Search
  • Follow NativePlanet
Share
» »ಕರ್ನಾಟಕದ ಅದ್ಭುತ ಕಡಲ ತೀರಗಳು!

ಕರ್ನಾಟಕದ ಅದ್ಭುತ ಕಡಲ ತೀರಗಳು!

By Vijay

ಚಳಿಗಾಲದಲ್ಲಿ ಸಾಮಾನ್ಯವಾಗಿ ಗಿರಿಧಾಮಗಳಿಗಿಂತಲೂ ಹೆಚ್ಚು ಹೆಚ್ಚಾಗಿ ಜನರು/ಪ್ರವಾಸಿಗರು ಕಡಲ ತೀರಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಅದು ಸಮಂಜಸವೂ ಹೌದು. ಏಕೆಂದರೆ, ಈ ಸಮಯದಲ್ಲಿ ಕಡಲ ತೀರಗಳ ಕರಾವಳಿ ಪ್ರದೇಶಗಳಲ್ಲಿ ಉಷ್ಣತೆಯು ಗಣನೀಯವಾಗಿ ಕಡಿಮೆಯಿರುವುದಲ್ಲದೆ ತೇವಾಂಶವು ಸಹ ಕುಗ್ಗಿರುತ್ತದೆ.

ಅಲ್ಲದೆ, ಹಿತಕರವಾದ ವಾತಾವರಣದಲ್ಲಿ ವಿಶಾಲವಾದ ಕಡಲ ನೋಟವನ್ನು ಆಸ್ವಾದಿಸುತ್ತ, ಉತ್ತಮವಾದ ಸಮಯ ಕಳೆಯುವುದೆಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಕೆಲವರಿಗೆ ಸಮುದ್ರ ನೀರಿನಲ್ಲಿ ಆಟವಾಡುವ ಬಯಕೆ ಇದ್ದರೆ ಇನ್ನೂ ಹಲವರಿಗೆ ತೀರದ ಮೇಲಿರುವ ಮರಳಿನ ರಾಶಿಯಲಿ ಹಾಯಾಗಿ ಕುಳಿತು ವಿಶ್ರಾಂತಿ ಪಡೆಯುವುದೆಂದರೆ ಎಲ್ಲಿಲ್ಲದ ಸಂತಸ.

ಕರ್ನಾಟಕದ ಸುಂದರ ಕಡಲ ತೀರ ಮರವಂತೆ

ಇನ್ನೂ ಕೆಲವರಿಗೆ ಬೆಳಗಿನ ಸೂರ್ಯ ಕಿರಣಗಳು ಬಹು ತೀಕ್ಷಣವಾಗಿರದೆ ಇರುವುದರಿಂದ ರಾತ್ರಿಯಿಂದ ಗಡ ಗಡ ಮಡುಗಟ್ಟಿದ ಮೈಯನ್ನು ಹಗುರವಾಗಿ ಕಾಯಿಸಿಕೊಳ್ಳುವುದೆಂದರೆ ಬಲು ಇಷ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ ಕಡಲ ತೀರಗಳು ಮೊದಲಿನಿಂದಲೂ ಪ್ರವಾಸ ಮಾಡಬಯಸುವ ಪ್ರಮುಖ ತಾಣಗಳು.

ಮಹಾರಾಷ್ಟ್ರ, ಕೇರಳ, ಗೋವಾಗಳಂತೆ ಕರ್ನಾಟಕದಲ್ಲೂ ಸಹ ಕೆಲವು ವಿಶೇಷವಾದ ಕಡಲ ತೀರಗಳಿವೆ. ವರ್ಷದ ಎಲ್ಲ ಸಮಯದಲ್ಲೂ ಈ ಕಡಲ ತೀರಗಳಿಗೆ ಸಾಮಾನ್ಯವಾಗಿ ಭೇಟಿ ನೀಡುತ್ತಾರಾದರೂ ಚಳಿಗಾಲದಲ್ಲಿ ಈ ಸಮುದ್ರ ತೀರಗಳು ವಿಶೇಷವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಾಗಾದರೆ ಕಾರ್ನಾಟಕದಲ್ಲಿ ಯಾವೆಲ್ಲ ಸುಂದರವಾದ ಕಡಲ ತೀರಗಳಿವೆ ಎಂದು ತಿಳಿಯೋಣವೆ? ಈ ಲೇಖನ ಓದಿ.

