Search
  • Follow NativePlanet
Share
» »ಕುದುರೆಮುಖ ವಾರಂತ್ಯದ ವಿಹಾರಕ್ಕಾಗಿ ಭೇಟಿ ನೀಡಬಹುದಾದಂತಹ ತಾಣ

ಕುದುರೆಮುಖ ವಾರಂತ್ಯದ ವಿಹಾರಕ್ಕಾಗಿ ಭೇಟಿ ನೀಡಬಹುದಾದಂತಹ ತಾಣ

ಕರ್ನಾಟಕ ರಾಜ್ಯದಲ್ಲಿಯ ಕೆಲವು ಸ್ಥಳಗಳು ಇನ್ನೂ ಸಂಪೂರ್ಣವಾಗಿ ಪರಿಶೋಧನೆಗೆ ಒಳಪಡದೇ ಇರುವ ಕಾರಣದಿಂದಾಗಿ ಇವುಗಳ ವೈಶಿಷ್ಟ್ಯತೆಯು ಇನ್ನೂ ಹಾಗೆಯೇ ಉಳಿದುಕೊಂಡಿದೆ. ನಂಬಲಸಾಧ್ಯವಾದ ಪ್ರಕೃತಿ, ಐತಿಹಾಸಿಕ ತಾಣಗಳು ಮತ್ತು ಪಶ್ಚಿಮ ಘಟ್ಟಗಳ ಹಚ್ಚ ಹಸಿರು ಕಣಿವೆಗಳು, ನೀಲಿ ಬಣ್ಣದಿಂದ ಕಂಗೊಳಿಸುವ ಅಲೆಗಳಿಂದ ಕೂಡಿದ ಅರಬ್ಬೀ ಸಮುದ್ರ ಮುಂತಾದವುಗಳನ್ನು ಒಳಗೊಂಡ ಕರ್ನಾಟಕವು ಒಂದು ಸುಂದರ ರಾಜ್ಯವೆನಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ನೈರುತ್ಯ ಭಾಗದಲ್ಲಿರುವ ಕುದುರೆಮುಖವು ತನ್ನ ಪ್ರಾಚೀನ ಸೌಂದರ್ಯತೆ ಮತ್ತು ಜೀವ ವೈವಿಧ್ಯತೆಗಳಿಗಾಗಿ ಹೆಸರುವಾಸಿಯಾಗಿದೆ.ಇಲ್ಲಿಯ ಒಂದು ಪರ್ವತದ ಶಿಖರವು ಕುದುರೆಯ ಮುಖವನ್ನು ಹೋಲುವುದರಿಂದ ಈ ಸ್ಥಳಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ಇಲ್ಲಿಯ ಅದ್ಬುತ ದೃಶ್ಯ ಸೌಂದರ್ಯಗಳ ಹೊರತಾಗಿಯೂ ಈ ಸ್ಥಳವು ಶ್ರೀಮಂತವಾಗಿ ಖನಿಜ ಸಂಪತ್ತುಗಳನ್ನು ಹೊಂದಿದೆ. ಅರಣ್ಯಗಳು ನಾಶವಾಗುತ್ತವೆ ಎಂಬ ಭಯದಿಂದ ಇದನ್ನು ರಾಷ್ಟ್ರೀಯ ಉದ್ಯಾನವನವೆಂದು ಕರ್ನಾಟಕ ಸರಕಾರದಿಂದ ಘೋಷಿಸಲಾಯಿತು. ಕುದುರೆಮುಖ ಪ್ರದೇಶಗಳು ಉಷ್ಣವಲಯದ ಆರ್ದ್ರ ನಿತ್ಯ ಹರಿದ್ವರ್ಣ ಕಾಡುಗಳ ಅತೀ ದೊಡ್ಡ ಮೀಸಲು ಪ್ರದೇಶಗಳನ್ನು ತನ್ನಲ್ಲಿ ಹೊಂದಿದೆ ಇದರ ಹೊರತಾಗಿ ಈ ಸ್ಥಳವು ಭದ್ರಾ, ನೇತ್ರಾವತಿ ಮತ್ತು ತುಂಗಾ ನದಿಗಳ ಮೂಲ ಸ್ಥಳವಾಗಿದೆ.

