Search
  • Follow NativePlanet
Share
» »ಬೇಸಿಗೆಯ ರಜಾದಿನಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಐತಿಹಾಸಿಕ ಹೆಗ್ಗುರುತುಗಳು

ಬೇಸಿಗೆಯ ರಜಾದಿನಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಐತಿಹಾಸಿಕ ಹೆಗ್ಗುರುತುಗಳು

ಕರ್ನಾಟಕದಲ್ಲಿ ಅಸಂಖ್ಯಾತ ಸಂಖ್ಯೆಯ ಕೋಟೆಗಳು, ದೇವಾಲಯ್ಗಳು, ವರ್ಣಚಿತ್ರಗಳು, ಸ್ಮಾರಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತದ ವೈವಿಧ್ಯಮಯ ಇತಿಹಾಸವನ್ನು ಪ್ರತಿಬಿಂಬಿಸುತ್ತಾ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕರ್ನಾಟಕವು ಬಾಹ್ಯ ಸಂಸ್ಕೃತಿಗಳೊಂದಿಗೂ ಕೂಡ ಸಹ ಅಸ್ತಿತ್ವದಲ್ಲಿತ್ತು ಕಾಲಾನಂತರ ಪರಿರ್ವರ್ತನೆಗೊಳ್ಳುತ್ತಾ ನಾವು ಇಂದು ನೋಡುತ್ತಿರುವ ರಾಜ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿರುವ ಸ್ಮಾರಕಗಳು ಇತಿಹಾಸಪ್ರಿಯರಿಗೆ ಸ್ವರ್ಗವೇ ಎನ್ನಬಹುದು.

ಕರ್ನಾಟಕಕ್ಕೆ ಭೇಟಿ ಕೊಡುವುದು ಮತ್ತು ಇಲ್ಲಿಯ ಗತಕಾಲದ ಸಂಗತಿಗಳನ್ನು ತಿಳಿದುಕೊಳ್ಳುವುದು ಇತಿಹಾಸಕಾರರ ಒಂದು ಕನಸು. ಇದಕ್ಕಾಗಿ ನಿಮಗಾಗಿ ಕರ್ನಾಟಕದಲ್ಲಿ ಬೇಸಿಗೆಯ ರಜಾದಿನಗಳಲ್ಲಿ ಪ್ರವಾಸ ಮಾಡಬಹುದಾದ ಕೆಲವು ಐತಿಹಾಸಿಕ ಹೆಗ್ಗುರುತುಗಳ ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.

pattadkal

ಪಟ್ಟದಕಲ್

ಪಟ್ಟದಕಲ್, "ಸಿಟಿ ಆಫ್ ದಿ ಕ್ರೌನ್ ರೂಬೀಸ್" ಅಥವಾ ಕನ್ನಡದಲ್ಲಿ" ಎಂದು ಹೆಮ್ಮೆಯಿಂದ ಕರೆಸಿಕೊಳ್ಳುವ ಈ ಸ್ಥಳವು ಕೇವಲ ಕರ್ನಾಟಕದ ಐತಿಹಾಸಿಕ ಹೆಗ್ಗುರುತು ಮಾತ್ರವಲ್ಲದೆ ಚಾಲುಕ್ಯರ ಹೆಸರಾಂತ ಹಾಗೂ ಅದ್ಬುತ ಸ್ಮಾರಕಗಳಿಂದಾಗಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿಯೂ ಸ್ಥಾನವನ್ನು ಪಡೆದಿದೆ. ಪಟ್ಟದಕಲ್ ಮಲಪ್ರಭಾ ನದಿ ದಂಡೆಯ ಮೇಲಿರುವ ಒಂದು ಹಳ್ಳಿಯಾಗಿದ್ದು ಈ ಸ್ಥಳವು ಹತ್ತು ಅತ್ಯಂತ ಸುಂದರವಾದ ದೇವಾಲಯಗಳನ್ನೊಳಗೊಂಡಿದೆ.

