Search
  • Follow NativePlanet
Share
» »ನೀವು ಡಿಸೆಂಬರ್ ನಲ್ಲಿ ಹನಿಮೂನ್ ಪ್ಲಾನ್ ಮಾಡ್ತಾ ಇದ್ದೀರಾ? ಇಲ್ಲಿವೆ ನೋಡಿ ಭಾರತದ ರೋಮ್ಯಾಂಟಿಕ್ ತಾಣಗಳು

ನೀವು ಡಿಸೆಂಬರ್ ನಲ್ಲಿ ಹನಿಮೂನ್ ಪ್ಲಾನ್ ಮಾಡ್ತಾ ಇದ್ದೀರಾ? ಇಲ್ಲಿವೆ ನೋಡಿ ಭಾರತದ ರೋಮ್ಯಾಂಟಿಕ್ ತಾಣಗಳು

ಅದ್ದೂರಿ ವಿವಾಹವು ಅತಿಥಿಗಾಳಿಗೋಸ್ಕರ ಮತ್ತು ಮಧುಚಂದ್ರವು ದಂಪತಿಗಳಿಗೆ ಎನ್ನುವ ಮಾತಿದೆ. ನವವಿವಾಹಿತರಿಗೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಇಬ್ಬರ ಜೀವನದ ಸಿಹಿ ವಿಚಾರಗಳನ್ನು ರಿವೈಂಡ್ ಮಾಡಲು ಸಮಯ ಬೇಕೆನಿಸುತ್ತದೆ.ಇದು ನವವಿವಾಹಿತರಿಗೆ ಪ್ರಣಯವನ್ನು ಪುನಃ ಪ್ರಚೋದಿಸುವ ಅವಕಾಶ ಮಾಡಿಕೊಡುತ್ತದೆ.ನಿಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆಯಲು ಪೂರ್ವಭಾವಿ ಸಿದ್ಧತೆ ಮತ್ತು ತಯಾರಿ ಮಾಡುತ್ತಿರುವಾಗ ; ಸ್ವಲ್ಪ ಸಮಯ ಕೊಟ್ಟು ಹನಿಮೂನ್ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ನೀವು ಏಕಾಂತತೆಯಿಂದ ನಿಮ್ಮ ಸಂಗಾತಿಯೊಡನೆ ಕಾಲಕಳೆಯಲು ಇಲ್ಲಿವೆ ನೋಡಿ ಭಾರತದ ಟಾಪ್ 10 ಮಧುಚಂದ್ರದ ತಾಣಗಳು.

1. ಲಕ್ಷದ್ವೀಪ

1. ಲಕ್ಷದ್ವೀಪ

ಇಲ್ಲಿನ ಪಾಕಪದ್ಧತಿ, ಪ್ರಶಾಂತತೆಯ ಭೂದೃಶ್ಯಗಳು, ಪ್ರಾಚೀನ ಕಡಲತೀರಗಳು ಮತ್ತು ಮೋಜಿನ ಜಲ ಕ್ರೀಡೆ, ಬಿಳಿ-ಮರಳು-ಸ್ಕಿರ್ಟೆಡ್ ಹವಳ ದ್ವೀಪಗಳು ಸ್ವರ್ಗಕ್ಕೆ ಒಂದೇ ಹೆಜ್ಜೆ ಎನ್ನುವ ಅನುಭವ ನೀಡುತ್ತವೆ. ನಿಮಗೆ ಗೊತಿಲ್ಲದಿರುವ ವಿಚಾರಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಅದ್ಬುತ ಕ್ಷಣಗಳನ್ನು ಅಂಚಿಕೊಳ್ಳಲು ಇದು ಉತ್ತಮ ಸ್ಥಳ. ಇಲ್ಲಿನ ಪ್ರಾಚೀನ ಕರಾವಳಿ ತೀರದಿಂದ ವನ್ಯಜೀವಿ ಇಂಡು ಮುಖಾಮುಖಿಯಾಗುವುದು ಮತ್ತು ಗುಪ್ತ ಹಾದಿಗಳನ್ನು ಎಕ್ಸ್ಪ್ಲೋರ್ ಮಾಡಲು ನಿಮಗೆ ಖಂಡಿತ ಕುತೂಹಲವೆನಿಸುತ್ತದೆ , ಈ ನೀರಿನ ಸ್ವರ್ಗವು ನಿಮ್ಮ ಅನ್ಯೋನ್ಯತೆಗೆ ಮಸಾಲೆ ಬೆರೆಸಿ ಸ್ವಾದವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

