Search
  • Follow NativePlanet
Share
» »ಇಡಿ ಜಗತ್ತಿಗೆ ಮೋಡಿ ಮಾಡಿರುವ ಕುಂಭ

ಇಡಿ ಜಗತ್ತಿಗೆ ಮೋಡಿ ಮಾಡಿರುವ ಕುಂಭ

By Vijay

ನೂರು ಕೋಟಿಗೂ ಮೀರಿದ ಜನಸಂಖ್ಯೆ, ವಿವಿಧ ಸಂಸ್ಕೃತಿ, ವೈವಿಧ್ಯಮಯ ಸಂಪ್ರದಾಯ, ವಿಸ್ಮಯಕರ ಆಚರಣೆ....ಆದರೆ ಒಂದೆ ಒಂದು ನಿಯಮಿತವಾಗಿ ಬರುವ ಉತ್ಸವ. ಕೇವಲ ಸಂಪೂರ್ಣ ದೇಶವಲ್ಲ ಬದಲಿಗೆ ಇಡಿ ಜಗತ್ತೆ ಬೆಕ್ಕಸ ಬೆರಗಾಗಿ ಭಾರತದತ್ತ ನೋಡುತ್ತದೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ನಾಗಾ ಸಾಧುಗಳು, ಇತರೆ ಸಂತರು, ಸಾಧುಗಳು ಪ್ರಮುಖವಾಗಿ ಪಲ್ಗೊಳ್ಳುತ್ತಾರೆ.

ಗೊಐಬಿಬೊ ಕೂಪನ್ಸ್ : ದೇಶೀಯ ಫ್ಲೈಟ್ ಬುಕ್ ಮಾಡಿ 10% ಕಡಿತ ಪಡೆಯಿರಿ, ಸೀಮಿತ ಕೊಡುಗೆ ಮಾತ್ರ

ವಿವಿಧ ಸಂಸ್ಥೆಗಳ ಪತ್ರಕರ್ತರೂ ಸೇರಿದಂದೆ ಪ್ರಪಂಚದ ಮೂಲೆ ಮೂಲೆಗಳಿಂದ ಕುತೂಹಲ ಹೊಂದಿರುವ ವಿದೇಶಿ ಪ್ರವಾಸಿಗರು ಈ ಉತ್ಸವಕ್ಕೆಂದು ಬರುತ್ತಾರೆ. ಆ ಒಂದು ದೊಡ್ಡ ಉತ್ಸವವೆ ಕುಂಭ ಮೇಳ. ದೇಶದ ನಾಲ್ಕು ಸ್ಥಳಗಳಲ್ಲಿ ಇದನ್ನು ಗ್ರಹ, ರಾಶಿಗಳ ಲೆಕ್ಕದ ಆಧಾರದ ಮೇಲೆ ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಪ್ರತಿ ಸ್ಥಳಗಳಲ್ಲಿ ಕುಂಭವು ಆಚರಿಸಿದಾಗ ಸಾಧು ಸಂತರ ಮಹಾ ದಂಡವೆ ಹರಿದು ಬರುತ್ತದೆ ಹಾಗೂ ಆ ಸ್ಥಳಗಳ ಕಳೆಯೆ ಒಂದು ರೀತಿಯಾಗಿ ಬದಲಾಗಿ ಹೆಚ್ಚಿನ ಉತ್ಸಾಹ ಪಡೆಯುತ್ತದೆ.

ವಿಶೇಷ ಲೇಖನ : ಕೊಟ್ಟಿಯೂರು ವೈಶಾಖ ಮಹೋತ್ಸವ

ಸಾಮಾನ್ಯವಾಗಿ ಕುಂಭ ಮೇಳದ ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ಕುಂಭ ಮೇಳ ಎಂದರೇನು? ಏಕೆ ಆಚರಿಸಬೇಕು? ಹೇಗೆ ಆಚರಿಸಬೇಕು? ಎಂಬುದರ ಕುರಿತು ಬಹುತೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಒಂದು ನಿಟ್ಟಿನಲ್ಲಿ ಈ ಲೇಖನವು ಕುಂಭ ಮೇಳದ ಕುರಿತು ಬೆಳಕು ಚೆಲ್ಲುತ್ತದೆ.

