Search
  • Follow NativePlanet
Share
» »ಸಫಾರಿ ಮಾಡಬೇಕಾದ್ರೆ ನೀವು ಹೋಗಬೇಕಾದ ತಾಣಗಳಿವು

ಸಫಾರಿ ಮಾಡಬೇಕಾದ್ರೆ ನೀವು ಹೋಗಬೇಕಾದ ತಾಣಗಳಿವು

ಬಹಳಷ್ಟು ಜನರಿಗೆ ಕಾಡಿನಲ್ಲಿ ಕಾಡುಪ್ರಾಣಿಗಳ ಸಫಾರಿ ಮಾಡೋದಂದ್ರೆ ಇಷ್ಟ ಇರುತ್ತದೆ. ಒಂದು ಜೀಪ್‌ನಲ್ಲಿ ವನ್ಯ ಜೀವಿಗಳನ್ನು ನೋಡೋದರಲ್ಲಿ ಇರುವ ಮಜಾನೇ ಬೇರೆ. ಕೆಲವು ಮೃಗಾಲಯಗಳು ತನ್ನಲ್ಲಿ ಬರುವ ಪ್ರವಾಸಿಗರಿಗೆ ಸಫಾರಿ ಸೌಲಭ್ಯವನ್ನು ಒದಗಿಸುತ್ತವೆ. ಕೆಲವು ಭದ್ರತೆ ಇರುವಂತಹ ವಾಹನಗಳಲ್ಲಿ ಸಫಾರಿಯ ಒಳಗೆ ಸವಾರಿ ಮಾಡಲು ಅನುಮತಿ ಕೊಡುತ್ತಾರೆ. ಇಲ್ಲಿ ಅವರಿಗೆ ವನ್ಯ ಜೀವಿಗಳೊಂದಿಗೆ ಅವುಗಳನ್ನು ಕಾಡಿನ ಮಧ್ಯೆ ಹತ್ತಿರದಿಂದ ನೋಡುವುದು ಒಂದು ರೋಚಕ ಅನುಭವವನ್ನು ನೀಡುತ್ತದೆ.

ಜಿಮ್ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ್

ಜಿಮ್ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ್

PC: Vijay Kabra

ಭಾರತದ ಮೊದಲ ಅತ್ಯಂತ ಹಳೆಯದಾದ ರಾಷ್ಟ್ರೀಯ ಉದ್ಯಾನವನವಾದ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನವು ಸಾಹಸಪ್ರಿಯರಿಗೆ ಮತ್ತು ವನ್ಯಜೀವಿಗಳ ಪ್ರಿಯರಿಗೆ ಸ್ವರ್ಗದಂತಿದೆ. ಈ ಉದ್ಯಾನದ ಒಳಗಡೆ ಹುಲಿಗಳನ್ನು ನೋಡುವ ಅವಕಾಶ ಕಡಿಮೆಯಾದರೂ ನೀವು ಇಲ್ಲಿ ಅಪಾಯ ಮಾಡದೇ ಇರುವ ಪ್ರಾಣಿಗಳನ್ನು ಪತ್ತೆ ಹಚ್ಚಬಹುದಾಗಿದೆ! ಕಾಡು ಆನೆಗಳನ್ನು ಒಳಗೊಂಡ ಕೆಲವೇ ಕೆಲವು ಉತ್ತರ ಭಾರತದ ಅರಣ್ಯಗಳಲ್ಲಿ ಇದೂ ಒಂದಾಗಿದೆ. ಈ ಪಾರ್ಕ್ ನ ಒಳಗೆ ಜೀಪಿನಲ್ಲಿ ಸವಾರಿ ಮಾಡುವುದು ಅತ್ಯಂತ ಮೌಲ್ಯಯುತವಾದುದಾಗಿದೆ.

