈವಿಧ್ಯತೆಯನ್ನು ಹೊಂದಿದೆ.

ಅಲ್ಲದೆ ಹವಾಮಾನವೂ ಸಹ ಸಾಕಷ್ಟು ವಿವಿಧತೆಯಿಂದ ಕೂಡಿರುವುದನ್ನು ಕಾಣಬಹುದು. ಸುಡು ಬಿಸಿಲಿನ ಬೇಸಿಗೆ ಕಾಲ, ವಿಪರೀತವಾಗಿ ಸುರಿಯುವ ಮಳೆ ಸುರಿಯುವ ಮಳೆಗಾಲ, ಹಿಮಪಾತ, ಕೊರೆಯುವ ಚಳಿಗಾಲ ಹೀಗೆ ಹಲವಾರು ಸಂದರ್ಭಗಳನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯದಲ್ಲಿ ಕಾಣಬಹುದು.

ವಿಶೇಷ ಲೇಖನ : ದಕ್ಷಿಣ ಭಾರತದ ಮುಖ್ಯ ಜಲಪಾತಗಳು

ಅದರಂತೆ ದಕ್ಷಿಣ ಭಾರತವೂ ಸಹ ದಟ್ಟವಾದ ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳಿಂದ ಹಿಡಿದು ಬಯಲು ಸೀಮೆಯವರೆಗೆ ವಿವಿಧ ಪ್ರದೇಶಗಳನ್ನು ಹೊಂದಿದೆ. ಒಟ್ಟಾರೆ ದಕ್ಷಿಣ ಭಾರತ ಭಾಗವೂ ಸಹ ಕೆಲವು ವಿಶೇಷ ಎನ್ನಬಹುದಾದ ಸ್ಥಳಗಳಿಂದ, ಆಕರ್ಷಣೆಗಳಿಂದ ಕೂಡಿದ್ದು ಪ್ರವಾಸಿಗರನ್ನು ವರ್ಷದ ಎಲ್ಲ ಸಮಯದಲ್ಲೂ ಸಹ ಆಕರ್ಷಿಸುತ್ತದೆ.

ಪ್ರಸ್ತುತ ಲೇಖನದ ಮೂಲಕ ದಕ್ಷಿಣ ಭಾರತಕ್ಕೆ ಭೇಟಿ ನೀಡಿದರೆ ಅಥವಾ ಜೀವನದಲ್ಲೊಮ್ಮೆಯಾದರೂ ಈ ಭಾಗದ ಯಾವೆಲ್ಲ ವಿಶೇಷ ಹಾಗೂ ವಿಶಿಷ್ಟವಾದ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಬಹುದೆಂಬುದರ ಕುರಿತು ತಿಳಿಯಿರಿ. ಇಲ್ಲಿ ಆಯ್ದ ಕೆಲವೆ ಕೆಲವು ಜನಪ್ರೀಯ ಹಾಗೂ ಅಷ್ಟೊಂದು ಜನಪ್ರೀಯವಲ್ಲದ ಸ್ಥಳಗಳ ಕುರಿತು ಮಾತ್ರವೆ ತಿಳಿಸಲಾಗಿದೆ.

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಹೈದರಾಬಾದ್ : ದಕ್ಷಿಣಭಾರತದ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣಗಳ ಪೈಕಿ ಒಂದಾಗಿ ಖ್ಯಾತಿ ಪಡೆದಿರುವ ನಗರವೆಂದರೆ ಅದು ತೆಲಂಗಾಣ ರಾಜ್ಯದ ರಾಜಧಾನಿ ನಗರ ಹೈದರಾಬಾದ್. ಈ ನಗರವು ಮೂಸಿ ನದಿಯ ದಂಡೆಯಲ್ಲಿ ಸೌಂದರ್ಯದ ಖನಿಯಂತೆ ಕಂಗೊಳಿಸುತ್ತ ನಿಂತಿದೆ. ಸ್ಥಳೀಯ ದಂತಕತೆಯ ಪ್ರಕಾರ ಈ ನಗರದ ಹೆಸರು ಭಾಗ್‍ಮತಿ ಮತ್ತು ಮಹಮ್ಮದ್ ಖುಲಿ ಖುತುಬು ಷಾರವರ ನಡುವೆ ನಡೆದ ಕುತೂಹಲಕಾರಿ ಪ್ರೇಮಕಥೆಯಿಂದ ಬಂದಿತೆಂದು ಹೇಳುತ್ತಾರೆ. ಹೈದರಾಬಾದ್ ನಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ನಗರದ ಹುಸೇನ್ ಸಾಗರ ಕೆರೆಯಲ್ಲಿ ಸಂಜೆ ದೋಣಿ ವಿಹಾರ. ನಗರದಲ್ಲಿರುವ ಆಕರ್ಷಣೆಗಳ ಪಟ್ಟಿ ಹಾಗೂ ತಲುಪುವ ಬಗೆಯ ಕುರಿತು ತಿಳಿಯಲು ಕ್ಲಿಕ್ ಮಾಡಿ : ಹೈದರಾಬಾದ್

ಚಿತ್ರಕೃಪೆ: arunpnair

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವಾರಂಗಲ್ ಕೋಟೆ : ತೆಲಂಗಾಣ ರಾಜ್ಯದ ವಾರಂಗಲ್ ಪಟ್ಟಣದಲ್ಲಿರುವ ಈ ಕೋಟೆಯು ಒಂದು ಅದ್ಭುತ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಕಾಕತಿಯರ ಆಡಳಿತದಲ್ಲಿ ಸುಮಾರು 12 ನೇಯ ಶತಮಾನದಿಂದ ಅಸ್ತಿತ್ವದಲ್ಲಿದ್ದ ವಾರಂಗಲ್ ಕೋಟೆಯು ಇತಿಹಾಸಪ್ರಿಯ ಪ್ರವಾಸಿಗರ ಪಾಲಿಗೆ ಅತಿ ನೆಚ್ಚಿನ ಸ್ಥಳವಾಗಿದೆ. ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯು ಒಂದು ಜನಪ್ರಿಯ ಪ್ರವಾಸಿ ಕ್ಷೇತ್ರವಾಗಿದೆ. ಕಾಕತೀಯ ಸಾಮ್ರಾಜ್ಯವು ಪ್ರಸ್ತುತ ತೆಲಂಗಾಣ ರಾಜ್ಯದ ಅಧಿಕೃತ ಲಾಂಚನವಾಗಿದೆ.

