Search
  • Follow NativePlanet
Share
» »ಬೆಸ್ಟ್‌ ಸ್ಟ್ರೀಟ್ ಫುಡ್ ಸಿಗುವ ಸ್ಥಳಗಳಿವು

ಬೆಸ್ಟ್‌ ಸ್ಟ್ರೀಟ್ ಫುಡ್ ಸಿಗುವ ಸ್ಥಳಗಳಿವು

By Manjula Balaraj Tantry

ಆಹಾರವು ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕವಾದುದಾಗಿದ್ದು ಇದರ ಪ್ರತೀ ಕಣಗಳೂ ನಮಗೆ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ ಇಲ್ಲಿಂದ ನಮಗೆ ಉತ್ತಮವಾದ ಮತ್ತು ಆರೋಗ್ಯವಂತ ಜೀವನ ನಡೆಸುವಲ್ಲಿ ಸಹಾಯ ಮಾಡುತ್ತವೆ. ಆದರೆ ಆಹಾರವು ಇದಕ್ಕಾಗಿ ಮಾತ್ರ ಸೀಮಿತವಾಗಿದೆಯೆಂದು ನೀವು ಭಾವಿಸಿದರೆ ನಿಮ್ಮ ಊಹೆ ಖಂಡಿತವಾಗಿಯೂ ತಪ್ಪು.

ಆಹಾರವು ಒಂದು ಸ್ಥಳದ ಸಂಪ್ರದಾಯ ಮತ್ತು ಜೀವನ ಶೈಲಿಯನ್ನೂ ಕೂಡಾ ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದುದರಿಂದ ನೀವು ಒಂದು ಪಟ್ಟಣದ ಅಥವಾ ನಗರದ ಜೀವನ ಶೈಲಿಯನ್ನು ಅನ್ವೇಷಣೆ ಮಾಡಬೇಕೆಂದಿದ್ದಲ್ಲಿ, ಆಯಾ ಜಾಗದ ಸ್ಟ್ರೀಟ್ ಪುಡ್ ಗಳು ಅಂದರೆ ಬೀದಿಗಳಲ್ಲಿ ಸಿಗುವ ಆಹಾರವನ್ನು ಒಮ್ಮೆಯಾದರೂ ಟೇಸ್ಟ್ ಮಾಡಲೇ ಬೇಕು.

ನೀವೇನಾದರೂ ಆಹಾರ ಪ್ರಿಯರಾಗಿದ್ದಲ್ಲಿ ಇಂತಹ ಬೀದಿಗಳ ಶೋಧನೆ ನಡೆಸಿ ಇಲ್ಲಿಯ ಆಹಾರ ಬೀದಿಗಳ ಅನ್ವೇಷಣೆ ನಡೆಸುವುದು ಒಂದು ಮೋಜಿನ ಸಂಗತಿಯೇ ಸರಿ. ಈ ಕೆಳಗಿನ ಭಾರತದ ಕೆಲವು ಪ್ರಮುಖ ನಗರಗಳು ಉತ್ತಮ ಸ್ಟ್ರೀಟ್ ಪುಡ್ ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ . ಇಲ್ಲಿಯ ರುಚಿಕರವಾದ ಆಹಾರಗಳನ್ನು ನೀವೊಮ್ಮೆ ಸವಿಯಲು ಬಯಸುವುದಿಲ್ಲವೆ? ಹೌದು ಎಂದಾದಲ್ಲಿ, ನಂತರ ಈ ಸ್ಥಳಗಳ ಬಗ್ಗೆ ಮತ್ತು ಅವುಗಳ ಅತ್ಯಾಕರ್ಷಕ ತಿನಿಸುಗಳ ಬಗ್ಗೆ ಹೆಚ್ಚು ತಿಳಿಯೋಣ.