Chikmagalur

ಕುದುರೆಮುಖದಲ್ಲಿ ಅತ್ಯಂತ ಅದ್ಭುತವಾದ ಮತ್ತು ಮಂತ್ರಮುಗ್ದಗೊಳಿಸುವ ನೋಟಗಳಿದ್ದು, ಈ ಸ್ಥಳವು ಸುತ್ತಮುತ್ತಲಿನ ಮತ್ತು ದೂರದ ಊರಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುದುರೆಮುಖವು ಹೂವುಗಳು, ಸಸ್ಸ್ಯಗಳು ಮತ್ತು ಪ್ರಾಣಿಗಳನ್ನೊಳಗೊಂಡ ಗಿರಿಧಾಮವಾಗಿದೆ. ಚಲಿಸುವ ಗ್ಲೇಡ್ ಗಳು, ಹುಲ್ಲುಗಾವಲುಗಳು, ದಟ್ಟವಾದ ಕಾಡುಗಳ ನಡುವೆ ಹರಿಯುವ ಜಲಪಾತಗಳು ಮತ್ತು ಹಚ್ಚ ಹಸುರಿನ ಬೆಟ್ಟಗಳನ್ನೊಳಗೊಂಡ ಸುಂದರ ದೃಶ್ಯಗಳು ಈ ಸ್ಥಳವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡುತ್ತದೆ.

ದೇವಾಲಯದ ಪಟ್ಟಣ ಕಳಸ

ಕಳಸವು ಒಂದು ಸಣ್ಣ ಪಟ್ಟಣವಾಗಿದ್ದು, ಇದು ಭದ್ರಾನದಿಯ ದಡದಲ್ಲಿ ನೆಲೆಸಿದೆ. ಈ ಪಟ್ಟಣವು ಪ್ರಸಿದ್ದ ಕಳಸೇಶ್ವರ ಎಂಬ ಶಿವನ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಪೌರಾಣಿಕ ಮತ್ತು ವ್ಯುತ್ಪತ್ತಿ ಎರಡೂ ಕಾರಣಗಳಿಂದಾಗಿ ಕಳಸದ ಜನನವಾಗಿದೆ ಎಂದು ಕಥೆಗಳು ಹೇಳುತ್ತವೆ. ಸ್ಥಳೀಯರ ನಂಬಿಕೆಯ ಪ್ರಕಾರ ಮೂಲತಃ ಮಡಕೆ ಎಂಬರ್ಥವಿರುವ ಕಳಸ ಪಟ್ಟಣವು ಶಿವ ಮತ್ತು ಪಾರ್ವತಿ ದೇವಿಯ ವಿವಾಹ ಸಮಾರಂಭದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ ಅದರಂತೆ ಈ ಊರಿನ ನಿವಾಸಿಗಳು ಶಿವ ಮತ್ತು ಪಾರ್ವತಿಯರ ದಾಂಪತ್ಯದ ನೆನಪಿಗಾಗಿ ಪ್ರತಿ ವರ್ಷ ಗಿರಿಜಾ ಕಲ್ಯಾಣವನ್ನು ಆಚರಿಸುತ್ತಾರೆ.