ಚಿತ್ರಕೃಪೆ: randhir

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಪಾಖಾಲ್ ಕೆರೆ : ವಾರಂಗಲ್ ಜಿಲ್ಲೆಯಲ್ಲಿರುವ ಪಾಖಾಲ್ ವನ್ಯಜೀವಿ ಅಭಯಾರಣ್ಯದಲ್ಲಿ ಈ ಸುಂದರವಾದ ಪಾಖಾಲ್ ಕೆರೆಯಿದೆ. ಇದೊಂದು ವಿಶಾಲವಾಗಿ ಹರಡಿರುವ ಕೃತಕ ಕೆರೆಯಾಗಿದ್ದು ಕಾಕತೀಯರ ದೊರೆಯಾಗಿದ್ದ ಗಣಪತಿ ದೇವನಿಂದ ಸುಮಾರು 1213 ರಲ್ಲಿ ನಿರ್ಮಿಸಲ್ಪಟ್ಟಿದೆ. ಇದೂ ಸಹ ತೆಲಂಗಾಣ ರಾಜ್ಯದಲ್ಲಿ ಭೇಟಿ ನೀಡಬಹುದಾದ ಅಥವಾ ಭೇಟಿ ನೀಡಲು ಯೋಗ್ಯವಾದಂತಹ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Alosh Bennett

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಬಾಸರ ಸರಸ್ವತಿ ದೇವಾಲಯ : ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಬಾಸರ ಪಟ್ಟಣದಲ್ಲಿರುವ ಸರಸ್ವತಿ ದೇವಾಲಯವು ದೇಶದಲ್ಲೆ ಹೆಸರುವಾಸಿಯಾಗಿದೆ. ಏಕೆಂದರೆ ಈ ರೀತಿಯ ಸರಸ್ವತಿ ದೇವಿಗೆ ಮುಡಿಪಾಗಿರುವ ಏಕೈಕ ದೇವಾಲಯ ಇದಾಗಿದೆ.

ಚಿತ್ರಕೃಪೆ: Bhaskaranaidu

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಅದಿಲಾಬಾದ್ : ತೆಲಂಗಾಣ ರಾಜ್ಯಕ್ಕೆ ಸೇರಿರುವ ಅದಿಲಾಬಾದ್ ಒಂದು ಪ್ರಮುಖ ಜಿಲ್ಲೆಯಾಗಿದೆ. ಪುರಾತನ ಬೌದ್ಧ ಹಾಗೂ ಜೈನ ಧರ್ಮದ ಹಲವು ಕುರುಹುಗಳನ್ನುರಾಜ್ಯದ ಉತ್ತರದ ತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಕಾಣಬಹುದಾಗಿದ್ದು ಇತಿಹಾಸಪ್ರಿಯ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ. ಐತಿಹಾಸಿಕ ಪ್ರಖ್ಯಾತಿ ಪಡೆದಿರುವ ಅದಿಲಾಬಾದ್ ಕೋಟೆ. ಅದಿಲಾಬಾದ್ ಜಿಲ್ಲೆ ಹಾಗೂ ಅಲ್ಲಿನ ಆಕರ್ಷಣೆಗಳ ಕುರಿತು ತಿಳಿಯಲು ಕ್ಲಿಕ್ ಮಾಡಿ : ಅದಿಲಾಬಾದ್

ಚಿತ್ರಕೃಪೆ: Sabyasachi Dasgupta

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವೈಜಾಗ್ : ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತೊ ದೊಡ್ಡ ಪಟ್ಟಣವೂ ಸಹ ಆಗಿದೆ. ವೈಶಾಕ ದೇವತೆಯ ಗೌರವಾರ್ಥಕವಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದ್ಎ ಎಂದು ಹೇಳಲಾಗುತ್ತದೆ. ಮೂಲತಃ ವೈಜಾಗ್ ಒಂದು ಸುಂದರಮಯ ಕಡಲ ತೀರಗಳುಳ್ಳ ಬಂದರು ಪಟ್ಟಣವಾಗಿದೆ. ಅಲ್ಲದೆ ಭಾರತ ಸೇನೆಯ ಒಂದು ಭಾಗವಾದ ನೌಕಾದಳದ ಪೂರ್ವ ನೌಕಾದಳ ವಿಭಾಗಕ್ಕೆ ಕೇಂದ್ರವಾಗಿದೆ. ಪ್ರಸ್ತುತ ವೈಜಾಗ್ ಒಂದು ರಭಸವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಎಂಬ ಹಿರಿಮೆ ಹೊಂದಿದ್ದರೂ ಸಹ ಇಲ್ಲಿ ಶ್ರೀಮಂತಮಯ ಸಂಸ್ಕೃತಿ, ಸಂಪ್ರದಾಯಗಳು ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದು. ವೈಜಾಗ್ ನಲ್ಲಿರುವ ಆಕರ್ಷಣೆಗಳು.

ಚಿತ್ರಕೃಪೆ: Sankara Subramanian

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ತಿರುಮಲ : ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ತಿರುಮಲದ ಹಿಂದಿರುವ ದಂತ ಕಥೆ.

ವಿತ್ರಕೃಪೆ: Raji.srinivas

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಪುಲಿಕಟ್ : ಕೋರಮಂಡಲ ತೀರದಲ್ಲಿರುವ ತಮಿಳುನಾಡಿನ ಈ ಪ್ರದೇಶ ಬಹಳ ಉತ್ತಮವಾದ ಪ್ರಕೃತಿ ಸೊಬಗನ್ನು ಹೊಂದಿರುವ ಸ್ಥಳವಾಗಿದೆ. ಪ್ರವಾಸಿಗರ ವಲಯದಲ್ಲಿ ಪುಲಿಕಾಟ್ ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ. ಅವುಗಳೆಂದರೆ ಪುಲಿಕಾಟ್ ಸರೋವರ ಮತ್ತು ಪುಲಿಕಾಟ್ ಪಕ್ಷಿಧಾಮ. ಇದು ಭಾರತದಲ್ಲಿ ಎರಡನೇಯ ಅತಿ ದೊಡ್ಡ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆ ಪಡೆದಿದೆ ಹಾಗು ಪ್ರತಿ ವರ್ಷ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸುತ್ತದೆ. ಹೆಚ್ಚಿನ ವಿವರ.