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್, ಬೆಂಗಳೂರು

ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್, ಬೆಂಗಳೂರು

ಸಂದರ್ಶಕರಿಗೆ ಭೇಟಿಯ ಅವಕಾಶವನ್ನು ನೀಡುವ ಉದ್ಯಾನವನಗಳಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವೂ ಒಂದಾಗಿದೆ. ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಈ ಉದ್ಯಾನವನವು ವನ್ಯಜೀವಗಳನ್ನು ಕಾಡುಗಳ ಮಧ್ಯದಲ್ಲಿ ಭೇಟಿ ನೀಡುವ ರೋಚಕ ಅವಕಾಶವನ್ನು ಒದಗಿಸಿಕೊಡುತ್ತದೆ. ವನ್ಯಜೀವಿಗಳನ್ನು ಇಲ್ಲಿಯ ಕಾಡುಗಳ ಮಧ್ಯೆ ನೋಡುವುದು ಈ ಬನ್ನೇರುಘಟ್ಟ ಬಯಾಲಾಜಿಕಲ್ ಪಾರ್ಕ್ ನ ಸಫಾರಿಯ ಮುಖ್ಯ ಅಂಶವಾಗಿದೆ. ಅದು ರಾಗಿಹಳ್ಳಿ ಅಭಯಾರಣ್ಯ , ಅಸ್ಫಾಲ್ಟ್ ರಸ್ತೆ ಮೂಲಕ ಸಂಪರ್ಕಿಸುವ ಮೃಗಾಲಯದಿಂದ 4 ಕಿ.ಮೀ ದೂರದಲ್ಲಿದೆ.

ಈ ಮಾರ್ಗವು ಸಫಾರಿಯು ಮಟ್ಟುಬುಂಡೆ ಗುಡ್ಡದ ಚಿತ್ರಣವಿರುವ ಈ ಮಾರ್ಗದಲ್ಲಿ ಹಾದು ಹೋಗುವ ಸ್ಪೂರ್ತಿದಾಯಕ ಅವಕಾಶವನ್ನು ನೀಡುತ್ತದೆ. ಮತ್ತು ಬೆರಗುಗೊಳಿಸುವಂತಹ ಕೆಲವು ಭೂದೃಶ್ಯಗಳು ಕಡಿದಾದ ಬಂಡೆಗಳ ಸರಪಳಿಯ ದೃಶ್ಯಗಳು ಮತ್ತು ಸೊಂಪಾದ ಹಸಿರು ಕಾಡುಗಳ ಕಣಿವೆಗಳು ಇವೆಲ್ಲವನ್ನೂ ಹೊಂದಿದೆ.

ಈ ಉದ್ಯಾನವನವು ವನ್ಯಜೀವಿಗಳನ್ನು ವೀಕ್ಷಿಸುವ ಸಫಾರಿಯ ಅನುಭವವನ್ನು ಉತ್ತಮವಾಗಿ ಒದಗಿಸಿಕೊಡುವುದಲ್ಲದೆ ಇಲ್ಲಿ ವನ್ಯಜೀವಿಗಳನ್ನು ನೋಡುವ ಅವುಗಳ ಬಗ್ಗೆ ಅಧ್ಯಯನ ಮಾಡುವ ಮತ್ತು ಭವ್ಯವಾದ ಪರಭಕ್ಷಕ ಮತ್ತು ಇನ್ನಿತರ ಪ್ರಾಣಿಗಳನ್ನು ನೋಡಿ ಆನಂದಿಸುವ ಅವಕಾಶವನ್ನು ಒದಗಿಸುತ್ತದೆ.