ಈ ಪಟ್ಟಣದ ಪ್ರಾಥಮಿಕ ಆರ್ಥಿಕತೆಯ ಮೂಲ ಕೃಷಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯಗಳಿಗಾಗಿ ಭದ್ರಾ ನದಿಯ ನೀರನ್ನು ಅವಲಂಬಿಸಿದೆ. ಕಳಸದ ಮಣ್ಣು ಉತ್ತಮ ಫಲವತ್ತತೆಯಿಂದ ಕೂಡಿದ್ದು ಅತ್ಯುತ್ತಮವಾದ ಕಾಫಿ ಮತ್ತು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಉತ್ಪಾದಿಸಲಾಗುತ್ತದೆ. ಹಚ್ಚ ಹಸುರಿನಿಂದ ಕೂಡಿರುವ ಈ ಪಟ್ಟಣವು ಆಯುರ್ವೇದ ಮತ್ತು ಗಿಡಮೂಲಿಕೆ ಸಸ್ಯಗಳ ಚಿಕಿತ್ಸೆಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಪ್ರಮುಖವಾದ ಸ್ಥಳವಾಗಿದ್ದು ಜನಭರಿತವಾಗಿರುತ್ತದೆ. ಪಂಚತೀರ್ಥ ಎಂದು ಕರೆಯಲ್ಪಡುವ ಸ್ಥಳದಲ್ಲಿ ಐದು ಪ್ರಮುಖ ನೀರಿನ ತಾಣಗಳಿವೆ ಇಷ್ಟು ಮಾತ್ರವಲ್ಲದೆ ಕಳಸವು ದಕ್ಷಿಣ ಭಾರತದ ಭವ್ಯವಾದ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುತ್ತದೆ.

ಗಂಗಮೂಲ ಬೆಟ್ಟಗಳು

ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿರುವ ಈ ಬೆಟ್ಟವು ಪಶ್ಚಿಮಘಟ್ಟಗಳ ಸೊಂಪಾದ ಮಡಿಲಿನಲ್ಲಿ ನೆಲೆಸಿದೆ ಈ ಪರ್ವತವನ್ನು ವರಾಹ ಪರ್ವತವೆಂದೂ ಕರೆಯಲಾಗುತ್ತದೆ. ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಾನವೂ ಇಲ್ಲಿಯೇ ಆಗಿರುತ್ತದೆ. ದೇವಿ ಭಗವತಿ ದೇವಾಲಯ ಮತ್ತು ಇಲ್ಲಿಯ ಒಂದು ಗುಹೆಯಲ್ಲಿರುವ 6 ಅಡಿ ಎತ್ತರದ ವರಾಹನ ಮೂರ್ತಿಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗಂಗಮೂಲದ ಬೆಟ್ಟಗಳು ಮ್ಯಾಗ್ನೆಟೈಟ್-ಕ್ವಾರ್ಟ್ಜೈಟ್ ನಿಕ್ಷೇಪಗಳೊಂದಿಗೆ ಖನಿಜಗಳಿಂದ ಸಮೃದ್ಧವಾಗಿವೆ. ಹಾಗೂ 107 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿರುವ ಹಾಟ್‌ಸ್ಪಾಟ್ ಆಗಿದೆ.

ಕುದುರೆಮುಖ ಶಿಖರ

ಕುದುರೆಮುಖ ಶಿಖರವು ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಪ್ರೇಮಿಗಳಿಗೆ ಸ್ವರ್ಗವಾಗಿದೆ. ಹಾವಿನಂತೆ ಸುತ್ತುವ ಪರ್ವತವು ಜಲ್ಲಿ ಹೊದಿಕೆಯ ಹಾದಿಗಳು ಮತ್ತು

ವೈವಿಧ್ಯಮಯವಾದ ಪ್ರಾಣಿಗಳು ಮತ್ತು ಹೂವುಗಳಿಂದ ಕೂಡಿದ್ದು ನೋಡಲು ಮುದವನ್ನು ನೀಡುತ್ತದೆ. ಈ ಸ್ಥಳವು ಅರಬ್ಬೀ ಸಮುದ್ರದಿಂದ ಬಹಳಷ್ಟು ಮೇಲೆ ಇದ್ದು, ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಒಳಗೊಂಡು ಸಮೃದ್ದವಾಗಿದೆ.

