Search
  • Follow NativePlanet
Share
» »ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

By Vijay

ಉತ್ತರ ಭಾರತವೆ ಇರಲಿ, ದಕ್ಷಿಣ ಭಾರತವೆ ಇರಲಿ ನವ ವಿವಾಹಿತ ದಂಪತಿಗಳಿಗೆ ಕೇಳಿ, ನಿಮ್ಮ ಹನಿಮೂನ್ ಎಲ್ಲಿ ಎಂದು.... ಥಟ್ಟನೆ ಮುನ್ನಾರ್ ಎಂದು ಹೇಳೆ ಬಿಡುತ್ತಾರೆ. ಹೌದು ಈ ಸ್ಥಳದ ಮಹಿಮೆಯೆ ಹಾಗೆ. ಪಶ್ಚಿಮ ಘಟ್ಟಗಳ ಮಾಯಾ ಪ್ರಪಂಚದಲ್ಲಿ ಸುಂದರ ಕನ್ಯೆಯಂತೆ ಅವಿತು ಕುಳಿತಿದೆ ಮುನ್ನಾರ್. ಚಿತ್ರಕಾರನೊಬ್ಬ ಪ್ರಕೃತಿಯ ಸುಂದರವಾದ ವರ್ಣಚಿತ್ರವನ್ನು ರಚಿಸಿದಂತೆ ಈ ಪ್ರದೇಶದ ಭೂದೃಶ್ಯಾವಳಿಗಳು ಕಾಣಸಿಗುತ್ತವೆ. ಅಲ್ಲದೆ ಈ ಪ್ರದೇಶದ ವಾತಾವರಣವು ಹಿತಕರವಾಗಿದ್ದು ವರ್ಷದ ಯಾವುದೆ ದಿನದಲ್ಲೂ ಭೇಟಿ ನೀಡಿದಾಗ ಉತ್ತಮ ಪ್ರವಾಸಿ ಅನುಭವವನ್ನು ಇದು ಕರುಣಿಸುತ್ತದೆ.

ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1600 ಮೀ. ಗಳಷ್ಟು ಎತ್ತರದಲ್ಲಿ ಸ್ಥಿತವಿದೆ. ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳ ಹಳ್ಳಿಯಲ್ಲಿರುವ ಮುನ್ನಾರ್ ಪದದ ಮೂಲ ಅರ್ಥ "ಮೂರು ನದಿಗಳು" ಎಂದಾಗುತ್ತದೆ. ವೈಭವಯುತ ಪ್ರಕೃತಿ ಸೊಬಗಿನೊಂದಿಗೆ 557 ಚ.ಕಿ.ಮೀ ವಿಸ್ತೀರ್ಣದಷ್ಟು ಈ ಪ್ರದೇಶ ಹರಡಿದೆ.

ಪ್ರಸ್ತುತ ಲೇಖನವು ಮುನ್ನಾರ್ ಪಟ್ಟಣದಲ್ಲಿರುವ ವಿವಿಧ ಆಕರ್ಷಣೆಗಳ ಜೊತೆಗೆ ಪಟ್ಟಣದ ಅಭೂತಪೂರ್ವ ಸೌಂದರ್ಯವನ್ನು ತಮ್ಮೆದುರಿಗೆ ಸಾದರಪಡಿಸುತ್ತದೆ. ಈ ಚಿತ್ರಗಳನ್ನು ನೋಡಿದ ಮೇಲೆ, ಒಂದೊಮ್ಮೆ ನೀವು ಭೇಟಿ ನೀಡಿದ್ದರೂ ಸರಿ ನೀಡಿಲ್ಲದಿದ್ದರೂ ಸರಿ ಹೋಗುವ ಬಯಕೆ ಇಮ್ಮಡಿಗೊಳ್ಳದೆ ಇರಲಾರದು.

ಮುನ್ನಾರ್:

ಮುನ್ನಾರ್:

ವರ್ಣಚಿತ್ರದಂತೆ ಕಂಗೊಳಿಸುವ ಮುನ್ನಾರ್ ಗಿರಿಧಾಮದ ಅತಿ ಸುಂದರ ನೋಟ.

ಚಿತ್ರಕೃಪೆ: Bimal K C

ಮುನ್ನಾರ್:

ಮುನ್ನಾರ್:

ಪಶ್ಚಿಮ ಘಟ್ಟಗಳ ಕಾನನದಿ ಸುಂದರವಾಗಿ ಗೋಚರಿಸುವ ಚಹಾ ತೋಟಗಳು.