ಕನ್ಹಾ ರಾಷ್ಟ್ರೀಯ ಉದ್ಯಾನವನ , ಮಧ್ಯಪ್ರದೇಶ

ಕನ್ಹಾ ರಾಷ್ಟ್ರೀಯ ಉದ್ಯಾನವನ , ಮಧ್ಯಪ್ರದೇಶ

PC:John Duncan

ನೀವು ಕೆಲವು "ಹುಲಿ ಹುಡುಕುವ" ಪ್ರವಾಸ ಕೈಗೊಳ್ಳ ಬೇಕೆಂದಿದ್ದಲ್ಲಿ ಮಧ್ಯಪ್ರದೇಶದಲ್ಲಿರುವ ಮಂಡಲಾದಲ್ಲಿಯ ಕನ್ಹಾ ರಾಷ್ಟ್ರೀಯ ಉದ್ಯಾನವನವು ನಿಮಗೆ ಒಂದು ಉತ್ತಮವಾದ ಸವಾಲುದಾಯಕ ಪ್ರವಾಸವಾಗಿರುತ್ತದೆ. ಈ ಅಗಾಧವಾಗಿ ವಿಸ್ತಾರವಾಗಿರುವ ಕಾಡಿನಲ್ಲಿ ನೀವು ಹುಲಿಗಳನ್ನು ಕಾಣಬಹುದಾಗಿದೆ. ಸುತ್ತಲೂ ಬಫರ್ ಜೋನ್ ನಿಂದ ಸುತ್ತುವರಿದಿರುವ ಈ ಉದ್ಯಾನವನದ ಬೃಹತ್ ಕೋರ್ ಪ್ರದೇಶಕ್ಕೆ ಧನ್ಯವಾದಗಳನ್ನು ಅರ್ಪಿಸಿ. ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ರಾಯಲ್ ಬೆಂಗಾಲ್ ಹುಲಿಯ ಸಂತಾನವನ್ನು ಕಾಣಬಹುದಾಗಿದೆ. ಅಲ್ಲದೆ, ಚಿರತೆ, ಬಾರಸಿಂಗ ಮತ್ತು ಭಾರತದ ಕಾಡು ನಾಯಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಕುದುರೆ-ಲಾಳದ ಆಕಾರದಲ್ಲಿರುವ ಈ ಕಣಿವೆಗಳು 940 ಚದರ ಕಿ.ಮೀ ಗಳಷ್ಟು ಪ್ರದೇಶದಲ್ಲಿ ಹರಡಿದ್ದು ಇಲ್ಲಿ ಆನೆಗಳ ಸಫಾರಿಗಳನ್ನು ವೀಕ್ಷಿಸಬಹುದು.

ಕಾಜಿರಂಗಾ ರಾಷ್ಟ್ರೀಯ ಉದ್ಯಾನ, ಅಸ್ಸಾಂ

ಕಾಜಿರಂಗಾ ರಾಷ್ಟ್ರೀಯ ಉದ್ಯಾನ, ಅಸ್ಸಾಂ

ಅಸ್ಸಾಂನಲ್ಲಿರುವ ಈ ಉದ್ಯಾನವು ನೇಪಾಳ ಮತ್ತು ಬಾಂಗ್ಲಾದೇಶದ ನಡುವಿನ ಕಿರಿದಾದ ಈಶಾನ್ಯ ಭಾಗದಲ್ಲಿದೆ ಮತ್ತು ಸಂಪೂರ್ಣ ಕಾಡಿನ ಭೂದೃಶ್ಯವನ್ನು ,ಎತ್ತರದ ಎಲಿಫೆಂಟ್ ಗ್ರಾಸ್, ಜವುಗು ಮತ್ತು ಆಳವಿಲ್ಲದ ಕೊಳಗಳು ಇತ್ಯಾದಿಗಳನ್ನು ಹೊಂದಿದೆ. ವಿಶ್ವ ಪರಂಪರೆ ತಾಣವಾದ ಈ ಉದ್ಯಾನವನವು ಜಗತ್ತಿನಲ್ಲಿಯೇ ಮೂರನೇ ಎರಡುಭಾಗದಷ್ಟು ಭಾರತದ ಒಂದು ಕೊಂಬಿನ ಖಡ್ಬಮೃಗವನ್ನು ಹೊಂದಿರುವುದಕ್ಕೆ ಪ್ರಸಿದ್ದಿಯನ್ನು ಪಡೆದಿದ್ದು ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ.

