Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಟಾ » ಆಕರ್ಷಣೆಗಳು » ಮಹಾಲಸಾ ದೇವಸ್ಥಾನ

ಮಹಾಲಸಾ ದೇವಸ್ಥಾನ, ಕುಮಟಾ

1

ಮಹಾಲಸಾ ದೇವಸ್ಥಾನವನ್ನು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದು ಸುಮಾರು 1565ರಲ್ಲಿ ಕುಮಟಾದ ಪೈ ಕುಟುಂಬದಿಂದ ನಿರ್ಮಿಸಲ್ಪಟ್ಟಿದೆ. ಗುರವ್ ಎಂಬ ಅರ್ಚಕರ ಕುಟುಂಬದವರಿಂದ ಈ ದೇವಸ್ಥಾನವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇವರು ಕಂಚಿನ ಶ್ರೀ ಮಹಾಲಸಾ ಮೂರ್ತಿಯನ್ನು ಗೋವಾದ ವೆರ್ನಾದಿಂದ ತಂದಿದ್ದರು ಎಂದು ಹೇಳಲಾಗುತ್ತದೆ. ಶ್ರೀ ಮಹಾಲಸಾ ಮೂರ್ತಿಯು ಮಣ್ಣಿನ ಕುಡಿಕೆಯಲ್ಲಿ ಇಡಲಾಗಿತ್ತು ನಂತರದಲ್ಲಿ ಇದನ್ನು ದೇವಸ್ಥಾನದ ಒಳಗೆ ಪ್ರತಿಷ್ಠಾಪಿಸಲಾಯಿತು.ಆದ್ದರಿಂದ ಶ್ರೀ ಮಹಾಲಸಾ ನಾರಾಯಣಿ ದೇವತೆಯು ಇಲ್ಲಿ ಪ್ರಮುಖ ದೇವರಾಗಿದ್ದು, ಲಕ್ಷ್ಮೀನಾರಾಯಣ, ಗ್ರಾಮಪುರುಷ, ಶಾಂತೇರಿ, ದಾಡಶಂಕರ, ಭಗವತಿ ಮತ್ತು ಕಾಲಭೈರವ ದೇವರುಗಳು ಇಲ್ಲಿನ ಇನ್ನಿತರ ಪ್ರಮುಖ ದೇವರುಗಳಾಗಿವೆ. ಇಲ್ಲಿನ ಸಂಧ್ಯಾ ಮಂಟಪದ ವಿಶಿಷ್ಟ ಕೆತ್ತನೆಯು ಆಕರ್ಷಕವಾಗಿದೆ, ಸುಣ್ಣ ಮತ್ತು ಗಾರೆಯನ್ನು ಉಪಯೋಗಿಸಿ ಮಾಡಿರುವಂಥ ಸುಂದರವಾದ ಕೆಂಪು ಮತ್ತು ಬಿಳಿ ಪೇಂಟಿಂಗ್‌ಗಳು ಆಕರ್ಷಕವಾಗಿದೆ. ಗೋಡೆಯ ಮೇಲೆ ಕೂಡಾ ರಾಮಾಯಣ ಮತ್ತು ಮಹಾಭಾರತದ ಕಥೆಯ ಚಿತ್ರವನ್ನು ಬಿಡಿಸಲಾಗಿದೆ.ಈ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಅದರಲ್ಲಿ ಪ್ರಮುಖವಾದದ್ದು ಶ್ರಾವಣ ಮಾಸದ ಅಂತಿಮ ರವಿವಾರದಂದು ಹಮ್ಮಿಕೊಳ್ಳುವ ಹಬ್ಬ. ಇನ್ನಿತರ ಹಬ್ಬಗಳಾದ ಪೂರ್ಣಿಮೆ, ದಶಮಿ ಮತ್ತು ವಾದ್ಯ ಪದ್ಯಗಳು. ದೇವಸ್ಥಾನದ ಸಂಸ್ಥಾಪನಾ ದಿನಾಚರಣೆಯು ಮಾರ್ಚ್‌/ಏಪ್ರಿಲ್‌ನಲ್ಲಿ ನಡೆಯುತ್ತದೆ. ಕುಮಟಾಗೆ ಪ್ರಯಾಣ ಬೆಳೆಸುವ ಪ್ರವಾಸಿಗರು ಸಮಯ ಸಿಕ್ಕಲ್ಲಿ ಮಹಾಲಸಾ ದೇವಸ್ಥಾನವನ್ನು ಭೇಟಿನೀಡಬೇಕು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue