Search
  • Follow NativePlanet
Share
» »ದಕ್ಷಿಣ ಭಾರತದ ಕೆಲವು ಅದ್ಭುತ ಕೆರೆಗಳು

ದಕ್ಷಿಣ ಭಾರತದ ಕೆಲವು ಅದ್ಭುತ ಕೆರೆಗಳು

By Vijay

ಮನಸ್ಸು ಒತ್ತಡದಿಂದ ಬಳಲುತ್ತಿದ್ದಾಗ, ಏಕಾಂತ ಸಮಯವನ್ನು ಹಾಯಾಗಿ ಕಳೆಯಬೇಕೆಂದಾಗ, ಹಾಗೆ ಸುಮ್ಮನೆ ಕೆಲ ಸಮಯ ಪ್ರಶಾಂತವಾಗಿ ವಿಶ್ರಾಂತಿ ಪಡೆಯಬೇಕೆಂದಾಗ ಬಹುತೇಕರಿಗೆ ನೆನಪಾಗುವುದು ಉದ್ಯಾನಗಳು ಇಲ್ಲವೆ ಕೆರೆಯ ತಟಗಳು ಹೌದಲ್ಲವೆ? ಸಾಮಾನ್ಯವಾಗಿ ಕೆರೆಗಳು ವಿಶಾಲವಾಗಿ ಚಾಚಿ ತೆರೆದ ಬಯಲಿನಲ್ಲಿರುವುದರಿಂದ ಒಂದು ಅನನ್ಯ ಅನುಭವ ಕರುಣಿಸುತ್ತವೆ.

ಪೇಟಿಎಂ ಸೀಮಿತ ಅವಧಿಯ ಕೊಡುಗೆ : ರಿಚಾರ್ಜ್ ಮಾಡಿ, ಬಿಲ್ ಪಾವತಿಸಿ ಹಾಗೂ ಉಚಿತ ಉಬರ್ ಸವಾರಿ ಪಡೆಯಿರಿ

ನಿಮ್ಮ ಆಪ್ತರೊಂದಿಗೊ, ಸಂಗಾತಿಯೊಡನೆಯೊ ಕುಳಿತು ಅದ್ಭುತವಾದ ಸಮಯ ಕಳೆಯಲು ಕೆರೆಗಳು ಆದರ್ಶ ಆಯ್ಕೆಗಳು ಎಂದೆ ಹೇಳಬಹುದು. ಅಲ್ಲದೆ ತೆರೆದ ಬಯಲಿನಲ್ಲಿ ತಂಗಾಳಿಯ ಅಪ್ಪುಗೆ, ವಿನ್ಯಾಸದಲ್ಲಿ ಚಲಿಸುವ ಕೆರೆಯ ನೀರಿನ ಅಲೆಗಳು, ತಳದಲ್ಲಿ ವಿಚಲಿತರಾಗಿ ಓಡಾಡುವ ಜಲಚರಗಳು ಮನಸ್ಸಿಗೆ ಮುದವನ್ನು ನೀಡುತ್ತದೆ.

ವಿಶೇಷ ಲೇಖನ : ದಕ್ಷಿಣ ಭಾರತದ ಸುಂದರ ಜಲಪಾತಗಳು

ಇನ್ನೂ ಕೆಲ ಕೆರೆಗಳು ಸಾಕಷ್ಟು ಆಳ ಹೊಂದಿರದೆ ಈಜು ಸ್ನೇಹಿಯಾಗಿಯೂ ಗಮನ ಸೆಳೆಯುತ್ತವೆ. ಮಕ್ಕಳಿಂದ ಹಿಡಿದು ಹಿರಿಯರೂ ಸಹ ಇಂತಹ ಕೆರೆಗಳಲ್ಲಿ ಜಲ ಕ್ರೀಡೆ, ನೀರಾಟಗಳನ್ನು ಆಡಿ ಸಂತಸ ಪಡುತ್ತಾರೆ. ಕೆಲ ಕೆರೆಗಳು ತಮ್ಮ ಅದ್ವಿತೀಯ ಸೌಂದರ್ಯದಿಂದ ಪ್ರವಾಸಿ ಆಕರ್ಷಣೆಯಾಗಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಪ್ರಸ್ತುತ ಲೇಖನದ ಮೂಲಕ ದಕ್ಷಿಣ ಭಾರತದಲ್ಲಿ ನೀವು ಭೇಟಿ ನೀಡಬಹುದಾದ ಕೆಲ ಗುರುತರವಾದ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಕೆಲ ಆಯ್ದ ಕೆರೆಗಳ ಕುರಿತು ತಿಳಿಯಿರಿ.

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಹೊನ್ನೆಮರುಡು ಕೆರೆ : ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳಲ್ಲಿ ನೆಲೆಸಿರುವ ಪುಟ್ಟ ಗ್ರಾಮ ಹೊನ್ನೆಮರುಡು. ಲಿಂಗನಮಕ್ಕಿಯ ಜಲಾಶಯಕ್ಕೆ ಎದುರಾಗಿರುವ ಹೊನ್ನೆಮರುಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಹೊನ್ನೆಮರುಡು ಕೆರೆ ಎಂಬ ಹೆಸರಿನಿಂದಲೆ ಕರೆಯಲಾಗುವ ಈ ಜಲಾಶಯದ ಮಧ್ಯದಲ್ಲಿ ದ್ವೀಪವೊಂದಿದ್ದು ಯುವ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.

ಚಿತ್ರಕೃಪೆ: Srinath.holla

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಹಲವು ಪ್ರಮುಖ ನಗರಗಳಿಂದ ಈ ಕೆರೆಯ ಪ್ರದೇಶದಲ್ಲಿ ಪ್ರವಾಸಿ ಸಂಸ್ಥೆಗಳಿಂದ ಆಯೋಜಿಸಲಾಗುವ ಸಾಹಸಮಯ ಚಟುವಟಿಕೆಗಳನ್ನು ಆಸ್ವಾದಿಸಲು ಯುವ ಪ್ರವಾಸಿಗರು ಬರುತ್ತಿರುತ್ತಾರೆ.

