Search
  • Follow NativePlanet
Share
» »ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

By Vijay

ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ. ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾಟಕದಲ್ಲಿ ಮೈಲಾರನಾಗಿಯೂ ಖಂಡೋಬನನ್ನು ಪೂಜಿಸಲಾಗುತ್ತದೆ. ಖಂಡೋಬ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಲದವರ ಮನೆ ದೇವರೂ ಕೂಡ ಹೌದು.

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: Anant Rohankar

ಮಹಾರಾಷ್ಟ್ರದ ಜೆಜುರಿಯಲ್ಲಿರುವ ಖಂಡೋಬನ ದೇವಾಲಯವು "ಜೆಜುರಿ ಚಿ ಖಂಡೋಬ" ನೆಂದೆ ಪ್ರಸಿದ್ಧಿ ಪಡೆದಿದೆ. ಜೆಜುರಿಯು ಪುಣೆ ಜಿಲ್ಲೆಯ ಒಂದು ಪಟ್ಟಣವಾಗಿದ್ದು ಪುಣೆ ಮಹಾ ನಗರದಿಂದ ಸುಮರು 38 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಇಲ್ಲಿಗೆ ತೆರಳಲು ಪುಣೆಯಿಂದ ಸಾಕಷ್ಟು ಬಸ್ಸುಗಳು ಹಾಗೂ ರೈಲಿನ ಸೌಕರ್ಯವಿದೆ. ಮತ್ತೊಂದು ಪ್ರಭಾವಿ ಕ್ಷೇತ್ರವಾದ ಸೋಲಾಪುರದಿಂದ ಕೇವಲ 60 ಕಿ.ಮೀ ದೂರವಿದೆ.

ಲೇಖನ : ಪುಣೆ ಜಿಲ್ಲೆಯ ಆಕರ್ಷಣೆಗಳು

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: jalinder jag

ವಿಶೇಷವೆಂದರೆ ಖಂಡೋಬನು ಒಬ್ಬ ಸಂಯುಕ್ತ ದೇವರ ಅವತಾರವಾಗಿದ್ದು ಶಿವ, ಭೈರವ, ಸೂರ್ಯ ಹಾಗೂ ಕಾರ್ತಿಕೇಯನ ಗುಣಲಕ್ಷಣಗಳನ್ನು ಹೊಂದಿರುವ ದೈವಿ ಅವತಾರ ಎನ್ನಲಾಗಿದೆ. ಇಷ್ಟೆ ಏಕೆ ಖಂಡೋಬನನ್ನು ಕೆಲ ಮುಸ್ಲಿಮರು ಕೂಡ ಪರಿಪಾಲಿಸುತ್ತಾರೆ. ಮುಸ್ಲಿಮರು ಖಂಡೋಬನನ್ನು ಮಲ್ಲು ಖಾನ್ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಮಾರ್ತಾಂಡ ಭೈರವನೆಂದೂ ಪೂಜಿಸುತ್ತಾರೆ.

ರೆಡ್ ಬಸ್.ಇನ್ ದಿಂದ ಯಾವುದೆ ವಹಿವಾಟಿನ ಮೇಲೆ 10% ರಷ್ಟು ಕಡಿತ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: Ashishbagate13

ಖಂಡೋಬನಿಗೆ ಐವರು ಪತ್ನಿಯರಿದ್ದು ಅವರಲ್ಲಿ ಒಬ್ಬಳು ಮುಸ್ಲಿಮ್ ಸಮುದಾಯದವಳಾಗಿದ್ದಳು ಎನ್ನಲಾಗುತ್ತದೆ. ಅಲ್ಲದೆ ಪಠಾಣಿ ವೇಷಭೂಷಣದಲ್ಲಿ ಖಂಡೋಬನು ಕುದುರೆ ಸವಾರಿ ಮಾಡುತ್ತಿದ್ದ ಹಾಗೂ ಅವನ ಕುದುರೆಯ ಪರಿಪಾಲಕನು ಒಬ್ಬ ಮುಸ್ಲಿಮ್ ಮತದವನಾಗಿದ್ದ. ಆದ್ದರಿಂದ ಇಂದಿಗೂ ಖಂಡೋಬನ ಕುದುರೆಗಳನ್ನು ಸಾಂಪ್ರದಾಯಿಕವಾಗಿ ಮುಸ್ಲಿಮ್ ಕುಟುಂಬವೊಂದು ಜೆಜುರಿಯಲ್ಲಿ ನಿರ್ವಹಿಸುತ್ತಿದೆ.