ಚಿತ್ರಕೃಪೆ: himanisdas

ಮುನ್ನಾರ್:

ಮುನ್ನಾರ್:

ವಾತಾವರಣದ ತುಂಬೆಲ್ಲ ಚಹಾ ಸುವಾಸನೆಯ ಕಂಪನ್ನು ಸೂಸುವ ಪರಿಸರ.

ಚಿತ್ರಕೃಪೆ: Bimal K C

ಮುನ್ನಾರ್:

ಮುನ್ನಾರ್:

ಮುನ್ನಾರ್ ನಗರದಲ್ಲಿರುವ ಪ್ರಸಿದ್ಧ ಕಾರ್ಮೆಲೊಗಿರಿ ಸಾರ್ವಜನಿಕ ಶಾಲೆ.

ಚಿತ್ರಕೃಪೆ: Aruna

ಮುನ್ನಾರ್:

ಮುನ್ನಾರ್:

ಸುಂದರ ಪಟ್ಟಣದಿ ಭವ್ಯವಾಗಿ ನೆಲೆಸಿರುವ ತಾಂತ್ರಿಕ(ಇಂಜಿನೀಯರಿಂಗ್) ಕಾಲೇಜು.

ಚಿತ್ರಕೃಪೆ: Hrishikesh.kb

ಮುನ್ನಾರ್:

ಮುನ್ನಾರ್:

ಮುನ್ನಾರಿನ ಟೀ ಮ್ಯೂಸಿಯಂ ನಲ್ಲಿ ಕಂಡುಬರುವ ಸನ್ ಡಯಲ್.

ಚಿತ್ರಕೃಪೆ: TwoWings

ಮುನ್ನಾರ್:

ಮುನ್ನಾರ್:

ಮುನ್ನಾರಿನಲ್ಲಿರುವ ಅಯೂರ್ ಕೌಂಟಿ ರಿಸಾರ್ಟಿನ ಒಂದು ನೋಟ.

ಚಿತ್ರಕೃಪೆ: Rohini

ಮುನ್ನಾರ್:

ಮುನ್ನಾರ್:

ಸುತ್ತಲು ಹಸಿರಿನ ಬೆಟ್ಟ ಗುಡ್ಡಗಳ ಮಧ್ಯೆ ಕಂಗೊಳಿಸುವ ಹಿಂದೂ ದೇವಸ್ಥಾನ.

ಚಿತ್ರಕೃಪೆ: കാക്കര

ಮುನ್ನಾರ್:

ಮುನ್ನಾರ್:

ಮುನ್ನಾರಿನಲ್ಲಿರುವ ಮಸೀದಿಯ ಒಂದು ನೋಟ.

ಚಿತ್ರಕೃಪೆ: കാക്കര

ಮುನ್ನಾರ್:

ಮುನ್ನಾರ್:

ಚಹಾ ತೋಟ ಕಾರ್ಮೀಕರ ಚರ್ಚ್.

ಚಿತ್ರಕೃಪೆ: Jacopo Werther

ಮುನ್ನಾರ್:

ಮುನ್ನಾರ್:

ಸ್ವಿಟ್ಜರ್ಲೆಂಡಿನಂತೆ ಕಂಗೊಳಿಸುವ ಮುನ್ನಾರಿನ ಹಾದಿ ಬೀದಿಗಳು.

ಚಿತ್ರಕೃಪೆ: Sreerajcochin

ಮುನ್ನಾರ್:

ಮುನ್ನಾರ್:

ಮುನ್ನಾರಿನ ರಸ್ತೆಗಳಲ್ಲಿ ಓಡಾಡುವುದೆ ಒಂದು ಚೆಂದದ ಅನುಭವ.

ಚಿತ್ರಕೃಪೆ: Shanmugamp7

ಮುನ್ನಾರ್:

ಮುನ್ನಾರ್:

ಚಳಿಗಾಲದ ಸಮಯದಿ ಮಂಜಿನ ವಾತಾವರಣದಲ್ಲಿ ಮುನ್ನಾರ್.

