Search
  • Follow NativePlanet
Share
» »ಬೆಂಗಳೂರಿನಿಂದ ಹೀಗೆ ಹೋಗಿ ಬಂಡೀಪುರ

ಬೆಂಗಳೂರಿನಿಂದ ಹೀಗೆ ಹೋಗಿ ಬಂಡೀಪುರ

By Vijay

ರಜಾ ಸಮಯಗಳಲ್ಲಿ ಅದೇ ಶಾಪಿಂಗ್, ಅದೇ ಮಾಲ್, ಅದೇ ಹೋಟೆಲ್ ಸುತ್ತಾಡಿ ಸುತ್ತಾಡಿ ಬೇಸರ ಮೂಡಿದ್ದರೆ ಚಿಂತಿಸಬೇಡಿ ಒಮ್ಮೆ ಕಾಡಿನ ಸಫಾರಿ ಮಾಡಿ ಬಿಡಿ. ಕಾಡು ಪ್ರಾಣಿಗಳು ಪಂಜರಗಳಲ್ಲಿ ಕಟ್ಟು ಹಾಕಿದ ಸ್ಥಿಯಲ್ಲಿ ನೋಡುವುದಕ್ಕಿಂತ ಅವುಗಳು ತಮ್ಮ ನೈಜ ಸ್ಥಿತಿಯಲ್ಲಿ ಕಾಡಿನ ಅದ್ಭುತ ಪರಿಸರದಲ್ಲಿ ವಿಹರಿಸುತ್ತಿರುವುದನ್ನು ನೋಡುವುದೆ ಒಂದು ಚೆಂದದ ಅನುಭವ.

ವಿಶೇಷ ಲೇಖನ : ನಾಗರಹೊಳೆ ಅಭಯಾರಣ್ಯದಲ್ಲಿ

ಹಾಗಾದರೆ ತಡವೇಕೆ, ಬೆಂಗಳೂರಿನಿಂದ ಕೇವಲ 220 ಕಿ.ಮೀ ಗಳಷ್ಟು ದೂರವಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಒಂದು ಪ್ರವಾಸ ಮಾಡಲು ಯೋಜಿಸಿ. ಬಂಡೀಪುರ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಲ್ಲಿ ನೆಲೆಸಿದ್ದು ಮುದುಮಲೈ ಅಭಯಾರಣ್ಯ, ನಾಗರಹೊಳೆ ಹಾಗೂ ವಯನಾಡ್ ಅಭಯಾರಣ್ಯಗಳಿಂದ ಸುತ್ತುವರೆದಿದೆ. ಇವೆಲ್ಲವೂ ಸೇರಿ ಒಟ್ಟಾರೆಯಾಗಿ 874 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಷ್ಟು ದಟ್ಟ ಹಸಿರಿನ ಜೈವಿಕ ಪರಿಸರ ಹೊಂದಿದ್ದು, ಭಾರತದಲ್ಲೆ ವಿಶಿಷ್ಟವಾದ "ನೀಲ್ಗಿರಿ ಜೀವಗೋಳ" ಅಥವಾ ಜೈವಿಕ ಮಂಡಲವನ್ನು ಸೃಷ್ಟಿಸಿದೆ.

ವಾರಾಂತ್ಯ ಕೊಡುಗೆ : ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ!

