Search
  • Follow NativePlanet
Share
» »ಕರ್ನಾಟಕದ ಕಣ್ಮನ ಸೆಳೆಯುವ ಕೋಟೆಗಳು

ಕರ್ನಾಟಕದ ಕಣ್ಮನ ಸೆಳೆಯುವ ಕೋಟೆಗಳು

By Vijay

ದುರ್ಗಗಳು ಎಂತಲೂ ಸಹ ಒಮ್ಮೊಮ್ಮೆ ಕರೆಯಲ್ಪಡುವ ಕೋಟೆಗಳು ಸಾಮಾನ್ಯವಾಗಿ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳು. ಹಿಂದೆ ರಾಜರುಗಳು ತಮ್ಮ ಸಾಮ್ರಾಜ್ಯಗಳನ್ನು ರಕ್ಷಿಸುವ ಹಾಗೂ ಶತ್ರು ಸೈನಿಕರು ಆಕ್ರಮಣ ಮಾಡುವುದನ್ನು ಪರಿಣಾಮಾತ್ಮಕವಾಗಿ ತಡೆಯಲು ಕೋಟೆಗಳನ್ನು ನಿರ್ಮಿಸುತ್ತಿದ್ದರು.

ವಿಶೇಷ ಲೇಖನ : ಮಹಾರಾಷ್ಟ್ರದ 30 ಅತ್ಯದ್ಭುತ ಕೋಟೆಗಳು

ಸಾಮಾನ್ಯವಾಗಿ ಕೋಟೆಗಳು ಬೃಹತ್ತಾಗಿಯೂ, ವಿಸ್ತಾರವಾಗಿಯೂ ನಿರ್ಮಿಸಲಾದ ರಚನೆಗಳಾಗಿರುತ್ತವೆ. ಕಲ್ಲಿನಿಂದ ದಪ್ಪವಾಗಿಯೂ ಸದೃಢವಾಗಿ ರಚಿತವಾಗಿದ್ದು ಹಲವಾರು ತಂತ್ರಗಾರಿಕೆಯನ್ನೂ ಸಹ ಒಮ್ಮೊಮ್ಮೆ ಒಳಗೊಂಡಿರುತ್ತವೆ. ಇಂದು ಕೋಟೆಯಂತಹ ಪದ್ಧತಿಗಳು ಜಾರಿಯಲ್ಲಿಲ್ಲ. ಆದರೂ ಕುತೂಹಲ ಕೆರಳಿಸುವ ಪ್ರವಾಸಿ ಆಕರ್ಷಣೆಗಳಾಗಿ ಕೋಟೆಗಳು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತವೆ.

ವಿಶೇಷ ಲೇಖನ : ಭಾರತ ದೇಶದ ಅತ್ಯಂತ ಪುರಾತನ ಕೋಟೆಗೊಂದು ಭೇಟಿ

ಭಾರತ ದೇಶದಲ್ಲಿ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ಸಾವಿರಾರು ಸಂಖ್ಯೆಯಲ್ಲಿ ಕೋಟೆಗಳನ್ನು ಕಾಣಬಹುದಾಗಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿಯೂ ಕೆಲವು ಅದ್ಭುತವಾದ ಕೋಟೆಗಳನ್ನು ಕಾಣಬಹುದು. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿ ಭೇಟಿ ನೀಡಬಹುದಾದ ಕೆಲವು ಆಕರ್ಷಕ ಕೋಟೆಗಳ ಕುರಿತು ತಿಳಿಯಿರಿ.

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬೀದರ್ ಕೋಟೆ : ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಬೀದರ್ ನಗರದಲ್ಲಿ ಬಹಮನಿ ಸುಲ್ತಾನರಿಂದ ಕಟ್ಟಲ್ಪಟ್ಟ ಕೋಟೆಯನ್ನು ಕಾಣಬಹುದಾಗಿದೆ. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಈ ಸಂದರ್ಭದಲ್ಲಿ ಇವರ ಸಾಮ್ರಾಜ್ಯದಲ್ಲಿ ಬೀದರ್, ಗೋಲ್ಕೊಂಡಾ, ಬಿಜಾಪುರ, ಗುಲ್ಬರ್ಗ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿಕೊಂಡಿದ್ದವು ಎಂಬುದನ್ನು ಗಮನಿಸಬಹುದು. ಪ್ರಸ್ತುತ ಬೀದರ್ ಕೋಟೆಯ ಇತಿಹಾಸವನ್ನು ಅಲ್ ಆ ಉದ್ ದಿನ್ ಬಹಮನ್ ಶಾ ನ ಮೂಲಕ ತಿಳಿಯಬಹುದಾಗಿದೆ.