ಚಿತ್ರಕೃಪೆ: Shanmugamp7

ಮುನ್ನಾರ್:

ಮುನ್ನಾರ್:

ಮುನ್ನಾರಿನ ಅತಿ ಎತ್ತರದ ವೀಕ್ಷಣಾ ತಾಣದಿಂದ ಗೋಚರಿಸುವ ಸುತ್ತಮುತ್ತಲಿನ ವಿಹಂಗಮ ಪರಿಸರ.

ಚಿತ್ರಕೃಪೆ: Shanmugamp7

ಮುನ್ನಾರ್:

ಮುನ್ನಾರ್:

ಘಟ್ಟಗಳ ಮಧ್ಯದಲ್ಲಿ ಸಂಚರಿಸುವಾಗ ಆಗುವ ರೋಮಾಂಚನ ಅಷ್ಟಿಷ್ಟಲ್ಲ.

ಚಿತ್ರಕೃಪೆ: Rameshng

ಮುನ್ನಾರ್:

ಮುನ್ನಾರ್:

ಒಂದು ಪಾಕ್ಷಿಕ ನೋಟ.

ಚಿತ್ರಕೃಪೆ: Vinayaraj

ಮುನ್ನಾರ್:

ಮುನ್ನಾರ್:

ಚಹಾ ತೋಟಗಳ ಮಧ್ಯದಿಂದಲೆ ಸಾಗುವ ರಸ್ತೆ ದಾರಿ.

ಚಿತ್ರಕೃಪೆ: Vinayaraj

ಮುನ್ನಾರ್:

ಮುನ್ನಾರ್:

ಮುನ್ನಾರಿನ ಪ್ರಖ್ಯಾತ ಇಕೊ ಪಾಯಿಂಟ್ (ಪ್ರತಿಧ್ವನಿಸುವ ಸ್ಥಳ).

ಚಿತ್ರಕೃಪೆ: Ruben Joseph

ಮುನ್ನಾರ್:

ಮುನ್ನಾರ್:

ಇಕೊ ಪಾಯಿಂಟ್ ನ ಮತ್ತೊಂದು ಸುಂದರ ದೃಶ್ಯ.

ಚಿತ್ರಕೃಪೆ: Ruben Joseph

ಮುನ್ನಾರ್:

ಮುನ್ನಾರ್:

ಪ್ರವಾಸಿಗರಿಂದ ತುಂಬಿರುವ ಇಕೊ ಪಾಯಿಂಟ್.

ಚಿತ್ರಕೃಪೆ: Aruna

ಮುನ್ನಾರ್:

ಮುನ್ನಾರ್:

ಇಕೊ ಪಾಯಿಂಟ್ ನಲ್ಲಿರುವ ಕೆರೆಯ ಶುಭ್ರ ನೋಟ.

ಚಿತ್ರಕೃಪೆ: Vinayaraj

ಮುನ್ನಾರ್:

ಮುನ್ನಾರ್:

ಒತ್ತಡ ಓಡಿ ಹೋಗಲು ಒಂದಿಷ್ಟು ವಿರಾಮದ ಸಮಯ ಕಳೆದರೆ ಸಾಕಿಲ್ಲಿ.

ಚಿತ್ರಕೃಪೆ: Vinayaraj

ಮುನ್ನಾರ್:

ಮುನ್ನಾರ್:

ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಮುನ್ನಾರ್ ಕೆರೆಯ ಭವ್ಯ ನೋಟ.

ಚಿತ್ರಕೃಪೆ: Dittymathew

ಮುನ್ನಾರ್:

ಮುನ್ನಾರ್:

ಸುಂದರವಾಗಿ ಕಂಗೊಳಿಸುವ ಮುನ್ನಾರ್ ಕೆರೆ.

ಚಿತ್ರಕೃಪೆ: Jungpionier

ಮುನ್ನಾರ್:

ಮುನ್ನಾರ್:

ಮುನ್ನಾರ್ ಕೆರೆಯ ಮತ್ತೊಂದು ಸುಂದರ ನೋಟ.

ಚಿತ್ರಕೃಪೆ: Jishar ka

ಮುನ್ನಾರ್:

ಮುನ್ನಾರ್:

ಅತಿ ಎತ್ತರದ ತಾಣದಿಂದ ನೋಡಿದಾಗ...

ಚಿತ್ರಕೃಪೆ: Matthieu Aubry

ಮುನ್ನಾರ್:

ಮುನ್ನಾರ್:

ಮುನ್ನಾರಿನ ಅತಿ ಎತ್ತರದ ತಾಣಕ್ಕೆ ಹೋಗಲು ಇರುವ ಮೆಟ್ಟಿಲು ದಾರಿ.

