» »ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು

ರಜೆಯ ಮಜೆಗೆಂದೆ ಹೇಳಿಮಾಡಿಸಿದ ಮೈಸೂರು

Written By:

ಎಷ್ಟು ಭೇಟಿ ನೀಡಿದರೂ ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಂತೆ ಮಾಡುತ್ತವೆ ಕೆಲ ಸ್ಥಳಗಳು. ಅಂತಹ ಸ್ಥಳಗಳ ಪೈಕಿ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರು ನಗರವೂ ಸಹ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಮೈಸೂರು ತನ್ನ ಚೆಂದದ ವಾತಾವರಣ, ಆಕರ್ಷಕ ಸ್ಮಾರಕ ಭವನಗಳು, ಅಂದದ ಉದ್ಯಾನಗಳಿಂದ ಪ್ರವಾಸಿಗರ ಮನದಲ್ಲಿ ಸದಾ ಹಸಿರಾಗಿದೆ.

ಟ್ರಾವಲ್ ಗುರುನಿಂದ ಹೋಟೆಲ್ ಬುಕ್ಕಿಂಗ್ ಮೇಲೆ ಅದ್ಭುತ ಉಳಿತಾಯಗಳು : 40% ಗಳಷ್ಟು ಕಡಿತ

ಪ್ರವಾಸಿಗರ ದೃಷ್ಟಿಯಿಂದ ಮೈಸೂರು ಒಂದು ವಿಶೇಷವಾದ ಪಟ್ಟಣವೆಂದೆ ಹೇಳಬಹುದು. ಏಕೆಂದರೆ ಈ ನಗರವೇ ಪ್ರಪ್ರಥಮವಾಗಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿಗೆ ತವರಾಗಿದೆ, ಅದಾಗ್ಯೂ ಈ ನಗರವು ತನ್ನೆಲ್ಲ ದಿಕ್ಕುಗಳಲ್ಲಿ ಇತರೆ ಅನೇಕ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳಿಗೂ ಸಹ ಬಹು ಹತ್ತಿರದಲ್ಲಿ ನೆಲೆಸಿದೆ. ಆದ್ದರಿಂದ ಈ ಸ್ಥಳವು ಸುತ್ತಲೂ ಭೇಟಿ ನೀಡಬಹುದಾದ ಅನೇಕ ಆಕರ್ಷಣೆಗಳಿಗೆ "ಬೇಸ್" ಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತದೆ.

ವಿಶೇಷ ಲೇಖನ : ಮೋಡಿ ಮಾಡುವ ಕೊಡಗುನಾಡು

ಅಂದರೆ ಒಂದೊಮ್ಮೆ ದೀರ್ಘ ರಜೆ ಸಿಕ್ಕಿತೆಂದರೆ ಮೈಸೂರಿಗೆ ಹೊರಟು ಬಿಡಿ. ಅಷ್ಟಕ್ಕೂ ಮಕ್ಕಳಿಗೆ ಬೇಸಿಗೆ ರಜೆಗಳು ಸಮೀಪಿಸುತ್ತಿವೆ. ಕೇವಲ ಮೈಸೂರು ಮಾತ್ರವಲ್ಲದೆ ಯೋಜನಾಬದ್ಧವಾಗಿ ಅಲ್ಲಿ ಕೆಲ ದಿನಗಳಷ್ಟು ಕಾಲ ತಂಗಿ ಇನ್ನೂ ಅನೇಕ ಹಾಗೂ ಮನಸ್ಸಿಗೆ ಮುದ ನೀಡುವ, ಪ್ರಸನ್ನಗೊಳಿಸುವ ಇತರೆ ಆಕರ್ಷಣೆಗಳಿಗೂ ಭೇಟಿ ನೀಡಿ. ತಮಿಳುನಾಡಿನಿಂದ ಹಿಡಿದು ಕೇರಳದ ಕೆಲ ಸುಂದರ ಸ್ಥಳಗಳೂ ಸಹ ಮೈಸೂರಿಗೆ ಸಾಮಿಪ್ಯದಲ್ಲಿ ನೆಲೆಸಿರುವುದರಿಂದ ಸಾಕಷ್ಟು ಆಯ್ಕೆಗಳು ಪ್ರವಾಸಿಗರಿಗೆ ದೊರೆಯುತ್ತವೆ.

ವಿಶೇಷ ಲೇಖನ : ಮಂಗಳೂರಿನ ಫಳ ಫಳಿಸುವ ಆಕರ್ಷಣೆಗಳು

ಈ ಒಂದು ದೃಷ್ಟಿಯಿಂದ ಪ್ರಸ್ತುತ ಲೇಖನವು ಸಹಾಯಕವಾಗಬಲ್ಲದು. ಇಲ್ಲಿ ಕೇವಲ ಮೈಸೂರಿನಲ್ಲಿ ಆನಂದಿಸಬಹುದಾದ ಪ್ರವಾಸಿ ಆಕರ್ಷಣೆಗಳ ಕುರಿತಷ್ಟೆ ಹೇಳದೆ, ಇಲ್ಲಿಂದ ಸುಮಾರು 150 ಕಿ.ಮೀ ಗಳಷ್ಟು ವ್ಯಾಪ್ತಿಯಲ್ಲಿ ಭೇಟಿ ನೀಡಬಹುದಾದಂತಹ ಇತರೆ ಪ್ರಖ್ಯಾತ ಪ್ರವಾಸಿ ಕ್ಷೇತ್ರಗಳ ಕುರಿತು ಸಹ ತಿಳಿಸಲಾಗಿದೆ. ಹಾಗಿದ್ದರೆ ಇನ್ನೇಕೆ ತಡ ಈ ಸಲದ ಬೇಸಿಗೆ ರಜೆಗೆ ಮೈಸೂರಿಗೆ ತೆರಳಿ ಅಲ್ಲಿರುವ ಕನ್ಯೆಯಂತೆ ಕಂಗೊಳಿಸುವ ಆಕರ್ಷಣೆಗಳ ಜೊತೆ ಒಂದೊಂದು ದಿನ ಒಂದೊಂದು ಕಡೆ "ಡೇಟ್" ಗೆ ಹೊರಡಿ.