ಟ್ಯಾಗೋರ್ ಕಡಲ ತೀರ

ಟ್ಯಾಗೋರ್ ಕಡಲ ತೀರ

ಕರ್ನಾಟಕದ ಮಟ್ಟಿಗೆ ಕೊಂಕೊಣ ಕರಾವಳಿಯ ರಾಣಿ ಎಂದೆ ಗುರುತಿಸಲ್ಪಡುತ್ತದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ. ಒಂದೆಡೆ ಕಾಳಿ ನದಿ ಹಾಗೂ ಇನ್ನೊಂದೆಡೆ ಸುಂದರ ಅರಬ್ಬಿ ಸಮುದ್ರ ಹೊಂದಿರುವ ಕಾರವಾರ ನಗರವು ಪ್ರಶಾಂತಮಯ ಹಾಗೂ ಸುಂದರವಾದ ಕಡಲ ತೀರಗಳಿಗೆ ಪ್ರಸಿದ್ಧಿ ಪಡೆದಿದೆ. ಕಾರವಾರದಲ್ಲಿರುವ ಟ್ಯಾಗೋರ್ ಕಡಲ ತೀರ. ಇದು ಕಾರವಾರ ಕಡಲ ತೀರ ಎಂದೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Ayan Mukherjee

ದ್ವೀಪ

ದ್ವೀಪ

ದೇವ್ ಬಾಗ ಕಡಲ ತೀರ ಕಾರವಾದಲ್ಲಿ ನೋಡಬಹುದಾದ ಒಂದು ಆಕರ್ಷಕ ದ್ವೀಪ ತೀರವಾಗಿದ್ದು ಅದ್ಭುತವಾಗಿ ಕಂಡುಬರುತ್ತದೆ. ಅರಬ್ಬಿ ಸಮುದ್ರದ ಸುಂದರತೆಯನ್ನು ಸೂಕ್ಷಮವಾಗಿ ಗಮನಿಸಬಹುದಾದ ಅದ್ಭುತ ಕಡಲ ತೀರ ಇದಾಗಿದೆ.

ಚಿತ್ರಕೃಪೆ: Akash_Kurdekar

ಐತಿಹಾಸಿಕ

ಐತಿಹಾಸಿಕ

ಕಾರವಾರದಲ್ಲಿರುವ ಒಂದು ಐತಿಹಾಸಿಕ ಆಕರ್ಷಣೆ ಸದಾಶಿವಗಡ್ ಕೋಟೆ. ಈ ಕೋಟೆಯ ಬಳಿಯಿರುವ ಸುಂದರ ಕಡಲ ತೀರವು ಕೋಟೆಯ ಮೇಲಿನಿಂದ ನೋಡಿದಾಗ ಅದ್ಭುತವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Ayan Mukherjee

ಅಮೋಘ

ಅಮೋಘ

ತಿಲ್ ಮಾಟಿ : ತಿಲ್ ಮಾಟಿ ಅಥವಾ ತಿಲ್ ಮಟ್ಟಿ/ತಿಲ್ಮಟ್ಟಿ ಕರ್ನಾಟಕದ ಕಾರವಾರದಲ್ಲಿರುವ ಬಹುತೇಕ ಜನರಿಗೆ ತಿಳಿಯದಾದ ಸುಂದರ ಕಡಲ ತೀರವಾಗಿದೆ. ಏಕಾಂತ ಬಯಸುವ ಪ್ರವಾಸಿಗರಿಗೆ ಇದೊಂದು ಆದರ್ಶಮಯ ಕಡಲ ತೀರವಾಗಿದೆ. ಕಾರವಾರ ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಮಜಲಿಯಿಂದ ಒಂದು ಕಿ.ಮೀ ಚಾರಣದ ಮೂಲಕ ಈ ಕಡಲತಡಿಯನ್ನು ತಲುಪಬಹುದಾಗಿದೆ. ಇದು ಕರ್ನಾಟಕ-ಗೋವಾದ ಗಡಿಗಳ ಬಳಿ ಸ್ಥಿತವಿದೆ.