ಚಿತ್ರಕೃಪೆ: Srinath.holla

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕಣ್ಣು ಚಾಚಿದಷ್ಟೂ ವಿಶಾಲವಾದ ಕೆರೆ, ರೋಮಾಂಚನಗೊಳಿಸುವ ಜಲಕ್ರೀಡೆಗಳು, ಕೆರೆಯ ಮಧ್ಯದ ನಡುಗಡ್ಡೆಯಲ್ಲಿ ಕ್ಯಾಂಪುಗಳು, ಮನಮೋಹಕವಾದ ಸೂರ್ಯೋದಯ ಹಾಗೂ ಸೂರ್ಯಾಸ್ತ ನೋಟಗಳು ಈ ರೀತಿಯಾಗಿ ಈ ಬಂಗಾರದ ಕೆರೆಯು ಪ್ರವಾಸಿಗರ ಪಾಲಿಗೆ ಬಂಗಾರದಂತೆಯೆ ಕಂಗೊಳಿಸುತ್ತದೆ.

ಚಿತ್ರಕೃಪೆ: Abinsj

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕುಕ್ಕರಹಳ್ಳಿ ಕೆರೆ : ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ. ಒತ್ತಡದ ಜೀವನ ನಡೆಸುವವರಿಗೆ ಚೈತನ್ಯ ಕರುಣಿಸುವ ಈ ಕೆರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದ ಫಲವಾಗಿ ರೂಪಗೊಂಡಿದೆ. 1864 ರಲ್ಲಿ ನಗರದ ಹೊರವಲಯದ ಕೃಷಿ ಭೂಮಿಗೆ ನೀರೋದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಕೆರೆ ಇಂದು ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: mysore.nic.in

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಹಿಂದೆ ಈ ಕೆರೆಯಿಂದ ವಸತಿ ಪ್ರದೇಶಗಳಿಗೆ ನೀರನ್ನು ಸರಬರಾಜು ಸಹ ಮಾಡಲಾಗುತ್ತಿತ್ತು. ಕಾಲಕ್ರಮೇಣ ತ್ಯಾಜ್ಯ, ಚರಂಡಿ ನೀರು ಇದರಲ್ಲಿ ಸೇರ್ಪಡೆಗೊಂಡು ಕೆರೆಯು ತನ್ನ ನೈಜ ಸ್ವಚ್ಛತೆಯನ್ನು ಕಳೆದುಕೊಂಡಿತು. ಅಂಶ ತಿಳಿದ ಕೆಲ ಸಂಘ ಸಂಸ್ಥೆಗಳು ಮುಂದೆ ಬಂದು ಇದರ ಶುದ್ಧಿಕರಣಕ್ಕೆ ಕೈ ಜೋಡಿಸಿದರು. ಅಲ್ಲದೆ ಏಷಿಯಾ ಡೆವೆಲಪ್‍ಮೆಂಟ್ ಬ್ಯಾಂಕ್ ಅವರ ಹಣ ಸಹಕಾರದೊಂದಿಗೆ ಕರ್ನಾಟಕ ಅರ್ಬನ್ ಇನ್ಫ್ರಾ ಸ್ಟ್ರಕ್ಚರ್ ಡೆವೆಲಪ್‍ಮೆಂಟ್ ಲಿಮಿಟೆಡ್ ಹಾಗೂ ಮೈಸೂರು ವಿಶ್ವವಿದ್ಯಾಲಯ ಜಂಟಿಯಾಗಿ ಈ ಕೆರೆಯ ಅಭಿವೃದ್ಧಿಯ ಹೊಣೆ ಹೊತ್ತರು. ತತ್ಫಲವಾಗಿ ಇಂದು ಕೆರೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಗಾಳಿ ಸೇವನೆ ಮಾಡುವವರ, ಜಾಗಿಂಗ್ ಮಾಡುವವರ ಪಾಲಿಗೆ ಸ್ವರ್ಗವಗಿದೆ.

ಚಿತ್ರಕೃಪೆ: Ravinder M A

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಪಂಪ ಸರೋವರ : ಹಂಪಿಯ ಬಳಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿರುವ ಪಂಪ ಸರೋವರವು ಒಂದು ಪವಿತ್ರವಾದ ಕೆರೆಯಾಗಿದೆ. ರಾಮಾಯಣದಲ್ಲೂ ಸಹ ಉಲ್ಲೇಖಿತಗೊಂಡಿರುವ ಈ ಕರೆಯು ಶಬರಿಯು ರಾಮನಿಗಾಗಿ ಕಾಯುತ್ತಿದ್ದ ಸ್ಥಳವಾಗಿತ್ತೆಂದು ಹೇಳಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಪಂಪ ಎನ್ನುವವಳು ಪಾರ್ವತಿಯ ಅವತಾರವೆನ್ನಲಾಗಿದ್ದು ಶಿವನನ್ನು ನೆಚ್ಚಿಸಲು ಇಲ್ಲಿ ತಪ ಗೈದಿದ್ದಳೆನ್ನಲಾಗಿದೆ. ಕಥೆ ಏನೇ ಇರಲಿ ಪಂಪ ಸರೋವರವು ಭಾರತದ ಪವಿತ್ರ ಸರೋವರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Indiancorrector

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಮಾವಿನ ಕೆರೆ : ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರು ನಗರದಲ್ಲಿರುವ ಈ ಐತಿಹಾಸಿಕ ಕೆರೆಯು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಆಮ್ ತಾಲಾಬ್ ಎಂತಲೂ ಕಲ್ರೆಯಲ್ಪಡುವ ಈ ಕೆರೆಯಲ್ಲಿ ಹಿಂದೆ ದೋಣಿ ವಿಹಾರದ ಸೌಲಭ್ಯವಿತ್ತು. ಪ್ರಸ್ತುತ ದೋಣಿ ವಿಹಾರವಿಲ್ಲದಿದ್ದರೂ ದಂಡೆಯಗುಂಟ ಕಟ್ಟೆಯನ್ನು ನಿರ್ಮಿಸಿ ಕೂರಲು ಬೆಂಚುಗಳನ್ನು ಹಾಕಲಾಗಿದೆ. ಕಾರಣ ಸಂಜೆಯ ಸಮಯವನ್ನು ಸುಮಧುರವಾಗಿ ಕಳೆಯಲು ಸಾಕಷ್ಟು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಕೆರೆಯ ತಟದಲ್ಲಿ ಮಕ್ಕಳಿಗಾಗಿ ಉದ್ಯಾನವೂ ಸಹ ಇದ್ದು ಇನ್ನೂ ಹಿರಿಯರು ಅಲ್ಲಲ್ಲಿ ದೊರಕುವ ರುಚಿಕರವಾದ ಕುರುಕಲು ತಿಂಡಿಗಳನ್ನು ಸವಿಯುತ್ತ ಹಾಯಾಗಿ ಸಮಯ ಕಳೆಯಬಹುದು. ಈ ಕೆರೆಯು ಮೇಲಿನಿಂದ ಗಮನಿಸಿದಾಗ ಮಾವಿನ ಕಾಯಿಯ ರೂಪದ ಹಾಗೆ ಕಂಡುಬರುವುದರಿಂದ ಇದಕ್ಕೆ ಮಾವಿನ ಕೆರೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Tanzeelahad

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕಿಲ್ಲಾ ಕೆರೆ : ಹಿಂದೆ "ವೇಣುಗ್ರಾಮ" ಎಂಬ ಹೆಸರು ಹೊಂದಿದ್ದ ಇಂದಿನ ಬೆಳಗಾವಿ ನಗರದಲ್ಲಿರುವ ಕೋಟೆ ಕೆರೆಯು ಒಂದು ಪ್ರಸಿದ್ಧ ಕೆರೆಯಾಗಿದೆ. ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡು ಬಂದಿರುವ ಈ ಕೆರೆಯು ಬೆಳಗಾವಿಯ ಹೆಗ್ಗುರುತು ಎಂದರೂ ತಪ್ಪಾಗಲಾರದು.

ಚಿತ್ರಕೃಪೆ: Mahant025

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಉಣಕಲ್ ಕೆರೆ : ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಪ್ರಮುಖ ಹೆಗ್ಗುರುತಾದ ಉಣಕಲ್ ಕೆರೆಯು ಪ್ರದೇಶದ ಜನಪ್ರೀಯ ಪಿಕ್ನಿಕ್ ತಾಣವಾಗಿದೆ. ದೋಣಿ ವಿಹಾರದ ಸೌಲಭ್ಯವಿರುವ ಈ ಕೆರೆಯ ಸುತ್ತಮುತ್ತಲಿನ ಪ್ರದೇಶವು ಹಾಯಾದ ಅನುಭವ ನೀಡುತ್ತವೆ. ಇತ್ತೀಚಿಗಷ್ಟೆ ಪುನಿತ್ ರಾಜ್ ಕುಮಾರ್ ಅಭಿನಯದ ಕನ್ನಡ ಚಿತ್ರವೊಂದರ ಸನ್ನಿವೇಷವು ಇಲ್ಲಿ ಚಿತ್ರೀಕರಣಗೊಂಡಿತ್ತು.

ಚಿತ್ರಕೃಪೆ: Mohd Khaise Ahmed

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕಾರಂಜಿ ಕೆರೆ : ಮೈಸೂರಿನಲ್ಲಿದ್ದಾಗ, ಪ್ರಶಾಂತಮಯ ಹಾಗೂ ಹಿತಕರವಾದ ಸ್ಥಳದಲ್ಲಿ ತುಸು ವಿಶ್ರಾಂತಿಯನ್ನು ಪಡೆಯಲು ಮನ ಬಯಸಿದರೆ ಇಲ್ಲಿನ ಕಾರಂಜಿ ಕೆರೆಗೊಮ್ಮೆ ಭೇಟಿ ನೀಡಿ ಹಾಗೂ ನಿರಾಳರಾಗಿ. ಮೈಸೂರು ಮೃಗಾಲಯದ ಒಂದು ಭಾಗವಾಗಿರುವ ಕಾರಂಜಿ ಕೆರೆಯು ಸುತ್ತಲೂ ಸುಂದರ ಹಾಗೂ ಪ್ರಶಾಂತಮಯ ಉದ್ಯಾನ ಹೊಂದಿರುವ ಅದ್ಭುತ ಪ್ರವಾಸಿ ಆಕರ್ಷಣೆಯಾಗಿ ನೋಡುಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Riju K

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕೆರೆಯ ಸುತ್ತಲಿರುವ ನೈಸರ್ಗಿಕ ಉದ್ಯಾನ ಕಣ್ಮನ ಸೆಳೆಯುವ ಪಾತರಗಿತ್ತಿ ಉದ್ಯಾನ (ಬಟರ್ ಫ್ಲೈ ಪಾರ್ಕ್) ಹಾಗೂ ನಡೆಯುವ ಏವಿಯರಿ (ಒಂದು ರೀತಿಯಲ್ಲಿ ಪಂಜರದಲ್ಲಿ ನಡೆಯುವ ಹಾಗೆ) ಅನ್ನು ಹೊಂದಿದೆ. ವಿಶೇಷವೆಂದರೆ ಈ ಪಾದಚಾರಿ ಏವಿಯರಿ ಭಾರತದ ಅತಿ ದೊಡ್ಡದಾದ ಮಾರ್ಗವಾಗಿದೆ.

ಚಿತ್ರಕೃಪೆ: Riju K

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಬ್ಲ್ಯಾಕ್ ಬಕ್ ರಿಸಾರ್ಟ್ ಕೆರೆ : ಉತ್ತರ ಕರ್ನಾಟಕದ ಉತ್ತರದ ತುತ್ತುಅ ತುದಿಯಲ್ಲಿ ನೆಲೆಸಿರುವ ಬೀದರ್ ನಗರದಿಂದ 18 ಕಿ.ಮೀ ದೂರದಲ್ಲಿ ಸುಂದರವಾದ ಬ್ಲ್ಯಾಕ್ ಬಕ್ ರಿಸಾರ್ಟುವೊಂದರ ಬಳಿ ಈ ಕೆರೆಯಿದೆ. ರಿಸಾರ್ಟಿನ ನಿಗದಿತ ಶುಲ್ಕ ಪಾವತಿಸಿ ಈ ಕೆರೆಯಲ್ಲಿ ತೆಪ್ಪ ಸವಾರಿ ಮಾಡಬಹುದಾಗಿದೆ. ಅಲ್ಲದೆ ಕೆರೆಯಲ್ಲಿ ವಿಹಾರವು ಪಕ್ಷಿ ವೀಕ್ಷಣೆಗೂ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Santosh3397

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಅಗಸ್ತ್ಯ ಕೆರೆ : ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಸಿದ್ಧ ಹಾಗೂ ಧಾರ್ಮಿಕ ಕೇಂದ್ರವಾದ ಬಾದಾಮಿಯ ಗುರುತರವಾದ ಆಕರ್ಷಣೆಗಳಲ್ಲೊಂದಾಗಿದೆ ಅಗಸ್ತ್ಯ ಕೆರೆ. ಎರಡು ಬೆಟ್ಟಗಳ ಮಧ್ಯೆ ಸ್ಥಿತವಿರುವ ಈ ಕೆರೆಗೆ ಸಪ್ತರ್ಷಿಗಳ ಪೈಕಿ ಒಬ್ಬರಾದ ಅಗಸ್ತ್ಯ ಮುನಿಗಳ ಗೌರವಾರ್ಥವಾಗಿ ಕೆರೆಗೆ ಈ ಹೆಸರು ಬಂದಿದೆ ಹಾಗೂ ಆ ಎರಡು ಬೆಟ್ಟಗಳು ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ರಕ್ಕಸರನ್ನು ಬಿಂಬಿಸುತ್ತದೆ.