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರು ನಗರದಲ್ಲೆ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿರುವುದರಿಂದ ಮೊದಲಿಗೆ ನಗರದ ಆಕರ್ಷಣೆಗಳಿಂದಲೆ ಪ್ರಾರಂಭಿಸೋಣ. ಮೈಸೂರಿನ ಪ್ರತಿಷ್ಠಿತ ಕೆ ಆರ್ ಸರ್ಕಲ್

ಚಿತ್ರಕೃಪೆ: Kiranravikumar

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರು ಅರಮನೆ. ನಗರದ ಅತಿ ಪ್ರತಿಷ್ಠಿತ ಹೆಗ್ಗುರುತು ಇದಾಗಿದೆ. ನಗರದ ಕೇಂದ್ರಭಾಗದಲ್ಲಿರುವ ಈ ಭವ್ಯ ಅರಮನೆಯು ಮೈಸೂರು ಸಿಟಿ ರೈಲು ಜಂಕ್ಷನ್ ನಿಂದ ಕೇವಲ 2 ಕಿ.ಮೀ ದೂರದಲ್ಲಿದ್ದು ಐರ್‌‌‌‌‌‌‌ವಿನ್ ರಸ್ತೆ ನಂತರ ಸಯ್ಯಾಜಿ ರಾವ್ ರಸ್ತೆಯ ಮುಖಾಂತರ ಇದನ್ನು ಸುಲಭವಾಗಿ ತಲುಪಬಹುದು. ಈ ಅರಮನೆಯು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ರ ವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ. ಅರಮನೆಯ ಭೇಟಿ ಸಂತೃಪ್ತತೆಯನ್ನು ತರಬೇಕೆಂದರೆ ಕನಿಷ್ಠ ಎರಡು ಘಂಟೆಯನ್ನಾದರೂ ಇದಕ್ಕೆ ಮೀಸಲಿಡಬೇಕು.

ಚಿತ್ರಕೃಪೆ: Shiv

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ ಈ ಕೆ.ಆರ್.ಎಸ್ ಡ್ಯಾಮ್ ಅಥವಾ ಬೃಂದಾವನ್ ಗಾರ್ಡನ್. ಅರಮನೆ ಪ್ರದೇಶದಿಂದ ಇದು ಸುಮಾರು 20 ಕಿ.ಮೀ ದೂರದಲ್ಲಿದ್ದು ಮುಟ್ಟಲು ಸರಿ ಸುಮಾರು 45 ನಿಮಿಷಗಳಿಂದ ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು ತೆಗೆದುಕೊಳ್ಳುತ್ತದೆ. ಅರಮನೆ ಬಳಿಯಿರುವ ಬಸ್ ನಿಲ್ದಾಣದಿಂದ ಉದ್ಯಾನಕ್ಕೆ ಸಾಕಷ್ಟು ಬಸ್ಸುಗಳು ದೊರಕುತ್ತವೆ.

ಚಿತ್ರಕೃಪೆ: Ashwin Kumar

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ನಗರದಿಂದ 30 ರಿಂದ 40 ನಿಮಿಷಗಳಷ್ಟು ಪ್ರಯಾಣಾವಧಿಯಷ್ಟು ದೂರದಲ್ಲಿದೆ ಈ ಚಾಮುಂಡಿ ಬೆಟ್ಟ. ನಗರ ಕೇಂದ್ರದಿಂದ ಬಸ್ಸು ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಈ ಬೆಟ್ಟದ ತುದಿಗೆ ಸುಲಭವಾಗಿ ತಲುಪಬಹುದು. ಬೆಟ್ಟದ ಮೇಲಿರುವ ದೇವಾಲಯದ ಪ್ರಮುಖ ದೇವತೆ ಚಾಮುಂಡೇಶ್ವರಿ ದೇವಿ. ಆದ್ದರಿಂದ ಇದನ್ನು ಚಾಮುಂಡಿ ಬೆಟ್ಟ ಎಂದು ಕರೆಯಲಾಗುತ್ತದೆ. ದೇವಾಲಯದಿಂದ 500 ಮೀಟರುಗಳ ಅಂತರದಲ್ಲಿ ವಾಹನ ನಿಲುಗಡೆಯ ಸ್ಥಳವಿದೆ. ದೇವಾಲಯ ತೆರೆದಿರುವ ಸಮಯ ಬೆಳಿಗ್ಗೆ 7.30 ಮಧ್ಯಾಹ್ನ 2 pm, 3.30 pm ನಿಂದ 6 pm,7.30 pm ನಿಂದ 9 pm ವರೆಗೆ. ಈ ದೇವಾಲಯದಿಂದ ಮೈಸೂರು ನಗರಕ್ಕೆ ಕೊನೆಯ ಬಸ್ಸಿನ ಸಮಯ ರಾತ್ರಿ 9 ಘಂಟೆಗಿರುತ್ತದೆ.

ಚಿತ್ರಕೃಪೆ: Sanath Kumar

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರು ಮೃಗಾಲಯ : ನಾಲ್ಕನೇಯ ಪ್ರಮುಖ ಆಕರ್ಷಣೆ ದಕ್ಷಿಣ ಭಾರತದಲ್ಲೆ ಬಹು ಪ್ರಖ್ಯಾತಿ ಪಡೆದ ಮೃಗಾಲಯ ಇದಾಗಿದೆ. ಮೈಸೂರು ಅರಮನೆ ಪ್ರದೇಶದಿಂದ ಅಲ್ಬರ್ಟ್ ವಿಕ್ಟರ್ ರಸ್ತೆ, ಮಿರ್ಜಾ ರಸ್ತೆ ಹಾಗು ಕೊನೆಯದಾಗಿ ಬೆಂಗಳೂರು - ಮೈಸೂರು ರಸ್ತೆಯ ಮಾರ್ಗವಾಗಿ ಸುಮಾರು 1.5 ಕಿ.ಮೀ ಪಯಣಿಸಿ ಮೈಸೂರು ಮೃಗಾಲಯಕ್ಕೆ ಸುಲಭವಾಗಿ ತಲುಪಬಹುದು. ವೈವಿಧ್ಯಮಯ ಪ್ರಾಣಿ ಸಂಪತ್ತನ್ನು ವೀಕ್ಷಿಸಬಹುದಾಗಿದ್ದು ಸುತ್ತಾಡಲು ಸುಮಾರು ಎರಡು ಘಂಟೆಗೂ ಅಧಿಕ ಸಮಯವನ್ನು ತೆಗೆದುಕೊಳ್ಳಬಹುದು.

ಚಿತ್ರಕೃಪೆ: Punithsureshgowda

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮಂಗಳವಾರವನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುವ ಮೃಗಾಲಯದ ವೇಳೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರ ವರೆಗೆ. ಗಮನದಲಿಡಬೇಕಾದ ಒಂದು ಸಂಗತಿಯೆಂದರೆ ಬೆಳಿಗ್ಗೆ11 ರಿಂದ ಮಧ್ಯಾಹ್ನ 3 ರ ನಡುವಿನ ಸಮಯದಲ್ಲಿ ಸ್ವಲ್ಪ ತಾಪಮಾನ ಹೆಚ್ಚಿರುವುದರಿಂದ ಬಹು ಮಟ್ಟಿಗೆ ಪ್ರಾಣಿ ಪಕ್ಷಿಗಳು ನಿದ್ದೆಗಿಳಿದಿರುತ್ತವೆ ಅಥವಾ ವಿಶ್ರಮಿಸಿರುತ್ತವೆ. ಆದ್ದರಿಂದ ಭೇಟಿ ನೀಡುವುದಿದ್ದರೆ ಬೆಳಿಗ್ಗೆ11 ರ ಮುಂಚೆ ಅಥವಾ ಮಧ್ಯಾಹ್ನ 3 ರ ನಂತರ ನೀಡಬಹುದು.

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಜಗನ್ಮೋಹನ ಅರಮನೆ: ಮೈಸೂರು ನಗರ ಬಸ್ ನಿಲ್ದಾಣಕ್ಕೆ ಅತಿ ಹತ್ತಿರದಲ್ಲಿರುವ ಈ ಅರಮನೆಯನ್ನು ಯಾರಿಗಾದರು ಕೇಳಿ ನಡೆದುಕೊಂಡೆ ತಲುಪಬಹುದು. ವಾಸ್ತುಶಿಲ್ಪದ ಜೊತೆಗೆ ಇದರ ಪ್ರಮುಖ ಅಕರ್ಷಣೆ ಆರ್ಟ್ ಗ್ಯಾಲರಿ. ಇಲ್ಲಿ ಮೈಸೂರಿನ ಪ್ರಖ್ಯಾತ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಚಿತ್ರಕೃಪೆ: Ryan

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ರೈಲ್ವೆ ಮ್ಯೂಸಿಯಂ: ಇದು ಭಾರತದಲ್ಲಿರುವ ಪುರಾತನ ಹಾಗು ಎರಡನೇಯ ದೊಡ್ಡ ರೈಲು ಸಂಗ್ರಹಾಲಯವಾಗಿದೆ. ರೈಲು ನಿಲ್ದಾಣದಿಂದ ಅಣತೆ ದೂರದಲ್ಲಿರುವ ಈ ಸಂಗ್ರಹಾಲಯದ ಪ್ರವೇಶ ದ್ವಾರವು ಕೆ.ಆರ್.ಎಸ್ ರಸ್ತೆಯಲ್ಲಿದೆ. ಊಗಿ ಬಂಡೆ ಯಂತ್ರ, ಮೈಸೂರಿನ ಅರಸರ ಕುಟುಂಬವು ಉಪಯೋಗಿಸುತ್ತಿದ್ದ ವೈಭವದ ರೈಲು ಬೋಗಿಗಳು ಇಲ್ಲಿ ಪ್ರದರ್ಶಿತವಾಗಿರುವುದನ್ನು ಇಲ್ಲಿ ಕಾಣಬಹುದು. ಪುಟಾಣಿ ಟ್ರೈನಂತೂ ಮಕ್ಕಳಿಗೆ ಎಲ್ಲಿಲ್ಲದ ಆನಂದವನ್ನು ತರುತ್ತದೆ. ಮ್ಯೂಸಿಯ್ಂ ಸಮಯ: ಬೆಳಿಗ್ಗೆ 10 ರಿಂದ ಸಂಜೆ 5.30 ರ ವರೆಗೆ. ಯಾವುದೆ ಪ್ರವೇಶ ಶುಲ್ಕವಿಲ್ಲ.

ಚಿತ್ರಕೃಪೆ: Nagesh Kamath

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಕಾರಂಜಿ ಕೆರೆಗೊಮ್ಮೆ ಭೇಟಿ ನೀಡಿ ಹಾಗೂ ನಿರಾಳರಾಗಿ. ಮೈಸೂರು ಮೃಗಾಲಯದ ಒಂದು ಭಾಗವಾಗಿರುವ ಕಾರಂಜಿ ಕೆರೆಯು ಸುತ್ತಲೂ ಸುಂದರ ಹಾಗೂ ಪ್ರಶಾಂತಮಯ ಉದ್ಯಾನ ಹೊಂದಿರುವ ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ನೋಡುಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Riju K

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ. ಒತ್ತಡದ ಜೀವನ ನಡೆಸುವವರಿಗೆ ಚೈತನ್ಯ ಕರುಣಿಸುವ ಈ ಕೆರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದ ಫಲವಾಗಿ ರೂಪಗೊಂಡಿದೆ. 1864 ರಲ್ಲಿ ನಗರದ ಹೊರವಲಯದ ಕೃಷಿ ಭೂಮಿಗೆ ನೀರೋದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಕೆರೆ ಇಂದು ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: mysore.nic.in

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಅತ್ಯಂತ ಸೂಂದರವಾದ ಪಾರಂಪರಿಕಾ ಕಟ್ಟಡಗಳಲ್ಲಿ ಒಂದೆನಿಸಿದ ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ಎಲ್ಲಾ ಪ್ರವಾಸಿಗರೂ ಒಮ್ಮೆ ಹೋಗಿ ನೋಡಬೇಕಾಗಿ ನಮ್ಮ ವಿನಂತಿ. ಈ ಬಂಗಲೆಯು ಮೈಸೂರು ವಿಶ್ವವಿದ್ಯಾನಿಲಯದ ಆವರಣವಾಗಿರುವ ಹಚ್ಚ ಹಸಿರಿನಿಂದ ಸುಂದರವಾಗಿರುವ ಮಾನಸ ಗಂಗೋತ್ರಿಯಿಂದ ಸುತ್ತುವರೆದಿದ್ದು ಒಂದು ಬೆಟ್ಟದ ಮೇಲೆ ಕುಕ್ಕ್ರಹಳ್ಳಿ ಕೆರೆಯ ಪಶ್ಚಿಮದ ಭಾಗದಲ್ಲಿ ನೆಲೆಸಿದೆ. ಜಯಲಕ್ಷ್ಮಿ ವಿಲಾಸ್ ಬಂಗಲೆಯನ್ನು ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಅವಧಿಯಲ್ಲಿ ಮಹಾರಾಜ ಚಾಮರಾಜ ಒಡೆಯರವರ ದೊಡ್ಡ ಮಗಳಾದ ಯುವರಾಣಿ ಜಯಲಕ್ಷ್ಮಿ ಅಮ್ಮಣ್ಣಿರವರಿಗೆಂದು ನಿರ್ಮಿಸಲಾಯಿತು.

ಚಿತ್ರಕೃಪೆ: Pratheepps

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಲಲಿತ ಮಹಲ್ ಪ್ರವಾಸಿಗರು ಒಮ್ಮೆ ಯಾದರೂ ನೋಡಲೆಬೇಕಾದ ಸುಂದರವಾದ ಪಾರಂಪರಿಕ ಕಟ್ಟಡ. ಈ ಮಹಲನ್ನು ನಾಲ್ವಡಿ ಕೃಷ್ಣ ರಾಜ ರಾಜ ಒಡೆಯರವರು 1921ರಲ್ಲಿ ಭಾರತದ ವೈಸರಾಯ್ ರವರಿಗಾಗಿ ನಿರ್ಮಿಸಿದರು. ಮುಂಬೈನ ಈ ಡಬಲ್ಯು. ಫ್ರೀಚ್ಲೀರವರು ನವೀನ ವಾಸ್ತುಶೈಲಿಯ ಜೊತೆಗೆ ಆಂಗ್ಲರ ಮನೆಗಳ ಮತ್ತು ಇಟಾಲಿಯನ್ ಪ್ಲಾಜಾಗಳ ಮಾದರಿಯಲ್ಲಿ ವಿನ್ಯಾಸ ಮಾಡಿದರು. ಪ್ರಸ್ತುತವಾಗಿ ಈ ಬಂಗಲೆಯು ಭಾರತೀಯ ಪ್ರವಾಸೋಧ್ಯಮ ಅಭೀವೃದ್ಧಿ ಇಲಾಖೆಯ ಯೋಜನೆಯಂತೆ ಪಂಚತಾರಾ ಹೊಟೇಲ್ ಆಗಿ ಮಾರ್ಪಾಡಾಗಿದೆ. ಈ ವೈಭವಯುತ ಹೊಟೇಲ್ ತನ್ನ ಅತಿಥಿಗಳಿಗೆ ಮೂಲ ಬಂಗಲೆಯ ಸಮಾನಕ್ಕೆ ತಕ್ಕಂತೆ ಉನ್ನತ ಮಟ್ಟದ ಆತಿಥ್ಯದೊಂದಿಗೆ ಸೇವೆ ನೀಡುತ್ತದೆ.

ಚಿತ್ರಕೃಪೆ: Vinayak Shankar Rao

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಶ್ರೀರಂಗಪಟ್ಟಣ : ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕೂ ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ. ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ 9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ.

ಚಿತ್ರಕೃಪೆ: Gopal Venkatesan

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬಲ್ಮುರಿ ಜಲಪಾತ : ಮೈಸೂರಿನಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹೋಗುವ ದಾರಿಯಲ್ಲಿ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿ ಈ ಸುಂದರವಾದ ಹಾಗೂ ಅಗಲವಾದ (ವಿಸ್ತಾರವಾದ) ಜಲಪಾತ ತಾಣವಿದೆ. ಇದೊಂದು ಜನಪ್ರೀಯ ಪಿಕ್ನಿಕ್ ತಾಣವಾಗಿದ್ದು ವಾರಾಂತ್ಯಗಳಲ್ಲಿ ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಈ ಜಲಪಾತದ ಎತ್ತರ ಕೇವಲ ಆರಿ ಅಡಿಗಳಾದರೂ ಇದರಲ್ಲಿ ನಡೆಯಬಹುದಾಗಿದೆ. ಇದೊಂದು ರೀತಿಯ ರೋಮಾಂಚನವನ್ನುಂಟು ಮಾಡುತ್ತದೆ, ಅಲ್ಲದೆ ಈ ಜಲಪಾತವು ಸಾಕಷ್ಟು ಕನ್ನಡ ಚಲನ ಚಿತ್ರಗಳಲ್ಲಿ ಹಾಡುಗಳ ಸನ್ನಿವೇಶದಲ್ಲಿ ತೋರಿಸಲ್ಪಟ್ಟಿದೆ.

ಚಿತ್ರಕೃಪೆ: Surajram Kumaravel

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮಲೆ ಮಹದೇಶ್ವರ ಬೆಟ್ಟ : ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ಅಲ್ಲಿನ ಸುಂದರ ಮಹದೇಶ್ವರನ ದೇವಾಲಯವನ್ನು ಪ್ರಮುಖವಾಗಿ ನೋಡಬೇಕು. ಆದರು ಆ ದೇಗುಲದ ಸುತ್ತ- ಮುತ್ತಲಿನ ಪ್ರದೇಶವನ್ನು ಪ್ರಕೃತಿ ಪ್ರೇಮಿಗಳಾದವರು ನೋಡಲೇಬೇಕು. ಮಲೆ ಮಹದೇಶ್ವರನ ಭವ್ಯ ಮಂದಿರವು ದಟ್ಟ ಕಾಡಿನ ಸಮೀಪದಲ್ಲಿ ಇದೆ. ಇಲ್ಲಿಗೆ ನೀವು ಪ್ರವಾಸ ಹೊರಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿಗೆ ನವಚೇತನವನ್ನು ಒದಗಿಸಬಹುದು. ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿದ್ದು, ಮೈಸೂರು ನಗರದಿಂದ 140 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿವೆ.

ಚಿತ್ರಕೃಪೆ: Tumkurameen

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ರಂಗನತಿಟ್ಟು : ರಂಗನತಿಟ್ಟು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಬೃಹತ್ ಪಕ್ಷಿಧಾಮವಾಗಿದೆ. ಕೇವಲ 40 ಎಕರೆ ಪ್ರದೇಶದಲ್ಲಿ ಹರಡಿರುವ ಈ ಪಕ್ಷಿಧಾಮವು ದ್ವೀಪ ಸಮೂಹವಾಗಿದ್ದು ಕಾವೇರಿ ನದಿಯಲ್ಲಿ ಹಲವು ಕಿರುದ್ವೀಪಗಳನ್ನು ಹೊಂದಿದೆ. ಭಗವಾನ್ ವಿಷ್ಣುವಿನ ಅವತಾರವೆನ್ನಲಾಗುವ ಶ್ರೀ ರಂಗನಾಥ ಸ್ವಾಮಿಯಿಂದಾಗಿ ಇದು ಈ ಹೆಸರನ್ನು ಪಡೆದಿದೆ. ಪ್ರಸಿದ್ಧ ಐತಿಹಾಸಿಕ ಪಟ್ಟಣ ಶ್ರೀರಂಗಪಟ್ಟಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಈ ಪಕ್ಷಿ ಧಾಮವು, ಮೈಸೂರು ಉತ್ತರ ಭಾಗದಿಂದ 16 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: David Brossard

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ನಂಜನಗೂಡು : ಮೈಸೂರು ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡು. ತನ್ನ ಶ್ರೀಮಂತ ಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Dineshkannambadi

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಶಿವನಸಮುದ್ರ : ಶಿವನಸಮುದ್ರವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿಹಾರ ತಾಣವಾಗಿದೆ. ಈ ಸ್ಥಳವು ಕಾವೇರಿ ನದಿಯಲ್ಲಿರುವ ಒಂದು ವಿಶಿಷ್ಟವಾದ ದ್ವೀಪದ ಊರಾಗಿದೆ. ಇದರ ಹೆಸರಿನ ಅರ್ಥ ಶಿವನಿಗೆ ಸೇರಿದ ಸಮುದ್ರವೆಂದಿದೆ. ಈ ಸ್ಥಳವು ತನ್ನ ಜಲಪಾತದಿಂದಾಗಿ ಪ್ರಸಿದ್ಧವಾಗಿದೆ. ಈ ಜಲಪಾತವು ವಿಶ್ವದ ಪ್ರಮುಖ 100 ಜಲಪಾತಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ದಖನ್ ಪ್ರಸ್ಥಭೂಮಿಯಲ್ಲಿ ಹರಿಯುವ ಕಾವೇರಿ ನದಿಯು ಕಲ್ಲು ಬಂಡೆಗಳ ಮತ್ತು ಕೊರಕಲುಗಳ ಮಧ್ಯೆ ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರು ಪಡೆದು ಶಿವನ ಸಮುದ್ರದಲ್ಲಿ ದುಮ್ಮಿಕ್ಕುತ್ತ ಧುಮುಕುತ್ತವೆ.

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬೆಂಗಳೂರಿನಿಂದ 92 ಕಿಲೋಮೀಟರ್ ದೂರದಲ್ಲಿರುವ ಸಂಗಮ ಒಂದು ಅದ್ಭುತ ತಾಣವಾಗಿದೆ. ಈ ಸ್ಥಳವು ಅರ್ಕಾವತಿ ನದಿ ಕಾವೇರಿಯಲ್ಲಿ ವಿಲೀನವಾಗಿದ್ದನ್ನು ಪ್ರತಿನಿಧಿಸುತ್ತದೆ. ಸಂಗಮದ ಪ್ರಯಾಣವು, ಚಾರಣ, ಈಜು ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಮೀನುಹಿಡಿಯುವುದು .. ಇಂತಹ ಚಟುವಟಿಕೆಗಳನ್ನೂ ಒಳಗೊಂಡಿದೆ. ನಿಮ್ಮ ಸಂಚಾರದಲ್ಲಿ ಸೇರಿಸಿಕೊಳ್ಳಬಹುದಾದ ಇನ್ನೊಂದು ತಾಣ ಸಂಗಮದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮೇಕೆದಾಟು. ಮೇಕೆದಾಟುನಲ್ಲಿ, ಕಾವೇರಿ ಆಳವಾದ ಕಣಿವೆಯ ಮೂಲಕ ಹರಿಯುತ್ತಾಳೆ. ಮೇಕೆದಾಟು ಎಂಬ ಹೆಸರು ಮೇಕೆ ಯಿಂದ ವಿಕಾಸಗೊಂಡಿದ್ದು - ಮೇಕೆ ಎಂದರೆ ಆಡು ಎಂಬರ್ಥವಿದೆ.

ಚಿತ್ರಕೃಪೆ: Senthil Kumar

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೇಲುಕೋಟೆ : ಮಂಡ್ಯ ಜಿಲ್ಲೆಯಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಮೇಲುಕೋಟೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿರುವ ಜಯಲಲಿತ ಅವರು ಹುಟ್ಟಿದ್ದು ಈ ಸ್ಥಳದಲ್ಲಿಯೆ. ಇದೊಂದು ಧಾರ್ಮಿಕ ಕೇಂದ್ರವಾಗಿದ್ದು, ಚೆಲುವರಾಯಸ್ವಾಮಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಮೇಲುಕೋಟೆಯು ಮೈಸೂರಿನಿಂದ 78 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Pradeep Kumbhashi

