Search
  • Follow NativePlanet
Share
» »ಭಾರತದ ಸುಂದರ ಕ್ರಿಕೆಟ್ ಕ್ರೀಡಾಂಗಣಗಳು

ಭಾರತದ ಸುಂದರ ಕ್ರಿಕೆಟ್ ಕ್ರೀಡಾಂಗಣಗಳು

ನಮ್ಮ ದೇಶದಲ್ಲಿರುವ ಜನರು ಚಲನಚಿತ್ರಗಳನ್ನು ಬಿಟ್ಟರೆ ಅತಿಯಾಗಿ ಇಷ್ಟಪಡುವುದು ಕ್ರಿಕೆಟ್ ಆಟ. "ಹೊಟ್ಟೆಗೆ ಹಿಟ್ಟಿಲ್ಲಂದ್ರೂ ಜುಟ್ಟಿಗೆ ಮಲ್ಲಿಗೆ ಬೇಕು" ಎಂಬಂತೆ ಎಷ್ಟೊ ಜನರು ತಮ್ಮ ಮಿತ ಆದಾಯದ ಹೊರತಾಗಿಯೂ ಕ್ರಿಕೆಟ್ ಆಟವನ್ನು ನೋಡಲು ಮೈದಾನಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇನ್ನು ಈ ಆಟದ ಮೈದಾನಗಳಂತೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಒಂದು ರೀತಿಯ ಪ್ರವಾಸಿ ಆಕರ್ಷಣೆಗಳಾಗಿಯೂ ಮಾರ್ಪಟ್ಟಿವೆ. ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಂಗಣಗಳನ್ನು ಕಾಣಬಹುದು. ಕೆಲವು ಕ್ರೀಡಾಂಗಣಗಳಂತೂ ನಗರದ ಹೆಮ್ಮೆಯ ಹೆಗ್ಗುರುತುಗಳಾಗಿವೆ ಎಂದರೂ ತಪ್ಪಾಗಲಾರದು. ಈ ಲೇಖನವು ಭಾರದಲ್ಲಿರುವ ಸಾಕಷ್ಟು ಕ್ರೀಡಾಂಗಣಗಳ ಪೈಕಿ ಕೆಲವು ಸುಂದರ ಕ್ರೀಡಾಂಗಣಗಳ ಪರಿಚಯ ಮಾಡಿಕೊಡೂತ್ತದೆ.

ಈಡನ್ ಗಾರ್ಡನ್:

ಈಡನ್ ಗಾರ್ಡನ್:

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾ ನಗರದಲ್ಲಿದೆ ಈ ಕ್ರಿಕೆಟ್ ಮೈದಾನ. ಈ ಕ್ರೀಡಾಂಗಣ ಭಾರತದ ಮೊದಲ ದೊಡ್ಡ ಹಾಗು ಪ್ರಪಂಚದ ಮೂರನೆಯ ದೊಡ್ಡ ಕ್ರಿಕೆಟ್ ಆಟದ ಮೈದಾನವಾಗಿದೆ. ಅನೇಕ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ಇಲ್ಲಿ ಆಡಲಾಗುತ್ತದೆ.

ಚಿತ್ರಕೃಪೆ: Aliven Sarkar

ವಾಂಖೇಡೆ ಕ್ರೀಡಾಂಗಣ:

ವಾಂಖೇಡೆ ಕ್ರೀಡಾಂಗಣ:

ಭಾರತದ "ಆರ್ಥಿಕ ರಾಜಧಾನಿ"ಯಾದ ಮುಂಬೈ ನಗರದಲ್ಲಿದೆ ಈ ಭವ್ಯ ಕ್ರೀಡಾಂಗಣ. 45,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಈ ಕ್ರೀಡಾಂಗಣ ಹೊಂದಿದೆ. ಹಲವು ಉನ್ನತ ದರ್ಜೆಯ ಕ್ರಿಕೆಟ್ ಪಂದ್ಯಾವಳಿಗಳನ್ನು ಇಲ್ಲಿ ಆಡಲಾಗಿದ್ದು ಹಿಂದೆ ರವಿ ಶಾಸ್ತ್ರಿ ಈ ಕ್ರೀಡಾಂಗಣದಲ್ಲೆ ಒವರಿನ ಆರೂ ಎಸೆತಗಳನ್ನು ಸಿಕ್ಸರ್ ಹೊಡೆದಿದ್ದರು.