ಬಂಡೀಪುರದಲ್ಲಿ ತಂಗಲು ವ್ಯವಸ್ಥೆಯಿದ್ದು ಮುಂಚಿತವಾಗಿಯೆ ನಿಮ್ಮ ಭೇಟಿ ನೀಡುವ ಕುರಿತು ಸಕಲ ವಿವರಗಳನ್ನು ನೀಡಿ ವಸತಿ ಕಾಯ್ದಿರಿಸುವುದು ಉತ್ತಮ. ಬಂಡೀಪುರದಲ್ಲಿ ಸಫಾರಿಯ ಅನುಭವವಂತೂ ಎಂದಿಗೂ ಮರೆಯಲಾಗದ ಚಟುವಟಿಕೆಯಾಗಿದೆ. ವೈವಿಧ್ಯಮಯ ಜೀವ ಜಂತುಗಳನ್ನು ಅವುಗಳ ನೈಸರ್ಗಿಕ ಆಶ್ರಯದಲ್ಲೆ ನೋಡುವುದು ಚೆಂದ. ಅಲ್ಲದೆ ಬಂಡೀಪುರ ಪ್ರವಾಸ ಇನ್ನಷ್ಟು ಮಧುರಮಯವಾಗಬೇಕೆಂದರೆ ಹೊರಡುವಾಗಲೆ ರಸ್ತೆಯ ಆಸು ಪಾಸುಗಳಲ್ಲಿರುವ ಕೆಲ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡುತ್ತ ಸಾಗಿದರೆ ಸಾಕು.

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಹಾಗಾದರೆ ಬನ್ನಿ ಯಾವೇಲ್ಲ ಸೊಗಸಾದ ಸ್ಥಳಗಳಿಗೆ ಭೇಟಿ ನೀಡುತ್ತ ಬಂಡೀಪುರವನ್ನು ತಲುಪಬಹುದೆಂಬುದರ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ. ಬಂಡೀಪುರಕ್ಕೆ ತೆರಳಲು ಎರಡು ಆಯ್ಕೆಗಳಿದ್ದು ಒಂದು ಮೈಸೂರಿನ ಮೂಲಕವಿದ್ದರೆ ಇನ್ನೊಂದು ಕನಕಪುರ, ಚಾಮರಾಜನಗರ, ಗುಂಡ್ಲುಪೇಟೆ ಮಾರ್ಗದ ಮೂಲಕ ತಲುಪಬಹುದಾಗಿದೆ. ಈ ಪ್ರವಾಸಕ್ಕೆ ಬೆಂಗಳೂರಿನಿಂದ ಬೆಳಂಬೆಳಿಗ್ಗೆಯೆ ಹೊರಡುವುದು ಲೇಸು. ಲೇಖನವು ಮೊದಲ ಆಯ್ಕೆ ಗಮನದಲ್ಲಿರಿಸಿ ಬರೆಯಲಾಗಿದೆ.

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮೊದಲಿಗೆ ಬೆಂಗಳೂರಿನಿಂದ ಮೈಸೂರು ರಸ್ತೆ ಹಿಡಿದು ಮೈಸೂರಿನೆಡೆ ಪ್ರಯಾಣ ಬೆಳೆಸಿ. ರಸ್ತೆಯು ಸುಗಮವಾಗಿದ್ದು ಚಾಲನೆಗೆ ಅನುಕೂಲವಾಗಿದೆ. ಕೆಂಗೇರಿ, ಬಿಡದಿಯ ಮೂಲಕ ರಾಮನಗರ ತಲುಪಿ. ರಾಮನಗರವು ಹಿಂದಿಯ ಯಶಸ್ವಿ ಚಿತ್ರ ಶೋಲೆಯ ಚಿತ್ರೀಕರಣದಿಂದ ಪ್ರಸಿದ್ಧವಾಗಿದೆ. ಇಲ್ಲಿ ದೊರೆಯುವ ತಟ್ಟೆ ಇಡ್ಲಿಯೂ ಸಹ ಬಹಳ ಹೆಸರುವಾಸಿ. ತಟ್ಟೆ ಇಡ್ಲಿಗಳನ್ನು ಸವಿದು ಬೇಕಿದ್ದರೆ ಇಲ್ಲಿರುವ ಅದ್ಭುತವಾದ ಬಂಡೆ ಬೆಟ್ಟಗಳನ್ನು ನೋಡಬಹುದು. ಈ ಬೆಟ್ಟಗಳು ಹತ್ತುವ ಹಾಗೂ ಇಳಿಯುವಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ರಾಮನಗರ 50 ಕಿ.ಮೀ ಗಳಷ್ಟು ದೂರವಿದೆ.

