ಅವಾಕ್ಕಾಗಿಸುವ ದೃಶ್ಯವೈಭವ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡದ ಕುಮಟಾ ಪ್ರವಾಸವು ನೆನಪಿಡುವಂತಾಗುತ್ತದೆ.
ಕರ್ನಾಟಕದ ಕರಾವಳಿಯಲ್ಲಿ...
ಕುಮಟಾವು ಸುಂದರವಾದ ಸಮುದ್ರ ತೀರ ಜೊತೆಗೆ, ಈ ತೀರದ ಹಿಂಭಾಗಕ್ಕೆ ಕಲ್ಲುಗಳು... ಈ ಸಣ್ಣ ಪಟ್ಟಣದಲ್ಲಿ ನೀವು ನೋಡುವಂಥದ್ದು ತುಂಬಾ ಇದೆ. ಅಘನಾಶಿನಿ ನದಿಯು ಅರೇಬಿಯನ್ ಸಮುದ್ರಕ್ಕೆ ಸೇರುವ ಕಣ್ಮನ ಸೆಳೆಯುವ ದೃಶ್ಯವನ್ನು ನೀವು ಇಲ್ಲಿ ಮನತುಂಬಿಕೊಳ್ಳಬಹುದು. ಸಾಹಸಿ ಕ್ರೀಡೆಯನ್ನು ಇಷ್ಟಪಡುವವರು ಇಲ್ಲಿ ಬಂಡೆ ಹತ್ತುವ ಸಾಹಸವನ್ನು ಮಾಡಬಹುದು. ಇದಕ್ಕೆ ಅಂತಲೇ ಮಾಡಿಸಿದ ಹಾಗಿರುವ ಕುಮಟಾದ ಯಾಣವು ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿದೆ. ಈ ತಾಣವು ಟ್ರೆಕ್ಕಿಂಗ್ಗೆ ಅತ್ಯುತ್ತಮ ಪ್ರದೇಶವಾಗಿದೆ. ಗೋಕರ್ಣದ ಓಮ್ ಬೀಚ್ ಕೂಡಾ ಕುಮಟಾದ ಇನ್ನೊಂದು ಆಕರ್ಷಣೀಯ ಸ್ಥಳ. ಕುಮಟಾ ಪಟ್ಟಣದ ಸ್ವಲ್ಪವೇ ದೂರದಲ್ಲಿ ಗೋಕರ್ಣ ಎಂಬ ಪಟ್ಟಣವಿದೆ.
ಆಧ್ಯಾತ್ಮದಲ್ಲಿ ಆಸಕ್ತಿಯುಳ್ಳವರಿಗೆ ಕುಮಾಟದ ಈ ಗೋಕರ್ಣವು ಮನಶ್ಶಾಂತಿಯನ್ನು ನೀಡಬಲ್ಲದು. ಶ್ರೀ ಕುಂಭೇಶ್ವರ, ಶಂಕರ ನಾರಾಯಣ ಮತ್ತು ಶಾಂತಿಕಾ ಪರಮೇಶ್ವರಿ ದೇವಸ್ಥಾನವು ಕೆಲವು ಪ್ರೇಕ್ಷಣೀಯ ಸ್ಥಳದ ಉದಾಹರಣೆಗಳು.
ಕುಮಟಾಗೆ ನೀವು ಪ್ರವಾಸ ಹೋಗುವುದರ ಇನ್ನೊಂದು ಲಾಭವೆಂದರೆ ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಕಾರವಾರ ಮತ್ತು ಹೊನ್ನಾವರವನ್ನೂ ಕೂಡಾ ಸೇರಿಸಿಕೊಳ್ಳಬಹುದು. ಕಾರವಾರದಲ್ಲಿ ಹಲವು ಬೀಚ್ಗಳು ಮತ್ತು ದೇವಸ್ಥಾನಗಳಿವೆ. ದೇವಭಾಗ ದ್ವೀಪವು ಬರೀ ಸುಂದರವಾಗಿಲ್ಲ, ಜೊತೆಗೆ ಸ್ಕೂಬಾ ಡೈವಿಂಗ್ಗೆ ಕೂಡಾ ಉತ್ತಮವಾದ ಸ್ಥಳವಾಗಿದೆ. ಹೊನ್ನಾವರದಲ್ಲಿ ಶರಾವತಿ ನದೀಮುಖಜ ಭೂಮಿ, ಕಾಸರಕೋಡು ಸಮುದ್ರ ತೀರ ಮತ್ತು ಅಪ್ಸರಕೊಂಡ ಜಲಪಾತಗಳನ್ನು ನೀವು ನೋಡಬಹುದು.
ಕುಮಟಾವು ಮಂಗಳೂರಿನಿಂದ ಸುಮಾರು 229 ಕಿ.ಮೀ ದೂರದಲ್ಲಿದೆ. ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ರೈಲ್ವೆ ಸ್ಟೇಷನ್ ಕೂಡಾ ಇದೆ.