ಚಿತ್ರಕೃಪೆ: Lalithamba

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಗೋಕಾಕ್ ಜಲಪಾತ : ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ. ಇಲ್ಲಿಗೆ ತೆರಳಿದಾಗ ಇಲ್ಲಿನ ಮತ್ತೊಂದು ಜನಪ್ರಿಯ ಸಿಹಿ ಖಾದ್ಯವಾದ 'ಗೋಕಾಕ್ ಕರದಂಟ್' ಅನ್ನು ತಿನ್ನಲು ಮರೇಯಬೇಡಿ. ಬೆಳಗಾವಿ ಬಸ್ ಹಾಗು ರೈಲು ನಿಲ್ದಾಣಗಳಿಂದ ಗೋಕಾಕಿಗೆ ತೆರಳಲು ಬಸ್ ಹಾಗು ರೈಲುಗಳು ಲಭ್ಯವಿರುತ್ತದೆ.

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಬಾದಾಮಿ : ಬದಾಮಿ ಎಂದ ತಕ್ಷಣ ನೆನಪಾಗುವುದು ಬನಶಂಕರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನವು ತಿಲಕಾರಣ್ಯ ಕಾಡಿನ ಭಾಗದಲ್ಲಿ ನೆಲೆಸಿರುವುದರಿಂದ ದೇವಿಯನ್ನು ವನಶಂಕರಿ ಎಂತಲೂ ಕೂಡ ಕರೆಯಲಾಗುತ್ತದೆ. ಶಾಖಾಂಬರಿ ಅವತಾರವಾದ ಈ ದೇವಿಯ ದೇವಾಲಯವಿರುವುದು ಬದಾಮಿಯಲ್ಲಿರುವ ಚೊಳಚಗುಡ್ಡದಲ್ಲಿ. ಹಲವು ಮನೆತನಗಳ ಕುಲದೇವತೆಯಾಗಿರುವ ಈ ಬನಶಂಕರಿ ದೇವಿಯ ಜಾತ್ರೆಯನ್ನು ಪ್ರತಿ ವರ್ಷ ಜನವರಿಯಲ್ಲಿ ಅತ್ಯಂತ ಅದ್ದೂರಿಯಿಂದ ಆಚರಿಸಲಾಗುತ್ತದೆ. ಇದಲ್ಲದೆ, ಹಿಂದೆ ಚಾಲುಕ್ಯರಾಳಿದ ಈ ಬದಾಮಿಯಲ್ಲಿ ನೋಡಲು ಸುಂದರವಾದ ಭೂತನಾಥ ದೇವಾಲಯ ಸಂಕೀರ್ಣವಿದೆ ಹಾಗು ಇಲ್ಲಿನ ಗುಹಾ ದೇವಾಲಯಗಳು (ಮೇಣದ ಬಸ್ತಿ) ಅತ್ಯದ್ಭುತ ಗುಹಾ ರಚನೆಗಳಾಗಿದ್ದು, ಭಾರತೀಯ ಕಲ್ಲಿನಲ್ಲಿ ಕೆತ್ತನೆಯ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆಯಾಗಿವೆ. ಮರೆಯಲಾಗದ ಬಾದಾಮಿಯ ಪ್ರವಾಸ.

ಚಿತ್ರಕೃಪೆ: amara

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಐಹೊಳೆ ಹಾಗೂ ಪಟ್ಟದಕಲ್ಲು : ಕರ್ನಾಟಕದಲ್ಲಿ ಇತಿಹಾಸಪ್ರಿಯರು ಚಾಲುಕ್ಯರ ವಾಸ್ತುಶೈಲಿಯನ್ನು ಉತ್ತಮವಾಗಿ ನೋಡಲು ಹಂಬಲಿಸುತ್ತಿದ್ದರೆ ಒಂದೊಮ್ಮೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಐಹೊಳೆ ಮತ್ತು ಪಟ್ಟದಕಲ್ಲು ಗ್ರಾಮಗಳಿಗೆ ಭೇಟಿ ನೀಡಬಹುದು. ಚಾಲುಕ್ಯರ ಅತ್ಯುತ್ತಮ ಕಲಾಕೃತಿಗಳ, ಶಿಲ್ಪಕಲೆಯ ಸಾಕಷಿಗಳಾಗಿ ಸಾಕಷ್ಟು ದೇವಾಲಯಗಳು ಹಾಗೂ ಇತರೆ ರಚನೆಗಳನ್ನು ಈ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಗ್ರಾಮಗಳು ಬಾದಾಮಿ ಬಲು ಹತ್ತಿರದಲ್ಲಿವೆ.

ಚಿತ್ರಕೃಪೆ: Manjunath Doddamani Gajendragad

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಹಂಪಿ : ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. ಹಂಪಿಯ ಕುರಿತು ಸಮಗ್ರ ಮಾಹಿತಿ.

ಚಿತ್ರಕೃಪೆ: Joseph Jayanth

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕಾರವಾರ : ಕರ್ನಾಟಕದ ವಾಯವ್ಯ ದಿಕ್ಕಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರವು ಒಂದು ಅದ್ಭುತ ಕಡಲ ತೀರದ ಪ್ರವಾಸಿ ಕೇಂದ್ರವಾಗಿದೆ. ಗೋವಾಗೆ ಅತಿ ಹತ್ತಿರದಲ್ಲೂ ಸಹ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರೂ ಸಹ ಕಾರವಾರಕ್ಕೆ ಆಗಮಿಸುತ್ತಾರೆ. ಪ್ರಶಾಂತವಾದ ಕಡಲ ತೀರ, ಕಾಳಿ ನದಿಯ ಗಮ್ಯ ನೋಟ, ನಡುಗಡ್ಡೆಗಳು ಹೀಗೆ ಹಲವು ಆಸಕ್ತಿಕರ ಆಕರ್ಷಣೆಗಳನ್ನು ಕಾರವಾರದಲ್ಲಿ ನೋಡಬಹುದಾಗಿದೆ. ಬೆರಗಾಗಿಸುವ ಕಾರವಾರ.