2. ಮನಾಲಿ, ಹಿಮಾಚಲ ಪ್ರದೇಶ

2. ಮನಾಲಿ, ಹಿಮಾಚಲ ಪ್ರದೇಶ

ಮಧುಚಂದ್ರದ ಸ್ಥಳಗಳಿಗೆ ಮನಾಲಿ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್, ಹೈಕಿಂಗ್, ಸ್ಕೀಯಿಂಗ್, ವೈಟ್ ವಾಟರ್ ರಾಫ್ಟಿಂಗ್, ಜೋರ್ಬಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ದಂಪತಿಗಳು ಪಾಲ್ಗೊಳ್ಳಬಹುದು. ಕಾಡಿನ ಮಧ್ಯೆ ಹಿಮದಿಂದ ಆವೃತವಾದ ಬೆಟ್ಟದ ಇಳಿಜಾರುಗಳನ್ನು ಆನಂದಿಸಿ. ಆಧ್ಯಾತ್ಮಿಕ ದಂಪತಿಗಳಿಗೆ ರಘುನಾಥ್, ಜಗ್ಗನಾತಿ ದೇವಿತ್ ಮತ್ತು ಹಡಿಂಬಾ ದೇವಾಲಯಗಳಂತಹ ಪ್ರಾಚೀನ ದೇವಾಲಯಗಳಿವೆ.ಇಲ್ಲಿರುವ ಸಿನಿಕ್ ಹಿಮಬರಿತ ಪರ್ವತಗಳು ಮತ್ತು ಸುಂದರವಾದ ನದಿಗಳು. ನಾವು ಎಷ್ಟು ಹೇಳಿದರು ಸಾಲದು ಇಲ್ಲಿನ ಅದ್ಬುತವ.

3. ಮುನ್ನಾರ್, ಕೇರಳ

3. ಮುನ್ನಾರ್, ಕೇರಳ

ಹಚ್ಚ ಹಸಿರಿನಿಂದ ಕೂಡಿದ ಮತ್ತು ವೈವಿಧ್ಯಮಯ ಭೂದೃಶ್ಯಗಳನೊಳಗೊಂಡ ಮುನ್ನಾರ್ ಪ್ರತಿಯೊಬ್ಬ ಪ್ರಕೃತಿ ಪ್ರೇಮಿ ಮತ್ತು ದಂಪತಿಗಳ ಕನಸಿನ ತಾಣವಾಗಿದೆ.ಇಲ್ಲಿನ ಹಿತವಾದ ವಾತಾವರಣ, ಆಹ್ಲಾದಕರ ತಂಗಾಳಿ ಮತ್ತು ಅದ್ಭುತ ಆಕರ್ಷಣೆಯನ್ನು ಹೊಂದಿದೆ, ನಿಮ್ಮ ಮಧುಚಂದ್ರಕ್ಕೆ ಉತ್ತಮ ಆರಂಭವನ್ನು ನೀಡುವ ಬೆಳಗ್ಗಿನ ಇಬ್ಬನಿ ಮತ್ತು ಮಂಜು ತುಂಬಿದ ನಿತ್ಯಹರಿದ್ವರ್ಣ ಬೆಟ್ಟ ಗುಡ್ಡಗಳು ಇಲ್ಲಿ ಕಾಣಸಿಗುತ್ತವೆ.ಇಲ್ಲಿನ ವಿಭಿನ್ನ ಬಗೆಯ ಆಹಾರ ಪದ್ದತಿ, ಸಂಸ್ಕೃತಿ ಬಗ್ಗೆ ಅನ್ವೇಷಣೆ ಮಾಡಬಹುದು