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬಿಳಿಗಿರಿ ರಂಗನ ಬೆಟ್ಟ : ಬಿಳಿಗಿರಿ ರಂಗನ ಬೆಟ್ಟದ ಸುಂದರವಾದ ಪರಿಸರ, ಭೇಟಿ ನೀಡಿದ ತಕ್ಷಣವೆ ಅದರ ಅಂದ ಚೆಂದವು ಮನದಲ್ಲಿ ತುಂಬಿ ಬಿಡುತ್ತದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ತಾಣಕ್ಕೆ ವರ್ಷಪೂರ್ತಿ ಭೇಟಿ ನೀಡಬಹುದಾಗಿದ್ದರೂ ಜೂನ್ ನಿಂದ ನವಂಬರ್ ಸಮಯ ಆದರ್ಶಮಯವಾದುದು ಎಂದು ಹೇಳಬಹುದಾಗಿದೆ. ಮೈಸೂರಿನಿಂದ ಸುಮಾರು 80 ಕಿ.ಮೀ ದೂರವಿರುವ ಈ ಸ್ಥಳ ತಮಿಳುನಾಡಿನ ಈರೋಡ್ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ ಈ ಸ್ಥಳವು ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಬಿಳಿಗಿರಿ ರಂಗಸ್ವಾಮಿ ಅಭಯಾರಣ್ಯವನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: ☻☺

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಸೋಮನಾಥಪುರ : ಮೂಲವಾಗಿ ಸೋಮನಾಥಪುರ ಒಂದು ಗ್ರಾಮೀಣ ಪ್ರದೇಶವಾಗಿದ್ದು ಪ್ರಸಿದ್ಧ ಐತಿಹಾಸಿಕ ಹಾಗೂ ನಾಡಿನ ಸಾಂಸ್ಕೃತಿಕ ನಗರವಾದ ಮೈಸೂರಿನಿಂದ 35 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸೋಮನಾಥಪುರವು ವಿಶೇಷವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ಹೆಸರು ಪಡೆದಿದೆ. ಇಲ್ಲಿರುವ ಚೆನ್ನಕೇಶವನ ದೇವಸ್ಥಾನವೂ ಸಹ ಬೇಲೂರಿನ ಚೆನ್ನಕೇಶವನ ದೇವಸ್ಥಾನದಷ್ಟೆ ಸುಂದರ ಹಾಗೂ ಕಲಾತ್ಮಕವಾಗಿದೆ.

ಚಿತ್ರಕೃಪೆ: Dineshkannambadi

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಕಬಿನಿ : ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿರಕೊಂಡಿರುವ ಕಬಿನಿ ವನ್ಯಜೀವಿ ನಿಸರ್ಗಧಾಮವು ವನ್ಯಜೀವಿಗಳಿಗೆ ಸ್ವರ್ಗವೆಂದೇ ಹೆಸರಾಗಿದೆ. ಮೈಸೂರಿನಿಂದ ಕೇವಲ 48 ಹಾಗೂ ಬೆಂಗಳೂರಿನಿಂದ 208 ಕಿ.ಮೀ.ದೂರದಲ್ಲಿರುವ ಕಬಿನಿ ಅರಣ್ಯ ಪ್ರದೇಶವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕಬಿನಿ ನದಿಯು ಅರಣ್ಯದುದ್ದಕ್ಕೂ ಹರಿಯುತ್ತದೆ. ಆದ್ದರಿಂದ ಕಬಿನಿ ಹರಿಯುವ ಪ್ರದೇಶವನ್ನು ಕಬಿನಿ ಅರಣ್ಯವೆಂದು ಹೆಸರಿಸಲಾಗಿದೆ.

ಚಿತ್ರಕೃಪೆ: Manoj Vasanth

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬೇಲೂರು-ಹಳೇಬೀಡು : ಬೇಲೂರು-ಹಳೇಬೀಡು ಎಂದು ಖ್ಯಾತಿಯಾಗಿರುವ ಅತೀ ಸುಂದರ ವಾಸ್ತುಶೈಲಿ ಹೊಂದಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ದೇವಸ್ಥಾನಗಳು ಪ್ರವಾಸಿಗರಿಗೆ ಪ್ರಾಚೀನ ಇತಿಹಾಸ ತಿಳಿಸುತ್ತವೆ. ವಿಷ್ಣುವಿನ ಅವತಾರವೆನ್ನಲಾಗುವ ಚೆನ್ನಕೇಶವ ದೇವಾಲಯವೆಂದೇ ಪ್ರಸಿದ್ಧಿ ಹೊಂದಿರುವ ಬೇಲೂರಿನ ದೇವಸ್ಥಾನದ ಮುಂಭಾಗದಲ್ಲಿರುವ ಎತ್ತರದ ಕಂಬಗಳು ಆಕರ್ಷಣೀಯವಾಗಿವೆ. ಇಲ್ಲಿನ ಶಿಲ್ಪಕಲೆಯು ಅಸಾಧಾರಣ ಕಲಾತ್ಮಕತೆಯಿಂದ ಕೂಡಿದ್ದು ಅಂದಿನ ಕಾಲದ ಶಿಲ್ಪಕಲೆಯ ನೈಪುಣ್ಯತೆಯನ್ನು ಎತ್ತಿ ತೋರಿಸುತ್ತವೆ. ಮೈಸೂರಿನಿಂದ ಬೇಲೂರು 154 ಹಾಗೂ ಹಳೇಬೀಡು 148 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Premnath Thirumalaisamy

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ನಾಗರಹೊಳೆ : ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. 1999 ರಲ್ಲಿ ಭಾರತದ 37 ನೇಯ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲ್ಪಟ್ಟ ಈ ಉದ್ಯಾನ ನೀಲ್ಗಿರಿ ಜೈವಿಕ ಮಂಡಲದ ಭಾಗವಾಗಿದೆ. ನಾಗರಹೊಳೆ ಉದ್ಯಾನವು ಸಾಕಷ್ಟು ದಟ್ಟವಾದ ಗಿಡ ಮರ, ಹಳ್ಳ ಕೊಳ್ಳ, ಜಲಪಾತ ಹಾಗೂ ವೈವಿಧಮಯ ಜೀವರಾಶಿಯಿಂದ ಕೂಡಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಮೈಸೂರಿನಿಂದ ನಾಗರಹೊಳೆ 54 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Sankara Subramanian

