Search
  • Follow NativePlanet
Share
» »ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಗುಹೆಗಳಿವು...

ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಗುಹೆಗಳಿವು...

By Sowmyabhai

ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ. ಗುಹೆಯಲ್ಲಿ ಹಲವಾರು ದೇವಾಲಯಗಳು ಇರುವುದನ್ನು ನಾವು ಕಂಡಿದ್ದೇವೆ. ಕೆಲವು ಗುಹೆಗಳಲ್ಲಿ ನಂಬಲಾಗದಂತಹ ಘಟನೆಗಳನ್ನು ಕೂಡ ಕಾಣಬಹುದು. ಗತಕಾಲದ ವೈಭವವನ್ನು ಗುಹೆಗಳಲ್ಲಿಯೂ ಕೂಡ ಕಾಣಬಹುದು. ಅಲ್ಲಿನ ಹಲವಾರು ಮನೋಹರವಾದ ಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸದೇ ಬಿಡದು.

ನಮ್ಮ ಭಾರತ ದೇಶದಲ್ಲಿಯೇ ಒಂದಲ್ಲ ಒಂದು ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿಯು ಅದನ್ನು ಭೇದಿಸಲು ಸಾಕಷ್ಟು ಸಾಹಸಗಳು ನಡೆಯುತ್ತಲೇ ಇವೆ. ಕಾಲ ಕಾಲಕ್ಕೆ ಅನ್ವೇಷಕರ ಗುಂಪು ಕುತೂಹಲಕಾರಿ ಸ್ಥಳಗಳನ್ನು ಬೆಳಕಿಗೆ ತರುತ್ತಿದ್ದಾರೆ.

1.ಬರಾಬರ್ ಗುಹೆ!

1.ಬರಾಬರ್ ಗುಹೆ!

PC:Photo Dharma

ಆ ಗುಹೆಯ ಹೆಸರು ಬರಾಬರ್ ಗುಹೆಯಾಗಿದೆ. ಈ ಗುಹೆಗೆ ಹಲವಾರು ಪ್ರವಾಸಿಗಾರರು ಹಾಗು ಅನ್ವೇಷಣೆ ಮಾಡುವವರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಕೆಲವು ಇತಿಹಾಸ ತಜ್ಞರ ಪ್ರಕಾರ ಈ ಬರಾಬರ್ ಗುಹೆಯು ಭಾರತದ ಅತ್ಯಂತ ಪ್ರಾಚೀನವಾದ ಗುಹೆಗಳಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಹಾಗೆ ಅನುಮಾನ ಪಡಲು ಕಾರಣವೆನೆಂದರೆ ಇಲ್ಲಿ ಅಸಕ್ತಿಕರವಾದ ವಿಷಯಗಳು, ಶಾಸನಗಳು ಕಂಡುಬಂದಿದ್ದು ಗಮನ ಸೆಳೆದಿದೆ. ಅಧ್ಯಯನದ ಪ್ರಕಾರ ಈ ಬಂಡೆಯಲ್ಲಿ ಕೆತ್ತಲಾದ ಗುಹೆಗಳು ಕ್ರಿ.ಪೂ 3 ನೇ ಶತಮಾನಕ್ಕೆ ಸಂಬಂಧಿಸಿದ್ದವೆಂದು ಹೇಳಲಾಗಿದೆ. ಅಂದರೆ ಇದೊಂದು ಪ್ರಾಚೀನವಾದ ಗುಹೆಯಾಗಿದೆ.

2.ಎಲಿಫೆಂಟಾ ಗುಹೆ

2.ಎಲಿಫೆಂಟಾ ಗುಹೆ

ಎಲಿಫೆಂಟಾ ಗುಹೆಗಳು ಅತ್ಯಂತ ಸುಂದರವಾದ ಗುಹೆಗಳಲ್ಲಿ ಒಂದಾಗಿದೆ. ಈ ಅದ್ಬುತವಾದ ಗುಹೆಯು ಮುಂಬೈ ನಗರದ ಸಮೀಪದಲ್ಲಿರುವ ಎಲಿಫೆಂಟಾ ಎಂಬ ದ್ವೀಪದಲ್ಲಿದೆ. ಇದನ್ನು ಮೊದಲು "ಘಾರಾಪುರಿ" ಎಂದು ಕರೆಯುತ್ತಿದ್ದರು. ಇದನ್ನು ನಂತರ ಪೋರ್ಚುಗೀಸರು ಎಲಿಫೆಂಟಾ ಎಂದು ಹೆಸರನ್ನು ಬದಲಾಯಿಸಿದರು ಎನ್ನಲಾಗಿದೆ. 1987 ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಯಿತು.