ಹೈದರಾಬಾದ್

ಹೈದರಾಬಾದ್

ಭಾರತದ ಬಾಯಿ ನೀರೂರಿಸುವಂತಹ ಪಾಕಪದ್ದತಿಯು ಜಗತ್ಪ್ರಸಿದ್ದವಾಗಿದೆ ಎಂದಾದರೆ ಅದು ಖಚಿತವಾಗಿಯೂ ಹೈದರಾಬಾದ್. ಹೈದರಾಬಾದಿ ಬಿರಿಯಾನಿಯ ಒಂದು ಅಖಂಡ ರುಚಿಯನ್ನು ನಿಮಗೆ ನಾವು ಹೇಳುವ ಅಗತ್ಯವಿದೆಯೇ ? ಚಾರ್ ಮಿನಾರ್ ಅನ್ನು ಹೊಂದಿರುವ ಈ ನಗರವು ಕೇವಲ ಬಿರಿಯಾನಿಗೆ ಮಾತ್ರ ಹೆಸರುವಾಸಿ ಎಂದುಕೊಂಡಿರಾದರೆ ನೀವು ಖಂಡಿತವಾಗಿಯೂ ಇಲ್ಲಿಯ ಬೀದಿಗಳಲ್ಲಿ ಸಿಗುವ ಆಹಾರವನ್ನು ಸವಿಯಲು ಹೋಗುವ ಒಂದು ಯೋಜನೆಯನ್ನು ಹಾಕುವುದು ಒಳಿತು. ಇಲ್ಲಿಯ ಸ್ಟ್ರೀಟ್ ಫುಡ್ ಗಳು ನಿಮಗೆ ಮೊಘಲೈ ಮತ್ತು ತುರ್ಕ್ ಪಾಕಪದ್ದತಿಯ ಮಿಶ್ರಣವನ್ನು ಒದಗಿಸುತ್ತವೆ.
ಬಿರಿಯಾನಿಯ ಹೊರತಾಗಿಯೂ ಇಲ್ಲಿ ನೀವು ಇರಾನಿ ಚಹಾ, ಕೀಮಾ ಸಮೋಸಾ, ಹಲೀಮ್ ಮತ್ತು ಫಿರ್ನಿ ಗಳಂತಹ ತಿನಿಸುಗಳನ್ನು ರುಚಿನೋಡಬಹುದು. ಆದುದರಿಂದ ಹೈದರಾಬಾದಿನ ಉತ್ಕೃಷ್ಟವಾದ ರುಚಿ ಇರುವ ಆಹಾರ ಸಿಗುವಂತಹ ಈ ಬೀದಿಗಳ ಅನ್ವೇಷಣೆ ಮಾಡಿ ನಿಮ್ಮ ತಿನ್ನುವ ದಾಹವನ್ನು ಪೂರೈಸಿಕೊಳ್ಳಿ.

ಲಕ್ನೋ

ಲಕ್ನೋ

ನವಾಬರ ನಗರವೆಂದೇ ಕರೆಯಲ್ಪಡುವ ಲಕ್ನೋದಲ್ಲಿ ತಿನಿಸುಗಳ ಪದರಗಳನ್ನು ಮತ್ತು ಪಾಕ ಪದ್ದತಿಗಳ ಆಳವನ್ನು ಅನ್ವೇಷಣೆ ಮಾಡಿದರೆ ಹೇಗೆ? ಲಕ್ನೋ ಸರ್ವೋತ್ಕೃಷ್ಟ ಆಹಾರ ಪದ್ದತಿಯನ್ನು ಒಳಗೊಂಡಿದ್ದು ಇಲ್ಲಿಯ ಆಹಾರ ಬೀದಿಗಳು ತಮ್ಮ ರುಚಿಕರವಾದ ಮತ್ತು ರಸವತ್ತಾದ ಆಹಾರವನ್ನು ಒದಗಿಸುವ ಮೂಲಕ ನಿಮ್ಮ ಹೃದಯವನ್ನು ಸೂರೆಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿ ತುಂಡೇ ಕಿ ಕಬಾಬ್ ಹೆಚ್ಚು ಹೆಸರುವಾಸಿಯಾಗಿದ್ದು, ಈ ಐತಿಹಾಸಿಕ ನಗರವು ತನ್ನ ಸಂದರ್ಶಕರಿಗೆ ಇನ್ನೂ ಅನೇಕ ರೀತಿಯಲ್ಲಿ ತನ್ನ ಕೊಡುಗೆಯನ್ನು ಕೊಡುತ್ತದೆ.
ನೀವು ನವಾಬಿ ಮತ್ತು ಅವಾಧಿ ಪಾಕ ಪದ್ದತಿಯ ಒಂದು ಪರಿಪೂರ್ಣ ಮಿಶ್ರಣವಿರುವ ಜಾಗವನ್ನು ಹುಡುಕುತ್ತಿರುವಿರಿ ಎಂದಾದಲ್ಲಿ ಲಕ್ನೋ ನಿಮಗೆ ಸೂಕ್ತವಾದ ಸ್ಥಳವಾಗಿದೆ. ತುಂಡೇ ಕಿ ಕಬಾಬ್ ನ ಹೊರತಾಗಿಯೂ ನೀವು ಇಲ್ಲಿ ಕೊರಮಾಸ್, ಶೀರ್ಮಾಲ್ ಕಟೋರಿ ಚಾಟ್, ಕುಲ್ಫಿ ಮತ್ತು ಮಲಾಯಿ ಮಾಖ್ಹನ್ ನಂತಹ ಅನೇಕ ತಿನಿಸುಗಳ ರುಚಿಯನ್ನು ಸವಿಯಬಹುದಾಗಿದೆ. ನಿಮ್ಮ ಹಸಿವನ್ನು ನೀಗಿಸಿಕೊಳ್ಳಲು ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು?

ಇಂದೋರ್

ಇಂದೋರ್

ಇಂದೋರ್ ಭಾರತದ ಆಹಾರ ಬೀದಿಗಳ ಈ ಪಟ್ಟಿಯಲ್ಲಿರಬೇಕಾದರೆ ಇಲ್ಲಿಯ ಸ್ಟ್ರೀಟ್ ಆಹಾರಗಳು ನಿಮ್ಮನ್ನು ಅಚ್ಚರಿಗೊಳಿಸದೆ ಇರಬಹುದೆ? ಏಕೆಂದರೆ ಉತ್ತರಭಾರತದ ಅತ್ಯುತ್ತಮ ಚಾಟ್ ಗಳನ್ನು ಆನಂದಿಸ ಬಹುದಾದ ಕೆಲವು ಸ್ಥಳಗಳಲ್ಲಿ ಇದೂ ಕೂಡಾ ಒಂದಾಗಿದೆ.
ನೀವೇನಾದರೂ ಶಾಖಾಹಾರಿಗಳಾಗಿದ್ದಲ್ಲಿ ಮತ್ತು ನಿಮ್ಮ ಹಸಿವನ್ನು ನೀಗಿಸಿಕೊಳ್ಳಲು ಒಂದು ಉತ್ತಮವಾದ ಸ್ಥಳಕ್ಕಾಗಿ ಹುಡುಕುತ್ತಿದ್ದಲ್ಲಿ ಇಂದೋರ್ ಗಿಂತ ಉತ್ತಮವಾದುದು ಇನ್ನೊಂದು ಇರಲು ಸಾಧ್ಯವಿಲ್ಲ. ರುಚಿಕರವಾದ ಇಂದೋರ್ ಚಾಟ್ ನಿಂದ ಬಾಯಿನೀರೂರಿಸುವ ಆಲೂ ಟಿಕ್ಕಿಯವರೆಗೆ ಮತ್ತು ಕಟುವಾದ ಕಚೋರಿಯಿಂದ ಮೃದುವಾದ ಪೂರಿಗಳವರೆಗೆ ಇಲ್ಲಿ ನೂರಾರು ಖಾದ್ಯಗಳಿವೆ ಇವು ನಿಮ್ಮನ್ನು ಆಹಾರದ ಕಣಿವೆಗೆ ಕರೆದೊಯ್ಯುತ್ತದೆ.

ಕೊಲ್ಕತ್ತಾ

ಕೊಲ್ಕತ್ತಾ

ಆಹಾರ ಬೀದಿಗಳ ಮನೆಯಾಗಿರುವ ಕೊಲ್ಕತ್ತಾ ನಿಮ್ಮ ಹಸಿವಿನ ದಾಹವನ್ನು ಕಡಿಮೆ ವೆಚ್ಚದಲ್ಲಿ ಪೂರೈಸುವ ಒಂದು ಅತ್ಯುನ್ನತ ಸ್ಥಳವಾಗಿದೆ. ನೀವು ಕೊಲ್ಕತ್ತಾವು ಕೇವಲ ಮೀನನ್ನು ಅನ್ನದ ಜೊತೆಗೆ ಮಾತ್ರ ಕೊಡುವುದೆಂದು ಕೊಂಡರೆ ಅದು ತಪ್ಪು ಹಾಗಿದ್ದಲ್ಲಿ ನೀವು ಇಲ್ಲಿಯ ಪಾರ್ಕ್ ಬೀದಿಗಳು ಮತ್ತು ನ್ಯೂ ಮಾರ್ಕೇಟುಗಳ ಬೀದಿಗಳ ಅನ್ವೇಷಣೆ ಮಾಡಬೇಕು ಇಲ್ಲಿ ಅನೇಕ ಸ್ವಾದಿಷ್ಟಮಯ ಖಾದ್ಯಗಳು ತಿನಿಸು ಪ್ರಿಯರನ್ನು ಕಾಯುತ್ತಿರುತ್ತವೆ.

ಇಲ್ಲಿಯ ಆಹಾರ ಬೀದಿಗಳಲ್ಲಿ ಸಿಗುವ ಆಹಾರಗಳಲ್ಲಿ ಗುಗ್ ನೀ ಚಾಟ್, ಜಲ್ಮುರಿ, ಟೆಲಿಭಾಜಾ, ಮತ್ತು ಸಿಂಗಾರಾ ಇತ್ಯಾದಿಗಳು ಸೇರಿವೆ. ನೀವೇನಾದರೂ ಚಹಾ ಪ್ರಿಯರಾಗಿದ್ದಲ್ಲಿ, ಕೊಲ್ಕತ್ತಾದ ಸ್ಟ್ರೀಟ್ ಪುಡ್ ನಿಮ್ಮನ್ನು ಖಂಡಿತವಾಗಿಯೂ ಅತ್ಯಂತ ಕಡಿಮೆ ದರ ಅಂದರೆ ಕೇವಲ 5 ರೂಪಾಯಿ ದರದ ಕುಲ್ಲಾಡ್ ಚಹಾ ವನ್ನು ಸವಿಯುವ ಅವಕಾಶವನ್ನು ಒದಗಿಸಿ ನಿಮ್ಮನ್ನು ಅಚ್ಚರಿಪಡಿಸುತ್ತದೆ.