ಮೇಲುಕೋಟೆ, ಮಂಡ್ಯಾ

ಮೇಲುಕೋಟೆಯು ಮಂಡ್ಯಾ ಜಿಲ್ಲೆಯಲ್ಲಿದ್ದು ಕರ್ನಾಟಕದ ಅತ್ಯಂತ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಯದುಗಿರಿಯ ಕಲ್ಲಿನ ಬೆಟ್ಟಗಳ ಮೇಲೆ ನೆಲೆಸಿರುವ ಈ ಮೇಲುಕೋಟೆಯು ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ನಗರವು ಹಲವಾರು ದೇವಾಲಯಗಳು ಮತ್ತು ಸರೋವರಗಳಿಗೆ ನೆಲೆಯಾಗಿದೆ. ಇದು ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್ ಅನ್ನು ಸಹ ಹೊಂದಿದ್ದು, ಇಲ್ಲಿ ಸಾವಿರಾರು ಸಂಸ್ಕೃತ ಮತ್ತು ವೈದಿಕ ಹಸ್ತಪ್ರತಿಗಳ ಸಂಗ್ರಹವನ್ನು ಒಳಗೊಂಡಿದೆ

ಬಿಜಾಪುರ ಕೋಟೆ, ಬಿಜಾಪುರ

ದಕ್ಷಿಣ ಭಾರತದ ಆಗ್ರಾ ಎಂದೂ ಕರೆಯಲ್ಪಡುವ ಬಿಜಾಪುರವು ಕರ್ನಾಟಕದ ಅತ್ಯಂತ ಹೆಸರಾಂತ ಐತಿಹಾಸಿಕ ಹೆಗ್ಗುರುತುಗಳನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ಬಿಜಾಪುರ ನಗರದಲ್ಲಿ ಈ ಭವ್ಯವಾದ ಬಿಜಾಪುರ ಕೋಟೆಯು ನೆಲೆಸಿದೆ. ಇದನ್ನು ಶಹಾ ಸಾಮ್ರಾಜ್ಯದ ಅರಸನಾದ ಯೂಸುಫ್ ಆದಿಲ್ ನಿಂದ 1566 ರಲ್ಲಿ ನಿರ್ಮಿತವಾಯಿತು. ಇದು ವಿಶಾಲವಾದ ವಿಸ್ತಾರದಲ್ಲಿ ಹರಡಿದೆ ಮತ್ತು ೫೦ ಅಡಿ ದೊಡ್ಡ ಕಂದಕದೊಳಗೆ ಸುತ್ತುವರೆದಿದೆ.

belur

ಬೇಲೂರು, ಹಾಸನ

ಯಗಾಜಿ ನದಿಯ ದಡದಲ್ಲಿರುವ ಬೇಲೂರು ಒಂದು ದೇವಾಲಯ ಪಟ್ಟಣವಾಗಿದೆ ಮತ್ತು ಇದು ಭಾರತೀಯ ಸಾಂಸ್ಕೃತಿಕ ಪರಂಪರೆಯ ಒಂದು ಆಭರಣವೆಂದೇ ಪ್ರಸಿದ್ದವಾಗಿದೆ. ವಿಷ್ಣು ದೇವರಿಗೆ ಅರ್ಪಿತವಾದ ಚೆನ್ನಕೇಶವ ದೇವಾಲಯವು ಬೇಲೂರಿನ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಹೊಯ್ಸಳ ರಾಜ ವಿಷ್ಣುದೇವನ ಪತ್ನಿ ಶಾಂತಲಾದೇವಿಯಿಂದ ನಿರ್ಮಿಸಲ್ಪಟ್ಟಿತು ಮತ್ತು ದೇವಾಲಯದ ಸಂಕೀರ್ಣ ವಾಸ್ತುಶಿಲ್ಪವು ಹಸಿರು ಸೋಪ್ ಸ್ಟೋನ್ ನಿಂದ ಕೆತ್ತಿದ ಗೋಡೆಗಳನ್ನು ಹೊಂದಿದೆ.