ಈ ಎಲಿಫೆಂಟಾ ಗುಹೆಯು ಅತ್ಯಂತ ಪುರಾತನವಾದುದು ಎಂದು ಹೇಳಲಾಗಿದೆ. ಅಂದರೆ 9 ನೇ ಶತಮಾನದಿಂದ 13 ನೇ ಶತಮಾನದ ಮಧ್ಯೆ ಭಾಗದಲ್ಲಿ ಸಿಲ್ವರ್ ಎಂಬ ರಾಜ ಮನೆತನಕ್ಕೆ ಸಂಬಂಧಿಸಿದ್ದು ಎಂದು ನಂಬಲಾಗಿದೆ. ಆದರೆ ಈ ಗುಹೆಯಲ್ಲಿರುವ ಕೆತ್ತನೆಗಳನ್ನು ಹಾಗು ಮೂರ್ತಿಯನ್ನು ಪರಿಶೀಲಿಸಿದರೆ ಮಾನ್ಯಖೇಟರ ಅಥವಾ ರಾಷ್ಟ್ರಕೂಟರ ಕಾಲದ್ದು ಎಂದು ಗುರುತಿಸಲಾಗುತ್ತಿದೆ.

3.ಅಜಂತಾ ಮತ್ತು ಎಲ್ಲೋರ ಗುಹೆಗಳು

3.ಅಜಂತಾ ಮತ್ತು ಎಲ್ಲೋರ ಗುಹೆಗಳು

PC:Yashasvi nagda

ಮಹಾರಾಷ್ಟ್ರದಲ್ಲಿರುವ ಅಜಂತಾ ಹಾಗೂ ಎಲ್ಲೋರ ಗುಹೆಗಳು ಭಾರತದ ಅತ್ಯಂತ ಹೆಸರುವಾಸಿ ಗುಹೆಗಳು. ಈ ಗುಹೆಯನ್ನು ಬಂಡೆಯಿಂದ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಗುಹೆಯು ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹೊಂದಿದೆ. ಎಲ್ಲೋರಾದಲ್ಲಿ ಸುಮಾರು 34 ವಿಶಿಷ್ಟವಾದ ಗುಹೆಗಳಿವೆ. ಈ ಗುಹೆಗಳು 6 ರಿಂದ 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೇಯೆ ಅಜಂತಾದಲ್ಲಿಯೂ ಕೂಡ ಸುಮಾರು 29 ಗುಹೆಗಳಿವೆ. ಅಜಂತಾ ಗುಹೆಗಳೆಲ್ಲಾ ಬೌದ್ದ ಧರ್ಮದ ಶಿಲ್ಪಗಳಾಗಿದ್ದರೆ, ಎಲ್ಲೋರದಲ್ಲಿ ಬೌದ್ದ, ಹಿಂದೂ ಹಾಗೂ ಜೈನ ಧರ್ಮದ ಶಿಲ್ಪಗಳನ್ನು ಹೊಂದಿರುವ ಗುಹೆಗಳಾಗಿವೆ.

4.ಭೀಮ ನಳಪಾಕ ಮಾಡುತ್ತಿದ್ದ ಗುಹೆ!

4.ಭೀಮ ನಳಪಾಕ ಮಾಡುತ್ತಿದ್ದ ಗುಹೆ!