ಚಿತ್ರಕೃಪೆ: Akshatha

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಹೊನ್ನಮ್ಮನ ಕೆರೆ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಲಿಮಲ್ತೆ ಬಳಿಯಿರುವ ದೊಡ್ಡಮಲ್ತೆ ಎಂಬಲ್ಲಿ ಈ ಸುಂದರ ಕೆರೆಯಿದೆ. ಕೊಡಗಿನಲ್ಲೆ ಅತಿ ದೊಡ್ಡದಾದ ಕೆರೆ ಇದಾಗಿದೆ. ವರ್ಷಕ್ಕೊಮ್ಮೆ ಗೌರಿ ಪೂಜೆಯ ಸಂದರ್ಭದಲ್ಲಿ ಹೊನ್ನಮ್ಮದೇವಿಗೆ ಸಂಬಂಧಿಸಿದ ವಸ್ತುಗಳನ್ನು ಬಾಗಿಣ ರೂಪದಲ್ಲಿ ಕೆರೆಗೆ ಅರ್ಪಿಸಲಾಗುತ್ತದೆ.

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಸ್ಯಾಂಕಿ ಕೆರೆ : ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಸ್ಯಾಂಕಿ ಕೆರೆಯ ಪರಿಸರ ಅದ್ಭುತ ಮನಶಾಂತಿಯನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ. ಸ್ಯಾಂಕಿ ಕೆರೆಯು 37 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಇದೊಂದು ಕೃತಕ ಕೆರೆಯಾಗಿದ್ದು, 1882 ರಲ್ಲಿ ಬ್ರಿಟೀಷರ ಆಡಳಿತದಲ್ಲಿ ಕರ್ನಲ್ ಆಗಿದ್ದ ರೈಚರ್ಡ್ ಹೈರ್‍ಯಾಮ್ ಸ್ಯಾಂಕಿ ಎಂಬಾತನು ಈ ಕೆರೆಯ ನಿರ್ಮಾತೃ. ಬೆಂಗಳೂರಿನ ನೀರಿನ ಬೇಡಿಕೆ ತಣಿಸಲು ನಿರ್ಮಾಣವಾದ ಈ ಕೆರೆ "ಗಂಧದಕೋಟಿ ಕೆರೆ" ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. ಏಕೆಂದರೆ ಸರ್ಕಾರದ ಗಂಧದ ಸೋಪ್ ಕಚೇರಿಯು ಕೆರೆಯ ಬಳಿಯಲ್ಲೆ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಇದು ಹಾಯಾಗಿ ವಿಶ್ರಾಂತಿ ಪಡೆಯಲು, ವಾಯು ವಿಹಾರ ಮಾಡಲು ಯೋಗ್ಯವಾದ ಸ್ಥಳವಾಗಿ ಜನಪ್ರೀಯವಾಗಿದೆ.

ಚಿತ್ರಕೃಪೆ: Aravinth Rajan

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಲಿಂಗಾಂಬುಧಿ ಕೆರೆ : ಮೈಸೂರು ನಗರದಲ್ಲಿರುವ ಮತ್ತೊಂದು ಸುಂದರ ಕೆರೆ ಲಿಂಗಾಂಬುಧಿ ಕೆರೆ. ಮೈಸೂರು ನಗರ ಗಡಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಈ ಕೆರೆಯು ಅಪರೂಪದ ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಹಿಂದೆ ಮೈಸೂರು ಬಳಿಯ ಗ್ರಾಮಗಳಿಗೆ ಆಸರೆಯಾಗಿದ್ದ ಈ ಕೆರೆಯು ಇಂದು ಮೈಸೂರಿನ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾದ ಶ್ರೀರಾಮಪುರದ ಬಳಿಯಿದೆ. ಈ ಕೆರೆಯ ಪರಿಸರದಲ್ಲಿ 107 ಬಗೆಯ ಚಿಟ್ಟೆಗಳು ಹಾಗೂ ವಿವಿಧ ಪಕ್ಷಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Psgs123xyz

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಚೆಂಗಾಲ್ಪಟ್ಟು ಕೆರೆ, ತಮಿಳುನಾಡು : ಕಂಚಿಪುರಂ ಜಿಲ್ಲೆಯ ಚೆಂಗಾಲ್ಪಟ್ಟು ತಾಲೂಕಿನಲ್ಲಿರುವ ಹಾಗೂ ಚೆನ್ನೈ ನಗರದಿಂದ 55 ಕಿ.ಮೀ ದೂರದಲ್ಲಿರುವ ಚೆಂಗಾಲ್ಪಟ್ಟು ಕೆರೆ (ಕೊಲವೈ ಕೆರೆ) ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಚೆನ್ನೈನಿಂದ ಮಹಾಬಲಿಪುರಂಗೆ ತೆರಳುವ ವಿದೇಶಿ ಪ್ರವಾಸಿಗರ ನೆಚ್ಚಿನ ವಿಶ್ರಾಂತ ತಾಣವಾಗಿದೆ ಈ ಕೆರೆ. ಅಲ್ಲದೆ ಸಾಕಷ್ಟು ಸ್ಥಳೀಯ ಜನರು ವಾರಾಂತ್ಯಗಳನ್ನು ಹಾಯಾಗಿ ಕಳೆಯಲು ಈ ಕೆರೆಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: wikimedia

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಅವಲಾಂಚೆ ಕೆರೆ : ಊಟಿ ನಗರದಿಂದ 28 ಕಿ.ಮೀ ದೂರದಲ್ಲಿರುವ ಈ ಕೆರೆಯು ಒಂದು ನಯನ ಮನೋಹರವಾದ ಪ್ರಕೃತಿಯ ಒಡಲಿನಲ್ಲಿ ನೆಲೆಸಿದೆ. ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಈ ಕೆರೆಯು ಜನರನ್ನು ಆಕರ್ಷಿಸುತ್ತದೆ. ಅದ್ಭುತವಾದ ಭೂಪ್ರದೇಶ, ಹಿತವಾದ ವಾತಾವರಣ, ಬಣ್ಣ ಬಣ್ಣದ ಹೂವುಗಳು ಈ ಕೆರೆಯ ಪ್ರದೇಶವನ್ನು ಒಂದು ಸುಂದರ ತಾಣವನ್ನಾಗಿ ಮಾಡಿವೆ.

