Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಹವಾಮಾನ

ಮನಾಲಿ ಹವಾಮಾನ

ಮಾರ್ಚ್ ನಿಂದ ಜೂನ್‌ ನಡುವಿನ ಸಮಯ ಮನಾಲಿ ಪ್ರವಾಸಕ್ಕೆ ಸಕಾಲ. ಇದೆ ಸಮಯದಲ್ಲಿ ಇಲ್ಲಿಗೆ ಬಂದರೆ ಪ್ರವಾಸದ ಸುಮಧುರ ಅನುಭವ ಪಡೆಯಬಹುದು ಎಂದು ಸಲಹೆ ನೀಡಲಾಗುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್‌): ಬೇಸಿಗೆ ಕಾಲವು ಮನಾಲಿಯಲ್ಲಿ ಮಾರ್ಚ್ ನಲ್ಲಿ ಆರಂಭವಾಗುತ್ತದೆ ಹಾಗು ಜೂನ್‌ವರೆಗೂ ಇದು ಮುಂದುವರಿಯುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ತಾಪಮಾನ 25 ಡಿಗ್ರಿ ಸೆಲ್ಶಿಯಸ್‌ ದಾಖಲಾದರೆ ಕನಿಷ್ಠ 10 ಡಿಗ್ರಿ ಸೆಲ್ಶಿಯಸ್‌ ದಾಖಲಾಗುತ್ತದೆ. ಆರಂಭದಲ್ಲಿ ಹೆಚ್ಚಿರುವ ತಾಪಮಾನ ಕೊನೆಯ ದಿನಗಳಲ್ಲಿ ಕಡಿಮೆ ಆಗುತ್ತಾ ಸಾಗುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಜುಲೈ ಕೊನೆಯಲ್ಲಿ ಮನಾಲಿಯಲ್ಲಿ ಮಳೆಗಾಲ ಆರಂಭವಾಗುತ್ತದೆ. ಇದು ಸೆಪ್ಟೆಂಬರ್‌ ಕೊನೆಯವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ಬರದಿರಲು ಪ್ರವಾಸಿಗರಿಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ವಿಪರೀತ ಮಳೆ ಸುರಿಯುವ ಜತೆಗೆ ರಸ್ತೆಯೂ ಹಾಳಾಗಿರುತ್ತದೆ.

ಚಳಿಗಾಲ

(ಅಕ್ಟೋಬರ್‌ನಿಂದ ಫೆಬ್ರವರಿ): ಅಕ್ಟೋಬರ್‌ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಶಿಯಸ್‌ಗೆ ತಲುಪುತ್ತದೆ.