ಚಿತ್ರಕೃಪೆ: Ankur Chakraborty

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಗೋಕರ್ಣ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸಮುದ್ರ ತೀರ ಹಾಗೂ ಪವಿತ್ರ ಸರೋವರದಿಂದಾಗಿ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಘನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಗೋಕರ್ಣ ಪರಿಚಯ.

ಚಿತ್ರಕೃಪೆ: Miran Rijavec

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಮುರುಡೇಶ್ವರ : ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಶಿವನ ಮೂರುತಿಯಿರುವ ಸ್ಥಳ ಮುರುಡೇಶ್ವರ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಸ್ಥಳವು ರಾಮಾಯಣದ ಮೂಲ ಹೊಂದಿದ್ದು, ಸಮುದ್ರದ ಹಿಮ್ಮುಖವಾಗಿಹ ಶಿವನ ಬೃಹತ್ ಮೂರ್ತಿಗೆ ಪ್ರಸಿದ್ಧವಾಗಿದೆ. ಚಿಕ್ಕ ಗುಡ್ಡದ ಮೇಲೆ ಸುಂದರವಾದ ಮತ್ತು ಸಮೃದ್ಧವಾಗಿ ಬೆಳೆದಿಹ ಪರಿಸರದ ಮಧ್ಯದಲ್ಲಿ ತನ್ನ ಭಕ್ತನಾದ ನಂದಿಯ ಸಮ್ಮುಖದಲ್ಲಿ ಹಾಗೂ ಆತನ ಇತರೆ ದೇವಾಲಯದ ಆವರಣದಲ್ಲಿರುವ ಪರಮ ಶಿವನ ಮೂರ್ತಿಯು ನಿಜವಾಗಿಯೂ ಮುರುಡೇಶ್ವರವನ್ನು ಆಕರ್ಷಕ ತಾಣವನ್ನಾಗಿ ಮಾಡಿದೆ.

ಚಿತ್ರಕೃಪೆ: Sam valadi

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಜೋಗ ಜಲಪಾತ : "ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ ನೋಡುವುದೇ ಚಂದ. ರಾಜ, ರಾಣಿ, ರೋವರ್ ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಅಪ್ಪಟ ಸ್ಫಟಿಕದಂತೆ ಕಾಣುವ ಜಲಪಾತದ ನೋಟ ಮನದುಂಬಿಸುತ್ತದೆ.

ಚಿತ್ರಕೃಪೆ: Sarvagnya

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಸೇಂಟ್ ಮೇರಿಸ್ ದ್ವೀಪ : ಕರ್ನಾಟಕದಾದ್ಯಂತ ಸಂತ ಮೇರಿಯ ದ್ವೀಪವು ಕೊಕೊನಟ್ ದ್ವೀಪವೆಂದೆ ಹೆಸರುವಾಸಿಯಾಗಿದ್ದು, ಉಡುಪಿಯಲ್ಲಿರುವ ಮಲ್ಪೆ ಬೀಚಿನ ಸನಿಹದಲ್ಲಿದೆ. ಈ ದ್ವೀಪವು ಅನನ್ಯವಾದ ಕೊಲ್ಯುಮ್ನಾರ ಬ್ಯಾಸಾಲಿಟಿಕ್ ಲಾವಾ ರಚನೆಯನ್ನು ಹೊಂದಿದೆ. ಈ ದ್ವೀಪವು ಭಾರತದಲ್ಲಿರುವ 26 ಭೂಗರ್ಭ ಶಾಸ್ತ್ರದ ಸ್ಮಾರಕಗಳಲ್ಲಿ ಒಂದಾಗಿದೆ.ಪೋರ್ಚುಗೀಸ್ ಯಾತ್ರಿಕ ವಾಸ್ಕೊ-ಡ-ಗಾಮಾನು ಕೇರಳದ ಕಪ್ಪಾಡ್ ತಲುಪುವ ಮುಂಚೆ ಇಲ್ಲಿ ಇಳಿದಿದ್ದನು. ಪ್ರಸ್ತುತ ಈ ದ್ವೀಪವು ಯಾವುದೆ ಕಟ್ಟಡಗಳಿಲ್ಲದೆ ನಿರ್ಜನವಾಗಿದ್ದು, ಅಲ್ಲಲ್ಲಿ ಕೆಲವು ಪಾರ್ಕ್ ಬೆಂಚ್ ಗಳನ್ನು ಕಾಣಬಹುದಾಗಿದೆ.ಮಂಗಳೂರು ವಿಮಾನ ನಿಲ್ದಾಣವು ಈ ದ್ವೀಪಕ್ಕೆ ಹತ್ತಿರವಾಗಿದ್ದು 58 ಕಿ.ಮೀ ದೂರದಲ್ಲಿದೆ. "ಫೆರ್ರಿ" ಒಂದು ರೀತಿಯ ದೋಣಿಯ ಮೂಲಕ ಪ್ರವಾಸಿಗರು ಈ ದ್ವೀಪವನ್ನು ತಲುಪಬಹುದಾಗಿದೆ. ಮಲ್ಪೆ ಬಂದರಿನಿಂದ ಈ ಸೇವೆಯನ್ನು ಪಡೆಯಬಹುದಾಗಿದೆ. ಮಲ್ಪೆಯು ಉಡುಪಿ ನಗರದಿಂದ ಕೇವಲ 4 ಕಿ.ಮೀ ದೂರದಲ್ಲಿದ್ದು ರಸ್ತೆ ಸಾರಿಗೆಯ ಮೂಲಕ ಸರಳವಾಗಿ ತಲುಪಬಹುದು. ಆದರೆ ಫೆರ್ರಿ ಸೇವೆಯು ಪ್ರಯಾಣಿಕರ ಸಂಖ್ಯೆಯ ಮೇಲೆ ಅವಲಂಬಿತವಾಗಿದೆ.