ಚಿತ್ರಕೃಪೆ: RanjithSiji

ಮುನ್ನಾರ್:

ಮುನ್ನಾರ್:

ಮುನ್ನಾರಿನ ಅತಿ ಎತ್ತರದ ತಾಣಕ್ಕೆ ಹೋಗಲು ಇರುವ ಮೆಟ್ಟಿಲು ದಾರಿ.

ಚಿತ್ರಕೃಪೆ: RanjithSiji

ಮುನ್ನಾರ್:

ಮುನ್ನಾರ್:

ಮೋಡಗಳಿಗಿಂತಲೂ ಮೇಲೆರಿ ನಿಂತಾಗ...

ಚಿತ್ರಕೃಪೆ: Shanmugamp7

ಮುನ್ನಾರ್:

ಮುನ್ನಾರ್:

ಮುನ್ನಾರಿನ ಕುಂಡಲಾ ಜಲಾಶಯದಲ್ಲಿ ಸುಂದರ ಅನುಭವ ಕೊಡುವ ದೋಣಿ ವಿಹಾರ.

ಚಿತ್ರಕೃಪೆ: RanjithSiji

ಮುನ್ನಾರ್:

ಮುನ್ನಾರ್:

ಆಹಾ...ಕುದುರೆಗೂ ಮೇಯಲು ಸುಂದರವಾದ ಪರಿಸರವೆ ಬೇಕು.

ಚಿತ್ರಕೃಪೆ: Prateek Rungta

ಮುನ್ನಾರ್:

ಮುನ್ನಾರ್:

ಅತಿಥಿಗಳಿಗಾಗಿ ಕಾಯುತ್ತಿರುವ ಜೋಡಿ ದೋಣಿಗಳು.

ಚಿತ್ರಕೃಪೆ: RanjithSiji

ಮುನ್ನಾರ್:

ಮುನ್ನಾರ್:

ಕುಂಡಲಾ ಜಲಾಶಯದ ಒಂದು ವಿಹಂಗಮ ನೋಟ.

ಚಿತ್ರಕೃಪೆ: Ranjithsiji

ಮುನ್ನಾರ್:

ಮುನ್ನಾರ್:

ಕುಂಡಲಾ ಜಲಾಶಯದಲ್ಲಿ ದೋಣಿ ವಿಹಾರದ ಕುರಿತು ವಿವರಣೆ ನೀಡುವ ಮಾಹಿತಿ ಫಲಕ.

ಚಿತ್ರಕೃಪೆ: RanjithSiji

ಮುನ್ನಾರ್:

ಮುನ್ನಾರ್:

ಮುನ್ನಾರಿನ ಮತ್ತೊಂದು ಆಕರ್ಷಣೆಯಾದ ಮಾಟುಪೆಟ್ಟಿ ಆಣೆಕಟ್ಟಿನ ಒಂದು ನೋಟ.

ಚಿತ್ರಕೃಪೆ: DdraconiandevilL

ಮುನ್ನಾರ್:

ಮುನ್ನಾರ್:

ಮುನ್ನಾರಿನ ಮತ್ತೊಂದು ಆಕರ್ಷಣೆಯಾದ ಮಾಟುಪೆಟ್ಟಿ ಆಣೆಕಟ್ಟಿನ ಒಂದು ನೋಟ.

ಚಿತ್ರಕೃಪೆ: Bimal K C

ಮುನ್ನಾರ್:

ಮುನ್ನಾರ್:

ಮಾಟುಪೆಟ್ಟಿ ಆಣೆಕಟ್ಟಿನ ಒಂದು ನೋಟ.

ಚಿತ್ರಕೃಪೆ: Aruna

ಮುನ್ನಾರ್:

ಮುನ್ನಾರ್:

ಮಾಟುಪೆಟ್ಟಿ ಆಣೆಕಟ್ಟೆಯ ಮೇಲ್ಎ ಓಡಾಡುವುದು ಒಂದು ಮೋಜಿನ ಸಂಗತಿ.

ಚಿತ್ರಕೃಪೆ: കാക്കര

ಮುನ್ನಾರ್:

ಮುನ್ನಾರ್:

ಮುನ್ನಾರ್ ಪ್ರದೇಶದಲ್ಲಿ ಕಂಡುಬರುವ ಮನಮೋಹಕ ಹೂದೋಟಗಳು.