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬಂಡೀಪುರ : ಬಂಡೀಪುರ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಲ್ಲಿ ನೆಲೆಸಿದ್ದು ಮುದುಮಲೈ ಅಭಯಾರಣ್ಯ, ನಾಗರಹೊಳೆ ಹಾಗೂ ವಯನಾಡ್ ಅಭಯಾರಣ್ಯಗಳಿಂದ ಸುತ್ತುವರೆದಿದೆ. ಇವೆಲ್ಲವೂ ಸೇರಿ ಒಟ್ಟಾರೆಯಾಗಿ 874 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಷ್ಟು ದಟ್ಟ ಹಸಿರಿನ ಜೈವಿಕ ಪರಿಸರ ಹೊಂದಿದ್ದು, ಭಾರತದಲ್ಲೆ ವಿಶಿಷ್ಟವಾದ "ನೀಲ್ಗಿರಿ ಜೀವಗೋಳ" ಅಥವಾ ಜೈವಿಕ ಮಂಡಲವನ್ನು ಸೃಷ್ಟಿಸಿದೆ. ಬಂಡೀಪುರದಲ್ಲಿ ತಂಗಲು ವ್ಯವಸ್ಥೆಯಿದ್ದು ಮುಂಚಿತವಾಗಿಯೆ ನಿಮ್ಮ ಭೇಟಿ ನೀಡುವ ಕುರಿತು ಸಕಲ ವಿವರಗಳನ್ನು ನೀಡಿ ವಸತಿ ಕಾಯ್ದಿರಿಸುವುದು ಉತ್ತಮ. ಬಂಡೀಪುರದಲ್ಲಿ ಸಫಾರಿಯ ಅನುಭವವಂತೂ ಎಂದಿಗೂ ಮರೆಯಲಾಗದ ಚಟುವಟಿಕೆಯಾಗಿದೆ. ವೈವಿಧ್ಯಮಯ ಜೀವ ಜಂತುಗಳನ್ನು ಅವುಗಳ ನೈಸರ್ಗಿಕ ಆಶ್ರಯದಲ್ಲೆ ನೋಡುವುದು ಚೆಂದ. ಮೈಸೂರಿನಿಂದ ಬಂಡೀಪುರ 98 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ramesh Meda

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಶ್ರವಣಬೆಳಗೋಳ : ಗೊಮ್ಮಟೇಶ್ವರನ 17.5 ಮೀಟರು ಎತ್ತರದ ಮೂರ್ತಿಯು, ನೀವು ಶ್ರವಣಬೆಳಗೊಳಕ್ಕೆ ತಲುಪುವುದಕ್ಕೂ ಹಿಂದಿನಿಂದಲೇ ನಿಮಗೆ ಕಾಣಿಸುತ್ತದೆ. ಮೂರ್ತಿಯು, 978ನೇ ಇಸವಿಯಷ್ಟು ಹಿಂದಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಶ್ರವಣಬೆಳಗೊಳವು ಹಲವು ವರ್ಷಗಳಿಂದಲೂ ಕೂಡಾ ಜೈನರಿಗೆ ಮಹತ್ವವಾದ ಪ್ರವಾಸಿ ಸ್ಥಳವಾಗಿದೆ. ಶ್ರವಣಬೆಳಗೊಳವು ಸನ್ಯಾಸಿಯ ಬಿಳಿ ಪುಷ್ಕರಣಿ ಎಂಬ ಅರ್ಥವನ್ನು ಹೊಂದಿದೆ. ಇದು ಜಗತ್ತಿನ ಅತಿದೊಡ್ಡ ಏಕಶಿಲಾ ವಿಗ್ರಹವಾಗಿದ್ದು, ಒಂದೇ ಶಿಲೆಯಿಂದ ನಿರ್ಮಾಣಗೊಂಡಿದೆ. ಮೈಸೂರಿನಿಂದ ಶ್ರವಣಬೆಳಗೋಳವು 98 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Sissssou

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಕೊಡಗು : ಕರ್ನಾಟಕದಲ್ಲಿ ಕೂರ್ಗ್‌ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ಮೈಸೂರಿನಿಂದ ಕೊಡಗು 92 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Lingeswaran Marimuthukum

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಬೈಲಕುಪ್ಪೆ : ಧರ್ಮಶಾಲಾದ ನಂತರ ಭಾರತದಲ್ಲಿ ಎರಡನೇ ಟಿಬೆಟಿಯನ್‌ ತಾಣ ಬೈಲಕುಪ್ಪೆ. ಕುಶಾಲನಗರದಿಂದ ಇದು ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಎರಡು ಟಿಬೆಟಿಯನ್‌ ಶಿಬಿರವಿದ್ದು ಲುಗ್ಸುಮ್‌ ಸಾಮ್‌ಡುಪ್ಲಿಂಗ್‌ ಮತ್ತು ಡಿಕ್ಯಿ ಲಾರ್ಸೋಯಿ ಎಂದು ಕರೆಯಲಾಗಿದೆ. ಇಲ್ಲಿ ಸಾವಿರಾರು ಟಿಬೆಟಿಯನ್ನರು ವಾಸಿಸುತ್ತಾರೆ. ಟಿಬೆಟ್ಟನ್ನು ಚೀನೀಯರು ಆಕ್ರಮಿಸಿಕೊಂಡ ನಂತರದಲ್ಲಿ ಟಿಬೆಟಿಯನ್ ಯೋಧರು ಈ ಪ್ರದೇಶಗಳಿಗೆ ಓಡಿಬಂದಿದ್ದಾರೆ. ಇಲ್ಲಿ ಕೃಷಿ ಭೂಮಿಗಳು, ಟಿಬೆಟಿಯನ್‌ ನಿವಾಸಗಳು, ಪ್ರವಾಸಿಗಳ ಪ್ರಧಾನವಾದ ಟಿಬೆಟ್‌ ಆಹಾರ ಪದಾರ್ಥಗಳು ಮತ್ತು ಕರಕುಶಲ ಅಂಗಡಿಗಳು ಇಲ್ಲಿದೆ. ಬೈಲಕುಪ್ಪೆಯಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಗೋಲ್ಡನ್‌ ಟೆಂಪಲ್‌ ಅಥವಾ ನಾಮ್‌ಡ್ರೋಲಿಂಗ್‌ ಮಾನಸ್ಟರಿ. ಇದು ಮೈಸೂರಿನಿಂದ 56 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Natesh Ramasamy

