Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಹವಾಮಾನ

ಸೋಲಾಪುರ ಹವಾಮಾನ

ಸೋಲಾಪುರ ಮಧ್ಯಮ ಹಾಗೂ ಒಣ ಹವೆಯನ್ನು ಒಳಗೊಂಡಿದೆ. ಸೋಲಾಪುರಕ್ಕೆ ಭೇಟಿ ನೀಡಲು ಚಳಿಗಾಲ ಸಕಾಲ. ಈ ಸಮಯದಲ್ಲಿ ಭೇಟಿ ನೀಡಿದರೆ ಒಂದು ಉತ್ತಮ ಅನುಭವ ನಿಮ್ಮದಾಗುತ್ತದೆನ್ನುವುದರಲ್ಲಿ ಯಾವುದೆ ಅನುಮಾನ ಬೇಡ!

ಬೇಸಿಗೆಗಾಲ

ಸೋಲಾಪುರದಲ್ಲಿ ಬೇಸಿಗೆ ಕಾಲ ಮಾರ್ಚ್ ನಿಂದ ಮೇ ವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನ ಅಧಿಕವಾಗಿರುತ್ತದೆ. ಕನಿಷ್ಠ 30 ಡಿಗ್ರಿ ಸೆಲ್ಶಿಯಸ್‌ನಿಂದ ಗರಿಷ್ಠ 40 ಡಿಗ್ರಿ ಸೆಲ್ಶಿಯಸ್‌ವರೆಗೂ ಇರುತ್ತದೆ. ಅತ್ಯಂತ ಬಿಸಿಲು ಸುಡುವ ಕಾಲ ಮೇ ಆಗಿದೆ. ಈ ಸಮಯದಲ್ಲಿ ಕ್ಷೇತ್ರಕ್ಕೆ ಪ್ರವಾಸ ಹಮ್ಮಿಕೊಳ್ಳುವುದು ಸರಿಯಾದ ಆಲೋಚನೆಯಲ್ಲ.

ಮಳೆಗಾಲ

ವಿಪರೀತ ಸುಡುವ ಬಿಸಿಲಿನಿಂದ ಕಂಗೆಟ್ಟ ನಾಗರಿಕರಿಗೆ ಸಮಾಧಾನಕರವಾಗಿ ಇಲ್ಲಿ ಮಳೆಗಾಲ ಇರುತ್ತದೆ. ವಿಪರೀತ ಸೆಖೆಗೆ ಒಂದು ಪೂರ್ಣ ವಿರಾಮ ನೀಡುತ್ತದೆ. ಜೂನ್‌ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್‌ನಲ್ಲಿ ಕೊನೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಮಳೆಗಾಲವನ್ನು ಇಷ್ಟಪಡುವವರು ಈ ಸಮಯದಲ್ಲಿ ಬೇಕಾದರೆ ಭೇಟಿ ನೀಡಬಹುದು.

ಚಳಿಗಾಲ

ಸೋಲಾಪುರಿನಲ್ಲಿ ಚಳಿಗಾಲದ ಅವಧಿ ನವೆಂಬರ್‌ ನಿಂದ ಫೆಬ್ರುವರಿ. ವರ್ಷದಲ್ಲೆ ಅತ್ಯಂತ ಅಪ್ಯಾಯಮಾನವಾದ ಕಾಲ ಇದು. ತಾಪಮಾನ ಗಣನೀಯ ಕುಸಿತ ಕಂಡು ಕನಿಷ್ಠ 10 ಡಿಗ್ರಿ ಸೆಲ್ಶಿಯಸ್‌ಗೆ ತಲುಪುತ್ತದೆ. ಈ ಸಮಯದಲ್ಲಿ ತಾಪಮಾನ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ.