Search
  • Follow NativePlanet
Share
» »ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

By Vijay

ಸನಾತನ ಧರ್ಮದಿಂದ ರೂಪಿತವಾದ ಭಾರತ ಕರ್ಮ ಭೂಮಿಯಲ್ಲಿ ಧಾರ್ಮಿಕಾಸಕ್ತರ ಮನ ತಣಿಸುವ, ಸಂತೃಪ್ತಿ ನೀಡುವ ಅದೆಷ್ಟೊ ಧಾರ್ಮಿಕ ತಾಣಗಳಿವೆ. ಅಂತಹ ಧಾರ್ಮಿಕ ತಾಣಗಳ ಪೈಕಿ ಸರೋವರ ಅಥವಾ ಸಾಮಾನ್ಯವಾಗಿ ಕರೆಯಲಾಗುವ ಕೆರೆಗಳೂ ಸಹ ಸೇರಿ ಕೊಂಡಿವೆ. ಹಿಂದುಗಳು ನಂಬುವಂತೆ ಕೆರೆಗಳು ಸಾಮಾನ್ಯವಾಗಿ ಮನುಷ್ಯನ ಪಾಪ-ಕರ್ಮಗಳನ್ನು ತೊಳೆಯುವ ಮಾಧ್ಯಮಗಳಾಗಿವೆ.

ದಕ್ಷಿಣ ಭಾರತದ ಕೆಲವು ಅದ್ಭುತ ಕೆರೆಗಳು

ಇಂತಹ ವಿಶೇಷವಾದ ಸ್ಥಾನ-ಮಾನಗಳನ್ನು ಹಿಂದುಗಳು ಜಲ ಮೂಲಗಳಿಗೆ ನೀಡಿದ್ದಾರೆ. ಅದನ್ನು ಪುಷ್ಟಿಕರಿಸುವಂತೆ ಅನೇಕ ಪೌರಾಣಿಕ ಗ್ರಂಥಗಳಲ್ಲಿ ನೀರಿನ ಮೂಲಗಳ ಮಹತ್ವ ಹಾಗೂ ಮಹಿಮೆಗಳ ಕುರಿತು ಸಾಕಷ್ಟು ಉಲ್ಲೇಖಿಸಲಾಗಿದೆ. ಇನ್ನೂ ಭಾಗವತ ಪುರಾಣದಲ್ಲಿ ಹೇಳಿರುವಂತೆ ಪಂಚ ಮಹಾಸರೋವರಗಳ ಕುರಿತು ತಿಳಿಸಲಾಗಿದೆ ಹಾಗೂ ಅವುಗಳಲ್ಲಿ ಸ್ನಾನ ಮಾಡುವುದರಿಂದ ಅತ್ಯಂತ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ.

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಮಾನಸಸರೋವರ, ಚಿತ್ರಕೃಪೆ: Krish Dulal

ಹಾಗಾದರೆ ಆ ಪಂಚ ಮಹಾಸರೋವರಗಳು ಯಾವುವು? ಅವು ಎಲ್ಲೆಲ್ಲಿವೆ? ಎಂಬುದರ ಕುರಿತು ತಿಳಿಯಬೇಕಿದ್ದಲ್ಲಿ ಪ್ರಸ್ತುತ ಲೆಖನವನ್ನೊಮ್ಮೆ ಓದಿ. ಮೊದಲನೇಯದಾಗಿ ಮಾನಸ ಸರೋವರ ಅಥವಾ ಮಾನಸರೋವರ. ಇದು ಅಧಿಕೃತವಾಗಿ ಭಾರತದಲ್ಲಿಲ್ಲವಾದರೂ ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸುವ ಹಲವಾರು ಸಂಸ್ಥೆಗಳಿಂದ ಈ ಯಾತ್ರೆ ಆಯೋಜಿಸಲ್ಪಡುತ್ತದೆ.

ಇಲ್ಲಿಗೆ ತೆರಳಲು ಚೀನಾ ಸಮೂಹ ವಿಸಾ ಬೇಕಾಗಿರುವುದರಿಂದ ಪಾಸ್ ಪೋರ್ಟ್ ಇರಬೇಕಾಗಿರುವುದು ಅವಶ್ಯವಾಗಿದೆ. ಈ ಸರೋವರವು ಟಿಬೆಟ್ ಪ್ರಾಂತ್ಯದಲ್ಲಿ ಬರುತ್ತದೆ. ಪೌರಾಣಿಕ ಕಥೆಯ ಪ್ರಕಾರ, ಇಲ್ಲಿ ಸತಿ ದೇವಿಯ ಕಣ್ಣುಗಳು ಬಿದ್ದಿತ್ತೆನ್ನಲಾಗಿದೆ. ಹಾಗಾಗಿ ಇದು ಹಿಂದುಗಳ ಪಾಲಿಗೆ ಸಾಕಷ್ಟು ಪವಿತ್ರವಾದ ಕೆರೆಯಾಗಿದೆ.