ಚಿತ್ರಕೃಪೆ: Arun Prabhu

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಚಿಕ್ಕಮಗಳೂರು : ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಬಹುದಾದ ಮತ್ತೊಂದು ಸುಂದರ ಸ್ಥಳ ಚಿಕ್ಕಮಗಳೂರು. ಈ ಗಿರಿ ಪ್ರದೇಶವು ಅನೇಕ ಭವ್ಯ ಗಿರಿ ಶ್ರೇಣಿಗಳಿಗೆ ತವರಾಗಿದೆ. ಎಲ್ಲೆಲ್ಲೂ ಕಾಫಿಯ ಸುಮಧುರ ಸುವಾಸನೆಯನ್ನು ಪಸರಿಸಿಕೊಂಡಿರುವ ಕರ್ನಾಟಕದ ಕಾಫಿ ನಗರವಿದು. ಬೆಂಗಳೂರಿನಿಂದ ವಾಯವ್ಯ ದಿಕ್ಕಿಗೆ ಸುಮಾರು 250 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರನ್ನು ನೆಲಮಂಗಲ, ಕುಣಿಗಲ್, ಹಾಸನ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಚಿಕ್ಕಮಗಳೂರಿನ ಬೆರಗುಗೊಳಿಸುವ ಆಕರ್ಷಣೆಗಳು.

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಶಿವಮೊಗ್ಗ : ಸಾಹಿತ್ಯಿಕವಾಗಿ ಶಿವನ ಮೊಗ ಎಂಬರ್ಥದಿಂದ ಹೆಸರು ಪಡೆದಿರುವ ಶಿವಮೊಗ್ಗ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 275 ಕಿಲೋ ಮೀಟರ್ ದೂರದಲ್ಲಿದೆ. ಸ್ಥಳಿಯರು ಕರೆಯುವಂತೆ ಮಲೆನಾಡಿನ ಭಾಗವಾಗಿರುವ ಶಿವಮೊಗ್ಗ ಪಶ್ಚಿಮಘಟ್ಟಗಳ ಸಾಲಿನಲ್ಲಿ ನೆಲೆ ನಿಂತಿದ್ದು ಸುಲಭವಾದ ಪ್ರಯಾಣಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳ ಸಂಪರ್ಕವನ್ನು ಹೊಂದಿದೆ. ಶಿವಮೊಗ್ಗ ಕರ್ನಾಟಕದ ಪ್ರಸಿದ್ದ ಪ್ರವಾಸಿ ಸ್ಥಳಗಳಿಗೆ ಹತ್ತಿರದಲ್ಲಿರುವ ಕಾರಣ ಬಹುತೇಕ ಪ್ರವಾಸಿಗರು ರಾಜ್ಯದ ಬೇರೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುಂಚೆ ಶಿವಮೊಗ್ಗೆಗೆ ಬರುತ್ತಾರೆ. ಶಿವಮೊಗ್ಗ ಕುರಿತು ತಿಳಿಯಿರಿ.

ಚಿತ್ರಕೃಪೆ: Manjeshpv

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕೊಡಗು : ಕರ್ನಾಟಕದಲ್ಲಿ ಕೂರ್ಗ್‌ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ಓದಿ : ಮೋಡಿ ಮಾಡುವ ಕೊಡಗು.

ಚಿತ್ರಕೃಪೆ: kiran kumar

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಬೆಂಗಳೂರು : ಭಾರತದ ಸಿಲಿಕಾನ್ ಕಣಿವೆ, ಉದ್ಯಾನ ನಗರ, ಐಟಿ ರಾಜಧಾನಿ ಎಂಬೆಲ್ಲ ಹೆಸರುಗಳಿಂದ ಖ್ಯಾತಿಗಳಿಸಿರುವ ಹಾಗೂ ಕರ್ನಾಟಕದ ರಾಜಧಾನಿ ನಗರವಾಗಿರುವ ಬೆಂಗಳೂರು ದಕ್ಷಿಣ ಭಾರತದಲ್ಲಿ ನಿಸ್ಸಂದೇಹವಾಗಿ ಭೇಟಿ ಮಾಡಲೇಬೇಕಾದ ಪ್ರವಾಸಿ ನಗರವಾಗಿದೆ. ಬೆಂಗಳೂರಲ್ಲಿ ಏನೆಲ್ಲ ನೋಡಬಹುದು?

ಚಿತ್ರಕೃಪೆ: Ming-yen Hsu

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಮೈಸೂರು : ದಕ್ಷಿಣ ಭಾರತದಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಭವ್ಯ ಪ್ರವಾಸಿ ತಾಣವೆಂದರೆ ಮೈಸೂರು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಮೈಸೂರು ನಗರವು ಶ್ರೀಮಂತವಾದ ರಾಜ ಸಂಸ್ಕೃತಿಯನ್ನು ಒಳಗೊಂಡಿದ್ದು, ಇಲ್ಲಿ ವಾರ್ಷಿಕವಾಗಿ ಜರುಗುವ ಐತಿಹಾಸಿಕ ಮಹತ್ವ ಪಡೆದಿರುವ ದಸರಾ ಉತ್ಸವವು ವಿಶ್ವವಿಖ್ಯಾತಿಯನ್ನೆ ಪಡೆದಿದೆ. ಅಲ್ಲದೆ ನಗರದಲ್ಲಿ ಅನೇಕಾನೇಕ ಸಾಂಸ್ಕೃತಿಕ ವೈಭವ ಸಾರುವ ಭವ್ಯ ಕಟ್ಟಡಗಳಿದ್ದು, ಜಗತ್ಪ್ರಸಿದ್ಧ ಮೈಸೂರು ಅರಮನೆ, ಬೃಂದಾವನ ಉದ್ಯಾನ ಮುಂತಾದ ವಿಶೇಷತೆಗಳನ್ನು ಕಾಣಬಹುದು. ಮೈಸೂರಿನ ಸಮಗ್ರ ಆಕರ್ಷಣೆಗಳು.

ಚಿತ್ರಕೃಪೆ: Mahesh Telkar

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಮುನ್ನಾರ್ : ಕೇರಳವು ದಕ್ಷಿಣ ಭಾರತದಲ್ಲಿರುವ ಸುಂದರ ಪ್ರವಾಸಿ ರಾಜ್ಯವಾಗಿದೆ. ಇಲ್ಲಿರುವ ಹಸಿರಿನ ಮೈಸಿರಿ, ಹಿನ್ನೀರು, ಬೆಟ್ಟ ಗುಡ್ಡಗಳು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುನ್ನಾರ್ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದೆ. ದಕ್ಷಿಣ ಭಾರತದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳ ಪೈಕಿ ಮುನ್ನಾರ್ ಗಿರಿಧಾಮವೂ ಸಹ ಒಂದು. ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ.

