Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಹವಾಮಾನ

ಇಡುಕ್ಕಿ ಹವಾಮಾನ

ಯಾವುದೇ ಪ್ರವಾಸ ಯಶಸ್ವಿಯಾಗಬೇಕಿದ್ದರೂ, ಸೂಕ್ತ ಸಮಯಕ್ಕೆ ಪ್ರವಾಸವನ್ನು ಆಯೋಜಿಸಿಕೊಳ್ಳಬೇಕಾಗುತ್ತದೆ. ಇಡುಕ್ಕಿ ಜಿಲ್ಲೆಗೆ ಬರಲು ಬೇಸಿಗೆ ಮತ್ತು ಚಳಿಗಾಲ ಸೂಕ್ತವಾದದ್ದು. ಈ ಎರಡೂ ಕಾಲದಲ್ಲಿ ಇಲ್ಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಜನೆವರಿಯಿಂದ ನವೆಂಬರ್‌ವರೆಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಇಲ್ಲಿಗೆ ಬರಬಹುದು. ಆದರೆ ಚಳಿಗಾಲದಲ್ಲಿ ಮಾತ್ರ ಬೆಚ್ಚನೆ ಬಟ್ಟೆಗಳನ್ನು ತರಲೇ ಬೇಕು, ಇಲ್ಲದಿದ್ದರೆ ಪ್ರವಾಸ ಪ್ರಯಾಸವಾಗುವುದು ಖರೆ!

ಬೇಸಿಗೆಗಾಲ

ಕೇವಲ ಮೂರು ತಿಂಗಳಿನಷ್ಟು ಕಾಲ ಮಾತ್ರ  ಬೇಸಿಗೆಯನ್ನು ಹೊಂದಿರುವ ಇಡುಕ್ಕಿ ಅತ್ಯಂತ ತಣ್ಣನೆಯ ಅನುಭವವನ್ನು ನೀಡುತ್ತದೆ. ಮಾರ್ಚ್ ನಿಂದ ಮೇವರೆಗೆ ಮಾತ್ರ ಬೇಸಿಗೆ ಇದ್ದು,  ಗರಿಷ್ಠ ತಾಪಮಾನ ಕೇವಲ 32° ಸಿ ಗೆ ತಲುಪುತ್ತದೆ. ಇದನ್ನು ಹೊರತುಪಡಿಸಿದರೆ ಮತ್ತೆಲ್ಲಾ ಕಾಲಗಳೂ ತುಂಬಾ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಡುಕ್ಕಿಗೆ ನೀವು ಭೇಟಿ ಮಾಡಬಹುದು.

ಮಳೆಗಾಲ

ಇಡುಕ್ಕಿಯಲ್ಲಿ ಜೂನ್ ತಿಂಗಳಿನಿಂದ ಮಳೆಗಾಲ ಶುರುವಾಗಿ, ಸೆಪ್ಟೆಂಬರ್ ವರೆಗೂ ಸುರಿಯುತ್ತದೆ.  ಈ ಸಮಯದಲ್ಲಿ ತಾಪಮಾನ ತುಂಬಾ ಕೆಳಮಟ್ಟಕ್ಕೆ ಇಳಿಯುತ್ತಿದ್ದು, ಪ್ರವಾಸಕ್ಕೆ ಯೋಗ್ಯವಲ್ಲ. ಮಳೆಗಾಲ ಚಾರಣಕ್ಕಾಗಲೀ, ಇತರ ಸಾಹಸ ಚಟುವಟಿಕೆಗಳಿಗಾಗಲೀ ಯೋಗ್ಯವಲ್ಲ. ಮಳೆಗಾಲದ ಹೊತ್ತಿಗೆ ಇಡುಕ್ಕಿಗೆ ಬಂದರೂ ವ್ಯರ್ಥ.

ಚಳಿಗಾಲ

ಇಡುಕ್ಕಿಯಲ್ಲಿ ಚಳಿಯ ಆಯಸ್ಸು ತುಂಬಾ ಜಾಸ್ತಿಯೇ ಅನ್ನಬಹುದು. ಅಕ್ಟೋಬರ್‌ನಲ್ಲಿ ಶುರುವಾದ ಚಳಿಗಾಲ ಫೆಬ್ರುವರಿಯವರೆಗೂ ಇರುತ್ತದೆ. ಗರಿಷ್ಠ ತಾಪಮಾನ 10° ಸೆ. ಇಂದ 22° ಸೆ. ವರೆಗೆ ಇರುತ್ತದೆ. ಈ ಋತುಗಳು ಈಡುಕ್ಕಿ ಪ್ರವಾಸಕ್ಕೆ ಒಳ್ಳೆಯ ಕಾಲ. ಆದರೆ, ಬೆಚ್ಚನೆಯ ಬಟ್ಟೆಗಳನ್ನು ತರುವುದಕ್ಕೆ ಮಾತ್ರ ಮರೆಯಬೇಡಿ.