Search
  • Follow NativePlanet
Share
ಮುಖಪುಟ » ಸ್ಥಳಗಳು» ನಂಜನಗೂಡು

ನಂಜನಗೂಡು-  ಗುಡಿ ಗೋಪುರಗಳ ಕ್ಷೇತ್ರ

15

ಮೈಸೂರು ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡು. ತನ್ನ ಶ್ರೀಮಂತ ಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಪಟ್ಟಣ ಮೊದಲಿಗೆ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು, ನಂತರ ಹೊಯ್ಸಳರು ಇದನ್ನು ಆಳಿದರು , ಆನಂತರ ಮೈಸೂರು ಒಡೆಯರು ಇದನ್ನು ಆಳಿದರು. ಇತಿಹಾಸದಲ್ಲಿ ದಾಖಲಾದಂತೆ ಶ್ರೀರಂಗಪಟ್ಟಣವನ್ನು ಆಳಿದ ಹೈದರಾಲಿ ಮತ್ತು ಆತನ ಮಗ ಟಿಪ್ಪುಸುಲ್ತಾನ್ ನಂಜನಗೂಡಿನೊಂದಿಗೆ ತುಂಬಾ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.

 

ನಂಜನಗೂಡಿನ ಕುರಿತು ಕೆಲವು ಸಂಗತಿಗಳು

ಈ ಪಟ್ಟಣವು ಇಲ್ಲಿ ನೆಲೆಗೊಂಡಿರುವ ದೈವವಾದ ನಂಜುಂಡೇಶ್ವರನಿಂದ ನಂಜನಗೂಡು ಎಂದು ಹೆಸರು ಪಡೆಯಿತು. ಕ್ಷೀರಸಾಗರ ಮಂಥನ ಮಾಡಿದಾಗ ಹೊರಬಂದ ವಿಷದಿಂದ ಭೂಮಿಯ ಜೀವಸಂಕುಲವನ್ನು ರಕ್ಷಿಸಲು ಶಿವನು ಆ ವಿಷವನ್ನು ಕುಡಿದು ನಂಜುಂಡನಾಗಿ ಈ ಕ್ಷೇತ್ರದಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ನಂಜನಗೂಡು ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದಿದ್ದು, ಇಲ್ಲಿ ಮಾಡುವ ತೀರ್ಥ ಸ್ನಾನ ಮತ್ತು ದೈವದ ದರ್ಶನ  ಪಾಪ ವಿಮೋಚಕ ಗುಣವುಳ್ಳದೆಂದು ಹೇಳಲಾಗುತ್ತದೆ.

ನಂಜನಗೂಡಿಗೆ  ಭೇಟಿ ಕೊಡುವವರು ಶ್ರೀ ರಾಘವೇಂದ್ರ ಸ್ವಾಮಿ ಮಠ ಮತ್ತು ಪರಶುರಾಮ ಕ್ಷೇತ್ರಗಳಿಗೆ ಭೇಟಿ ಕೊಡಬಹುದು. ಕೆಲವು ಅಪರೂಪದ ರಾಘವೇಂದ್ರ ಸ್ವಾಮಿಗಳ ಮೂರ್ತಿಗಳನ್ನು ನೀವು ನಂಜನಗೂಡಿನ ಮಠದಲ್ಲಿ ಕಾಣಬಹುದು.

ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 30 ಕಿ.ಮೀ ದೂರದಲ್ಲಿ ಇರುವ ನಂಜನಗೂಡಿಗೆ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಕೇವಲ ತೀರ್ಥಕ್ಷೇತ್ರವೆಂದಷ್ಟೆ ಅಲ್ಲದೆ, ಮಿತವ್ಯಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಣವಾಗಿ ಸಹಾ ಇದನ್ನು ಸಂದರ್ಶಿಸಬಹುದು.

ನಂಜನಗೂಡು ಪ್ರಸಿದ್ಧವಾಗಿದೆ

ನಂಜನಗೂಡು ಹವಾಮಾನ

ಉತ್ತಮ ಸಮಯ ನಂಜನಗೂಡು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಂಜನಗೂಡು

  • ರಸ್ತೆಯ ಮೂಲಕ
    ನಂಜನಗೂಡು ಮೈಸೂರು ಮತ್ತು ಬೆಂಗಳೂರಿನಂತಹ ನಗರಗಳಿಗೆ ಸಮೀಪವಿದ್ದು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಈ ನಗರಗಳಿಂದ ನಂಜನಗೂಡಿಗೆ ನಿಯಮಿತವಾಗಿ ಬಸ್ ಗಳ ಸೌಲಭ್ಯವಿದ್ದು ಇದು ಸುರಕ್ಷಿತವು ಹಾಗು ಆರ್ಥಿಕವಾಗಿ ಮಿತವ್ಯಯವು ಹೌದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಂಜನಗೂಡು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದ್ದು, ಇದು ಮೈಸೂರಿಗೆ ಅತಿ ಸಮೀಪದಲ್ಲಿದೆ. ಅಲ್ಲದೆ ಮೈಸೂರು ಹತ್ತಿರ ಪ್ರಮುಖ ರೈಲ್ವೆ ನಿಲ್ದಾಣವಾಗಿದ್ದು ಇಲ್ಲಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಈ ರೈಲು ನಿಲ್ದಾಣವು ನಂಜನಗೂಡನ್ನು ದೇಶದ ಇತರ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕಿಸುತ್ತದೆ. ಪ್ರಯಾಣಿಕರು ಇಲ್ಲಿಂದ ಟ್ಯಾಕ್ಸಿ ಮತ್ತು ಬಾಡಿಗೆ ವಾಹನಗಳಲ್ಲಿ ನಂಜನಗೂಡು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಂಜನಗೂಡು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 160 ಕಿ.ಮೀ ನಷ್ಟು ದೂರದಲ್ಲಿ ನೆಲೆಗೊಂಡಿದೆ. ಈ ನಿಲ್ದಾಣವು ಹಲವು ದೇಶಿ ವಿಮಾನಗಳು ಮತ್ತು ಯೂರೋಪ್, ಏಶಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ ಹಾಗು ಮಧ್ಯ ಪ್ರಾಚ್ಯದಂತಹ ದೇಶಗಳ ವಿಮಾನಗಳ ಹಾರಾಟ ವ್ಯವಸ್ಥೆ ಹೊಂದಿದೆ. ವಿಮಾನದಲ್ಲಿ ಬರುವವರು ಈ ವಿಮಾನ ನಿಲ್ದಾಣಕ್ಕೆ ಬರುವುದು ಉತ್ತಮ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat