Search
  • Follow NativePlanet
Share
ಮುಖಪುಟ » ಸ್ಥಳಗಳು » ಮುದುಮಲೈ » ಹವಾಮಾನ

ಮುದುಮಲೈ ಹವಾಮಾನ

ಮುದುಮಲೈಗೆ ಭೇಟಿಕೊಡಲು ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಇಲ್ಲಿನ ಹವಾಮಾನವು ಚಾರಣಕ್ಕೆ, ಸ್ಥಳ ವೀಕ್ಷಣೆಗೆ ಹಾಗು ಇತ್ಯಾದಿ ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಜೂನ್‍ನಲ್ಲಿ ಸಹ ಇಲ್ಲಿಗೆ ಭೇಟಿಕೊಡಬಹುದು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಇಲ್ಲಿ ಅಧಿಕ ಮಳೆ ಬೀಳುವ ಕಾರಣದಿಂದಾಗಿ ಚಾರಣಕ್ಕೆ ಅವಕಾಶವಿರುವುದಿಲ್ಲ. ಜೊತೆಗೆ ಈ ಅವಧಿಯಲ್ಲಿ ಮುದುಮಲೈ ರಾಷ್ಟ್ರೀಯ ಉದ್ಯಾನವನ್ನು ವೀಕ್ಷಕರಿಗೆ ತೆರೆದಿರುವುದಿಲ್ಲ.

ಬೇಸಿಗೆಗಾಲ

ಮುದುಮಲೈನಲ್ಲಿ ಬೇಸಿಗೆಯಲ್ಲಿ ಒಣ ಹವೆಯಿರುತ್ತದೆ. ಇಲ್ಲಿರುವ ದಟ್ಟ ಅರಣ್ಯದಲ್ಲಿರುವ ನೀರಿನ ಆಕರಗಳ ಸುತ್ತ, ಕಾಡು ಪ್ರಾಣಿಗಳನ್ನು ಆಗಾಗ ನೋಡಬಹುದು. ಬೇಸಿಗೆಯ ಅವಧಿಯಲ್ಲಿ ಸಣ್ಣ ಪ್ರಮಾಣದ ಕಾಳ್ಗಿಚ್ಚುಗಳು ಸಹ ಉಂಟಾಗುತ್ತಿರುತ್ತವೆ. ಈ ಅವಧಿಯಲ್ಲಿ ಇಲ್ಲಿಗೆ ಬರುವುದಾದರೆ ತೆಳುವಾದ ಬಟ್ಟೆಗಳು, ವಾಕಿಂಗ್ ಶೂಗಳು ಮತ್ತು ಸನ್ ಸ್ಕ್ರೀನ್ ಲೋಷನ್‍ಗಳನ್ನು ತರುವುದನ್ನು ಮರೆಯಬೇಡಿ.

ಮಳೆಗಾಲ

ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶವು 16 ಡಿಗ್ರಿಯಿಂದ 28 ಡಿಗ್ರಿಯವರೆಗೆ ಇರುತ್ತದೆ. ಮುದುಮಲೈನಲ್ಲಿ ಮಳೆಯು ಏಕರೂಪವಾಗಿ ಬೀಳುವುದಿಲ್ಲ. ಜೋರಾದ ಗಾಳಿಯ ಜೊತೆಗೆ ಆಗಾಗ್ಗೆ ಸುರಿಯುವ ಮಳೆಯು ಇಲ್ಲಿ ಸಾಧಾರಣವಾಗಿ ಬೀಳುತ್ತಿರುತ್ತದೆ. ಆಗಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡಲು ಬಯಸಿದರೆ ಛತ್ರಿ, ವಿಂಡ್‍ಚೀಟರ್, ಒಂದು ಜೊತೆ ಜೀನ್ಸ್ ಮತ್ತು ಟೀ ಶರ್ಟ್ ತರುವುದನ್ನು ಮರೆಯ ಬೇಡಿ.

ಚಳಿಗಾಲ

ಶುಭ್ರ ಆಕಾಶ, ತಣ್ಣನೆಯ ರಾತ್ರಿಗಳು ಮತ್ತು ಬಿಸಿಲಿನಿಂದ ಕೂಡಿದ ದಿನದ ಅವಧಿಯನ್ನು ಚಳಿಗಾಲದಲ್ಲಿ ನಾವು ಇಲ್ಲಿ ನೋಡಬಹುದು. ಈ ಸಮಯದಲ್ಲಿ ಇಲ್ಲಿ ಬೆಳಗಿನ ಹೊತ್ತು ಮಂಜು ಕವಿದ ವಾತಾವರಣವಿರುತ್ತದೆ. ಸಂಜೆಗಳು ಸ್ವಲ್ಪ ಕೊರೆಯುವ ಚಳಿಯಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ಎಂದಿನ ಉಡುಗೆಗಳ ಜೊತೆಗೆ ಒಂದು ಸ್ವೆಟರ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.