ಚಿತ್ರಕೃಪೆ: G patkar

ಎಂ.ಚಿನ್ನಸ್ವಾಮಿ ಕ್ರೀಡಾಂಗಣ:

ಎಂ.ಚಿನ್ನಸ್ವಾಮಿ ಕ್ರೀಡಾಂಗಣ:

ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿದೆ ಈ ಕ್ರೀಡಾಂಗಣ. ನಾಲ್ಕು ದಶಕಗಳಷ್ಟು ಹಳೆಯದಾದ ಈ ಕ್ರೀಡಾಂಗಣವು ನಗರದ ಹೃದಯ ಭಾಗದಲ್ಲಿ ನೆಲೆಸಿದ್ದು ಸುತ್ತಲೂ ಆಕರ್ಷಕ ಪ್ರವಾಸಿ ಆಕರ್ಷಣೆಗಳಾದ ಕಬ್ಬನ್ ಪಾರ್ಕ್, ಎಂ.ಜಿ ರಸ್ತೆ ಹಾಗು ಕ್ವೀನ್ಸ್ ರಸ್ತೆಗಳಿಂದ ಆವೃತ್ತವಾಗಿದೆ. 40,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಈ ಕ್ರೀಡಾಂಗಣ ಹೊಂದಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗೆ ನಾಲ್ಕು ದಶಕಗಳ ಕಾಲ ಅಧ್ಯಕ್ಷರಾಗಿದ್ದ ಹಾಗು 1977-80 ಬಿ.ಸಿ.ಸಿ.ಐ ಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಚಿನ್ನಸ್ವಾಮಿಯ ಗೌರವಾರ್ಥವಾಗಿ ಕ್ರೀಡಾಂಗಣಕ್ಕೆ ಈ ಹೆಸರನ್ನಿಡಲಾಗಿದೆ.

ಚಿತ್ರಕೃಪೆ: Amarnath.de

ಎಂ.ಎ ಚಿದಂಬರಂ ಕ್ರೀಡಾಂಗಣ:

ಎಂ.ಎ ಚಿದಂಬರಂ ಕ್ರೀಡಾಂಗಣ:

ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಈ ಕ್ರಿಕೆಟ್ ಮೈದಾನಕ್ಕೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಹಾಗು ಬಿ.ಸಿ.ಸಿ.ಐ ನ ಮಾಜಿ ಅಧ್ಯಕ್ಷರಾಗಿದ್ದ ಎಂ.ಎ ಚಿದಂಬರಂ ಅವರ ನೆನಪಿನಾರ್ಥವಾಗಿ ಕ್ರೀಡಾಂಗಣಕ್ಕೆ ಅವರ ಹೆಸರನ್ನಿಡಲಾಗಿದೆ. ಈ ಕ್ರೀಡಾಂಗಣವು ಚಿಪೌಕ್ ಎಂಬ ಪ್ರದೇಶದಲ್ಲಿರುವುದರಿಂದ ಇದನ್ನು ಚಿಪೌಕ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Chandrachoodan Gopalakrishnan

ಫಿರೋಜ್ ಶಾ ಕೋಟ್ಲಾ ಮೈದಾನ:

ಫಿರೋಜ್ ಶಾ ಕೋಟ್ಲಾ ಮೈದಾನ:

ಹಲವು ಅಂತಾರಾಷ್ಟ್ರೀಯ ಏಕದಿನ ಹಾಗು ಟೆಸ್ಟ್ ಪಂದ್ಯಾವಳಿಗಳನ್ನು ಆಡಲಾಗಿರುವ ಫಿರೋಜ್ ಶಾ ಕೋಟ್ಲಾ ಮೈದಾನವಿರುವುದು ದೇಶದ ರಾಜಧಾನಿ ದೆಹಲಿಯಲ್ಲಿ. ಈ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯಾವಳಿಯನ್ನು ಭಾರತವು, ವೆಸ್ಟ್ ಇಂಡೀಸ್ ತಂಡದೊಂದಿಗೆ ನವಂಬರ್ 10, 1948 ರಲ್ಲಿ ಆಡಿತ್ತು. ಈ ಮೈದಾನದಲ್ಲೆ ಅನೀಲ್ ಕುಂಬ್ಳೆ ಒಂದೆ ಇನ್ನಿಂಗ್ಸ್ ನಲ್ಲಿ ಪಾಕಿಸ್ತಾನದ ಹತ್ತು ವಿಕೆಟ್ ಗಳನ್ನು ಕಬಳಿಸಿದ್ದರು.