ಚಿತ್ರಕೃಪೆ: muscicapa

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ರಾಮನಗರದಲ್ಲಿ ಸಮಯ ಕಳೆದ ನಂತರ ಮತ್ತೆ ಮೈಸೂರು ರಸ್ತೆ ಹಿಡಿದು ಚೆನ್ನಪಟ್ಟಣದೆಡೆ ತೆರಳಬೇಕು. ಚೆನ್ನಪಟ್ಟಣವು ರಾಮನಗರದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ಮೂಲತಃ ಚೆನ್ನಪಟ್ಟಣವು ಗೊಂಬೆಗಳಿಗಾಗಿ ಬಹು ಖ್ಯಾತಿ ಗಳಿಸಿದೆ. ಚೆನ್ನಪಟ್ಟಣ ಬೊಂಬೆಗಳು ಕಟ್ಟಿಗೆಯಿಂದ ತಯಾರಿಸಲಾದ ವಿಶಿಷ್ಟ ಆಟಿಕೆಗಳಾಗಿದ್ದು ಇಂದಿಗೂ ಅಲಂಕಾರಿ ವಸ್ತುಗಳಾಗಿ ಬಳಸಲ್ಪಡುತ್ತವೆ.

ಚಿತ್ರಕೃಪೆ: Pratheep P S

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಚೆನ್ನಪಟ್ಟಣದ ಬೊಂಬೆಗಳನ್ನು ನೋಡಿ ಇಷ್ಟವಿದ್ದಲ್ಲಿ ಖರೀದಿಸಿ ನಂತರ ಪ್ರಯಾಣ ಮುಂದುವರೆಸುತ್ತ ಮದ್ದೂರಿನೆಡೆ ಸಾಗಬೇಕು. ಮದ್ದೂರು ಚೆನ್ನಪಟ್ಟಣದಿಂದ 22 ಕಿ.ಮೀ ಗಳಷ್ಟು ದೂರದಲ್ಲಿದೆ. ಮದ್ದೂರು ಪ್ರಮುಖವಾಗಿ ಮದ್ದೂರು ವಡೆಗಳಿಗಾಗಿ ಜನಪ್ರೀಯತೆ ಪಡೆದಿದೆ. ಒಂದೊಮ್ಮೆ ಮದ್ದೂರು ತಲುಪಿದರೆ ವಡೆಗಳನ್ನು ತಿನ್ನಲು ಮರೆಯಬೇಡಿ.

ಚಿತ್ರಕೃಪೆ: Charles Haynes

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮದ್ದೂರು ವಡೆಗಳಲ್ಲದೆ ಎರಡು ಜನಪ್ರೀಯ ಸ್ಥಳಗಳಿಗೂ ಸಹ ಹೆಸರುವಾಸಿಯಾಗಿದೆ. ಒಂದು ವೈದ್ಯನಾಥಪುರದ ವೈದ್ಯನಾಥೇಶ್ವರ ದೇವಸ್ಥಾನ. ಮದ್ದೂರಿನಿಂದ ಎರಡು ಕಿ.ಮೀ ಗಳಷ್ಟಿರುವ ವೈದ್ಯನಾಥಪುರವು ಶಿಂಶಾ ನದಿಯ ದಂಡೆಯ ಮೇಲೆ ನೆಲೆಸಿದೆ. ಮುಖ್ಯ ಮೈಸೂರು - ಬೆಂಗಳೂರು ರಸ್ತೆಯ ಮೈಸೂರಿನೆಡೆ ತೆರಳುವ ಹಾದಿಯಲ್ಲಿ ಎಡ ತಿರುವು ಪಡದು ವೈದ್ಯನಾಥಪುರಕ್ಕೆ ಹೋಗಬೇಕು. ವೈದ್ಯನಾಥೇಶ್ವರ ದೇವಾಲಯ ಅದ್ಭುತವಾದ ಇತಿಹಾಸ ಹೊಂದಿದ್ದು ಭೇಟಿ ನೀಡಲು ಯೋಗ್ಯವಾಗಿದೆ. ದೇವಾಲಯ ಆವರಣದಿಂದ ಕಂಡು ಬರುವ ಶಿಂಶಾ ನದಿ. ಇದು ಕಾವೇರಿಯ ಉಪನದಿಯಾಗಿದೆ.

