Search
  • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಹವಾಮಾನ

ವಯನಾಡ್ ಹವಾಮಾನ

ವಯನಾಡಿಗೆ ಭೇಟಿಕೊಡಲು ಅತ್ಯುತ್ತಮ ಅವಧಿಯೆಂದರೆ ಚಳಿಗಾಲ. ಈ ಸಮಯದಲ್ಲಿ ಇಲ್ಲಿ ಬಿಸಿಲು ಮತ್ತು ಆರ್ದ್ರತೆ ಕಡಿಮೆಯಿರುವ ಕಾರಣ  ಹವಾಗುಣವು ಅತ್ಯಂತ ಮುದದಿಂದ ಕೂಡಿರುತ್ತದೆ. ಅಲ್ಲದೆ ರಾತ್ರಿ ಸಮಯದಲ್ಲಿ ಅಂತಹ ಕೊರೆಯುವ ಚಳಿಯಿಲ್ಲದಿರುವ ಕಾರಣದಿಂದ ರಾತ್ರಿ ಸಮಯದಲ್ಲಿಯು ನೀವು ಇಲ್ಲಿ ಸ್ಥಳ ವೀಕ್ಷಣೆ ಮಾಡಬಹುದು.

ಬೇಸಿಗೆಗಾಲ

ವಯನಾಡಿನಲ್ಲಿ ಬೇಸಿಗೆಯು ತುಂಬಾ ಸೆಖೆ ಮತ್ತ್ ಬಿಸಿಲಿನಿಂದ  ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ದಿನದ ಸಮಯದಲ್ಲಿ  37°ಸೆಲ್ಶಿಯಸ್ ಇರುತ್ತದೆ. ಹಾಗಾಗಿ ಇಲ್ಲಿಗೆ ಈ ಸಮಯದಲ್ಲಿ ಭೇಟಿ ಕೊಡುವುದು ಅತ್ಯಂತ ಅಸೌಖ್ಯವನ್ನುಂಟು ಮಾಡುತ್ತದೆ. ಅಲ್ಲದೆ ಇಲ್ಲಿನ ಬಿಸಿಲಿನಿಂದ ನೀವು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ನೋಡಿ ಸಂತೋಷಪಡಲು ಸಾಧ್ಯವಾಗುವುದಿಲ್ಲ. ಆದರೆ ಬೇಸಿಗೆಯ ಸಂಜೆ ಮತ್ತು ರಾತ್ರಿಗಳಲ್ಲಿ ಇಲ್ಲಿ ಹಿತವಾದ ಮಂಜು ಬೀಳುತ್ತದೆ. ವಯನಾಡಿನಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಪ್ರಾರಂಭಗೊಂಡು ಮೇ ನಲ್ಲಿ ಅಂತ್ಯವಾಗುತ್ತದೆ.

ಮಳೆಗಾಲ

ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳ ನಡುವೆ ವಯನಾಡಿನಲ್ಲಿ  ಅತಿ ಹೆಚ್ಚು ಮಳೆಯಾಗುತ್ತದೆ.  ಇಲ್ಲಿನ ವರ್ಷಧಾರೆಯು ಎಷ್ಟು ಅಬ್ಬರದಿಂದ ಕೂಡಿರುತ್ತದೆಯೆಂದರೆ ಅದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ.  ಅಲ್ಲದೆ ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು 25°ಸೆಲ್ಶಿಯಸ್ ವರೆಗು ಕುಸಿಯುತ್ತದೆ. ಗಾಳಿ ಮಳೆಯಿಂದಾಗಿ ಪ್ರವಾಸಿಗರು ಹೊರಗೆ ಬರಲು ಸಹ ಸಾಧ್ಯವಾಗುವುದಿಲ್ಲ. ವಯನಾಡ್ ನೈಋತ್ಯ ಮತ್ತು ಈಶಾನ್ಯ ಮಾರುತಗಳ ಪ್ರಭಾವಕ್ಕೆ ಒಳಪಟ್ಟಿದೆ.

ಚಳಿಗಾಲ

ವಯನಾಡಿನಲ್ಲಿ ಚಳಿಗಾಲವು ಡಿಸೆಂಬರ್ ಆರಂಭದಲ್ಲಿ ಶುರುವಾಗಿ ಫೆಬ್ರವರಿ ಮಧ್ಯಭಾಗದವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 18° ಸೆಲ್ಶಿಯಸ್ ನಿಂದ  28°ಸೆಲ್ಶಿಯಸ್ ವರೆಗು ಇರುತ್ತದೆ. ಈ ಸಮಯದಲ್ಲಿ ಸಂಜೆಗಳು ಹಾಗು ರಾತ್ರಿಗಳು ಚಳಿಯಿಂದ ಕೂಡಿರುತ್ತವೆ. ಹಾಗಾಗಿ ಇಲ್ಲಿಗೆ ಈ ಸಮಯದಲ್ಲಿ ಭೇಟಿ ಕೊಡುವವರು ಚಳಿಯಿಂದ ರಕ್ಷಿಸಲು ಲಘುವಾದ ಜಾಕೆಟ್ ಅಥವಾ ಉಣ್ಣೆಯ ವಸ್ತ್ರಗಳನ್ನು ತಂದು ಕೊಳ್ಳಬೇಕಾದುದು ಅತ್ಯಗತ್ಯ..