ಎತ್ತರದ ಬಿದಿರಿನ ಪೊದೆಗಳು ಮತ್ತು ಶೋಲಾ ಕಾಡುಗಳಿಂದ ಹಿಡಿದು ಧುಮುಕುವ ಜಲಪಾತಗಳು ಮತ್ತು ಬೆಟ್ಟಗಳವರೆಗೆ, ಕುದುರೆಮುಖ ಶಿಖರವು ಎಲ್ಲವನ್ನೂ ಹೊಂದಿದೆ. ನೀವು ಕಠಿಣವಾದ ಸಾಹಸಕ್ಕೆ ಸಿದ್ಧರಾಗಿದ್ದರೆ, ಕುದುರೆಮುಖದಲ್ಲಿನ ಟ್ರೆಕ್ಕಿಂಗ್ ಟ್ರಯಲ್ ಅರಣ್ಯ ಪರಿಶೋಧನೆ ಮತ್ತು ಟ್ರೆಕ್ಕಿಂಗ್‌ಗೆ ಸೂಕ್ತವಾದ ತಾಣವಾಗಿದೆ. ಈ ಪರ್ವತ ಶ್ರೇಣಿಯಲ್ಲಿನ ಬೆಟ್ಟಗಳು ಬಹಳ ವಿಶಾಲವಾಗಿವೆ ಮತ್ತು ಕಣಿವೆಗಳು, ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಆಳವಾದ ಬಯಲು ಪ್ರದೇಶಗಳೊಂದಿಗೆ ಸರಪಳಿಯಂತೆ ಪರಸ್ಪರ ಸಂಪರ್ಕ ಹೊಂದಿವೆ.

ಹನುಮಾನ್ ಗುಂಡಿ ಜಲಪಾತಗಳು

ಕುದುರೆಮುಖವು ಸುಂದರವಾದ ಹನುಮಾನ್ ಗುಂಡಿ ಜಲಪಾತಗಳ ನೆಲೆಯಾಗಿದ್ದು, ಇದು ಸುಮಾರು 100 ಅಡಿಗಿಂತಲೂ ಎತ್ತರದಿಂದ ನೈಸರ್ಗಿಕ ಬಂಡೆಗಳ ಮೇಲೆ ರತ್ನದಂತೆ ಹೊಳೆಯುವ ನೀರಿನೊಂದಿಗೆ ಧುಮುಕುತ್ತಾ ಕಣಿವೆಗಳಾಗಿ ಕೆಳಗೆ ಹರಿಯುತ್ತದೆ. ಇದೊಂದು ಅತ್ಯಂತ ಸುಂದರವಾದ ನೋಟವನ್ನು ನೀಡುತ್ತದೆ. ಹನುಮಾನ್ ಗುಂಡಿ ಜಲಪಾತವನ್ನು ಸುತನಬ್ಬೆ ಜಲಪಾತ ಎಂದೂ ಕರೆಯುತ್ತಾರೆ. ಸ್ವಲ್ಪ ಕಷ್ಟಕರವಾದ ಹಾದಿಗಳನ್ನೊಳಗೊಂಡ ಈ ಜಲಪಾತವು ಪ್ರವಾಸಿಗರ ಪ್ರಮುಖ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇರಬೇಕಾಗಿದೆ. ಈ ವಿಹಾರ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿಯ ಸುಂದರ ಪ್ರಕೃತಿಯನ್ನು ಅನುಭವಿಸಿರಿ.

Chikmagalur

ಕುದುರೆಮುಖ ರಾಷ್ಟೀಯ ಉದ್ಯಾನವನ

ಕುದುರೆಮುಖ ಉದ್ಯಾನವನವು ರಾಷ್ಟೀಯ ಉದ್ಯಾನವನವಾಗಿದ್ದು ಇದು ಪರ್ವತಗಳು ಮತ್ತು ಕಣಿವೆಗಳ ಮಧ್ಯದಲ್ಲಿದೆ ಇದನ್ನು 'ಜಾಗತಿಕ ಹುಲಿ ಸಂರಕ್ಷಣಾ ಆದ್ಯತೆ -I' ರ ಅಡಿಯಲ್ಲಿ ಇಡಾಲಾಗಿದೆ .ಅಲ್ಲದೆ ಈ ಉದ್ಯಾನವನವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದು, 1987 ರಲ್ಲಿ ಸ್ಥಾಪಿಸಲಾದ ಈ ಈ ಉದ್ಯಾನವನವು ಅನೇಕ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಜಾತಿಯ ಸಸ್ಯಗಳು ಮತ್ತು ಕಾಡು ಹಂದಿ, ಸಿಂಹ-ಬಾಲದ ಮಕಾಕ್ ಮತ್ತು ಇತರ ಹಲವು ಜಾತಿಯ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನವಾಗಿದೆ.

