Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಳಿಗಿರಿರಂಗನ ಬೆಟ್ಟ » ಹವಾಮಾನ

ಬಿಳಿಗಿರಿರಂಗನ ಬೆಟ್ಟ ಹವಾಮಾನ

ಹೆಚ್ಚಾಗಿ ಅಕ್ಟೋಬರ್ ನಿಂದ ಮೇ ಮತ್ತು ಮಾರ್ಚ್ ನಿಂದ ಮೇ ತಿಂಗಳಿನ ಸಮಯ ಇಲ್ಲಿನ ಪ್ರವಾಸಕ್ಕೆ ಸೂಕ್ತವಾಗಿವೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಈ ಕಾಲದಲ್ಲಿ ಹಗಲಿನಲ್ಲಿ ಇಲ್ಲಿ ಗರಿಷ್ಠ ಉಷ್ಣಾಂಶ 38 ಡಿ.ಸೆ.ಏರಿಕೆಯಾಗಿದ್ದರೆ, ರಾತ್ರಿಯ ಸಮಯದಲ್ಲಿ ಕನಿಷ್ಠ 20 ಡಿ.ಸೆ.ಇಳಿಕೆಯಾಗಿರುತ್ತದೆ. ಈ ಕಾಲವು ಪ್ರವಾಸಿಗರಿಗೆ ಅತ್ಯುತ್ತಮವೆನ್ನಲಾಗುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಇಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವುದರಿಂದ ಪ್ರವಾಸಿಗರಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈ ಬೆಟ್ಟಕ್ಕೆ ಬರದಿರುವುದೇ ಒಳ್ಳೆಯದು.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುವುದರಿಂದ ಇಲ್ಲಿಗೆ ಪ್ರವಾಸಿಗರು ಈ ಸಮಯದಲ್ಲೂ ಬರಬಹುದು.ಇಲ್ಲಿ ಗರಿಷ್ಠ ಉಷ್ಣಾಂಶ 16 ಡಿ.ಸೆ.ಇದ್ದರೆ ಕನಿಷ್ಠ 9 ಡಿ.ಸೆ.ಇರುತ್ತದೆ. ಆದ್ದರಿಂದ ಬೆಚ್ಚಗಿನ ಬಟ್ಟೆ ಧರಿಸಿಕೊಂಡೇ ಇಲ್ಲಿಗೆ ಪ್ರವಾಸಿಗರು ಬರಬೇಕಾಗುತ್ತದೆ.