Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಹವಾಮಾನ

ಬಾದಾಮಿ ಹವಾಮಾನ

ಬಾದಾಮಿಯನ್ನು ಸಂದರ್ಶಿಸಲು ಸೂಕ್ತ ಸಮಯವೆಂದರೆ ಸೆಪ್ಟೆಂಬರ್ ನಿಂದ ಫೆಬ್ರವರಿಯ ತಿಂಗಳುಗಳು. ಈ ಸಮಯದಲ್ಲಿ ವಾತಾವರಣವು ಹಿತವಾಗಿದ್ದು ಸುತ್ತಿ ನೋಡಲು ಸರಿ ಹೊಂದುತ್ತದೆ.  ಜುಲೈ ಮತ್ತು ಆಗಸ್ಟ್ ಕೂಡ ಹೊಂದಬಲ್ಲ ವಾತಾವರಣವಿದ್ದು ಹೆಚ್ಚಿನ ಮಳೆಯು ಕೆಲವು ಬಾರಿ ನಿಮ್ಮ ಯೋಜನೆಯನ್ನು ಹಾಳುಮಾಡಬಹುದು.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ : ಬೇಸಿಗೆಯು ಹೆಚ್ಚು ಬಿಸಿಲಿನಿಂದ ಕೂಡಿದ್ದು ಉಷ್ಣಾಂಶವು 45 ಡಿಗ್ರಿ ಮುಟ್ಟುತ್ತದೆ.  ಉರಿ ಬಿಸಿಲಿನ ಕಾರಣದಿಂದ ಪ್ರವಾಸಿಗರು ಬೇಸಿಗೆಯಲ್ಲಿ ಬಾದಾಮಿಗೆ ಬರುವವಾರ ಸಂಖ್ಯೆ ಬಹಳ ಕಡಿಮೆ.  ಅದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇದು ಸಾಮಾನ್ಯ..

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ : ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ಮಳೆಯನ್ನು ಬಾದಾಮಿ ಕಾಣುತ್ತದೆ , ವಾತಾವರಣವೂ ಹಿತಕರವಾಗಿದ್ದು ಪರಿಸರವು ಸುಂದರವಾಗಿ ಕಾಣುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿ : ಬಾದಾಮಿಯ ಚಳಿಗಾಲವು ಅತ್ಯಂತ ತಂಪಾಗಿದ್ದು ಬಹಳಷ್ಟು ಸುಖಾನುಭಾವ ನೀಡುತ್ತದೆ. ಚಳಿಗಾಲದ ರಾತ್ರಿಗಳು ಉಷ್ಣಾಂಶದಲ್ಲಿ 15 ಡಿಗ್ರಿ ಯಷ್ಟು ಇಳಿಕೆಯನ್ನು ಕಾಣುತ್ತದೆ.   ಅದೇ ಸಮಯದ ದಿನದ ಉಷ್ಣಾಂಶವು 29 ಡಿಗ್ರಿವರೆಗೂ ಏರುತ್ತದೆ.