ಚಿತ್ರಕೃಪೆ: Shailesh.patil

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ವೈದ್ಯನಾಥೇಶ್ವರ ದೇವಾಲಯದ ಭೇಟಿಯ ನಂತರ ಅದೆ ರಸ್ತೆಯಲ್ಲಿ ಮುಂದುವರೆಯುತ್ತ ರುದ್ರಾಕ್ಷಿಪುರ - ಹಲಗೂರು ರಸ್ತೆ ಹಿಡಿದು 12 ಕಿ.ಮೀ ಕ್ರಮಿಸಿ ಕೊಕ್ಕರೆ ಬೆಳ್ಳೂರು ತಲುಪಬಹುದು. ಸುಂದರ ಕೊಕ್ಕರೆ ಹಕ್ಕಿಗಳು ತಂಡೋಪ ತಂಡವಾಗಿ ವಲಸೆ ಬರುವ ಪ್ರದೇಶ ಇದಾಗಿದ್ದು ಪ್ರವಾಸಿ ತಾಣವಾಗಿ ಸಾಕಷ್ಟು ಖ್ಯಾತಿ ಗಳಿಸಿದೆ. ಪೆಲಿಕನ್ ಹಕ್ಕಿಗಳು.

ಚಿತ್ರಕೃಪೆ: Koshy Koshy

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಕೊಕ್ಕರೆ ಬೆಳ್ಳೂರು, ವೈದ್ಯನಾಥಪುರಕ್ಕೆ ಭೇಟಿ ನೀಡಿದ ನಂತರ ಅದೆ ಮಾರ್ಗವಾಗಿ ಮರಳಿ ಮತ್ತೆ ಮೈಸೂರು ರಸ್ತೆ ಹಿಡಿದು ಮುಂದೆ ಮಂಡ್ಯದೆಡೆ ಪ್ರಯಾಣ ಬೆಳೆಸಿ. ಮಡ್ಯವು ಮದ್ದೂರಿನಿಂದ 20 ಕಿ.ಮೀ ಗಳಷ್ಟು ದೂರವಿದೆ.
ಕೆಲ ಸೊಗಸಾದ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Pradeep Kumbhashi

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮಂಡ್ಯದಿಂದ 20 ಕಿ.ಮೀ ದೂರವಿರುವ ಮಹಾಭಾರತದ ನಂಟನ್ನು ಹೊಂದಿರುವ ಪಾಂಡವಪುರ ತನ್ನಲ್ಲಿರುವ ಕುಂತಿ ಬೆಟ್ಟಕ್ಕೆ ಹೆಸರುವಾಸಿ. ಸ್ಥಳೀಯ ಪುರಾಣದ ಪ್ರಕಾರ ಅಜ್ಞಾತವಾಸದಲ್ಲಿದ್ದ ಪಾಂಡವರು ಹಾಗೂ ತಾಯಿ ಕುಂತಿ ಇಲ್ಲಿ ಕೆಲ ಸಮಯ ಕಳೆದಿದ್ದರೆನ್ನಲಾಗಿದೆ.

ಚಿತ್ರಕೃಪೆ: Aditya Patawari

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮಂಡ್ಯ ಜಿಲ್ಲೆಯಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ಮೇಲುಕೋಟೆ. ಇದೊಂದು ಧಾರ್ಮಿಕ ಕೇಂದ್ರವಾಗಿದ್ದು, ಚೆಲುವರಾಯಸ್ವಾಮಿ ದೇವಸ್ಥಾನ ಹಾಗೂ ಯೋಗ ನರಸಿಂಹಸ್ವಾಮಿ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ನರಸಿಂಹ ಸ್ವಾಮಿಗೆ ಮುಡಿಪಾಗಿರುವ ಯೋಗ ನರಸಿಂಹಸ್ವಾಮಿ ದೇವಸ್ಥಾನದ ವಿಗ್ರಹವನ್ನು ಸ್ವತಃ ಪ್ರಹ್ಲಾದನೆ ಪ್ರತಿಷ್ಠಾಪಿಸಿದ್ದಾನೆಂದು ಇಲ್ಲಿನ ಸ್ಥಳೀಯ ಪುರಾಣ ಹೇಳುತ್ತದೆ.

ಚಿತ್ರಕೃಪೆ: HPNadig

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮಂಡ್ಯದ ಕೆಲವು ಭವ್ಯ ಆಕರ್ಷಣೆಗಳನ್ನು ನೋಡಿದ ನಂತರ ಮತ್ತೆ ಮಂಡ್ಯಕ್ಕೆ ಹಿಂತಿರುಗಿ ಅಲ್ಲಿಂದ ಶ್ರೀರಂಗಪಟ್ಟಣದೆಡೆ ತೆರಳಬೇಕು. ಶ್ರೀರಂಗ ಪಟ್ಟಣವು ಮಂಡ್ಯದಿಂದ ಕೇವಲ 24 ಕಿ.ಮೀ ಗಳಷ್ಟು ದೂರವಿದ್ದು ತನ್ನಲ್ಲಿರುವ ರಂಗನಾಥನ ದೇವಸ್ಥಾನದಿಂದಾಗಿ ಹೆಚ್ಚು ಖ್ಯಾತಿಗಳಿಸಿದೆ.

ಚಿತ್ರಕೃಪೆ: Ananth BS

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಶ್ರೀರಂಗ ಪಟ್ಟಣದ ರಂಗನಾಥನ ದರುಶನ ಮಾಡಿ ನಂತರ ಅಲ್ಲಿಂದ ಮೈಸೂರನ್ನು ತಲುಪಬೇಕು. ಈ ಸಂದರ್ಭದಲ್ಲಿ ದಿನವೆಲ್ಲ ಕಳೆದು ರಾತ್ರಿಯಾಗಿರುವುದರಿಂದ ಇಲ್ಲಿ ತಂಗುವುದು ಉತ್ತಮ. ತಂಗಲು ಮೈಸೂರಿನಲ್ಲಿ ಸಾಕಷ್ಟು ಉತ್ತಮ ವಸತಿ ಗೃಹಗಳು, ಹೋಟೆಲುಗಳು ಲಭ್ಯವಿದೆ.

ಚಿತ್ರಕೃಪೆ: Prateek Karandikar

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮೈಸೂರಿಗೆ ಬಂದು ಇಲ್ಲಿನ ಕೆಲ ಆಕರ್ಷಣೆಗಳನ್ನು ನೋಡದಿದ್ದರೆ ಹೇಗೆ? ಆದರೆ ಇಲ್ಲೊಂದು ಅಂಶವನ್ನು ಗಮನದಲ್ಲಿಡಬೇಕು. ಬಂಡೀಪುರವು ಸುಮಾರು 77 ಕಿ.ಮೀ ಗಳಷ್ಟು ದೂರದಲ್ಲಿದ್ದು ರಾತ್ರಿಯಲ್ಲಿ ಸಂಚಾರ ನಿರ್ಬಂಧವಿರುತ್ತದೆ. ಕಾರಣ ಸಾಯಂಕಾಲದ ಮುಂಚೆಯೆ ಬಂಡೀಪುರ ತಲುಪುವ ಹಾಗೆ ಯೋಜಿಸ ಬೇಕು. ಬೇಕಿದ್ದರೆ ಮೈಸೂರು ಅರಮನೆಗೆ ಮಾತ್ರವೆ ಭೇಟಿ ನೀಡಿ ನಂತರ ಮೈಸೂರಿನಿಂದ ನಂಜನಗೂಡಿನೆಡೆ ಪ್ರಯಾಣ ಬೆಳೆಸಬೇಕು.