ಚಿತ್ರಕೃಪೆ: Bimal K C

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವಯನಾಡ್ : ಅದ್ಭುತ ಜೀವ ಜಂತುಗಳಿಂದ ತುಂಬಿರುವ, ಸುಂದರ ಕಾಡುಗಳ ಹಸಿರಿನಿಂದ ಕಂಗೊಳಿಸುವ ವಯನಾಡ್ ಕೇರಳ ರಾಜ್ಯದ ಎರಡನೆಯ ಪ್ರಮುಖ ವನ್ಯಜೀವಿ ಧಾಮದ ತವರಾಗಿದೆ. ಪ್ರಕೃತಿ ಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ವಯನಾಡ್ ದಕ್ಷಿಣ ಭಾರತದ ಒಂದು ಸುಂದರ ನಿಸರ್ಗ ಪ್ರವಾಸ ಸ್ಥಳವಾಗಿ ಎಲ್ಲರಿಗೂ ಮೆಚ್ಚುಗೆಯನ್ನುಗಳಿಸಿರುವ ಒಂದು ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ. ಅದ್ಭುತ ಜೀವಜಂತುಗಳ ವಯನಾಡ್ ಪ್ರವಾಸ.

ಚಿತ್ರಕೃಪೆ: Srikaanth Sekar

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವಗಮೋನ್ : ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ಒಂದು ಗಿರಿಧಾಮ ಪ್ರದೇಶವಾಗಿರುವ ವಗಮೋನ್, ಕೇರಳ ರಾಜ್ಯದಲ್ಲಿ ಎಲೆ ಮರೆಯ ಕಾಯಿಯಂತಿರುವ ಒಂದು ಸುಂದರ ಪ್ರದೇಶ. ತನ್ನಲ್ಲಿರುವ ಚಹಾ ತೋಟಗಳು, ಸುಂದರ ಕಣಿವೆಗಳು ಹಾಗೂ ಆಕರ್ಷಕ ವನಸಿರಿಯಿಂದ ವಗಮೋನ್ ಕಿರಿಯರಿಂದ ಹಿರಿಯರವರೆಗೂ ಎಲ್ಲರನ್ನೂ ಆಕರ್ಷಿಸುತ್ತದೆ. ಬೆರಗಾಗಿಸುವ ವಗಮೋನ್ ಸೊಬಗು

ಚಿತ್ರಕೃಪೆ: Vanischenu

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಅಲೆಪ್ಪಿ : ಹಿನ್ನೀರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ ಕೇರಳದ ಅಲೆಪ್ಪಿ. ಸ್ಥಳೀಯವಾಗಿ ಅಂದರೆ ಮಲಯಾಳಂ ಭಾಷೆಯಲ್ಲಿ ಅಲಪುಳಾ ಎಂದು ಕರೆಯಲಾಗುವ ಈ ತಾಣಕ್ಕೆ "ಪೂರ್ವದ ವೆನಿಸ್" ಎಂದು ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಅಲಪುಳಾ ಕುರಿತು ಹೆಚ್ಚಿನ ವಿವರ

ಚಿತ್ರಕೃಪೆ: Saad Faruque

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ತೆಕ್ಕಡಿ : ಕೇರಳ ರಾಜ್ಯದ 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಪ್ರದೇಶವು ಪ್ರವಾಸಿ ಮಹತ್ವವುಳ್ಳ ಪ್ರದೇಶವಾಗಿದೆ. ಚಾರಣ ಇಷ್ಟ ಪಡುವವರು, ನಿಸರ್ಗ ಪ್ರೇಮಿಗಳು, ವನ್ಯಜೀವಿಗಳ ಕುರಿತು ಆಸಕ್ತಿ ಇರುವವರು, ಸಾಹಸ ಪ್ರೀಯರು ಹಾಗೂ ಛಾಯಾಚಿತ್ರ ಪ್ರೇಮಿಗಳು ತೆಕ್ಕಡಿಗೆ ಭೇಟಿ ನೀಡಬಹುದು. ತೆಕ್ಕಡಿಯು ತಮಿಳುನಾಡು ಗಡಿಗೆ ಬಹಳ ಹತ್ತಿರದಲ್ಲಿ ಸ್ಥಿತವಿದ್ದು, ಎರಡೂ ರಾಜ್ಯಗಳ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಇಲ್ಲಿ ಕಾಣಬಹುದಾಗಿದೆ. ಕೇರಳದ ವಿಶಿಷ್ಟ ಪ್ರವಾಸಿ ತಾಣ ತೆಕ್ಕಡಿ

ಚಿತ್ರಕೃಪೆ: Ben3john

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕುಮರಕಮ್ : ಕೇರಳದ ಹಿನ್ನೀರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಮತ್ತೊಂದು ತಾಣ ಕುಮರಕಮ್. ಕೇವಲ ಹಿನ್ನೀರು ಮಾತ್ರವಲ್ಲದೆ ವೈವಿಧ್ಯಮಯ ಪಕ್ಷಿಗಳನ್ನೂ ನೋಡಬಹುದಾದ ಸುಂದರ ಪಕ್ಷಿಧಾಮಕ್ಕೂ ಕುಮರಕಮ್ ಹೆಸರುವಾಸಿ. ಕುಮರಕಮ್ ವಿಶೇಷ

ಚಿತ್ರಕೃಪೆ: Simply CVR

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ವರ್ಕಲಾ : ಕೇರಳದ ರಾಜಧಾನಿ ನಗರ ತಿರುವನಂತಪುರಂಗೆ ಬಹು ಹತ್ತಿರದಲ್ಲಿರುವ, ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿರುವ ವರ್ಕಲಾ ಒಂದು ಸುಂದರ ಕರಾವಳಿ ಗ್ರಾಮ. ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಈ ಸುಂದರ ಕಡಲ ಕಿನಾರೆಯ ಗ್ರಾಮಕ್ಕೆ ಬರಲು ಇಷ್ಟಪಡುತ್ತಾರೆ. ಮರ್ಕಟ ಮನಕೆ ತಂಪೆರೆವ ವರ್ಕಲಾ