ಚಿತ್ರಕೃಪೆ: Abhijeet Rane

ಕಪ್ಪು ಎಳ್ಳು

ಕಪ್ಪು ಎಳ್ಳು

ಈ ಕಡಲ ತೀರದ ವಿಶಿಷ್ಟತೆಯೆಂದರೆ ಇದರ ನೂರು ಮೀ. ಉದ್ದದ ಈ ಕಡಲ ತೀರದ ಮರಳು ಮಾತ್ರ ಕಪ್ಪು ಬಣ್ಣದಿಂದ ಕೂಡಿದ್ದು ಕಣಗಳು ಅಕ್ಷರಶಃ ಎಳ್ಳಿನ ಆಕಾರದಲ್ಲಿವೆ. ತಿಲ್ ಎಂದರೆ ಎಳ್ಳು ಎಂತಲೂ ಮಾಟಿ ಎಂದರೆ ಮರುಳು/ಮಣ್ಣು ಎಂತಲೂ (ಮರಾಠಿ ಹಾಗೂ ಕೊಂಕಣಿಗಳಲ್ಲಿ) ಅರ್ಥ ಬರುವುದರಿಂದ ಇದಕ್ಕೆ ತಿಲ್ ಮಾಟಿ ಅಥವಾ ತಿಲ್ ಮಟ್ಟಿ ಅಥವಾ ತಿಲ್ಮಟ್ಟಿ ಕಡಲ ತೀರ ಎಂಬ ಹೆಸರು ಬಂದಿದೆ. ಕಾರವಾರ ನಗರ ಕೇಂದ್ರದಿಂದ ಮಜಲಿಯವರೆಗೆ ವಾಹನಗಳಿದ್ದು ಮಜಲಿಯಿಂದ ಒಂದು ಕಿ.ಮೀ ಚಿಕ್ಕದಾದ ದಿಬ್ಬುಗಳ ಮೂಲಕ ಚಾರಣ ಮಾಡುತ್ತ ತಲುಪಬಹುದು.

ಚಿತ್ರಕೃಪೆ: Abhijeet Rane

ಉತ್ತರ ಕನ್ನಡ

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಂಕೋಲ ತನ್ನದೆ ಆದ ವಿಶಿಷ್ಟ ಪ್ರಬೇಧದ ಇಶಾದ್ ಮಾವಿನ ಹಣ್ಣು ಹಾಗೂ ಗೋಡಂಬಿ ಹಣ್ಣುಗಳಿಗೆ ಪ್ರಸಿದ್ಧವಾಗಿದೆ. ಅಲ್ಲದೆ ಇಲ್ಲಿರುವ ಕಡಲ ತೀರವೂ ಸಹ ಸಾಕಶ್ಟು ನಯನ ಮನೋಹರವಾಗಿದೆ.

ಚಿತ್ರಕೃಪೆ: Rohan Dhule

ಅದ್ಭುತ

ಅದ್ಭುತ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣ ಒಂದು ಪ್ರಸಿದ್ಧ ಪ್ರವಾಸಿ ಕ್ಷೇತ್ರ. ಕೇವಲ ಕಡಲ ತೀರಗಳಿಂದಾಗಿಯೆ ಅಲ್ಲದೆ ಧಾರ್ಮಿಕವಾಗಿಯೂ ಸಾಕಷ್ಟು ಮಹತ್ವ ಪಡೆದ ಶಿವನ ಕ್ಷೇತ್ರ ಗೋಕರ್ಣ. ಗೋಕರ್ಣದಲ್ಲಿ ಭೇಟಿ ನೀಡಬಹುದಾದ ಹಲವಾರು ಸುಂದರ ಕಡಲ ತೀರಗಳಿವೆ. ಚಿತ್ರದಲ್ಲಿರುವುದು ಗೋಕರ್ಣ ನಗರ ಕಡಲ ತೀರ.

ಚಿತ್ರಕೃಪೆ: Nechyporuk Iuliia

ವಿಹಂಗಮ ನೋಟ

ವಿಹಂಗಮ ನೋಟ

ಗೋಕರ್ಣದಲ್ಲಿರುವ ಇನ್ನೊಂದು ಸುಂದರ ಕಡಲ ತೀರ. ಕುಡ್ಲೆ ಕಡಲ ತೀರದ ವಿಹಂಗಮ ನೋಟ.

ಚಿತ್ರಕೃಪೆ: Infoayan

ಪವಿತ್ರ ಚಿಹ್ನೆ

ಪವಿತ್ರ ಚಿಹ್ನೆ

ಹಿಂದುಗಳಿಗೆ ಪವಿತ್ರ ಚಿಹ್ನೆಯಾದ ॐ ಆಕಾರದಲ್ಲಿರುವ ಕಡಲ ತೀರವನ್ನೂ ಸಹ ಗೋಕರ್ಣದಲ್ಲಿ ನೋಡಬಹುದಾಗಿದ್ದು ಇದು ಓಂ ಕಡಲ ತೀರ ಎಂಬ ಹೆಸರಿನಿಂದಲೆ ಸಾಕಷ್ಟು ಜನಪ್ರೀಯತೆ ಪಡೆದಿದೆ.

ಚಿತ್ರಕೃಪೆ: Axis of eran

ಪಟ್ಟಣ

ಪಟ್ಟಣ

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕುಮಟಾ ಪಟ್ಟಣವೂ ಸಹ ತನ್ನಲ್ಲಿರುವ ಸುಂದರ ಕಡಲ ತೀರಕ್ಕಾಗಿ ಪ್ರಸಿದ್ಧಿ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ ಪ್ರವಾಸ ಮಾಡುವಾಗ ಇಲ್ಲಿರುವ ಎಲ್ಲ ಕಡಲ ತೀರದ ಪಟ್ಟಣಗಳಿಗೊಮ್ಮೆ ಭೇಟಿ ನೀಡಲೇಬೇಕು. ಅದರಂತೆ ಕುಮಟಾ ಸಹ ಒಂದು ಆಕರ್ಷಕ ಕಡಲ ತಡಿಯ ಪಟ್ಟಣವಾಗಿ ಹೆಚ್ಚು ಗೌಜು ಗದ್ದಲಗಳಿಲ್ಲದ ಸುಂದರ ತಾಣವಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Mangesh Nadkarni

ಪ್ರವಾಸಿ ತಾಣ

ಪ್ರವಾಸಿ ತಾಣ

ಶಿವನ ಅತಿ ಎತ್ತರವಾದ ಹಾಗೂ ಅಷ್ಟೆ ಅದ್ಭುತವಾದ ಪ್ರತಿಮೆಯಿರುವ, ಜಗತ್ತಿನ ಅತಿ ಎತ್ತರದ ದೇವಾಲಯ ಗೋಪುರಗಳ ಪೈಕಿ ಒಂದಾಗಿರುವ ರಾಜಾ ಗೋಪುರ ಹೊಂದಿರುವ ದೇವಾಲಯವಿರುವ ಪ್ರಖ್ಯಾತ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತನ್ನಲ್ಲಿರುವ ಅದ್ಭುತ ಕಡಲ ತೀರದಿಂದಾಗಿಯೂ ಗಮನಸೆಳೆಯುತ್ತದೆ. ಮುರುಡೇಶ್ವರ ಬೀಚ್ ಎಂದೆ ಇದು ಜನಪ್ರೀಯವಾಗಿದೆ.

ಚಿತ್ರಕೃಪೆ: RNM

ಉಡುಪಿ

ಉಡುಪಿ

ಉಡುಪಿ ಜಿಲ್ಲೆಯಲ್ಲಿರುವ ಕಾಪು ಒಂದು ಸುಂದರ ಕಡಲ ಕಿನಾರೆಯಿರುವ ಪಟ್ಟಣವಾಗಿದ್ದು ಉಡುಪಿ ನಗರದ ದಕ್ಷಿಣಕ್ಕೆ 13 ಕಿ.ಮೀ ಹಾಗೂ ಮಂಗಳೂರು ನಗರದ ಉತ್ತರದಿಂದ 40 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Subhashish Panigrahi

ನೈಸರ್ಗಿಕ ಬಂದರು

ನೈಸರ್ಗಿಕ ಬಂದರು

ಉಡುಪಿಯಿಂದ ಆರು ಕಿ.ಮೀ ದುರದಲ್ಲಿರುವ ಮಲ್ಪೆ ಕಡಲ ತೀರವು ಒಂದು ಸ್ವಾಭಾವಿಕವಾಗಿ ರೂಪಗೊಂಡ ಬಂದರು ರಚನೆಯಾಗಿದ್ದು ತನ್ನಲ್ಲಿರುವ ಅಕರ್ಷಕ ಸಮುದ್ರ ತೀರದಿಂದಾಗಿಯೂ ಸಹ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Siddarth.P.Raj

ಹೊನ್ನಾವರ

ಹೊನ್ನಾವರ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಅಪ್ಸರಕೊಂಡ ಗ್ರಾಮವು ತನ್ನ ಅದ್ವಿತೀಯ ಸೌಂದರ್ಯದಿಂದಾಗಿ ಪ್ರವಾಸಿಗರ ಹೃದಯ ಕದಿಯುತ್ತದೆ. ಒಂದೆಡೆ ದಟ್ಟವಾದ ಹಸಿರಿನಿಂದ ಕೂಡಿದ ಹೊಲಗದ್ದೆಗಳು ಹಾಗೂ ಉದ್ಯಾನವಿದ್ದರೆ ಇನ್ನೊಂದೆಡೆ ಅರಬ್ಬಿ ಸಮುದ್ರದ ವಿಶಾಲ ನೋಟವು ಕಣ್ಮನ ಸೆಳೆಯುವಂತಿದೆ.

ಚಿತ್ರಕೃಪೆ: Brunda Nagaraj

ನಡುಗಡ್ಡೆ

ನಡುಗಡ್ಡೆ

ಉಡುಪಿಯ ಮಲ್ಪೆ ಕಡಲ ತೀರದಿಂದ ಕಡಲದೊಳಗೆ ಸುಮಾರು ಆರು ಕಿ.ಮೀ ಗಳಷ್ಟು ದೂರದಲ್ಲಿ ನಾಲ್ಕು ನಡುಗಡ್ಡೆಗಳ ಸಮೂಹವೊಂದಿದ್ದು ಅದೆ ಸೇಂಟ್ ಮೇರೀಸ್ ಐಲ್ಯಾಂಡ್ ಎಂದು ಹೆಸರುವಾಸಿಯಾಗಿದೆ. ಮಲ್ಪೆ ತೀರದಿಂದ ದೋಣಿಗಳು ಲಭ್ಯವಿರುತ್ತವೆ.

ಚಿತ್ರಕೃಪೆ: Man On Mission

ಬಸಾಲ್ಟಿಕ್ ರಾಕ್

ಬಸಾಲ್ಟಿಕ್ ರಾಕ್

ಜ್ವಾಲಾಮುಖಿಯಿಂದ ಉತ್ಪನ್ನವಾದ ಬಸಾಲ್ಟಿಕ್ ಶಿಲೆಗಳ ಖಂಬಾಕಾರದ ಅತಿ ಪ್ರಾಚೀನ ಶಿಲಾ ರಚನೆಗಳಿಗೆ ಇದು ಪ್ರಸಿದ್ಧವಾಗಿದೆ. ಇಲ್ಲಿ ಯಾವುದೆ ರೀತಿಯ ಕಟ್ಟಡ ರಚನೆಗಳಾಗಲಿ, ಅಂಗಡಿಗಳಾಗಲಿ ಇಲ್ಲ. ಪ್ರವಸಿಗರು ಹಾಯಾಗಿ ಇದರ ಮೇಲೆ ಸುತ್ತಾಡುತ್ತ ಕೊಂಚ ಹೊತ್ತು ವಿರಮಿಸಿ ಮತ್ತೆ ಮರಳಬಹುದು.

ಚಿತ್ರಕೃಪೆ: Subhashish Panigrahi

ಮಂಗಳೂರು

ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿರುವ ಪ್ರಸಿದ್ಧ ಕಡಲ ತೀರವೆ ಪಣಂಬೂರು ಕಡಲ ತೀರ. ಭಾರತದ ಸುರಕ್ಷಿತ ಹಾಗೂ ಅದ್ಭುತವಾಗಿ ನಿರ್ವಹಿಸಲ್ಪಡುತ್ತಿರುವ ಕಡಲ ತೀರಗಳ ಪೈಕಿ ಪಣಂಬೂರು ಕಡಲ ತೀರವೂ ಸಹ ಒಂದು.

ಚಿತ್ರಕೃಪೆ: Karunakar Rayker

ಹೆಚ್ಚು ಜನಪ್ರೀಯ

ಹೆಚ್ಚು ಜನಪ್ರೀಯ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚು ಭೇಟಿ ನೀಡಲ್ಪಟ್ಟ, ಜನಪ್ರೀಯ ಹಾಗೂ ತೆರಳಲು ಅತ್ಯುತ್ತಮವಾದ ಸಂಪರ್ಕವನ್ನು ಹೊಂದಿರುವ ಕಡಲ ತೀರವಾಗಿ ಪಣಂಬೂರು ಸಾಕಷ್ಟು ಪ್ರಸಿದ್ಧಿಗಳಿಸಿದೆ. ನಗರ ಪ್ರದೇಶದಿಂದ ಹತ್ತು ಕಿ.ಮೀ ದೂರದಲ್ಲಿರುವ ಪಣಂಬೂರು ಎಂಬಲ್ಲಿ ಈ ತೀರವಿದ್ದು ಪಣಂಬೂರು ಕಡಲ ತೀರ ಎಂದೆ ಕರೆಯಲ್ಪಡುತ್ತದೆ. ಸೂರ್ಯಾಸ್ತದ ನೋಟ.

ಚಿತ್ರಕೃಪೆ: Premnath Kudva

ಉಳ್ಳಾಲ

ಉಳ್ಳಾಲ

ಮಂಗಳೂರು ತಾಲೂಕಿನಲ್ಲಿರುವ ಉಳ್ಳಾಲ ನಗರವು ತನ್ನಲ್ಲಿರುವ ಸೋಮೇಶ್ವರ ಕಡಲ ತೀರದಿಂದಾಗಿ ಸಾಕಷ್ಟು ಜನಪೀಯತೆಗಳಿಸಿದೆ. ಇಲ್ಲಿನ ಕಡಲ ತೀರದಲ್ಲಿ ನೂರಾರು ವರ್ಷಗಳಿಂದ ಸೋಮೇಶ್ವರ ದೇವಾಲಯವು ನೆಲೆಸಿದ್ದು ಆ ಕಾರಣವಾಗಿ ಇದಕ್ಕೆ ಸೋಮೇಶ್ವರ ಕಡಲ ತೀರ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Ashwin Kumar

ಕುಂದಾಪುರ

ಕುಂದಾಪುರ

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ. ರಸ್ತೆಯ ಒಂದು ಬದಿಯಲ್ಲಿ ಸಮುದ್ರ ಹಾಗೂ ಇನ್ನೊಂದು ಬದಿಯಲ್ಲಿ ನದಿ (ಸೌಪರ್ಣಿಕಾ) ಹರಿಯುವುದನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: wikimedia

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more