ಬೆಳವಾಡಿ, ಚಿಕ್ಕಮಗಳೂರು

ಒಂದು ಸಣ್ಣಹಳ್ಳಿಯಲ್ಲಿ ಮನಮೋಹಕ ದೇವಾಲಯಗಳು ಇದು ಕರ್ನಾಟಕದ ಚಿಕ್ಕಮಗಳೂರಿನ ಬೆಳವಾಡಿಯ ದೃಶ್ಯ. ಬೆಳವಾಡಿ ಮತ್ತು ಅದರ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಎಲ್ಲಾ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿವೆ ಮತ್ತು ಇವು ಚಕ್ರವ್ಯೂಹದ ಕೆತ್ತನೆಗಳನ್ನು ಹೊಂದಿವೆ. ವಿಷ್ಣುವಿಗೆ ಸಮರ್ಪಿತವಾಗಿರುವ ವೀರನಾರಾಯಣ ದೇವಸ್ಥಾನವು ಅತ್ಯಂತ ಪ್ರಸಿದ್ಧವಾದ ರಚನೆಯಾಗಿದೆ. ದೇವಾಲಯದ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೆಂದರೆ, ಪ್ರತಿ ವರ್ಷ ಮಾರ್ಚ್ 23 ರಂದು ಸೂರ್ಯನ ಕಿರಣಗಳು ನೇರವಾಗಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುತ್ತದೆ.

mysorepalacedone

ಮೈಸೂರು ಅರಮನೆ, ಮೈಸೂರು

ಮೈಸೂರಿನ ಹೃದಯ ಭಾಗದಲ್ಲಿ ಚಾಮುಂಡಿ ಬೆಟ್ಟದ ಪೂರ್ವಕ್ಕೆ ಮುಖ ಮಾಡಿರುವ ರಾಜ ಮೈಸೂರು ಅರಮನೆ ಇದೆ. ಇದು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿದೆ ಮತ್ತು ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ, ವಾರ್ಷಿಕವಾಗಿ 8 ಮಿಲಿಯನ್ ಪ್ರಯಾಣಿಕರು ಭೇಟಿ ನೀಡುತ್ತಾರೆ.

ಬೀದರ್ ಕೋಟೆ , ಬೀದರ್

ಬೀದರ್ ಕೋಟೆಯು ಐತಿಹಾಸಿಕ ಕರ್ನಾಟಕದ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದು ಆರಂಭಿಕ ದಕ್ಷಿಣ ಭಾರತದ ರಾಜವಂಶದ ಅಧಿಕೃತ ವಾಸ್ತುಶಿಲ್ಪದ ವೈಭವವನ್ನು ಹೊಂದಿದೆ. ಈ ಕೋಟೆಯನ್ನು ಈಗ ಭಾರತದ ಅಸಾಧಾರಣ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯ ಮೂಲ ಸ್ವರೂಪವನು ಕಳೆದುಕೊಂಡಿದ್ದರೂ ಸಹ ಈ ಬೃಹತ್ ಕೋಟೆಯು ರೋಮಾಂಚಕ ಇತಿಹಾಸವನ್ನು ಹೊಂದಿದೆ ಮತ್ತು ಕಾಕತೀಯರು, ಚಾಲುಕ್ಯರು, ಸತ್ವಾಹನರು ಮತ್ತು ಯಾದವರು ಸೇರಿದಂತೆ ಮೊಘಲರು ಮತ್ತು ನಿಜಾಮರು ಸೇರಿದಂತೆ ಹಲವಾರು ರಾಜವಂಶಗಳ ಆರೋಹಣ ಮತ್ತು ಪತನವನ್ನು ಈ ಕೋಟೆಯು ನೋಡಿದೆ ಎಂದು ಹೇಳಲಾಗುತ್ತದೆ.