4. ಜೈಸಲ್ಮೇರ್, ರಾಜಸ್ಥಾನ

4. ಜೈಸಲ್ಮೇರ್, ರಾಜಸ್ಥಾನ

ನಿಮ್ಮ ಸಂಗತಿ ಜೊತೆ ಜೀವನದ ಮಹತ್ವದ ಕ್ಷಣಗಳನ್ನು ಕಳೆಯಲು, ಜೈಸಲ್ಮೇರ್ ಸೂಕ್ತ ಸ್ಥಳವಾಗಿದೆ. ಚಳಿಗಾಲದಲ್ಲಿ ಬಣ್ಣದ ದೃಶ್ಯಾವಳಿ ನಿಮ್ಮನ್ನು ಬೆರಗುಗೊಳಿಸುತ್ತದೆ .ಇಲ್ಲಿ ಸಿಗುವ ಬಿಸಿಬಿಸಿ ಜಲೀಬಿಸ್ ನೀವು ಟೇಸ್ಟ್ ಮಾಡ್ಲೆ ಬೇಕು.ಮರುಭೂಮಿಯಲ್ಲಿ ಕ್ಯಾಂಡಲ್‌ಲಿಟ್ ಡಿನ್ನರ್ ಮುಂತಾದ ಚಟುವಟಿಕೆಗಳನ್ನು ಹುಡುಕುತ್ತಿದ್ದರೆ ಖಂಡಿತವಾಗಿಯೂ ಇಲ್ಲಿಗೆ ಭೇಟಿ ಕೊಡಿ.

5. ಅಂಡಮಾನ್ ಮತ್ತು ನಿಕೋಬಾರ್

5. ಅಂಡಮಾನ್ ಮತ್ತು ನಿಕೋಬಾರ್

ಇಲ್ಲಿನ ದ್ವೀಪಗಳು, ಬೀಚ್ ನಿಮ್ಮ ಮನಸ್ಸಿನಲ್ಲಿ ಹಿಮ್ಮೆಟ್ಟುತ್ತದೆಯೇ? ಸೂರ್ಯನ ತೇವದ,ಬಿಳಿ ಮರಳಿನ ಕಡಲತೀರಗಳು, ನೀಲಿ ಕೆರೆಗಳು ನಿಮ್ಮನ್ನು ಶ್ರೀಮಂತ ಶೈಲಿಯ ಮಧುಚಂದ್ರಕ್ಕೆ ಕರೆದೊಯ್ಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಡಿಸೆಂಬರ್‌ನಲ್ಲಿ ಭೇಟಿ ನೀಡಲು ಸೂಕ್ತವಾದ ಮಧುಚಂದ್ರ ತಾಣವಾಗಿದೆ. ಚಳಿಗಾಲದಲ್ಲಿ ಆಹ್ಲಾದಕರ ಹವಾಮಾನ, ಸ್ಥಳೀಯ ಪರಿಸರ ಮತ್ತು ಬಿಸಿ ತಿನಿಸುಗಳು ನಿಮಗೆ ಅದ್ಬುತ ಅನುಭವವನ್ನು ನೀಡುತ್ತವೆ.

6. ಕಾಶ್ಮೀರ, ಜಮ್ಮು ಮತ್ತು ಕಾಶ್ಮೀರ

6. ಕಾಶ್ಮೀರ, ಜಮ್ಮು ಮತ್ತು ಕಾಶ್ಮೀರ

ಇಲ್ಲಿ ಕಾಣಸಿಗುವ ಸೊಂಪಾದ ಕಣಿವೆಗಳು, ಹೊಳೆಯುವ ಸರೋವರಗಳು, ಎತ್ತರದ ಪರ್ವತಗಳು ಮತ್ತು ಸುಂದರವಾದ ದೃಶ್ಯಾವಳಿಗಳನ್ನೂ ಒಮ್ಮೆ ನೋಡಿದರೆ ಸಾಕು ಅದು ನಿಮ್ಮ ಜೀವನಪರ್ಯಂತ ನಿಮಗೆ ನೆನಪಾಗುತ್ತದೆ.ಇಲ್ಲಿನ ವರ್ಣರಂಜಿತ ಕಾಶ್ಮೀರಿ ಜನಗಳು ಮತ್ತು ಇಳಿಜಾರಿನ ಮನೆಗಳ ಮೇಲಿನ ಹಿಮವನ್ನು ನೋಡಲು ಎರಡು ಕಣ್ಣು ಸಾಲದೆನಿಸುತ್ತದೆ.ನಿಮ್ಮ ಮಧುಚಂದ್ರಕ್ಕೆ ಹೆಚ್ಚು ಪ್ರಣಯವನ್ನು ಸೇರಿಸಲು ಶಿಖಾರಗಳಲ್ಲಿ ಉಳಿಯಲು ಆಯ್ಕೆ ಮಾಡಿಕೊಳ್ಳಿ.