ಇದೆ ಜುಲೈ 14, 2015 ರಂದು ನಾಶಿಕ್ ಪಟ್ಟಣದಲ್ಲಿ ಕುಂಭ ಮೇಳವು ಜರುಗುತ್ತಿದೆ. ಕುಂಭ ಮೇಳದ ಕುರಿತಿರುವ ಈ ಲೇಖನ ಓದಿ, ನಿಮಗೆ ಮನಸ್ಸಾದಲ್ಲಿ ಅಥವಾ ಇಷ್ಟವಿದ್ದಲ್ಲಿ, ಈ ಸಲ ನಾಶಿಕ್ ಕುಂಭ ಮೇಳಕ್ಕೆ ಭೇಟಿ ನೀಡಿ ಅದ್ಭುತ ಅನುಭವ ಪಡೆಯಿರಿ. ಈ ಅಪರೂಪದ, ಮೈಯಲ್ಲೆಲ್ಲ ವಿದ್ಯುತ್ ಸಂಚಾರ ಮೂಡಿಸುವ ಅನುಭವ ಕೇವಲ 12 ವರ್ಷಕ್ಕೊಮ್ಮೆ ಮಾತ್ರ ಲಭಿಸುವಂಥದ್ದು.

ಇಲ್ಲಿರುವ ಚಿತ್ರಗಳು ಕಳೆದ ಸಮಯದ ಕುಂಭ ಮೇಳದ ವಿವಿಧ ಸ್ಥಳಗಳಲ್ಲಿ ಆಚರಿಸಲಾದ ಉತ್ಸವದ ಚಿತ್ರಗಳಾಗಿವೆ.

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಕುಂಭ ಮೇಳವು ಭಾರತ ದೇಶದ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿದೆ. ಈ ಮಹಾನ್ ಉತ್ಸವವು ದೇಶದ ನಾಲ್ಕು ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಬೇರೆ ಬೇರೆ ಸಮಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಜರುಗುತ್ತದೆ.

ಚಿತ್ರಕೃಪೆ: Stefania Zamparelli

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಕುಂಭ ಮೇಳವು ಆಚರಿಸಲ್ಪಡುವ ನಾಲ್ಕು ಪ್ರಮುಖ ಸ್ಥಳಗಳೆಂದರೆ ಪ್ರಯಾಗ್ (ಅಲಹಾಬಾದ್), ನಾಶಿಕ್, ಹರಿದ್ವಾರ ಹಾಗೂ ಉಜ್ಜಯಿನಿ. ಯಾವ ಸ್ಥಳಗಳಲ್ಲಿ ಕುಂಭ ಮೇಳ ಯಾವಾಗ ಆಚರಿಸಬೇಕೆಂಬುದರ ಕುರಿತು ಲೆಕ್ಕಾಚಾರವಿದ್ದು ಅದರಂತೆ ಆಯಾ ಸ್ಥಳಗಳಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ಮೇಳವನ್ನು ಆಚರಿಸಲಾಗುತ್ತದೆ. ಹರಿದ್ವಾರದಲ್ಲಿನ ಕುಂಭ.

ಚಿತ್ರಕೃಪೆ: wikipedia

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಉದಾಹರಣೆಗೆ ಗುರು ಮತ್ತು ಸೂರ್ಯನು ಸಿಂಹ ರಾಶಿಯಲ್ಲಿದ್ದಾಗ ಕುಂಭ ಮೇಳವನ್ನು ನಾಶಿಕ್ ನ ತ್ರಿಯಂಬಕೇಶ್ವರದಲ್ಲಿ ಆಚರಿಸಲಾಗುತ್ತದೆ. ಇದನ್ನು ಸಿಂಹಸ್ಥ ಕುಂಭ ಮೇಳ ಎಂತಲೂ ಕರೆಯಲಾಗುತ್ತದೆ. ಸೂರ್ಯನು ಮೇಷ ರಾಶಿಯಲ್ಲಿದ್ದಾಗ ಹರಿದ್ವಾರದಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಅಲಹಾಬಾದ್ ನಲ್ಲಿನ ಕುಂಭ.