PC:Adityamadhav83

ಆಂಧ್ರ ಪ್ರದೇಶ ರಾಜ್ಯದಲ್ಲಿ ಪಾಂಡವರಿಗೆ ಸಂಬಂಧಿಸಿದಂತೆ ಆನೇಕವಾದ ಪ್ರದೇಶಗಳನ್ನು ಕಾಣಬಹುದಾಗಿದೆ. ಈ ಪ್ರದೇಶವು ರಾಜಮಂಡ್ರಿ ನಗರಕ್ಕೆ ಸುಮಾರು 40 ಕಿ.ಮೀ ದೂರದಲ್ಲಿದೆ. ಇಲ್ಲಿ ಪಾಂಡವರು ಅರಣ್ಯವಾಸ ಮಾಡುವ ಸಮಯದಲ್ಲಿ ಕೆಲವು ದಿನಗಳ ಕಾಲ ನಿವಾಸವಿದ್ದರು ಎಂದು ನಂಬಲಾಗಿದೆ. ಇದು ಎತ್ತರವಾದ ಪರ್ವತದ ಮೇಲೆ ಗುಹೆಗಳನ್ನು ಕಾಣಬಹುದು. ಸುತ್ತಲೂ ಪ್ರಕೃತಿಯ ಅದ್ಭುತವಾದ ಮಡಿಲಲ್ಲಿ, ಎತ್ತರವಾದ ವಾತಾವರಣದಲ್ಲಿ ಆ ಪುರಾತನವಾದ ಗುಹೆಗಳನ್ನು ಕಂಡು ಆನಂದಿಸಬಹುದು.

ಪಾಂಡವರ ಅಜ್ಞಾತವಾಸ ಸಮಯದಲ್ಲಿ ಭೀಮನು ಮೊದಲಬಾರಿಗೆ ಈ ಪ್ರದೇಶಕ್ಕೆ ಭೇಟಿ ನೀಡಿದನು ಎಂದೂ, ಪರ್ವತದ ಅಗ್ರಭಾಗದಲ್ಲಿ ಭೀಮನ ಭಾರವಾದ ಪಾದಕ್ಕೆ ಭೂಮಿಯು ಮುದ್ರೆಯನ್ನು ಹಿಡಿದಿದೆ ಎಂದು ಹೇಳಲಾಗುತ್ತದೆ. ಸುಮಾರು 15 ಇಂಚಿನ ದೊಡ್ಡದಾದ ಭೀಮನ ಕಾಲನ್ನು ಇಲ್ಲಿ ಕಾಣಬಹುದು. ಏಕೆಂದರೆ ಅತ್ಯಂತ ದೃಢಕಾಯವನ್ನು ಹೊಂದಿದ್ದ ಭೀಮನ ಕಾಲಿನ ಮುದ್ರೆಯೇ ಎಂದು ಚರಿತ್ರಕಾರರು ಹೇಳುತ್ತಾರೆ. ತನ್ನ ಗದೆಯ ಗುರುತು ಕೂಡ ಇಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ.

5.ಉದಯಗಿರಿ ಮತ್ತು ಖಂದಗಿರಿ ಗುಹೆಗಳು

5.ಉದಯಗಿರಿ ಮತ್ತು ಖಂದಗಿರಿ ಗುಹೆಗಳು

PC:G41rn8

ಉದಯಗಿರಿ ಮತ್ತು ಖಂದಗಿರಿ ಗುಹೆಗಳು ಭವ್ಯವಾದ ಸೊಬಗನ್ನು ಹೊಂದಿರುವ ಗುಹೆಗಳು. ಈ ಗುಹೆಗಳು ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿದೆ. ಇಲ್ಲಿ ಹಲವಾರು ಪ್ರಾಚೀನವಾದ ಗುಹೆಗಳನ್ನು ಕಾಣಬಹುದಾಗಿದೆ. ಉದಯಗಿರಿಯನ್ನು ಸೂರ್ಯೋದಯದ ಬೆಟ್ಟ ಎಂದು ಸಹಾ ಕರೆಯುತ್ತಾರೆ. ಈ ಗುಹೆಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ಶಿಲ್ಪ ಹಾಗು ಜೈನ ಧರ್ಮದಲ್ಲಿನ ವಾಸ್ತುಶಿಲ್ಪದಂತೆ ಡೊಂಕಾಗಿರುವ ಗುಹೆಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ರಹಸ್ಯವಾದ ಸಿಂಹದ ಗುಹೆ ಇದ್ದು, ಗುಹೆಯ ಪ್ರವೇಶ ದ್ವಾರವು ಸಿಂಹದ ಬಾಯಿಯ ಮೂಲಕ ಒಳಗೆ ಸಾಗಬೇಕಾಗುತ್ತದೆ. ಹಾಗೇಯೆ ರಾಣಿಯ ಅರಮನೆಯ ಗುಹೆಯು ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more