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ನೈನಿ ಕೆರೆ, ಚಿತ್ರಕೃಪೆ: Abhishek gaur70

ಇಲ್ಲಿಗೆ ತೆರಳಲು ಬಲು ಕಷ್ಟವಿರುವುದರಿಂದ ಇದರ ಬದಲಾಗಿ ಸಾಕಷ್ಟು ಜನರು ಉತ್ತರಾಖಂಡದ ನೈನಿ ಕೆರೆಗೂ ಸಹ ಭೇಟಿ ನೀಡುತ್ತಾರೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಇಲ್ಲಿಯೆ ಸತಿ ದೇವಿಯ ಕಣ್ಣುಗಳು ಬಿದ್ದಿದ್ದವು ಹಾಗೂ ಆ ಕಾರಣದಿಂದ ನೈನಿ ಕೆರೆ ಎಂದು ಕರೆಯಲಾಗುತ್ತದೆ. ಇನ್ನೂ ಒಂದು ಕಥೆಯ ಪ್ರಕಾರ ಮೂರು ಋಷಿಗಳು ಒಂದೊಮ್ಮೆ ಇಲ್ಲಿಗೆ ಬಂದಾಗ ಈ ಕೆರೆಯಲ್ಲಿ ನೀರಿಲ್ಲದೆ ಇರುವುದನ್ನು ಗಮನಿಸಿದರು.

ಸಿದ್ಧ ಪುರುಷರಾಗಿದ್ದ ಅವರಿ ಕೈಲಾಸದ ಮಾನಸ ಸರೋವರಕ್ಕೆ ತೆರಳಿ ಅಲ್ಲಿಂದ ನೀರನ್ನು ತಂದು ಈ ಕೆರೆಯನ್ನು ಭರ್ತಿ ಮಾಡಿದರೆನ್ನಲಾಗಿದೆ. ಹಾಗಾಗಿ ಇದು ಮಾನಸಸರೋವರದ ಎರಡನೇಯ ರುಪ ಎಂದು ನಂಬಲಾಗಿದ್ದು ಮಾನಸ ಸರೋವರಕ್ಕೆ ಹೋಗಲಾಗದವರು ಇಲ್ಲಿ ಗೆ ತೆರಳಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಪುಷ್ಕರ್ ಕೆರೆ, ಚಿತ್ರಕೃಪೆ: Felipe Skroski

ಎರಡನೇಯದಾಗಿ ಪುಷ್ಕರ್ ಸರೋವರ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಪುಷ್ಕರ್ ನಲ್ಲಿರುವ ಅತಿ ಪವಿತ್ರ ಕೆರೆ ಇದಾಗಿದೆ. ಇದರ ಮಹತ್ವ ಎಷ್ಟಿದೆ ಎಂದರೆ ನೀರಿನ ಮೂಲದ ತೀರ್ಥ ಕ್ಷೇತ್ರಗಳ ಪೈಕಿ ಇದನ್ನು ತೀರ್ಥರಾಜ ಎಂದೆ ಕರೆಯುತ್ತಾರೆ. ಬ್ರಹ್ಮನಿಂದ ಸ್ವತಃ ರೂಪಿತವಾದ ಸರೋವರ ಇದಾಗಿದ್ದು ಸಾಕಷ್ಟು ಜನಪ್ರೀಯತೆ ಹಾಗೂ ಮಹತ್ವಗಳಿಸಿದೆ ಕೆರೆ ಇದಾಗಿದೆ.

ಮೂರನೇಯದಾಗಿ ನಾರಾಯಣ ಸರೋವರ. ಇದು ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಲಖ್ಪತ್ ತಾಲೂಕಿನ ಕೋರಿ ಕ್ರೀಕ್ ಬಳಿ ಸ್ಥಿತವಿದೆ. ಭೈರವ ಕ್ಷೇತ್ರವೆಂದೆ ಪ್ರಸಿದ್ಧವಾದ ಕೋಟೇಶ್ವರ ಮಹಾದೇವ ದೇವಾಲಯವು ಇಲ್ಲಿಂದ ಕೇವಲ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿದೆ. ನಂಬಿಕೆಯಂತೆ ಪವಿತ್ರ ನದಿಯಾದ ಸರಸ್ವತಿಯಿಂದ ನೀರನ್ನು ಪಡೆಯುವುದರಿಂದ ಇದೂ ಸಹ ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಸರೋವರವಾಗಿದೆ.

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ನಾರಾಯಣ ಸರೋವರ, ಚಿತ್ರಕೃಪೆ: Chandra

ನಾಲ್ಕನೇಯದಾಗಿ ಬಿಂದು ಸರೋವರ. ಗುಜರಾತಿನ ಪಾಟಣ ಜಿಲ್ಲೆಯ ಸಿದ್ಧಪುರ ಎಂಬಲ್ಲಿರುವ ಕೆರೆ ಇದಾಗಿದೆ. ಮೂಲತಃ ಇದು ಎರಡು ಕೊಳಗಳಾಗಿವೆ. ಬಿಂದುಗಳ ರೂಪದಲ್ಲಿರುವುದರಿಂದ ಇದನ್ನು ಬಿಂದು ಸರೋವರವೆನ್ನಲಾಗಿದೆ. ಪ್ರತೀತಿಯಂತೆ ವಿಷ್ಣುವಿನ ಕಣ್ಣೀರಿನ ಹನಿಗಳು ಬಿದ್ದು ಇದು ರೂಪಿತವಾಗಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ವಿಶೇಷ ಆಚರಣೆ ಇಲ್ಲಿದೆ. ಈ ಆಚರಣೆ ಭಾರತದಲ್ಲಿ ಮತ್ತಿಲ್ಲೆನ್ನೂ ಇಲ್ಲ. ಹೊದು ಅದುವೆ ಇಲ್ಲಿ ಆಚರಿಸಲಾಗುವ ಮಾತೃ ಶಾದ್ಧ.

ಮಾತೃ ಶ್ರಾದ್ಧವನ್ನು ಇಲ್ಲಿ ಹಿಂದು ಕ್ಯಾಲೆಂಡರಿನ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಪ್ರತೀತಿಯಂತೆ ಪರಶುರಾಮರು ಇಲ್ಲಿನ ಸರೋವರದ ತಟದಲ್ಲಿ ತನ್ನ ತಾಯಿಯ ಶ್ರಾಧವನ್ನು ನೆರವೇರಿಸಿದ್ದರು. ಅಲ್ಲದೆ ಕಪಿಲ ಮಹರ್ಷಿಗಳ ತಪೋಭೂಮಿಯೂ ಸಹ ಇದಾಗಿದೆ ಎಂದು ಹೇಳಲಾಗಿದೆ.

ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು

ಪಂಪ ಸರೋವರ, ಚಿತ್ರಕೃಪೆ: Moogsi

ಐದನೇಯದಾಗಿ ಪಂಪ ಸರೋವರ: ಇದು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆಯಾದರೂ ಬಳ್ಳಾರಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಹಮ್ಪಿಗೆ ಬಲು ಹತ್ತಿರದಲ್ಲಿದೆ. ಪೌರಾಣಿಕ ಹಿನ್ನಿಲೆಯಂತೆ ಈ ಒಂದು ಸ್ಥಲದಲ್ಲೆ ಪಾರ್ವತಿಯ ಅವತಾರವಾದ ಪಂಪಳು ಶಿವನ ಕುರಿತು ತಪಸ್ಸನ್ನಾಚರಿಸಿದ್ದಳು. ಅಲ್ಲದೆ ರಾಮಾಯಣದಲ್ಲಿ ಪ್ರಸ್ತಾಪಿಸಲಾದ ಶಬರಿಯು ಇದೆ ಸ್ಥಳದಲ್ಲಿ ರಾಮನಿಗಾಗಿ ಕಾದಿದ್ದಳೆನ್ನಲಾಗಿದೆ.

ಭಾರತದ ಏಳು ಪವಿತ್ರ ನದಿಗಳು!

ಹಾಗಾಗಿ ಪಂಪ ಸರೋವರವು ಸಾಕಷ್ಟು ಪಾವಿತ್ರಯೆ ಪಡೆದಿರುವ ಕೊಳವೆಂದು ವಿವರಿಸಲಾಗಿದೆ. ಇಲ್ಲಿ ವಾಸವಿದ್ದ ಶಬರಿಯೆ ಸೀತೆಯ ಅಪಹರಣದ ಕುರಿತು ರಾಮನಿಂದ ತಿಳಿದು ಈ ಸರೋವರದಾಚೆ ವಾಸವಿರುವ ಆಂಜನೇಯ ಹಾಗೂ ಸುಗ್ರೀವನ ನೆರವು ಪಡೆಯಲು ಸಲಹೆ ನೀಡಿದ್ದಳೆನ್ನಲಾಗುತ್ತದೆ. ಶ್ರೀಮದ್ ವಲ್ಲ್ಭಾಚಾರ್ಯರು ಹದಿನಾರನೆಯ ಶತಮಾನದಲ್ಲಿ ಇಲ್ಲಿಗೆ ಭೆಟಿ ನಿಡಿದ್ದರೆನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X