ಚಿತ್ರಕೃಪೆ: Lokankara

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಅದೆ ರೀತಿಯಾಗಿ ಗುರು ವೃಷಭ ರಾಶಿಯಲ್ಲಿಯೂ, ಸೂರ್ಯ ಮಕರ ರಾಶಿಯಲ್ಲಿಯೂ ಪ್ರವೇಶಿಸಿದಾಗ ಕುಂಬ ಮೇಳವು ಪ್ರಯಾಗ್ (ಅಲಹಾಬಾದ್)ನಲ್ಲಿ ಆಚರಿಸಲಾಗುತ್ತದೆ. ಕೊನೆಯದಾಗಿ ಗುರು ಹಾಗೂ ಸೂರ್ಯನು ವೃಶ್ಚಿಕ ರಾಶಿ ಪ್ರವೇಶಿಸಿದಾಗ ಕುಂಭ ಮೇಳವು ಉಜ್ಜಯಿನಿಯಲ್ಲಿ ಆಚರಿಸಲ್ಪಡುತ್ತದೆ. ನಾಶಿಕ್ ನ ಗೋದಾವರಿ ತಟದಲ್ಲಿ ಜರುಗಿದ ಕುಂಭ.

ಚಿತ್ರಕೃಪೆ: AnandKatgaonkar

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಈ ನಾಲ್ಕೇ ಸ್ಥಳಗಳು ಏಕೆ? ಹೀಗೊಂದು ವಿಚಾರ ಮೂಡಲೂ ಬಹುದು. ಇದಕ್ಕೆ ಉತ್ತರವಾಗಿ ಹೇಳಲಾಗುವ ಕಥೆ ಎಂದರೆ ಹಿಂದೆ ಸಮುದ್ರ ಮಂಥನದಿಂದ ಪಡೆದ ಅಮೃತವನ್ನು ಭಗವಾನ್ ವಿಷ್ಣು ದಾನವರಿಗೆ ಸಿಗದ ಹಾಗೆ ಸ್ವತಃ ತಾನೆ ಒಯ್ಯುತ್ತಿದ್ದಾಗ ಆತುರಾತುರದಲ್ಲಿ ಅಮೃತದ ನಾಲ್ಕು ಹನಿಗಳು ಬಿದ್ದ ನಾಲ್ಕು ಸ್ಥಳಗಳಲ್ಲೆ ಇಂದು ಕುಂಭ ಮೇಳವು ಆಚರಿಸಲ್ಪಡುತ್ತದೆ. ನಾಶಿಕ್ ನ ತ್ರಿಯಂಬಕ ಕ್ಷೇತ್ರದ ಪಾಕ್ಷಿಕ ನೋಟ.

ಚಿತ್ರಕೃಪೆ: ParikshitNashik

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಹನ್ನೆರಡು ವರ್ಷಗಳೇ ಏಕೆ? ಇದಕ್ಕೂ ಉತ್ತರವಾಗಿ ಸಮುದ್ರ ಮಂಥನದಿಂದ ಬಂದ ಅಮೃತವೆ ಆಗಿದೆ. ಮೊದ ಮೊದಲು ದೇವತೆಗಳು ದಾನವರಿಗೆ ಅಮೃತ ಸಿಗದ ಹಾಗೆ ಸ್ವರ್ಗಲೋಕ, ಮೃತ್ಯುಲೋಕ ಹಾಗೂ ಪಾತಾಳಲೋಕಗಳಲ್ಲಿ ಬಚ್ಚಿಟ್ಟಿದ್ದರು. ಮೃತ್ಯುಲೋಕ ಅಂದರೆ ಭೂಮಿಯ ಮೇಲಿದ್ದಾದ ಬರೋಬ್ಬರಿ 12 ದಿನಗಳಷ್ಟು ಇಲ್ಲಿ ತಂಗಿದ್ದರು ಹಗೂ ದೇವತೆಗಳ ಒಂದು ದಿನ ಮೃತ್ಯುಲೋಕದ ಒಂದು ವರ್ಷಕ್ಕೆ ಸಮನಾದುದರಿಂದ ಪ್ರತಿ 12 ವರ್ಷಗಳಿಗೊಮ್ಮೆ ಇದನ್ನು ಆಚರಿಸಲಾಗುತ್ತದೆ. ತ್ರಿಯಂಬಕೇಶ್ವರದಲ್ಲಿರುವ ಸ್ನಾನ ಮಾಡಲಾಗುವ ಕುಶವರ್ತ ಕುಂಡ.