7. ಡಾರ್ಜಿಲಿಂಗ್, ಪಶ್ಚಿಮ ಬಂಗಾಳ

7. ಡಾರ್ಜಿಲಿಂಗ್, ಪಶ್ಚಿಮ ಬಂಗಾಳ

ಇಲ್ಲಿನ ಹಸಿರು ಹುಲ್ಲಿನ ಉದ್ದಕ್ಕೂ ನಡೆಯುತ್ತಿದ್ದರೆ, ಸ್ವರ್ಗದಲ್ಲೇ ನಡೆದಾಡುತ್ತಿದ್ದೇವೆ ಎಂದು ನಮಗೆ ಭಾಸವಾಗುತ್ತದೆ. ಇಲ್ಲಿನ ಪ್ಲಾಂಟೇಷನ್ಸ್ ಗಳು, ಅದ್ಬುತ ಕೆಫೆಗಳು, ವಸ್ತುಸಂಗ್ರಹಾಲಯಗಳು ಡಾರ್ಜಿಲಿಂಗ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತವೆ! ನಿಮ್ಮ ಜೀವಮಾನದ ನೆನಪುಗಳನ್ನು ಕಲೆಹಾಕಲು ಸಹಾಯ ಮಾಡುತ್ತದೆ.

8. ಗೋವಾ

8. ಗೋವಾ

ನಿಮ್ಮ ಸಂಗಾತಿಯೊಂದಿಗೆ ಇಲ್ಲಿರುವ ಸಾಗರ, ಸುಂದರವಾದ ಸೂರ್ಯಾಸ್ತಗಳು ಮತ್ತು ಬೆರಗುಗೊಳಿಸುವ ಭೂದೃಶ್ಯಗಳ ಅದ್ಭುತ ನೋಟಗಳನ್ನು ಆನಂದಿಸಿ .ಇಲ್ಲಿನ ಭವ್ಯವಾದ ಅಗುವಾಡಾ ಕೋಟೆ ಯನ್ನು ನೋಡಲು ಮರೆಯದಿರಿ.ಇದು ಪ್ರಾಚೀನ ವಾಸ್ತುಶಿಲ್ಪದಿಂದ ಹಿಡಿದು ಪ್ರಕೃತಿಯವರೆಗೆ, ಮಧುಚಂದ್ರಕ್ಕೆ ಇದು ಅತ್ಯುತ್ತಮ ಸ್ಥಳವಾಗಿದೆ.

9. ಅಲೆಪ್ಪಿ, ಕೇರಳ

9. ಅಲೆಪ್ಪಿ, ಕೇರಳ

ಮಧುಚಂದ್ರಕ್ಕೆ ಶಾಂತಿಯುತ, ಪ್ರಶಾಂತ ಸ್ಥಳಗಳನ್ನು ಹುಡುಕುತ್ತಿದ್ದೀರಾ ? ಹಾಗಾದರೆ ಅಲೆಪ್ಪಿಗೆ ಭೇಟಿ ನೀಡಿ.ಎಲ್ಲಿ ನೋಡಿದರು ಹಚ್ಚ ಹಸಿರಿನಿಂದ ಕೂಡಿರುತ್ತದೆ.ಇಲ್ಲಿನ ತಾಳೆ ಮರಗಳ ನಡುವೆ ನೆಲೆಗೊಂಡಿರುವ ಹಿನ್ನೀರು ಪ್ರಶಾಂತತೆಯ ಚಿತ್ರ ಕಣ್ತುಂಬಿಕೊಳ್ಳಲೇ ಬೇಕು. ತೇಲುವ ಮನೆ ದೋಣಿಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯುವುದು ನಿಮಗೆ ಹೊಸ ಅನುಭವವನ್ನೇ ಕೊಡುತ್ತದೆ. ಇದು ಲವ್‌ಬರ್ಡ್‌ಗಳಿಗೆ ಉತ್ತಮ ತಾಣವಾಗಿದೆ.

10. ಊಟಿ

10. ಊಟಿ

ದಶಕಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಮಧುಚಂದ್ರ ತಾಣ ಇದಾಗಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ಉರುಳುವ ಬೆಟ್ಟಗಳು, ಕುಟೀರಗಳು ನವವಿವಾಹಿತರನ್ನು ಆಕರ್ಷಿಸುತ್ತವೆ.ಇಲ್ಲಿನ ಗುಲಾಬಿ ಆರ್ಕಿಡ್‌ಗಳು, ಟ್ರಿಮ್ ಮಾಡಿದ ಚಹಾ ತೋಟಗಳು ಮತ್ತು ಅದ್ಭುತ ಹವಾಮಾನವು ತಮ್ಮ ಪ್ರಣಯವನ್ನು ಪ್ರಚೋದಿಸಲು ನೆರವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X