ಮೂಲಭೂತವಾಗಿ ಕುದುರೆಮುಖವು ಕಬ್ಬಿಣದ ಅದಿರು ಗಣಿಗಾರಿಕೆಯ ಪ್ರಮುಖ ಪಟ್ಟಣವಾಗಿ ಅಭಿವೃದ್ದಿ ಹೊಂದಿದ್ದು, ಈ ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವುದರಿಂದ ಇದರ ವಿರುದ್ದವಾಗಿ ಸಂರಕ್ಷಣಾಕಾರರು ಯಶ಼ಸ್ವಿಯಾಗಿ ಪ್ರಚಾರ ಮಾಡಿದರು. ರಾಷ್ಟ್ರೀಯ ಉದ್ಯಾನವನದ ನಡೆದಾಡುವ ಹಾದಿಗಳಲ್ಲಿ ಕೆಲವು ಹಚ್ಚ ಹಸುರಿನ ಕಣಿವೆಗಳು ಮತ್ತು ಪಶ್ಚಿಮ ಘಟ್ಟಗಳ ಹುಲ್ಲುಗಾವಲುಗಳ ನೋಟವು ಭೇಟಿ ನೀಡುವವರನ್ನು ಮಂತ್ರಮುಗ್ದಗೊಳಿಸುತ್ತದೆ.

ಕುದುರೆಮುಖವನ್ನು ತಲುಪುವುದು ಹೇಗೆ?

ವಾಯುಮಾರ್ಗದ ಮೂಲಕ: ಕುದುರೆಮುಖಕ್ಕೆ ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ನಗರದಲ್ಲಿದ್ದು ಇದು ಪಟ್ಟಣದಿಂದ ಸುಮಾರು 130 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಕುದುರೆಮುಖಕ್ಕೆ ಹತ್ತಿರದ ರೈಲುಮಾರ್ಗವು ಮಂಗಳೂರಿನಲ್ಲಿದೆ.

ರಸ್ತೆಯ ಮೂಲಕ: ಕುದುರೆಮುಖವು ಉತ್ತಮ ಮತ್ತು ಸುಲಭವಾದ ಸಂಪರ್ಕವನ್ನು ಹೊಂದಿದೆ ಮತ್ತು ರಸ್ತೆಮಾರ್ಗಗಳ ಮೂಲಕ ದೇಶದ ಎಲ್ಲಾ ಭಾಗಗಳಿಂದ ಪ್ರವೇಶಿಸಬಹುದಾಗಿದೆ. ಅನುಕೂಲಕರ ಕ್ಯಾಬ್ ಸೌಲಭ್ಯಗಳು ಮತ್ತು ಸುಸಜ್ಜಿತ ಬಸ್ ಸೇವೆಗಳೊಂದಿಗೆ, ಕುದುರೆಮುಖವನ್ನು ಮಂಗಳೂರು, ಚಿಕ್ಕಮಗಳೂರು ಮತ್ತು ಶೃಂಗೇರಿಯಿಂದ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು.

ಕುದುರೆಮುಖಕ್ಕೆ ಭೇಟಿ ನೀಡಲು ಉತ್ತಮವಾದ ಸಮಯ

ಕುದುರೆಮುಖಕ್ಕೆ ವರ್ಷಪೂರ್ತಿ ಭೇಟಿ ನೀಡಬಹುದಾದರೂ, ಡಿಸೆಂಬರ್ ಮತ್ತು ಫೆಬ್ರವರಿ ನಡುವಿನ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುವುದರಿಂದ ಭೇಟಿ ಕೊಡಲು ಉತ್ತಮ ಸಮಯವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X