ಚೆನ್ನೈ

ಚೆನ್ನೈ

ಒಂದು ತಟ್ಟೆಯಲ್ಲಿ ಗರಿಗರಿಯಾಗಿರುವ ದೋಸೆ ಮತ್ತು ಮೇಲೋಗರಕ್ಕೆ ತೆಂಗಿನಕಾಯಿ ಚಟ್ನಿ ಏನು ಸಂಯೋಜನೆ!ಎಲ್ಲದಕ್ಕಿಂತ ಜಾಸ್ತಿಯಾಗಿ ಇಲ್ಲಿ ನಾವು ದೋಸೆಯನ್ನು ಅತ್ಯಂತ ಹೆಚ್ಚಾಗಿ ಇಷ್ಟಪಡುತ್ತೇವೆ. ಪ್ರಾಯಶ: ಇದು ವಿಶ್ವದಲ್ಲಿಯೇ ಗುರುತಿಸಲ್ಪಟ್ಟಿರುವ ಪ್ರಸಿದ್ದವಾದ ಭಾರತದ ತಿಂಡಿಗಳಲ್ಲಿ ಒಂದೆನ್ನಬಹುದು.
ಆದುದರಿಂದ ನೀವು ಇಲ್ಲಿ ಒಂದು ಉತ್ತಮವಾದ ದೋಸೆಯನ್ನು ತಿನ್ನಲು ಇಷ್ಟಪಟ್ಟಲ್ಲಿ ಚೆನ್ನೈ ನ ಸ್ಟ್ರೀಟ್ ಪುಡ್ ಒಂದು ಅತ್ಯುತ್ತಮವಾದ ಸ್ಥಳವಾಗಿದ್ದು ಇಲ್ಲಿ ನೀವು ಪರಿಪೂರ್ಣವಾಗಿ ಆನಂದಿಸಬಹುದಾಗಿದೆ. ದೋಸೆಯ ಹೊರತಾಗಿಯೂ ಇಡ್ಲಿ, ಉತ್ತಪ್ಪಂ, ಪೊಂಗಾಲ್,ಪನಿಯಾರ, ವಡಾ ಮತ್ತು ಪೂರಿ ಇತ್ಯಾದಿಗಳನ್ನೂ ಇಲ್ಲಿ ತಿಂದು ಆನಂದಿಸಬಹುದು.

ಮುಂಬೈ

ಮುಂಬೈ

ಕನಸಿನ ನಗರವೆನಿಸಿರುವ ಮುಂಬೈ ಕೇವಲ ಜೀವನದಲ್ಲಿ ಉನ್ನತಿಯನ್ನು ಬಯಸಿ ಬರುವವರಿಗೆ ಮಾತ್ರವಲ್ಲದೆ ಇಲ್ಲಿ ಹಸಿವು ನೀಗಿಸಲು ಯೋಚಿಸುವವರಿಗೂ ಸೂಕ್ತವಾದ ಸ್ಥಳವಾಗಿದೆ. ನಮಗೆಲ್ಲಾ ತಿಳಿದಿರುವಂತೆ ಮುಂಬೈ ನಲ್ಲಿ ಅಚ್ಚುಮೆಚ್ಚೆನಿಸುವ ಮತ್ತು ಜನಪ್ರಿಯ ಸ್ಟ್ರೀಟ್ ಪುಡ್ ಎಂದರೆ ವಡಾ ಪಾವ್.
ಆದರೆ ನೀವೆಂದಾರರೂ ಇಲ್ಲಿ ಅಳತೆ ಮೀರಿ ಅನ್ವೇಷಣೆ ನಡೆಸಿರುವಿರಾ? ವಡಾ ಪಾವ್ ಹೊರತಾಗಿ ಇಲ್ಲಿ ನೀವು ಅತ್ಯಂತ ಉತ್ತಮವಾದ ಬೇಲ್ ಪುರಿ, ಪಾವ್ ಬಾಜಿ ಮತ್ತು ಮಿಸಾಲ್ ಪಾವ್ ಇತ್ಯಾದಿ ತಿನಿಸುವಗಳನ್ನು ಮುಂಬೈನ ಆಹಾರಬೀದಿಗಳಲ್ಲಿ ಸವಿಯಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X