ಚಿತ್ರಕೃಪೆ: irvin calicut

ಮುನ್ನಾರ್:

ಮುನ್ನಾರ್:

ಸ್ವಚ್ಛಂದವಾಗಿ ಮೇಯುತ್ತಿರುವ ಕಾಡಾನೆಗಳು.

ಚಿತ್ರಕೃಪೆ: Aruna

ಮುನ್ನಾರ್:

ಮುನ್ನಾರ್:

ಮುಂಜಾವಿನ ಸಮಯದಿ ತಂಪು ತಂಪಾದ ಅನುಭವ.

ಚಿತ್ರಕೃಪೆ: Ramkumar

ಮುನ್ನಾರ್:

ಮುನ್ನಾರ್:

ನಿಂಬೆ ಹಣ್ಣಿನ ಬಣ್ಣದ ಸುಂದರವಾಗಿ ಕಂಗೊಳಿಸುವ ಒಂದು ಬಗೆಯ ಹೂವು.

ಚಿತ್ರಕೃಪೆ: Vinayaraj

ಮುನ್ನಾರ್:

ಮುನ್ನಾರ್:

ಬೂದು ಎದೆಯುಳ್ಳ ಲಾಫಿಂಗ್ ಥ್ರಶ್ ಹಕ್ಕಿ. ತಮಿಳುನಾಡಿನ ಪಳನಿ ಬೆಟ್ಟಗಳು ಹಾಗೂ ಆನಮಲೈಗಳ ಜೊತೆಗೆ ಮುನ್ನಾರಿನಲ್ಲಿ ಮಾತ್ರ ಈ ಹಕ್ಕಿಗಳು ಕಂಡುಬರುತ್ತವೆ.

ಚಿತ್ರಕೃಪೆ: Patko erika

ಮುನ್ನಾರ್:

ಮುನ್ನಾರ್:

ಮುನ್ನಾರಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಲುಕ್ಕಂ ಜಲಪಾತದ ಒಂದು ನೋಟ.

ಚಿತ್ರಕೃಪೆ: Subramanian Kabilan

ಮುನ್ನಾರ್:

ಮುನ್ನಾರ್:

ಮುನ್ನಾರಿನಲ್ಲಿರುವ ಹ್ಯಾರಿಸನ್ ಮಲಯಾಳಂ ಚಹಾ ತೋಟದ ಒಂದು ಸುಂದರ ನೋಟ.

ಚಿತ್ರಕೃಪೆ: Rameshng

ಮುನ್ನಾರ್:

ಮುನ್ನಾರ್:

ಕೆಲಸದಲ್ಲಿ ನಿರತಳಾದ ಚಹಾ ತೋಟದ ಕಾರ್ಮಿಕ ಮಹಿಳೆ.

ಚಿತ್ರಕೃಪೆ: Paul Munhoven

ಮುನ್ನಾರ್:

ಮುನ್ನಾರ್:

ಸುವಾಸನೆಭರಿತ ಚಹಾ ತೋಟದ ಮಧ್ಯದಲ್ಲಿ....

ಚಿತ್ರಕೃಪೆ: Babug

ಮುನ್ನಾರ್:

ಮುನ್ನಾರ್:

ಚಳಿಗಾಲದ ಸಮಯದಲ್ಲಿ ಸುಂದರವಾಗಿ ಗೋಚರಿಸುವ ಮುನ್ನಾರ್ ಪರಿಸರ.

ಚಿತ್ರಕೃಪೆ: Nikhilb239

ಮುನ್ನಾರ್:

ಮುನ್ನಾರ್:

ಮುನ್ನಾರಿಗೆ ತೆರಳುವ ಮಾರ್ಗ ಮಧ್ಯದಲ್ಲಿ.

ಚಿತ್ರಕೃಪೆ: Jeroalex

ಮುನ್ನಾರ್:

ಮುನ್ನಾರ್:

ಪ್ರಕೃತಿಯ ಮಡಿಲಿನಲ್ಲಿ ಶಾಂತವಾಗಿ ಸ್ಥಿತವಿರುವ ಮುನ್ನಾರ್ ನಗರ.

ಚಿತ್ರಕೃಪೆ: Aruna

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X