ಚಿತ್ರಕೃಪೆ: Demorphica

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ ಒಮ್ಮೆ ಶಿವನು ಎಲ್ಲ ಪುಣ್ಯ ತೀರ್ಥಗಳನ್ನು ಕರೆಯಿಸಿ ಅವರನ್ನು ಕುರಿತು ಮೃತ್ಯುಲೋಕದಲ್ಲಿರುವ ಪಾಪ ಕರ್ಮಿಗಳನ್ನು ಅವರ ಪಾಪಗಳಿಂದ ಮುಕ್ತರನ್ನಾಗಿ ಮಾಡಲು ಆದೇಶಿಸಿದರು. ಅದರಂತೆ ಎಲ್ಲ ತೀರ್ಥಗಳು ಭೂಮಿಯಲ್ಲಿ ನೆಲೆಸಿ ಪಾಪ ಕರ್ಮಾದಿಗಳನ್ನು ಮಾಡಿದವರ ಪಾಪಗಳನ್ನು ನಶಿಸಹತ್ತಿದರು. ಅಲಹಾಬಾದ್ ಕುಂಭ.

ಚಿತ್ರಕೃಪೆ: Yosarian

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಆದರೆ ಇದರಿಂದ ಸ್ವತಃ ತೀರ್ಥಗಳೆ ಪಾಪಗಳಿಂದ ತುಂಬ ತೊಡಗಿದರು. ಇದರಿಂದ ಬೇಸರಗೊಂಡ ಅವರು ಮತ್ತೆ ಶಿವನ ಬಳಿ ತೆರಳಿ ತಮ್ಮ ಅಳಲನ್ನು ತೋಡಿಕೊಂಡರು. ಅದಕ್ಕೆ ಶಿವನು ಅವರನ್ನು ಕುರಿತು ಗೋದಾವರಿ ತಟಕ್ಕೆ ಹೋಗಿ ಏಕಾಂತದಲ್ಲಿ ಒಂದು ವರ್ಷಗಳ ಕಾಲ ನೆಲೆಸಿ, ನಿಮ್ಮ ಜೊತೆ ನಾನು ಹಾಗು ದೇವತೆಗಳೆಲ್ಲರೂ ಇರುತ್ತೇವೆಂದು ಹೇಳಿ ನಂತರ ಗೋದಾವರಿಯಲ್ಲಿ ಪವಿತ್ರ ಸ್ನಾನ ಮಾಡಿದಾಗ ನಿಮ್ಮ ಎಲ್ಲ ಪಾಪಕರ್ಮಗಳು ನಶಿಸುತ್ತವೆಂದು ಹೇಳಿದರು.

ಚಿತ್ರಕೃಪೆ: commonswiki

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಹೀಗಾಗಿ ಕುಂಭ ಮೇಳವು ಪವಿತ್ರ ಸ್ನಾನ ಅಥವಾ ಶಾಹಿ ಸ್ನಾನಕ್ಕೆ ಪ್ರಸಿದ್ಧಿ ಪಡೆದಿದೆ. ಈ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಿದನ್ಯಾರೆ ಇರಲಿ ಅವರೆಲ್ಲರ ಸಕಲ ಪಾಪ ಕರ್ಮಗಳು ಕ್ಷಣ ಮಾತ್ರದಲ್ಲೆ ನಶಿಸಿ ಹೋಗುತ್ತವೆನ್ನಲಾಗಿದೆ. 2007 ರ ಅಲಹಾಬಾದ್ ಕುಂಭದಲ್ಲಿ ಭಕ್ತಿಯಲ್ಲಿ ಪರವಶರಾಗಿರುವ ನಾಗಾ ಸಾಧುಗಳ ನರ್ತನ.

ಚಿತ್ರಕೃಪೆ: elishams

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಶಿವಪುರಾಣದಲ್ಲಿ ಸಿಂಹಸ್ಥ ಕುಂಭ ಮೇಳದ ಕುರಿತು ಮಹತ್ವವನ್ನು ವಿವರಿಸಲಾಗಿದೆ. ಒಮ್ಮೆ ಗೌತಮಮುನಿಯ ಪಾಪವನ್ನು ನಿಗ್ರಹಿಸಲು ಶಿವನ ಕೋರಿಕೆಯಂತೆ ಗಂಗೆಯು ಭೂಮಿಗೆ ಬಂದಿಳಿದಳು. ತದ ನಂತರ ಅವಳು ಮರಳಿ ತನ್ನ ಜಾಗಕ್ಕೆ ಹೋಗಬೇಕೆಂದಾಗ ಸಕಲ ಋಷಿ-ಮುನಿಗಳು, ದೇವತೆಗಳಾದಿಯಾಗಿ ಗಂಗೆಯನ್ನು ಕುರಿತು ಲೋಕಕಲ್ಯಣಾರ್ಥವಾಗಿ ಇಲ್ಲಿಯೆ ನೆಲೆಸಲು ಕೋರಿಕೊಂಡರು. ವಿದೇಶಿಯರೂ ಆಕರ್ಷಿತರಾಗಿ ಪೂಜೆಯಲ್ಲಿ ತೊಡಗಿಕೊಂಡಿರುವುದು.

ಚಿತ್ರಕೃಪೆ: Ranveig

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಇದಕ್ಕೆ ಗಂಗೆಯು ಒಪ್ಪಿ ಅವರನ್ನು ಕುರಿತು ನೀವು ನನ್ನ ಜೊತೆ ನೆಲೆಸಬೇಕೆಂದು ವಿನಂತಿಸಿದಾಗ ಅದಕ್ಕೊವರೊಪ್ಪಿ ಯಾವಾಗ ಸೂರ್ಯ ಹಾಗೂ ಗುರು ಸೀಂಹ ರಾಶಿಯನ್ನು ಪ್ರವೇಶಿಸುತ್ತಾರೊ ಅಂದು ನಾವು ನಿನ್ನ ಜೊತೆ ಭೂಮಿಯ ಮೇಲಿರುತ್ತೇವೆಂದು ಅಭಯ ನೀಡಿದರು. ಆದ್ದರಿಂದ ನಾಶಿಕ್ ಪಟ್ಟಣದ ತ್ರಿಯಂಬಕೇಶ್ವರದಲ್ಲಿ ಜರುಗುವ ಸಿಂಹಸ್ಥ ಕುಂಭ ಮೇಳಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಸಾಗರದಂತೆ ಹರಿದು ಬರುತ್ತಾರೆ. 2013 ರ ಅಲಹಾಬಾದ್ ಕುಂಭದಲ್ಲಿ ತಮ್ಮ ಭಕ್ತರೊಂದಿಗೆ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳು

ಚಿತ್ರಕೃಪೆ: Bharathiya

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಮುಂದೆ ಶ್ರೀರಾಮನು ಕುಂಭ ಮೇಳದ ಮಹತ್ವವನ್ನು ಅರಿತು ತ್ರಿಯಂಬಕೇಶ್ವರದಲ್ಲಿ ಒಂದು ವರ್ಷಗಳ ಕಾಲ ವಾಸ ಮಾಡಿ ಯಾತ್ರೆ, ಶ್ರಾದ್ಧ ಮುಂತಾದ ಧಾರ್ಮಿಕ ಕೈಂಕರ್ಯಗಳನ್ನು ಕುಶವರ್ತದ ಬಳಿ ಸಂಪನ್ನಗೊಳಿಸಿದ. 2010 ರ ಹರಿದ್ವಾರ ಕುಂಭ ಮೇಳ.

ಚಿತ್ರಕೃಪೆ: Edson Walker

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಕುಂಭ ಮೇಳದಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರಮುಖ ಚಟುವಟಿಕೆಯೆಂದರೆ ಸ್ನಾನ ಮಾಡುವುದಾಗಿದೆ. ಇದಕ್ಕೆಂತಲೆ ಹಲವು ವಿವಿಧ ಹೆಸರಿನ ಸ್ಥಳಗಳು ನಾಲ್ಕೂ ಕ್ಷೇತ್ರಗಳಲ್ಲಿವೆ. ಒಟ್ಟಾರೆ ಕುಂಭ ಮೇಳ ನಿರ್ವಹಣಾ ಸಮೀತಿಯು ವಿವಿಧ ಸ್ಥಳಗಳಲ್ಲಿ ಯಾವ ಯಾವ ಪಂಥದವರು ಮೊದಲು, ತದನಂತರ ಸ್ನಾನ ಮಾಡಬೇಕೆಂದು ನಿಗದಿಪಡಿಸಿರುತ್ತಾರೆ. ಅದರಂತೆಯೆ ಆಯಾ ಪಂಥಗಳ ಜನರು ಶಿಸ್ತುಬದ್ಧವಾಗಿ ಸ್ನಾನ ಮಾಡುತ್ತಾರೆ. ಜನಸ್ತೋಮ ಸ್ನಾನಕ್ಕೆಂದು ನದಿಯೆಡೆ ಹೊರಡುತ್ತಿರುವುದು.

ಚಿತ್ರಕೃಪೆ: Stuti

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಉದಾಹರಣೆಗೆ ಹರಿದ್ವಾರದಲ್ಲಿ ಜರುಗುವ ಕುಂಭ ಮೇಳದಲ್ಲಿ ನಿರಂಜಿನಿ ಗೋಸಾವಿ ಪಂಥದವರ್ ಮೊದಲು ಮಿಂದರೆ, ನಂತರದಲ್ಲಿ ನಿರ್ವಾಣಿ ಗೋಸಾವಿಯರು ಸ್ನಾನ ಮಾಡುತ್ತಾರೆ. ಅದೇ ನಾಶಿಕ್ ನಲ್ಲಿ ಇದರ ವ್ಯತಿರಿಕ್ತವಾಗಿರುತ್ತದೆ. ಕುಂಭದ ಸಮಯದಲ್ಲಿ ನಾಗಾ ಸಾಧುವೊಬ್ಬ ಧೂಮ್ರಪಾನದಲ್ಲಿ ನಿರತನಾಗಿರುವ ದೃಶ್ಯ.

ಚಿತ್ರಕೃಪೆ: Roshan Travel Photography

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ನಾಶಿಕ್ ಕುಂಭ ಮೇಳವೂ ಸಹ ಅತಿ ದೊಡ್ಡ ಪ್ರಮಾಣದ ಕುಂಭೋತ್ಸವವಾಗಿದ್ದು ಲಕ್ಷಾನುಗಟ್ಟಲೆ ಜನರನ್ನು ಆಕರ್ಷಿಸುತ್ತದೆ. ನಾಶಿಕ್ ಪಟ್ಟಣ, ತ್ರಿಯಂಬಕೇಶ್ವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಲುವು ತುಂಬಿಕೊಂಡು ಮದುವೆಯ/ಜಾತ್ರೆಯ ಸಮಾರಂಭದಂತೆ ವಾತಾವರಣ ಏರಪಟ್ಟಿರುತ್ತದೆ. ಕುಂಭದ ಉತ್ಸವಕ್ಕೆ ಚಾಲನೆ ನೀಡುವ ಮೊದಲು.

ಚಿತ್ರಕೃಪೆ: Roshan Travel Photography

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ನಾಶಿಕ್ ಬೆಂಗಳೂರಿನಿಂದ 1120 ಕಿ.ಮೀ, ಬೆಳಗಾವಿಯಿಂದ 620 ಕಿ.ಮೀ ಹಾಗೂ ಪುಣೆಯಿಂದ 210 ಕಿ.ಮೀಗಳಷ್ಟು ದೂರವಿದ್ದು ಒಳ್ಳೆಯ ರಸ್ತೆ ಸಂಪರ್ಕ ಹಾಗೂ ರೈಲು ಸಂಪರ್ಕವನ್ನು ಹೊಂದಿದೆ. ದಕ್ಷಿಣ ಭಾರತದಿಂದ ಹೋಗಬಯಸುವವರು ಪುಣೆಗೆ ತೆರಳಿ ಅಲ್ಲಿಂದ ನಾಶಿಕ್ ತಲುಪಬಹುದು. ಅಲಹಾಬಾದಿನ ಮಹಾ ಕುಂಭ ನಗರಿ.

ಚಿತ್ರಕೃಪೆ: Roshan Travel Photography

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಕುಂಭ ಮೇಳದಲ್ಲಿ ನಾಗಾ ಸಾಧುಗಳ ಬಿಡಾರ. ವಿಚಿತ್ರ ವೇಶ ಭೂಷಣಗಳು ಪ್ರಧಾನವಾಗಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Roshan Travel Photography

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಶಂಖ ಊದುವುದರಲ್ಲಿ ನಿರತನಾದ ಒಬ್ಬ ಭಕ್ತ.

ಚಿತ್ರಕೃಪೆ: Roshan Travel Photography

ಮೋಡಿ ಮಾಡಿರುವ ಕುಂಭ:

ಮೋಡಿ ಮಾಡಿರುವ ಕುಂಭ:

ಲೋಕಃ ಸಮಸ್ತಃ ಸುಖಿನೋ ಭವಂತು... ಎಲ್ಲರಿಗೂ ಒಳ್ಳೆಯದಾಗಲಿ...

ಚಿತ್ರಕೃಪೆ: Sreeram Nambiar

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more