ಇದು ಆನೆಗಳನ್ನು ಹೇರಳವಾಗಿ ಹೊಂದಿದೆ. ಕಾಡುಕೋಣಗಳು , ಮಾಂತ್ರಿಕ ಹಲ್ಲಿಗಳು, ಮತ್ತು ನೀರಿನ ಪಕ್ಷಿಗಳು ಮುಂತಾದುವುಗಳನ್ನೂ ಕೂಡಾ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಇಲ್ಲಿ ನೀವು ನಿಮ್ಮದೇ ಖಾಸಗಿ ವಾಹನ ಅಥವ ಆನೆಗಳ ಮೇಲೆ ಕೂಡಾ ಸವಾರಿಯ ಆಯ್ಕೆ ಮಾಡಬಹುದಾಗಿದೆ.

ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಬಂಗಾಳ

ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಬಂಗಾಳ

ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳಿಂದ ರೂಪುಗೊಂಡ ವಿಶ್ವದ ಅತಿದೊಡ್ಡ ಡೆಲ್ಟಾದ ಭಾಗವಾಗಿರುವ ಸುಂದರ್ಬನ್ಸ್, ಇದು ದಟ್ಟವಾದ ಮ್ಯಾಂಗ್ರೋವ್ ಕಾಡುಗಳಿಂದ ಮುಚ್ಚಲ್ಪಟ್ಟಿದೆ. ದೇಶದಲ್ಲಿ ಬಂಗಾಳದ ಹುಲಿಗಳನ್ನು ಹೊಂದಿದ ಅತಿದೊಡ್ಡ ಮೀಸಲು ಪ್ರದೇಶಗಳಲ್ಲಿ ಇದೂ ಒಂದಾಗಿದೆ, ಅಲ್ಲದೇ ಹೇರಳವಾಗಿ ವಿವಿಧ ಪಕ್ಷಿಗಳು, ಸರೀಸೃಪಗಳು ಕೂಡಾ ಇವೆ ಮತ್ತು ಬೆನ್ನು ಮೂಳೆಗಳಿಲ್ಲದ ಜಾತಿಗಳಾದ ಉಪ್ಪುನೀರಿನ ಮೊಸಳೆಗಳು ಇತ್ಯಾದಿಗಳನ್ನು ಹೊಂದಿದೆ. ಇದಕ್ಕಿಂತ ಹೆಚ್ಚಿನದು ಇನ್ನೇನಿದೆ ನೀವು ಇದಕ್ಕಾಗಿ ಸಫಾರಿ ಮಾಡಲು ಜೀಪುಗಳಲ್ಲಿ ಹೋಗಲಾಗುವುದಿಲ್ಲ ಆದರೆ ನಾವೆಗಳಲ್ಲಿ ಹೋಗಬಹುದಾಗಿದೆ.

ಗೀರ್ ರಾಷ್ಟ್ರೀಯ ಉದ್ಯಾನವನ ಗುಜರಾತ್

ಗೀರ್ ರಾಷ್ಟ್ರೀಯ ಉದ್ಯಾನವನ ಗುಜರಾತ್

ಗೀರ್ ವನ್ಯಜೀವಿ ಅಭಯಾರಣ್ಯವು ಅನೇಕ ಏಷಿಯಾದ ಅಳಿವಂಚಿನಲ್ಲಿರುವ ಸಿಂಹಗಳಿಗೆ ನೆಲೆಯಾಗಿದೆ ಆದರೆ ಇಲ್ಲಿ ಹುಲಿಗಳನ್ನು ನೋಡುವ ಅವಕಾಶವಿರುವುದಿಲ್ಲ. ಏಕೆಂದರೆ ಇಲ್ಲಿ ಹುಲಿಗಳೇ ಇಲ್ಲ. ಇಲ್ಲಿ ಸಿಂಹಗಳನ್ನು ಹೊರತು ಪಡಿಸಿದರೆ ಎರಡನೇಯದಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದಾದುದೆಂದರೆ ಚಿರತೆಗಳು, ಈ ಅಭಯಾರಣ್ಯವು ಕೆಲವು ಅತ್ಯುತ್ತಮವಾದ ಜೀಪಿನ ಸವಾರಿಯ ಮೂಲಕ ಸುಂದರವಾದ ದೃಶ್ಯಗಳಿರುವ ಜಾಗಗಳನ್ನು ನೋಡುವ ಅವಕಾಶವನ್ನು ಒದಗಿಸಿಕೊಡುತ್ತದೆ.