ಚಿತ್ರಕೃಪೆ: Thejas Panarkandy

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕೊಚ್ಚಿ : ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ ರೂಪುಗೊಂಡಂತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಕೊಚ್ಚಿ ಪೃಕೃತಿ ರಮ್ಯತೆಯೊಂದಿಗೆ, ಔದ್ಯೋಗಿಕ ಹಾಗೂ ವ್ಯಾಪಾರೀ ಕ್ಷೇತ್ರವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ. ಕೊಚ್ಚಿಯಲ್ಲಿ ನೋಡಬಹುದಾದ ಆಕರ್ಷಣೆಗಳು

ಚಿತ್ರಕೃಪೆ: Challiyil Eswaramangalath Pavithran Vipin

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ತಿರುವನಂತಪುರಂ : ಆಂಗ್ಲ ಭಾಷೆಯಲ್ಲಿ ತ್ರಿವೇಂದ್ರಂ ಎಂದು ಕರೆಯಲ್ಪಡುತ್ತಿದ್ದ ತಿರುವನಂತಪುರಂ ಕೇರಳ ರಾಜ್ಯದ ರಾಜಧಾನಿ ನಗರ ಹಾಗೂ ಸುಂದರ ಪ್ರವಾಸಿ ತಾಣ. ತಿರುವನಂತಪುರಂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಂದಲೂ ಸಹ ಸಾಕಷ್ಟು ಜನ ಪ್ರವಾಸಿಗರು ಕೇರಳದ ಈ ಧಾರ್ಮಿಕ ನಗರಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ಇಲ್ಲಿದೆ ತಿರುವನಂತಪುರಂ ವಿಶೇಷ

ಚಿತ್ರಕೃಪೆ: Bijoy Mohan

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ರಾಮೇಶ್ವರಂ : ದಕ್ಷಿಣ ಭಾರತದ ಪ್ರಖ್ಯಾತ ತೀರ್ಥ ಕ್ಷೇತ್ರವಾಗಿ ತಮಿಳುನಾಡು ರಾಜ್ಯದಲ್ಲಿರುವ ರಾಮೇಶ್ವರ ಬಹು ಜನಪ್ರೀಯವಾಗಿದೆ. ದೇಶದ ನಾನಾ ಭಾಗಗಳಿಂದ ರಾಮೇಶ್ವರಂಗೆ ಭೇಟಿ ನೀಡಲು ಜನ ಬರುತ್ತಾರೆ. ಅಲ್ಲದೆ, ಶಿವನ ಹನ್ನೆರಡು ಪವಿತ್ರ ಜ್ಯೊತಿರ್ಲಿಂಗಗಳ ಪೈಕಿ ಒಂದಾಗಿದೆ ರಾಮೇಶ್ವರಂನಲ್ಲಿರುವ ಶಿವಲಿಂಗ. ಸ್ವತಃ ಶ್ರೀರಾಮಚಂದ್ರನೆ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂಬ ಪ್ರತೀತಿಯಿದೆ. ಪವಿತ್ರ ರಾಮೇಶ್ವರಂಗೊಂದು ಭೇಟಿ

ಚಿತ್ರಕೃಪೆ: wishvam

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕನ್ಯಾಕುಮಾರಿ : ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ನೆಲೆಸಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಕನ್ಯಾಕುಮಾರಿಯ ದೇವಸ್ಥಾನ, ಅದ್ಭುತ ಕಡಲ ತೀರ, ತಮಿಳಿನ ಪ್ರಾಚೀನ ಕವಿ ತಿರುವಳ್ಳುವರ್ ಅವರ ಬೃಹತ್ ಪ್ರತಿಮೆ ಹಾಗೂ ವಿವೇಕಾನಂದ ಬಂಡೆಗಳು ಇಲ್ಲಿ ನೋಡಬಹುದಾದ ಪ್ರಸಿದ್ಧ ಆಕರ್ಷಣೆಗಳಾಗಿವೆ. ಕನ್ಯಾಕುಮಾರಿ

ಚಿತ್ರಕೃಪೆ: Nithi Anand

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಚೆನ್ನೈ : ತಮಿಳುನಾಡಿನ ರಾಜಧಾನಿ ನಗರ ಹಾಗೂ ಭಾರತದ ನಾಲ್ಕು ಮಹಾನಗರಗಳ ಪೈಕಿ ಒಂದಾಗಿರುವ ಚೆನ್ನೈ ಒಂದು ಭೇಟಿ ನೀಡಲೇಬೇಕಾದ ತಾಣವಾಗಿದೆ. ಇಂದು ಆಧುನಿಕ ಯುಗದಲ್ಲೂ ಸಹ ಪುರಾತನ ತಮಿಳು ಸಂಸ್ಕೃತಿಯ ತಳುಕು ಹಾಕಿಕೊಂಡಿರುವ ರೀತಿಯನ್ನು ಈ ನಗರದಲ್ಲಿ ಕಾಣಬಹುದು. ಅಲ್ಲದೆ ಸಾಕಷ್ಟು ಪ್ರವಾಸಿ ವಿಶೇಷತೆಗಳನ್ನು ಚೆನ್ನೈ ನಗರ ಹಾಗೂ ಅದರ ಸುತ್ತಮುತ್ತಲು ಕಾಣಬಹುದಾಗಿದೆ. ಚೆನ್ನೈ ಹಾಗೂ ಸುತ್ತಮುತ್ತಲಿನ ಆಕರ್ಷಣೆಗಳು

ಚಿತ್ರಕೃಪೆ: Pratik Gupte

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಊಟಿ : "ಗಿರಿಧಾಮಗಳ ರಾಣಿ" ಎಂದೆ ಪ್ರೀತಿಯಿಂದ ಕರೆಸಿಕೊಳ್ಳುವ ಊಟಿಯು ತಮಿಳುನಾಡಿನ ನೀಲ್ಗಿರಿ ಜಿಲ್ಲೆಯಲ್ಲಿದೆ. ಹಿತಕರವಾದ ವಾತಾವರಣ, ಶುಭ್ರ ಹಾಗೂ ಹಚ್ಚ ಹಸಿರಿನಿಂದ ಕೂಡಿದ ಪರಿಸರ, ತಾಜಾ ನೀರಿನ ಕೆರೆಗಳು ಹೀಗೆ ಹತ್ತು ಹಲವು ವಿಶೇಷಗಳನ್ನು ಉದಕಮಂಡಲ ಅರ್ಥಾತ್ ಊಟಿಯು ತನ್ನನ್ನು ಭೇಟಿ ಮಾಡುವ ಪ್ರವಾಸಿಗರಿಗೆ ಕರುಣಿಸುತ್ತದೆ. ದಕ್ಷಿಣ ಭಾರತದಲ್ಲಿ ಭೇಟಿ ನೀಡಲೇಬೇಕಾದ ಗಿರಿಧಾಮಗಳಲ್ಲಿ ಊಟಿಯು ಮಂಚೂಣಿಯಲ್ಲಿ ನಿಲ್ಲುತ್ತದೆ. ಜನರಿಗೆ ಊಟಿ ಎಂದರೆ ಏಕಿಷ್ಟ?