ಚಿತ್ರಕೃಪೆ: Vineetmbbs

ಸರ್ದಾರ್ ಪಟೇಲ್ ಕ್ರೀಡಾಂಗಣ:

ಸರ್ದಾರ್ ಪಟೇಲ್ ಕ್ರೀಡಾಂಗಣ:

ಈ ಭವ್ಯ ಕ್ರಿಕೆಟ್ ಕ್ರೀಡಾಂಗಣವು ಗುಜರಾತಿನ ಅಹ್ಮದಾಬಾದ್ ನಗರದ ಮೋಟೆರಾ ಎಂಬ ಪ್ರದೇಶದಲ್ಲಿದೆ.

ಚಿತ್ರಕೃಪೆ: Hardik jadeja

ಜವಾಹರ ಲಾಲ್ ನೆಹರೂ ಕ್ರೀಡಾಂಗಣ:

ಜವಾಹರ ಲಾಲ್ ನೆಹರೂ ಕ್ರೀಡಾಂಗಣ:

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಲಾಗುವ ಜವಾಹರ ಲಾಲ್ ನೆಹರೂ ಕ್ರೀಡಾಂಗಣವು ಕೇರಳದ ಕೊಚ್ಚಿ ನಗರದಲ್ಲಿದೆ. 75,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಕ್ರೀಡಾಂಗಣವು ಹೊಂದಿದೆ.

ಚಿತ್ರಕೃಪೆ: Zafurockzzz

ಡಿ.ವೈ.ಪಾಟೀಲ್ ಕ್ರೀಡಾಂಗಣ:

ಡಿ.ವೈ.ಪಾಟೀಲ್ ಕ್ರೀಡಾಂಗಣ:

ಮುಂಬೈ ನಗರದಲ್ಲಿದೆ ಈ ಕ್ರಿಕೆಟ್ ಮೈದಾನ. 60,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಕ್ರೀಡಾಂಗಣವು ಹೊಂದಿದೆ. ಹಫೀಜ್ ಕಂಟ್ರ್ಯಾಕ್ಟರ್ ಎಂಬ ಪ್ರಸಿದ್ಧ ವಾಸ್ತುಶಿಲ್ಪಿಯಿಂದ ಈ ಕ್ರೀಡಾಂಗಣದ ವಿನ್ಯಾಸ ಮಾಡಲಾಗಿದೆ.

ಚಿತ್ರಕೃಪೆ: Redtigerxyz

ಪಿ.ಸಿ.ಎ ಕ್ರೀಡಾಂಗಣ:

ಪಿ.ಸಿ.ಎ ಕ್ರೀಡಾಂಗಣ:

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣವು ಚಂಡೀಗಡ್ ನಗರದ ಹೊರವಲಯದಲ್ಲಿರುವ ಅಜೀತ್‍ಗಡ್ ಎಂಬಲ್ಲೆ ಸ್ಥಿತವಿದೆ. ಹಿಂದೆ ಮೊಹಾಲಿ ಕ್ರಿಕೆಟ್ ಮೈದಾನ ಎಂದು ಕರೆಯಲಾಗುತ್ತಿತ್ತು. 30,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಕ್ರೀಡಾಂಗಣವು ಹೊಂದಿದೆ.

ಗ್ರೀನ್ ಪಾರ್ಕ್ ಕ್ರೀಡಾಂಗಣ:

ಗ್ರೀನ್ ಪಾರ್ಕ್ ಕ್ರೀಡಾಂಗಣ:

ಅಂತಾರಾಷ್ಟ್ರೀಯ ಟೆಸ್ಟ್ ಹಾಗು ಏಕದಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಆತಿಥೇಯವಹಿಸಿದ ಉತ್ತರ ಪ್ರದೇಶದ ಏಕೈಕ ಕ್ರೀಡಾಂಗಣ ಇದಾಗಿದೆ. ಈ ಕ್ರೀಡಾಂಗಣ ಇರುವುದು ಉತ್ತರ ಪ್ರದೇಶ ರಾಜ್ಯದ ಕಾನಪೂರ್ ನಲ್ಲಿ. 60,000 ದಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಈ ಕ್ರೀಡಾಂಗಣವು ಹೊಂದಿದೆ.

ಚಿತ್ರಕೃಪೆ: Prashubh Mishra

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X