Search
  • Follow NativePlanet
Share
ಮುಖಪುಟ » ಸ್ಥಳಗಳು » ನಂಜನಗೂಡು » ಹವಾಮಾನ

ನಂಜನಗೂಡು ಹವಾಮಾನ

ಪ್ರವಾಸಿಗರು ನಂಜನಗೂಡಿಗೆ ಹೊರಡಲು ಚಳಿಗಾಲವು ಅತ್ಯುತ್ತಮ ಕಾಲವಾಗಿದೆ. ಏಕೆಂದರೆ ಆಗ ಇಲ್ಲಿನ ಹವಾಮಾನ ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ನಂಜನಗೂಡು ತನ್ನ ಕಡು ಬಿಸಿಲು, ಆರ್ದ್ರತೆ ಮತ್ತು ಅಹಿತಕರವಾದ ಬೇಸಿಗೆಗೆ ಹೆಸರಾಗಿದೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ ಸಾಮಾನ್ಯವಾಗಿ 30 ಡಿಗ್ರಿಯಷ್ಟು ಇರುತ್ತದೆ. ದಿನದ ಉಷ್ಣಾಂಶವು 40 ಡಿಗ್ರಿಯಷ್ಟು ಏರಿದರೆ, ರಾತ್ರಿಯ ಉಷ್ಣಾಂಶ 32 ಡಿಗ್ರಿಯಷ್ಟು ಕುಸಿಯುತ್ತದೆ. ಯಾತ್ರಾರ್ಥಿಗಳು ಈ ಸುಡುವ ಬಿಸಿಲಿನ ಕಾಲದಲ್ಲಿ ನಂಜನಗೂಡಿಗೆ ಭೇಟಿ ಕೊಡದಿರುವುದೇ ಒಳ್ಳೆಯದು.

ಮಳೆಗಾಲ

(ಜೂನ್ ನಿಂದ ಅಕ್ಟೋಬರ್): ಮಳೆಗಾಲವು ಬೇಸಿಗೆ ಮುಗಿದ ಕೂಡಲೇ ಶುರುವಾಗಿ ಬಿಸಿಲ ಬೇಗೆಯಿಂದ ಕಾಪಾಡಿ ಸ್ವಲ್ಪ ನೆಮ್ಮದಿ ನೀಡುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ಈ ಪಟ್ಟಣಕ್ಕೆ ಭೇಟಿ ಕೊಡಬಹುದು.ನಏಕೆಂದರೆ ಹವಾಮಾನ ಸ್ವಲ್ಪ ಹಿತಕರವಾಗಿರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ನಂಜನಗೂಡು ಮಿತವಾದ ಚಳಿಗಾಲವನ್ನು ಹೊಂದಿರುತ್ತದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶ ಸಾಮಾನ್ಯವಾಗಿ 22 ರಿಂದ 32° ಸೆಲ್ಶಿ ಯಸ್ ನಷ್ಟು ಇರುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ನಂಜನಗೂಡು ನೋಡಲು ಬಹು ಸಂಖ್ಯೆಯಲ್ಲಿ ಬರುತ್ತಾರೆ. ಏಕೆಂದರೆ ಇಲ್ಲಿನ ಹವಾಮಾನ ಚಳಿಗಾಲದಲ್ಲಿ ತಂಪಾಗಿ ಹಿತವಾಗಿ ಯಾತ್ರಾರ್ಥಿಗಳಿಗೆ ಹೇಳಿ ಮಾಡಿಸಿದಂತಿರುತ್ತದೆ.