ವಿಶೇಷ ಲೇಖನ : ದಸರಿಘಟ್ಟ ಚೌಡೇಶ್ವರಿ ದೇವಿ ಮಹಾತ್ಮೆ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: jalinder jag

ಪೌರಾಣಿಕವಾಗಿ, ಹಿಂದೆ ಈ ಪ್ರದೇಶದಲ್ಲಿ ಮಣಿ, ಮಲ್ಲರೆಂಬ ಇಬ್ಬರು ದೈತ್ಯರಿದ್ದರು. ಬ್ರಹ್ಮನನ್ನು ಕುರಿತು ಅವರು ಕಠೋರವಾದ ತಪಸ್ಸು ಮಾಡಿ ಬ್ರಹ್ಮನಿಂದ ಅವಿನಾಶಿಗಳೆಂದು ವರ ಪಡೆದಿದ್ದರು. ನಂತರ ಪ್ರದೇಶದಲ್ಲಿ ಆತಂಕ ಸೃಷ್ಟಿ ಮಾಡಿದ್ದರು. ಯಜ್ಞ ಯಾಗಾದಿಗಳನ್ನು ವಿಘ್ನಗೊಳಿಸುತ್ತಿದ್ದರು. ಋಷಿ ಮುನಿಗಳನ್ನು ಹಿಂಸಿಸುತ್ತಿದ್ದರು. ಇದರಿಂದ ದೇವತೆಗಳಿಗೆ ಹವಿಸ್ಸು ಸಿಗಲಾರದೆ ವಿಷ್ಣು ಹಾಗೂ ಬ್ರಹ್ಮನ ಬಳಿ ತೆರಳಿ ಸಹಾಯ ಕೇಳಿದರು.

ಕೊನೆಗೆ ಅಲ್ಲಿಯೂ ದಾರಿ ತೋರದೆ ಶಿವನ ಬಳಿ ಹೋಗಿ ತಮ್ಮ ಚಿಂತಾಜನಕ ಪರಿಸ್ಥಿತಿಯನ್ನು ವಿವರಿಸಿದರು. ಅದಕ್ಕೆ ಶಿವನು ಸ್ಪಂದಿಸುತ್ತ ಖಂಡೋಬನಾಗಿ ಜನ್ಮ ಎತ್ತಿ ಬಂಗಾರದಂತೆ [ಬಂಗಾರದಂತಹ ಗಿರಿಧಾಮ]ಹೊಳೆಯುತ್ತ ಕುದುರೆಯ ಮೇಲೆ ಆರೂಢನಾಗಿ ಬಂದು ಮಣಿ ಮಲ್ಲರನ್ನು ಸಂಹರಿಸುತ್ತಾನೆ ಎನ್ನುತ್ತದೆ ಪೌರಾಣಿಕ ಕಥೆ.

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: jalinder jag

ಇಂದಿಗೂ ಜೆಜುರಿಯ ದೇವಸ್ಥಾನದಲ್ಲಿ ಅರಿಷಿಣವು ಎಲ್ಲೆಲ್ಲೂ ಹರಡಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಸ್ಥಳವು ಐತಿಹಾಸಿಕವಾಗಿಯೂ ಒಂದು ಪ್ರಮುಖ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಮರಾಠಾ ವೀರ ದೊರೆ ಛತ್ರಪತಿ ಶಿವಾಜಿ ಮಹಾರಾಜನು ಈ ಒಂದು ಸ್ಥಳದಲ್ಲೆ ತನ್ನ ತಂದೆಯಾದ ಶಹಾಜಿಯನ್ನು ಬಹು ಸಮಯದ ನಂತರ ಇಲ್ಲಿ ಭೇಟಿ ಮಾಡಿದ್ದನು.

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: PratibhaS Pawar

ನವಂಬರ್ ತಿಂಗಳಿನಲ್ಲಿ ಖಂಡೋಬ ದೇವರ ವಾರ್ಷಿಕೋತ್ಸವವನ್ನು ಅತಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸುತ್ತಮುತ್ತಲಿನ ಪ್ರದೇಶಗಳಿಂದ ಬಂದು ಪಾಲ್ಗೊಳ್ಳುತ್ತಾರೆ. ಅಲ್ಲದೆ ದಸರಾ ಉತ್ಸವವನ್ನೂ ಕೂಡ ಇಲ್ಲಿ ಆಚರಿಸಲಾಗುತ್ತದೆ. ವಿಶೆಶ್ಃಅವಾಗಿ ದಸರಾ ಸಂದರ್ಭದಲ್ಲಿ ಖಡ್ಗವನ್ನು ಮೇಲೆ ಎತ್ತಿ ಗರಿಷ್ಠ ಸಮಯದವರೆಗೆ ಹಿಡಿಯುವ ಸ್ಪರ್ಧೆಯಂತೂ ಆಕರ್ಷಕವಾಗಿರುತ್ತದೆ.

ವಿಶೇಷ ಲೇಖನ : ಕೊಟ್ಟಿಯೂರು ವೈಶಾಖ ಮಹೋತ್ಸವ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಚಿತ್ರಕೃಪೆ: Ashishbagate13

ಜೆಜುರಿಗೆ ಪುಣೆಯಿಂದ ಸುಲಭವಾಗಿ ತೆರಳಬಹುದಾಗಿದೆ. ರೈಲಾಗಲಿ, ಬಸ್ಸಾಗಲಿ ಪುಣೆ ನಗರದಿಂದ ಜೆಜುರಿಗೆ ತೆರಳಲು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ. ಇನ್ನು ತಂಗಲು ಬಯಸಿದರೆ ಈ ಬೆಟ್ಟ ಕ್ಷೇತ್ರದ ಸುತ್ತಮುತ್ತಲು ತಂಗುದಾಣ ಹಾಗೂ ವಸತಿ ಗೃಹಗಳು ಲಭ್ಯವಿದೆ.

ಪುಣೆಯ ಕುರಿತು ಹೆಚ್ಚಿನ ವಿವರಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X