ಚಿತ್ರಕೃಪೆ: Raghavan Prabhu

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಊಟಿ ಕೆರೆ : ಇದೊಂದು ಮಾನವ ನಿರ್ಮಿತ ಕೃತಕ ಜಲಾಶಯವಾಗಿದ್ದು 1823 ರಿಂದ 1825 ರ ನಡುವೆ ನಿರ್ಮಿಸಲ್ಪಟ್ಟಿದೆ. ನಾಲ್ಕು ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ಕೆರೆಯು ಸುಮಾರು 2.5 ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದೆ. ಸಾಮಾನ್ಯವಾಗಿ ಇತರೆ ಪ್ರವಾಸಿ ಸ್ಥಳಗಳಲ್ಲಿರುವ ಕೆರೆಗಳು ಪ್ರವಾಸಿಗರ ನಿರಂತರ ಭೇಟಿಯಿಂದಾಗಿ ಕಳೆ ಕಳೆದುಕೊಂಡಂತೆ, ಊಟಿ ಕೆರೆಯು ಇರದೆ ತನ್ನ ಸ್ವಚ್ಛತೆ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ಚುಂಬಕದಂತೆ ಸೆಳೆಯುತ್ತದೆ. ಇದಕ್ಕೆ ಇನ್ನಷ್ಟು ಇಂಬು ನೀಡುವಂತೆ ಇಲ್ಲಿರುವ ದೋಣಿ ವಿಹಾರ ಸೌಲಭ್ಯ ಇದರ ಮಾದಕತೆಯನ್ನು, ಆಕರ್ಷಣೆಯನ್ನು ಪ್ರವಾಸಿಗರಲ್ಲಿ ಮತ್ತಷ್ಟು ಹೆಚ್ಚಿಸಿದೆ. ಅಂತೆಯೆ ಊಟಿ ಕೆರೆಯಲ್ಲೊಂದು ದೋಣಿ ವಿಹಾರ ಪ್ರವಾಸ ಸಾರ್ಥಕಗೊಳಿಸುವ ವಿಚಾರ.

ಚಿತ್ರಕೃಪೆ: Vinayaraj

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕೊಡೈ ಕೆರೆ : ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯ ಕೊಡೈಕೆನಲ್ ಪಟ್ಟಣದಲ್ಲಿರುವ ಈ ಸುಂದರ ಕೆರೆ ಅದ್ಭುತ ಪ್ರವಾಸಿ ಆಕರ್ಷಣೆ. ದೋಣಿ ವಿಹಾರದ ಸೌಲಭ್ಯವನ್ನೂ ಹೊಂದಿರುವ ಈ ಕೆರೆಗೆ ಭೇಟಿ ನೀಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿ ವರ್ಷವೂ ಆಗಮಿಸುತ್ತಾರೆ. ಗಿರಿಧಾಮ ಪ್ರದೇಶವಾಗಿರುವುದರಿಂದ ವರ್ಷದ ಎಲ್ಲ ಸಮಯದಲ್ಲೂ ಭೇಟಿ ನೀಡಬಹುದಾದ ತಾಣ ಇದಾಗಿದೆ.

ಚಿತ್ರಕೃಪೆ: vinod kannery

https://www.flickr.com/photos/vinodkannery/5815657654/in/photolist-8BR9oD-6fcrZQ-hh3v9Y-5Pqq6e-6WHP-8BUgfq-2giwRY-77uiVE-HuxBu-9RULpy-s51q7n-8fZ6k5-BPqVu-HvLPZ-SJe1k-SJe1p-SJe2K-SJe2F-SJe1z-SJe2T-2gavAz-AUbmb-2ganUB-6Fd1Mh-6F8TXF-Rr5rU-7UmY7s-4ib2TK-5bCVnz-5bHc5Q-7Yzk98-5bH9jS-HvLQ6-7YzrSr-s61FTh-rqM8HK-tgWsbn-8tj4Ap-dmsPZK

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಪುಲಿಕಾಟ್ ಸರೋವರ : ಪುಲಿಕಾಟ್ ದೇಶದ ಎರಡನೇಯ ದೊಡ್ಡ ಲಗೂನಾಗಿದ್ದು ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಾಚಿದೆ. ತಮಿಳಿನಲ್ಲಿ ಇದನ್ನು ಪಳವೇರ್ಕಾಡು ಎರಿ ಎಂದು ಕರೆಯಲಾಗುತ್ತದೆ. ಶ್ರೀಹರಿಕೋಟಾದ ಬ್ಯಾರೀಯರ್ ದ್ವೀಪ ಈ ಕೆರೆಯನ್ನು ಬಂಗಾಳ ಕೊಲ್ಲಿ ಸಮುದ್ರದಿಂದ ಪ್ರತ್ಯೇಕಿಸುತ್ತದೆ. ಪುಲಿಕಾಟ್, ಪುಲಿಕಾಟ್ ಕೆರೆ ಪಕ್ಷಿಧಾಮದಿಂದ ಅಪಾರವಾದ ಖ್ಯಾತಿಗಳಿಸಿದೆ. ಸತೀಶ್ ಧವನ್ ಸ್ಪೇಸ್ ಸೆಂಟರ್ ಕೂಡ ಇರುವುದು ಇಲ್ಲಿನ ಬ್ಯರೀಯರ್ ದ್ವೀಪದಲ್ಲಿ. ಸಾಕಷ್ಟು ಜನ ಪ್ರವಾಸಿಗರು ಪುಲಿಕಾಟ್ ಕೆರೆಗೆ ಭೇಟಿ ನೀಡಲು ಬರುತ್ತಾರೆ.