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಸಕಲೇಶಪುರ : ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ವಿಹಾರಕ್ಕೆ ಬರುವವರಿಗೆ ಒಂದು ಚೇತೋಹಾರಿ ಅನುಭವವನ್ನು ಒದಗಿಸುತ್ತದೆ. ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದ್ದು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬರುತ್ತದೆ. ಈ ಊರು ಭಾರತದಲ್ಲಿಯೇ ಅತಿ ಹೆಚ್ಚು ಕಾಫಿ ಮತ್ತು ಏಲಕ್ಕಿಯನ್ನು ಬೆಳೆಯುವ ಸಲುವಾಗಿ ಪ್ರಸಿದ್ಧವಾಗಿದೆ. ಸಕಲೇಶಪುರವು ಚಾರಣಕ್ಕೆ ಯೋಗ್ಯವಾದ ತಾಣವಾಗಿದೆ. ಇದು ಮೈಸೂರಿನಿಂದ ಸುಮಾರು 154 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: L. Shyamal

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ದುಬಾರೆ : ಕರ್ನಾಟಕ ರಾಜ್ಯದಲ್ಲಿರುವ ದುಬಾರೆ ದಟ್ಟವಾದ ಕಾಡುಗಳಿಂದೊಡಗೂಡಿದ ಸುಂದರ ತಾಣ. ದುಬಾರೆ ಇಲ್ಲಿರುವ ಆನೆ ತರಬೇತಿ ಶಾಲೆಯಿಂದ ವಿಶ್ವಪ್ರಸಿದ್ಧಿ ಹೊಂದಿದೆ. ಕೂರ್ಗ ಜಿಲ್ಲೆಯ ಬಳಿ ಇರುವ ದುಬಾರೆ ದಟ್ಟಾರಣ್ಯ ಪ್ರದೇಶವು ಕಾವೇರಿ ನದಿ ದಂಡೆಯಲ್ಲಿದೆ. ಇಲ್ಲಿ ಮೈಸೂರು ಮಹಾರಾಜರ ಕಾಲದಿಂದಲೂ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಇಲ್ಲಿ ಆನೆಗಳ ತರಬೇತಿಗೆಂದೇ ವಿಶೇಷವಾದ ಸಕಲ ಸೌಕರ್ಯಗಳನ್ನು ಮಾಡಲಾಗಿದೆ. ಇಲ್ಲಿ ತರಬೇತಿ ಪಡೆದುಕೊಂಡ ಆನೆಗಳು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಜಂಬೂ ಸವಾರಿ ಉತ್ಸವದಲ್ಲಿ ಭಾಗವಹಿಸುತ್ತವೆ ಎನ್ನುವುದು ದುಬಾರೆಯ ವಿಶೇಷ. ದುಬಾರೆ ಮೈಸೂರಿನಿಂದ ಸುಮಾರು 154 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ramesh NG

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಊಟಿ : ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಆದರೆ ಮೈಸೂರಿನಿಂದ ಕೇವಲ 147 ಕಿ.ಮೀ ಗಳಷ್ಟು ದೂರದಲ್ಲಿ ಊಟಿಯು ನೆಲೆಸಿದ್ದು ಬೇಸಿಗೆಯ ಸಮಯದಲ್ಲಿ ಮೈಸೂರಿಗೆ ಭೇಟಿ ನೀಡಿದಾಗ ಇಲ್ಲಿಗೆ ತೆರಳಲು ಒಂದು ಉತ್ತಮ ಆಯ್ಕೆಯಾಗಿದೆ.

ಚಿತ್ರಕೃಪೆ: Swaminathan

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ವಯನಾಡ್ : ಮೈಸೂರಿನಿಂದ ಸುಲ್ತಾನ್ ಬತೇರಿಗೆ ಹೋಗುವ ಮಾರ್ಗದಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಂದು ಅಭಯಾರಣ್ಯ ಪ್ರದೇಶವು ನಿಮ್ಮನ್ನು ಸ್ವಾಗತಿಸುತ್ತದೆ. ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟೆ ದಟ್ಟವಾದ ಹಚ್ಚ ಹಸಿರಿನ ಮರಗಳಿಂದ ಕೂಡಿರುವ ಈ ಅಭಯಾರಣ್ಯವು ತನ್ನಲ್ಲಿರುವ ವೈವಿಧ್ಯಮಯ ಜೀವ ಜಂತುಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ದಕ್ಷಿಣ ಭಾರತದಲ್ಲೆ ಜನಪ್ರಿಯ ವನ್ಯಜೀವಿ ಧಾಮವಾಗಿದ್ದು, ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಜೀವ ಸಂಕುಲವನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ. ವಯನಾಡ್ ಮೈಸೂರಿನಿಂದ ಕೇವಲ 103 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Srikaanth Sekar

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮೈಸೂರಿನ ಹಾಗೂ ಸುತ್ತಲಿನ ಆಕರ್ಷಣೆಗಳು:

ಮುದುಮಲೈ : ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಸಂತಸ ನೀಡುವ ಒಂದು ಸುಂದರ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ ಭೇಟಿ ನೀಡಿದಾಗ ಮಾತ್ರವೆ ಆ ಸಂತಸದ ಅನುಭೂತಿಯಾಗುವುದು ಖಂಡಿತ. ಅಲ್ಲದೆ, ಇದು ಸ್ಥಿತವಾಗಿರುವ ಸ್ಥಳವನ್ನು ಗಮನಿಸಿದಾಗ, ಇದು ಎಂತಹ ರೋಚಕ ಜಾಗದಲ್ಲಿ ನೆಲೆಸಿದೆ ಅನ್ನಿಸುವುದು ಸಹಜ. ಇದು ಮೈಸೂರಿನಿಂದ 106 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: mdemon

Please Wait while comments are loading...