ಬಂಧಾವ್ ಘಡ್ ರಾಷ್ಟ್ರಿಯ ಉದ್ಯಾನವನ , ಮಧ್ಯಪ್ರದೇಶ

ಬಂಧಾವ್ ಘಡ್ ರಾಷ್ಟ್ರಿಯ ಉದ್ಯಾನವನ , ಮಧ್ಯಪ್ರದೇಶ

ಈ ಅಭಯಾರಣ್ಯದ ಪ್ರಮುಖ ಅಂಶವೆಂದರೆ ಇಲ್ಲಿ ದೇಶದಲ್ಲಿಯೇ ಅತ್ಯಧಿಕ ಸಂಖ್ಯೆಯ ಹುಲಿಗಳಿರುವುದು. ಆದುದರಿಂದ ಇಲ್ಲಿ ಹುಲಿಗಳನ್ನು ಕಾಣದೇ ಇರಲು ಸಾಧ್ಯವೇ ಇಲ್ಲ. ಇನ್ನೊಂದು ಪ್ರವಾಸಿ ಆಕರ್ಷಣೆಯೆಂದರೆ ಇಲ್ಲಿಗೆ ಹತ್ತಿರವಿರುವ ತಾಲಾ ಹಳ್ಳಿ ಈ ಹಳ್ಳಿಯ ವಿಶೇಷತೆಯೇನೆಂದರೆ ಈ ಹಳ್ಳಿಯಲ್ಲಿ ನಿಮಗೆ ಅನುಕೂಲವಾಗುವಂತಹ ದರದಲ್ಲಿಯ ವಾಸ್ತವ್ಯಕ್ಕೆ ಆಯ್ಕೆಗಳನ್ನು ಹೊಂದಿರುವುದು. ನೀವು ಇಲ್ಲಿ ಆನೆಗಳ ಸಫಾರಿಯನ್ನು ಆನಂದಿಸುವ ಒಂದು ಆಯ್ಕೆಯನ್ನು ಕೂಡಾ ಮಾಡಬಹುದಾಗಿದೆ.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ , ರಾಜಸ್ಥಾನ

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ , ರಾಜಸ್ಥಾನ

ನೀವು ಹುಲಿಗಳ ವಿವಿಧ ಅವತಾರಗಳನ್ನು ನೋಡಬೇಕೆಂದಿದ್ದಲ್ಲಿ, ಈ 1,334 ಚ.ಕೀ ಮೀ ವಿಸ್ತಾರವಿರುವ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿ ನೀವು ದಿನದ ಸಮಯದಲ್ಲಿ ಪೂರ್ವ ಭಾವಿಯಾಗಿ ಕಾರ್ಯನಿರತವಾಗಿರುವ ಹುಲಿಗಳನ್ನು ಕಾಣಬಹುದಾಗಿದೆ . ಈ ಅಭಯಾರಣ್ಯದಲ್ಲಿ ಚಿತ್ರಾತ್ಮಕ ಅವಶೇಷಗಳನ್ನು ಕಾಣಬಹುದಾದುದರಿಂದ ಇದನ್ನು ಪ್ರಸಿದ್ದ ಪರಂಪರೆಯ ತಾಣವೆಂದು ಗುರುತಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more