ಚಿತ್ರಕೃಪೆ: Srikaanth Sekar

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಸಿಂಗನಲ್ಲೂರು ಕೆರೆ : ಕೊಯಮತ್ತೂರು ನಗರದ ಸಿಂಗನಲ್ಲೂರು ಪ್ರದೇಶದಲ್ಲಿರುವ ಈ ಕೆರೆಯು ಪಕ್ಷಿಗಳ ಸ್ವರ್ಗವಾಗಿದೆ ಅಂತೆಯೆ ನಗರದ ಪಕ್ಷಿ ವೀಕ್ಷಕರ ಪಾಲಿಗೂ ಸ್ವರ್ಗವಾಗಿದೆ. ನೂರಕ್ಕೂ ಹೆಚ್ಚು ಬಗೆಯ ಪಕ್ಶಿಗಳನ್ನು ಈ ಸುಂದರ ಕೆರೆ ಪ್ರದೇಶದಲ್ಲಿ ಗುರುತಿಸಲಾಗಿದೆ. ಇದು ಕೊಯಮತ್ತೂರಿನ ಒಂಬತ್ತು ದೊಡ್ಡ ಕೆರೆಗಳ ಪೈಕಿ ಒಂದಾಗಿದ್ದು ನಗರದ ಗೌಜು ಗದ್ದಲಗಳಿಂದ ಪರಿಹಾರ ಒದಗಿಸುತ್ತದೆ.

ಚಿತ್ರಕೃಪೆ: K. Mohan Raj

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಯೆರ್ಕಾಡ್ ಕೆರೆ : ಅಷ್ಟೊಂದಾಗಿ ಹೆಸರು ಕೇಳಲ್ಪಡದ ಬೆಂಗಳೂರಿನಿಂದ ಕೇವಲ 228 ಕಿ.ಮೀ ದೂರವಿರುವ ಒಂದು ಚೊಕ್ಕವಾದ ಗಿರಿಧಾಮದ ಹೆಸರು 'ಯೇರ್ಕಾಡ್'. ಈ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿರುವ ಸೇಲಂ ಜಿಲ್ಲೆಯಲ್ಲಿ. ಇಲ್ಲಿನ ಕೆರೆಯು ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದ್ದು ದೋಣಿ ವಿಹಾರಗಳ ಸೌಲಭ್ಯವನ್ನೂ ಸಹ ಒಳಗೊಂಡಿದೆ.

ಚಿತ್ರಕೃಪೆ: Tamal Das

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ವೆಂಬನಾಡ್ ಕೆರೆ, ಕೇರಳ : ಭಾರತದಲ್ಲಿಯೆ ಅತಿ ಉದ್ದವಾದ ಹಾಗೂ ಕೇರಳದಲ್ಲಿ ಅತಿ ದೊಡ್ಡದಾದ ಕೆರೆ ಇದಾಗಿದೆ. ಕೇರಳದ ಕೆಲವು ಜಿಲ್ಲೆಗಳಲ್ಲಿ ಚಾಚಿರುವ ಈ ಕೆರೆಯು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಉದಾಹರಣೆಹೆ ಕುಟ್ಟನಾಡಿನಲ್ಲಿ ಇದನ್ನು ಪುನ್ನಮಡ ಕೆರೆ ಎಂದು ಕರೆದರೆ ಕೊಚ್ಚಿಯಲ್ಲಿ ಇದನ್ನು ಕೊಚ್ಚಿ ಕೆರೆ ಎಂಬ ಹೆಸರಿನಿಂದ ಸಂಭೋದಿಸುತ್ತಾರೆ. ಮೀನುಗಾರಿಕೆ, ದೋಣಿ ಮನೆ ಸವಾರಿ ಮೂತಾದ ಚಟುವಟಿಕೆಗಳಿಗೆ ಹೆಸರುವಾಸಿಯಾದ ಈ ಕೆರೆಯು ಪ್ರವಾಸಿ ಆಕರ್ಷಣೆ ಆಗಿರುವುದಲ್ಲದೆ ಹಲವಾರು ಚಿಕ್ಕ ದ್ವೀಪಗಳನ್ನೂ ಸಹ ಹೊಂದಿದೆ.

ಚಿತ್ರಕೃಪೆ: Julia Maudlin

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ವೆಂಬನಾಡ್ ಕೆರೆಯು ಕೇರಳದ ಹಿನ್ನೀರು ಪ್ರವಾಸೋದ್ಯಮದ ಜೀವನಾಡಿಯಾಗಿದೆ. ಈ ನೀರಿನ ಉದ್ದಗಲಕ್ಕೂ ದಂಡೆಗಳ ಮೇಲೆ ಸಾಕಷ್ಟು ರಿಸಾರ್ಟುಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೇರಳ ಹಿನ್ನೀರಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ವೆಂಬನಾಡ್ ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Rahuldb

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ವೆಲ್ಲಯಾನಿ ಕೆರೆ : ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿರುವ ತಾಜಾ ನೀರಿನ ದೊಡ್ಡ ಕೆರೆ ಇದಾಗಿದೆ. ನಗರ ಕೇಂದ್ರ ಬಸ್ಸು ನಿಲ್ದಾಣದಿಂದವ್ ಒಂಬತ್ತು ಕಿ.ಮೀ ದೂರದಲ್ಲಿರುವ ಈ ಕೆರೆಗೆ ತೆರಳಲು ನಿರಂತರವಾಗಿ ಬಸ್ಸುಗಳು ದೊರೆಯುತ್ತವೆ. ಸುಂದರ ಪ್ರವಾಸಿ ಆಕರ್ಷಣೆಯಾಗಿರುವ ಈ ಕೆರೆಯನ್ನು ತಿರುವನಂತಪುರಂ ಹಾಗೂ ಕೋವಲಂಗೆ ಭೇಟಿ ನೀಡುವ ಪ್ರವಾಸಿಗರು ತಪ್ಪಿಸಿಕೊಳ್ಳಲೇಬಾರದು. ವಿಶೇಷವಾಗಿ ಬೆಳದಿಂಗಳ ರಾತ್ರಿಗಳಲಿ ಈ ತಾಜಾ ಸ್ವಚ್ಛ ನೀರು ಫಳ ಫಳನೆ ಹೊಳೆಯುವುದನ್ನು ಕಂಡಾಗ ಮನದಲ್ಲಿ ಅನಂತ ಧನ್ಯತಾ ಭಾವಗಳು ಮೂಡದೆ ಇರಲಾರವು.