ಚಿತ್ರಕೃಪೆ: Jim Ankan Deka

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಮೈಸೂರು - ಕೊಳಿಕೋಡ್ ರಸ್ತೆಯ ಮುಖಾಂತರ ಮೈಸೂರಿನಿಂದ 23 ಕಿ.ಮೀ ಕ್ರಮಿಸಿ ನಂಜನಗೂಡನ್ನು ತಲುಪಬೇಕು. ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಿಂದಾಗಿ ಬಹು ಖ್ಯಾತಿಗಳಿಸಿದೆ.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ನಂಜನಗೂಡಿನಲ್ಲಿರುವ ಮತ್ತೊಂದು ಪ್ರಸಿದ್ಧವಾದ ಆಕರ್ಷಣೆ ಶ್ರೀ ಗುರು ರಾಘವೇಂದ್ರ ಮಠ.

ಚಿತ್ರಕೃಪೆ: Raod07

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ನಂಜನಗೂಡಿನ ಭೇಟಿಯ ನಂತರ ನೇರವಾಗಿ ಬಂಡೀಪುರದೆಡೆ ಪ್ರಯಾಣ ಬೆಳೆಸಿ. ಬಂಡೀಪುರವು ನಂಜನಗೂಡಿನಿಂದ 55 ಕಿ.ಮೀ ಗಳಷ್ಟು ದೂರವಿದೆ.

ಚಿತ್ರಕೃಪೆ: Dave Lonsdale

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇಂದು ಅಳಿವಿನಂಚಿನಲ್ಲಿರುವ ಕೆಲ ಜೀವಿಗಳು ಸಂರಕ್ಷಿಸಲ್ಪಟ್ಟಿವೆ. ಅಲ್ಲದೆ ಅಪರೂಪದ ಸಸ್ಯ ಸಂಪತ್ತಿಗೂ ಕೂಡ ಇದು ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Ramesh Meda

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಇದೊಂದು ಹುಲಿ ಮೀಸಲು ಪ್ರದೇಶವಾಗಿದ್ದು, ಇಲ್ಲಿ ಹುಲಿ, ಕರಡಿ, ಕಾಡು ಹಂದಿ, ಜಿಂಕೆ, ಆನೆಗಳು, ಹೆಬ್ಬಾವು ಹೀಗೆ ಮುಂತಾದ ಹಲವು ಪ್ರಾಣಿ ಪಕ್ಷಿಗಳನ್ನು ಕಾಣಬಹುದು.

ಚಿತ್ರಕೃಪೆ: Yathin S Krishnappa

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ತೆರೆದ ಜೀಪ್ ನಲ್ಲಿ ಸಫಾರಿ ಅಥವಾ ವಿಹಾರ ಇಲ್ಲಿ ಲಭ್ಯವಿರುತ್ತದೆ. ದಿನದಲ್ಲಿ ಎರಡು ಬಾರಿ ಸಫಾರಿಯಿರುತ್ತದೆ ಒಂದು ಬೆಳಿಗ್ಗೆ ಆರರಿಂದ ಒಂಬತ್ತು ಘಂಟೆಯವರೆಗೆ ಹಾಗೂ ಇನ್ನೊಂದು ಸಂಜೆ ನಾಲ್ಕರಿಂದ ಆರು ಘಂಟೆಯವರೆಗೆ. ವಿದೇಶಿಯರಿಗೆ ಹಾಗೂ ಭಾರತೀಯರಿಗೆ ಪ್ರತ್ಯೇಕವಾದ ಶುಲ್ಕವಿದೆ.

ಚಿತ್ರಕೃಪೆ: Rishabh Mathur

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Gopal Venkatesan

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Akshay

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Swaminathan

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Yathin S Krishnappa

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Yathin S Krishnappa

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Dineshkannambadi

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Mylittlefinger

ಬೆಂಗಳೂರಿನಿಂದ ಬಂಡೀಪುರ:

ಬೆಂಗಳೂರಿನಿಂದ ಬಂಡೀಪುರ:

ಬಂಡೀಪುರದಲ್ಲಿ ಕಂಡುಬರುವ ಕೆಲ ಜೀವಿಗಳು.

ಚಿತ್ರಕೃಪೆ: Lip Kee

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X