ಬಾದಾಮಿ, ಬಾಗಲ್ ಕೋಟೆ

ಬಾದಾಮಿಯ ಗುಹಾಂತರ ದೇವಾಲಯಗಳು ನೋಡುಗರಿಗೆ ಅತ್ಯಂತ ಅದ್ಬುತವಾದ ನೋಟವನ್ನು ನೀಡುತ್ತದೆ. ಇಲ್ಲಿ ನಾಲ್ಕು ಹಿಂದು ದೇವಾಲಯಗಳನ್ನು ಒಳಗೊಂಡಿದ್ದು, ಇದನ್ನು ಭಾರತದ ಅತ್ಯಂತ ಅದ್ಬುತವಾದ ಕಲ್ಲಿನಲ್ಲಿ ಕೆತ್ತಲಾದ ವಾಸ್ತುಶಿಲ್ಪವೆಂದು (ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ) ಪರಿಗಣಿಸಲಾಗಿದೆ ಮತ್ತು ಇದಕ್ಕೆ 7ನೇ ಶತಮಾನಗಳಷ್ಟು ಹಳೆಯ ಇತಿಹಾಸವಿದೆ. ಇಲ್ಲಿರುವ ಪ್ರತಿಯೊಂದೂ ಗುಹಾಂತರ ದೇವಾಲಯಗಳೂ ವಿಭಿನ್ನವಾದ ವಿಷಯಗಳನ್ನು ಒಳಗೊಂಡಿದೆ ಮತ್ತು ಹಿಂದೂ ದೇವರುಗಳ ಮೂರ್ತಿಗಳನ್ನು ಹೊಂದಿದ್ದು ವಿಹಾರಾರ್ಥಿಗಳು ಮತ್ತು ಹಿಂದೂ ಭಕ್ತರಿಗೆ ಅನ್ವೇಷಣೆಗೆ ಬೇಕಾದಂತಹ ಹಲವಾರು ವಿಷಯಗಳನ್ನು ಒಳಗೊಂಡಿದೆ.

hampi

ಹಂಪಿ, ಬಳ್ಳಾರಿ

ಹಂಪೆಯು ಪುರಾತತ್ವದ ಅವಶೇಷಗಳನ್ನು ಹಲವಾರು ಭಾಗಗಳಲ್ಲಿ ವಿಂಗಡಿಸುತ್ತದೆ ಇಡೀ ಹಂಪೆಯನ್ನು ಪರಿಶೋಧಿಸಲು ಒಂದು ದಿನ ಸಾಲದು ಹಂಪೆಯ ಸ್ಮಾರಕಗಳನ್ನು ಹಿಂದು, ಮುಸಲ್ಮಾನರು ಮತ್ತು ಜೈನರದ್ದು ಎಂದು ವಿಭಜಿಸಲಾಗಿದ್ದು, ಇವುಗಳಲ್ಲಿ ದೇವಾಲಯಗಳು, ಬೆಟ್ಟದ ಗೋಪುರಗಳು, ಆನೆ ಆಶ್ರಯಗಳು, ಮಸೀದಿಗಳು ಮತ್ತು ಸಮಾಧಿ, ಸ್ಮಾರಕಗಳು, ನೀರಿನ ಜಲಾಶಯ, ಕಾರಂಜಿಗಳು ಮತ್ತು ಸಮುದಾಯ ಅಡಿಗೆಮನೆಗಳು ಇತ್ಯಾದಿಗಳನ್ನು ಕಾಣಬಹುದಾಗಿದೆ.

ಗೋಲ್ ಗುಂಬಾಜ್, ಬಿಜಾಪುರ

ಕರ್ನಾಟಕದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಐತಿಹಾಸಿಕ ಹೆಗ್ಗುರುತುಗಳಲ್ಲಿ ಒಂದಾದ ಗೋಲ್ ಗುಂಬಜ್ ರಾಜ ಮೊಹಮ್ಮದ್ ಆದಿಲ್ ಷಾ ಅವರ ಸಮಾಧಿಯಾಗಿದೆ. ಸಮಾಧಿಯನ್ನು 1626 ರಲ್ಲಿ ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು 1656 ರಲ್ಲಿ ಪೂರ್ಣಗೊಂಡಿತು. ಇದು ಅತ್ಯುತ್ತಮ ಡೆಕ್ಕನ್ ವಾಸ್ತುಶಿಲ್ಪದ ಶೈಲಿಯನ್ನು ಪ್ರದರ್ಶಿಸುತ್ತದೆ ಮತ್ತು ಗೋಲ್ ಗೊಂಬದ್ ಅಂದರೆ ವೃತ್ತಾಕಾರದ ಗುಮ್ಮಟವಿರುವ ಕಾರಣದಿಂದ ಇದನ್ನು ಈ ರೀತಿಯಾಗಿ ಹೆಸರಿಸಲಾಗಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X