ಚಿತ್ರಕೃಪೆ: Sreejithk2000

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ತೆಕ್ಕಡಿ ಕೆರೆ : ತಮಿಳುನಾಡಿನ ಮದುರೈ ನಗರದಿಂದ 114 ಕಿ.ಮೀ, ಕೇರಳದ ಕೊಟ್ಟಾಯಂ ರೈಲು ನಿಲ್ದಾಣದಿಂದ 114 ಕಿ.ಮೀ ಹಾಗೂ ಕೇರಳದ ರಾಜಧಾನಿ ನಗರ ತಿರುವನಂತಪುರಂನಿಂದ 257 ಕಿ.ಮೀ ದೂರದಲ್ಲಿರುವ ಕೇರಳದ ಇಡುಕ್ಕಿ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ತೆಕ್ಕಡಿಯ ಕೆರೆಯು ಒಂದು ಮನಮೋಹಕ ಕೆರೆಯಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೋಣಿ ವಿಹಾರ ಸೌಲಭ್ಯ ಹೊಂದಿರುವ ಈ ಕೆರೆಯ ಸುತ್ತಲೂ ಪೆರಿಯಾರ್ ರಾಷ್ಟ್ರೀಯ ಉದ್ಯಾನವಿದ್ದು ಪ್ರವಾಸಿಗರು ಕಾಡಿನ ಸೌಂದರ್ಯ ಹಾಗೂ ಅದೃಷ್ಟವಿದ್ದರೆ ಪ್ರಾಣಿಗಳನ್ನೂ ಸಹ ನೋಡುತ್ತ ಕೆರೆಯಲ್ಲಿ ವಿಹರಿಸಬಹುದಾಗಿದೆ. ಅಲ್ಲದೆ ಕೆರೆಯ ದಂಡೆಯ ಪ್ರದೇಶವು ಸಾಕಷ್ಟು ಪ್ರಶಾಂತತೆಯಿಂದ ಕೂಡಿದ್ದು ಹಾಯಾಗಿ ವಿರಾಮದ ಸಮಯವನ್ನು ಕಳೆಯಲು ಆದರ್ಶಮಯವಾಗಿದೆ.

ಚಿತ್ರಕೃಪೆ: Girlxplorer

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಶಾಸ್ತಾಂಕೊಟ್ಟಾ ಕೆರೆ : ಕೇರಳದ ಕೊಲ್ಲಂನಲ್ಲಿರುವ ಈ ಕೆರೆಯು ಜಿಲ್ಲೆಯ ಅರ್ಧ ಮಿಲಿಯನ್ ಜನಸಂಖ್ಯೆಯ ಬಾಯಾರಿಕೆ ತಣಿಸುವ ಪ್ರಮುಖ ಮೂಲವಾಗಿದೆ. ಅಲ್ಲದೆ ಮೀನುಗಾರಿಕೆಗೂ, ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿರುವ ಈ ಕೆರೆಗೆ ಇದರ ದಂಡೆಯ ಮೇಲೆ ನೆಲೆಸಿರುವ ಧಾರ್ಮಿಕ ಯಾತ್ರಾ ಕೇಂದ್ರವಾದ ಶಾಸ್ತ ದೇವಾಲಯದಿಂದಾಗಿ ಈ ಹೆಸರು ಬಂದಿದೆ. ಇದೊಂದು ನೈಸರ್ಗಿಕವಾಗಿಯೆ ಕುಡಿಯಲು ಶುದ್ಧ ನೀರು ಹೊಂದಿದ ಕೆರೆಯಾಗಿದ್ದು ಇದಕ್ಕೆ ಕಾರಣ ಇದರಲ್ಲಿರುವ ಕಾವಾಬೋರಸ್ ಎಂಬ ಜೀವಿಗಳ ಉಪಸ್ಥಿತಿ. ವೈಜ್ಞಾನಿಕವಾಗಿ ಈ ಜೀವಿಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ತಿಂದು ಬದುಕುತ್ತವೆ.

ಚಿತ್ರಕೃಪೆ: Arunelectra

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಪೂಕೊಡೆ ಕೆರೆ : ಸುಂದರ ಭೂದೃಶ್ಯಾವಳಿಗಳನ್ನು ಹೊಂದಿರುವ, ಪ್ರವಾಸಿ ಆಕರ್ಷಣೆಯಾಗಿ ಜನರನ್ನು ಸೆಳೆಯುವ ಪೂಕೊಡೆ ಕೆರೆಯು ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾ ಪಟ್ಟಣದಿಂದ 15 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ದೋಣಿ ವಿಹಾರ, ಮಕ್ಕಳ ಉದ್ಯಾನ, ತಾಜಾ ನೀರಿನ ಮತ್ಸ್ಯಾಗಾರ ಈ ಕೆರೆ ಪ್ರದೇಶದ ಪ್ರಮುಖ ಆಕರ್ಷಣೆಗಳು.

ಚಿತ್ರಕೃಪೆ: Irshadpp

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಭಾರತದಲ್ಲೆ ಜನಪ್ರೀಯವಾದ ಹಾಗೂ ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ಗಿರಿಧಾಮದಲ್ಲಿ ಕಂಡು ಬರುವ ಕೆರೆಯೂ ಸಹ ಮನಮೋಹಕವಾಗಿದೆ. ನವ ದಂಪತಿಗಳು ಏಕಾಂತದ ಸಮಯವನ್ನು ಅತ್ಯುತ್ಸಾಹದಿಂದ ಕಳೆಯಲು ಈ ಕೆರೆ ಹಾಗೂ ಸುತ್ತಲಿನ ಪ್ರದೇಶವು ಆದರ್ಶಮಯವಾಗಿದೆ.

ಚಿತ್ರಕೃಪೆ: commons.wikimedia

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಲವ್ ಕೆರೆ : ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಚೆಂಬ್ರಾ ಶಿಖರ ಚಾರಣಿಗೆ ಪ್ರವಾಸಿಗರ ನೆಚ್ಚಿನ ಪ್ರದೇಶವಾಗಿದೆ. ಸಾಕಷ್ಟು ಯುವ ಜನಾಂಗದವರು ಈ ಶಿಖರಕ್ಕೆ ಟ್ರೆಕ್ ಮಾಡಲೆಂದು ವರ್ಷಪೂರ್ತಿ ಬರುತ್ತಿರುತ್ತಾರೆ. ಆದರೆ ಈ ಶಿಖರಕ್ಕೆ ಟ್ರೆಕ್ ಮಾಡುವ ಮೂಂಚೆ ಮೆಪ್ಪಡಿ ಎಂಬಲ್ಲಿ ಅರಣ್ಯ ಇಲಾಖೆಯಿಂದ ಮುಂಚಿತವಾಗಿ ಪರವಾನಿಗೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಈ ಟ್ರೆಕ್ ಮಾಡುವ ಸಂದರ್ಭದಲ್ಲಿ ಇನ್ನೂ ಶಿಖರದ ತುದಿ ತಲುಪುವಷ್ಟರಲ್ಲಿಯೆ ಹೃದಯದಾಕಾರದ ಒಂದು ಆಕರ್ಷಕ ಕೆರೆಯು ನಿಮ್ಮನ್ನು ಸ್ವಾಗತಿಸುತ್ತದೆ. ಇತ್ತೀಚೆಗೆ ಈ ಕೆರೆಯು ಪ್ರವಾಸಿಗರಲ್ಲಿ ಸಾಕಷ್ಟು ಜನಪ್ರೀಯವಾಗಿದ್ದು ಪ್ರೀತಿಯ ಕೆರೆ ಅಥವಾ ಲವ್ ಲೇಕ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತದೆ.

ಚಿತ್ರಕೃಪೆ: Wayanadan

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಅಷ್ಟಮುಡಿ ಕೆರೆ : ಕೊಲ್ಲಂ ಜಿಲ್ಲೆಯಲ್ಲಿರುವ ಈ ಕೆರೆಯು ಹೆಚ್ಚು ಭೇಟಿ ನೀಡಲ್ಪಡುವ ಕೆರೆಯಾಗಿದೆ. ಜೀವ ವೈವಿಧ್ಯಮಯ ಹೊಂದಿರುವ ಈ ಸುಂದರ ಕೆರೆಯು ವೆಂಬನಾಡ್ ನಂತರದ ದೊಡ್ಡ ಕೆರೆಯಾಗಿದೆ. ಈ ಕೆರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರ ಶಾಖೆಗಳು ಎಂಟು ಕವಲುಗಳಲ್ಲಿ ಚಾಚಿರುವಂತೆ ಕಂಡು ಬರುವುದರಿಂದ ಇದಕ್ಕೆ ಅಷ್ಟ (ಎಂಟು) ಮುಡಿ (ಕೋನಗಳು) ಕೆರೆ ಎಂದು ಕರೆಯಲಾಗಿದೆ.

ಚಿತ್ರಕೃಪೆ: Fotokannan

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಹುಸೈನ್ ಸಾಗರ್ : ತೆಲಂಗಾಣ ರಾಜ್ಯ ಹಾಗೂ ಆಂಧ್ರದ ಪ್ರಸ್ತುತ ರಾಜಧಾನಿ ನಗರವಾಗಿರುವ ಹೈದರಾಬಾದ್ ನಗರದಲ್ಲಿರುವ ಹುಸೈನ್ ಸಾಗರ್ ಕೆರೆಯು ಒಂದು ಗುರುತರವಾದ ಆಕರ್ಷಣೆಯಾಗಿದೆ. ಮೂಸಿ ನದಿಯ ಉಪನದಿಯನ್ನು ಬಳಸಿಕೊಂಡು ಹಜರತ್ ಹುಸೈನ್ ಶಾ ವಾಲಿ ಈ ಕೆರೆಯ ನಿರ್ಮಾತೃ. 1562 ರಲ್ಲಿ ನಿರ್ಮಿಸಲ್ಪಟ್ಟ ಈ ಕೆರೆಯು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.

ಚಿತ್ರಕೃಪೆ: Cephas

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ಕೆರೆಯ ಮಧ್ಯದಲ್ಲಿರುವ ಬುದ್ಧನ ಪ್ರತಿಮೆಯು ಮನಮೋಹಕವಾಗಿದ್ದು ದೋಣಿಯ ಮೂಲಕ ಅಲ್ಲಿಯವರೆಗೂ ತೆರಳುವ ಸೌಲಭ್ಯವನ್ನು ಒದಗಿಸಲಾಗಿದೆ. ರಾತ್ರಿಯ ಸಮಯದಲ್ಲಿ ಕಂಗೊಳಿಸುತ್ತಿರುವ ಹುಸೈನ್ ಸಾಗರ್ ಕೆರೆ.

ಚಿತ್ರಕೃಪೆ: Shrichandray

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ತೆಲಂಗಾಣದಲ್ಲಿರುವ ಹನುಮಕೊಂಡ ಹಾಗೂ ವಾರಂಗಲ್ ಪಟ್ಟಣಗಳ ಗುಡ್ಡದ ತುದಿಯೊಂದರಲ್ಲಿ ನೆಲೆಸಿರುವ ಭದ್ರಕಾಳಿ ದೇವಾಲಯವು ನೆಚ್ಚಿನ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಭದ್ರ ಕಾಳಿಯ ವಿಗ್ರಹವು ಭಯಂಕರ ಸ್ವರೂಪದಲ್ಲಿರುವುದನ್ನು ಇಲ್ಲಿ ಕಾಣಬಹುದು. ಇದರ ಬಳಿಯಲ್ಲಿ ಒಂದು ಕೆರೆಯಿದ್ದು ಭದ್ರಕಾಳಿ ಕೆರೆ ಎಂದು ಅದನ್ನು ಕರೆಯಲಾಗುತ್ತದೆ.

ಚಿತ್ರಕೃಪೆ: Adityamadhav83

ದ.ಭಾರತದ ಅದ್ಭುತ ಕೆರೆಗಳು:

ದ.ಭಾರತದ ಅದ್ಭುತ ಕೆರೆಗಳು:

ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿರುವ ಪಾಖಲ್ ವನ್ಯಜೀವಿಧಾಮದಲ್ಲಿರುವ ಪಾಖಲ್ ಕೆರೆಯು ನಯನಮನೋಹರವಾದ ಕೆರೆಯಾಗಿದೆ.

ಚಿತ್ರಕೃಪೆ: Lisa.davis

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X