ಚಿತ್ರಕೃಪೆ: Ashwin Kumar

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಮದುರೈ : ದಕ್ಷಿಣದ ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮದುರೈ ನಗರವು ಒಂದು ಪ್ರಾಚೀನ ನಗ್ರವಾಗಿದ್ದು ಹಗಲು ರಾತ್ರಿ ಎನ್ನದೆ ನಿರಂತರ ಚಟುವಟಿಕೆಯಿಂದ ಕೂಡಿರುವ ತಾಣ. ಆದ್ದರಿಂದಲೆ ಈ ಕ್ಷೇತ್ರವನ್ನು ಪ್ರೀತಿಯಿಂದ "ನಿದ್ರಿಸಲಾರದ ನಾಡು" ಎಂದು ಕರೆಯುತ್ತಾರೆ. ವೈಗೈ ನದಿ ತೀರದಲ್ಲಿ ಸ್ಥಿತವಿರುವ ಈ ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇಗುಲದಿಂದಾಗಿ ಇದು ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ದಕ್ಷಿಣ ಭಾರತದಲ್ಲಿ ಭೇಟಿ ಮಾಡಲೇಬೇಕಾದ ತಾಣಗಳಲ್ಲಿ ಮದುರೈ ಸಹ ಒಂದು. ಎಂದೂ ನಿದ್ರಿಸಲಾರದ ನಗರ ಮದುರೈ

ಚಿತ್ರಕೃಪೆ: Surajram

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಕೊಡೈಕೆನಲ್ : ತಮಿಳುನಾಡು ರಾಜ್ಯದ ದಿಂಡುಕ್ಕಲ್ ಜಿಲ್ಲೆಯಲ್ಲಿರುವ ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲದೆ ಇಲ್ಲಿ ತಂಗಲು ಹಲವಾರು ಹೋಟೆಲುಗಳು ಹಾಗೂ ರಿಸಾರ್ಟುಗಳು ಲಭ್ಯವಿದೆ.

ಚಿತ್ರಕೃಪೆ: Ahmed Mahin Fayaz

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಪಾಂಡಿಚೆರಿ : ಭಾರತ ದೇಶದ ಎಲ್ಲ ಏಳು ಕೇಂದ್ರಾಡಳಿತ ಪ್ರದೇಶಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿವೆ. ಪ್ರತಿ ಸ್ಥಳಗಳೂ ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿವೆ. ಅವುಗಳಲ್ಲೊಂದಾದ ಪಾಂಡಿಚೆರಿ ಅಥವಾ ಪುದುಚೆರಿಯು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿ ಆಕರ್ಷಿಸುತ್ತದೆ. ಅತಿ ಶ್ರೀಮಂತಮಯ ಇತಿಹಾಸ ಹೊಂದಿರುವ ಈ ತಾಣವು ಚೋಳರಿಂದ ಹಿಡಿದು ಪಾಂಡ್ಯರು, ವಿಜಯನಗರದ ಅರಸರು, ಬಿಜಾಪುರ ಸುಲ್ತಾನ, ಡಚ್ಚರು, ಇಂಗ್ಲೀಷರು, ಫ್ರೆಂಚರು ಹೀಗೆ ಸಾಕಷ್ಟು ಸಾಮ್ರಾಜ್ಯಗಳ ವೈಭವವನ್ನು ಕಂಡಿರುವ ಪ್ರಸಿದ್ಧ ಸ್ಥಳವಾಗಿದೆ. ಚುಂಬಕದಂತೆ ಸೆಳೆಯುವ ಪಾಂಡಿಚೆರಿ

ಚಿತ್ರಕೃಪೆ: N D Senthil Ram
ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ದಕ್ಷಿಣ ಭಾರತದ ವಿಶೇಷ ಸ್ಥಳಗಳು:

ಲಕ್ಷದ್ವೀಪ : ದೇಶದ ಕೊಚ್ಚಿ ಕಡಲ ತೀರದಿಂದ ಕೇವಲ 250 ಕಿ.ಮೀ. ದೂರದಲ್ಲೊಂದು ಸ್ವರ್ಗವಿದೆ. ಹೆಚ್ಚಿನ ಜನರಿಗೆ ಇದೊಂದು ಅತ್ಯಾಕರ್ಷಕ ಪ್ರವಾಸಿ ತಾಣ. ಅತ್ಯಂತ ಕಡಿಮೆ ಬೆಲೆಯಲ್ಲಿ ಇಲ್ಲಿ ಹೋಗಿ ರಜೆ ಕಳೆದು ಬರಬಹುದು ಅನ್ನುವುದು ತಿಳಿದಿರಲಿಕ್ಕಿಲ್ಲ. ಹೌದು, ಲಕ್ಷದ್ವೀಪದ ಸಮೂಹ ದ್ವೀಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ರಜೆಯ ಮುದವನ್ನು ಇಲ್ಲಿ ಕಳೆಯುವ ಆನಂದವೇ ಬೇರೆ. ದ್ವೀಪವು ಸುತ್ತಲೂ ಅರಬ್ಬಿ ಸಮುದ್ರದಿಂದ ಸುತ್ತುವರೆದಿದ್ದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಲಕ್ಷದ್ವೀಪದ ಅಂದ ಚೆಂದ ನೋಡಿದವನೆ ಧನ್ಯ

ಚಿತ್ರಕೃಪೆ: Sankara Subramanian

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X