Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಲೂರು » ಹವಾಮಾನ

ಬೇಲೂರು ಹವಾಮಾನ

ಭೇಟಿ ನೀಡಲು ಚಳಿಗಾಲವು ಅತ್ಯುತ್ತಮವಾದ ಕಾಲವಾಗಿದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಬೇಸಿಗೆಕಾಲದಲ್ಲಿ ಇಲ್ಲಿನ ಉಷ್ಣಾಂಶ 38 ಡಿಗ್ರಿ ಸೆ.ವರೆಗೂ ಏರಿರುತ್ತದೆ. ಕಡಿಮೆ ಎಂದರೆ 29 ಡಿ.ಸೆ. ಇಳಿಕೆಯಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಿನ ಬಿಸಿಲಿನ ತಾಪ ಇಲ್ಲಿರುವುದರಿಂದ ಬೇಸಿಗೆ ಕಾಲದಲ್ಲಿ ಪ್ರವಾಸಿಗರಿಗೂ ಇಲ್ಲಿಗೆ ಬರುವುದನ್ನು ಮುಂದೆ ಹಾಕುವುದೇ ಒಳ್ಳೆಯದು.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಮಳೆಗಾಲದಲ್ಲಿ ಹೆಚ್ಚಿನ ಮಳೆ ಈ ಪ್ರದೇಶದಲ್ಲಿ ಆಗುತ್ತಿರುತ್ತದೆ ಈ ಮಳೆಯೂ ಕೂಡ ಗುಡುಗು ಸಿಡಿಲಿನಿಂದ ಕೂಡಿರುವುದು ವಿಶೇಷ. ಈ ಸಮಯದಲ್ಲಿ ಬೇಲೂರಿನಲ್ಲಿ ಹೊರಗಡೆ ಓಡಾಡಲು ಆಗದೇ ಪ್ರವಾಸಿಗರು ಪರಿತಪಿಸಬೇಕಾಗುತ್ತದೆ. ಕಾರಣ ಮಳೆಗಾಲದಲ್ಲಿ ಪ್ರವಾಸದ ಮಜ ಅನುಭವಿಸಲು ಆಗದೇ ಇರುವುದರಿಂದ ಈ ಸಮಯದಲ್ಲಿ ಭೇಟಿ ನೀಡದಿರುವುದೇ ಲೇಸು.

ಚಳಿಗಾಲ

(ನವೆಂಬರ್ ನಿಂದ ಡಿಸೆಂಬರ್): ಚಳಿಗಾಲದ ಸಮಯದಲ್ಲಿ ಹಿತಕರ ಅನುಭವ ನೀಡುವ ಚಳಿಗಾಲ ಬೇಲೂರಿನಲ್ಲಿರುತ್ತದೆ. ಆಗ ಕನಿಷ್ಠ ಉಷ್ಣಾಂಶ 21 ಡಿ.ಸೆ.ಇದ್ದರೆ ಗರಿಷ್ಠ 29 ಡಿ.ಸೆ.ವರೆಗೆ ಇರುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಬೇಲೂರಿಗೆ ಭೇಟಿ ನೀಡುತ್ತಾರೆ. ಉತ್ತಮ ಹವಾಮಾನದಲ್ಲಿ ಬೇಲೂರಿನ ಕಲ್ಲಿನ ಕೆತ್ತನೆಯ ದೇವಸ್ಥಾನಗಳ ಸೌಂದರ್ಯ ಸವಿಯುವುದೇ ಒಂದು ಅವಿಸ್ಮರಣೀಯ ಕ್ಷಣವಾಗುತ್ತದೆ.