ಚಿತ್ರಕೃಪೆ: Santosh3397

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬಹಮನಿ ಸುಲ್ತಾನರ ಸಾಮ್ರಾಜ್ಯವು ಸ್ಥಾಪಿತವಾದ ನಂತರ ಆ ಸಮಯದಲ್ಲಿ ಅಂದರೆ 14 ನೇಯ ಶತಮಾನದಲ್ಲಿ ಈ ಭಾಗಗಳಲ್ಲಿ ನಿರ್ಮಿತವಾದ ರಚನೆಗಳಲ್ಲಿ ಪರ್ಷಿಯನ್ ಸಂಸ್ಕೃತಿಯ ಪ್ರಭಾವವಿರುವುದನ್ನು ಗಮನಾರ್ಹವಾಗಿ ಕಾಣಬಹುದು. ಅಂತೆಯೆ ಬೀದರ್ ಕೋಟೆಯಲ್ಲೂ ಸಹ ಪರ್ಷಿಯನ್ ಛಾಯೆಯನ್ನು ಅಲ್ಲಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Varun Wudayagiri

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಪ್ರಸ್ಥ ಭೂಮಿಯ ಒಂದು ಕೊನೆಯಲ್ಲಿ ನಿರ್ಮಾಣಗೊಂಡ ಬೀದರ್ ಕೋಟೆಯು ಸ್ಪಷ್ಟವಾಗಿರದ ಚತುರ್ಭುಜಾಕೃತಿಯಲ್ಲಿದೆ. ಕೋಟೆ ಸಂಕೀರ್ಣವು 1.20 ಕಿ.ಮೀ ಉದ್ದ ಹೊಂದಿದ್ದರೆ ಅಗಲವು ಸುಮಾರು 0.80 ಕಿ.ಮೀ ಗಳಷ್ಟಿದೆ. ಈ ವಿಶಾಲವಾದ ಬೀದರ್ ಕೋಟೆಯಲ್ಲಿ ಕೆಲವು ಮಹತ್ತರ ಅಂಗಗಳನ್ನು ಕಾಣಬಹುದಾಗಿದೆ. ಇಂದು ಇವೆಲ್ಲವೂ ಪ್ರವಾಸಿ ಆಕರ್ಷಣೆಗಳಾಗಿ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಧರ್ಮಾಚರಣೆಯ ಕುರಿತು ಸೂಕ್ಷ್ಮವಾಗಿ ವಿವರಿಸುತ್ತವೆ.

ಚಿತ್ರಕೃಪೆ: Santosh3397

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಸವದತ್ತಿ ಕೋಟೆ: 8 ಕೊತ್ತಲಗಳುಳ್ಳ ಈ ಕೋಟೆಯು ಶಿರಸಂಗಿ ದೇಸಾಯಿಯಿಂದ 18 ನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಕಾಡಸಿದ್ಧೇಶ್ವರನ ದೇವಾಲಯವಿದ್ದು ಅದು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮುದ್ಗಲ್ ಕೋಟೆ: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಎಂಬಲ್ಲಿ ಈ ಕೋಟೆಯಿದೆ. ದೇವಗಿರಿಯ ಸೇವುಣ ಯಾದವರಿಗೆ ಸಂಬಂಧಿಸಿದ ಹಲವಾರು ಶಾಸನಗಳನ್ನು ಈ ಐತಿಹಾಸಿಕ ಪಟ್ಟಣದಲ್ಲಿ ಕಾಣಬಹುದು.

ಚಿತ್ರಕೃಪೆ: Manjunath Doddamani

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಿರ್ಜಾನ್ ಕೋಟೆ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸುಂದರ ಪ್ರದೇಶದಲ್ಲಿ ಈ ಕೋಟೆಯನ್ನು ಕಾಣಬಹುದಾಗಿದೆ. ಹಿಂದೆ ಅಂದರೆ ಐತಿಹಾಸಿಕವಾಗಿ ಹಲವು ಯುದ್ಧಗಳಿಗೆ ತವರಾಗಿರುವ ಈ ಕೋಟೆಯು ತನ್ನ ಅದ್ಭುತ ವಾಸ್ತುಶೈಲಿಯಿಂದ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Lisa.davis

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಮತ್ತೊಂದು ಪ್ರಖ್ಯಾತ ಧಾರ್ಮಿಕ ಸ್ಥಳವಾದ ಗೋಕರ್ಣದಿಂದ ಕೇವಲ 11 ಕಿ.ಮೀ ದೂರದಲ್ಲಿರುವ ಈ ಕೋಟೆಯು 16 ನೆಯ ಶತಮಾನದಲ್ಲಿ ಸ್ಥಾಪಿತವಾಗಿರುವ ರಚನೆ ಎಂದು ಹಾಗೂ ಈ ಪ್ರಾಂತ್ಯವನ್ನು ಆ ಸಮಯದಲ್ಲಿ ಆಳುತ್ತಿದ್ದ ವಿಜಯನಗರ ಸಂಸ್ಥಾನಕ್ಕೆ ಒಳಪಟ್ಟಿದ್ದ ಗೇರುಸೊಪ್ಪದ ಚೆನ್ನಭೈರವದೇವಿ ಇದರ ನಿರ್ಮಾತೃ ಎಂದು ಮೊದಲನೆಯ ಸಮಯದಲ್ಲಿ ಈ ತಾಣವನ್ನು ಶೋಧಿಸಿದಾಗ ವಿಶ್ಲೇಷಿಸಲಾಗಿದೆ.

ಚಿತ್ರಕೃಪೆ: Nvvchar

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ನಂತರ ಈ ಕೋಟೆಯ ನಿರ್ಮಾಣದ ಕುರಿತು ಇತರೆ ಅಭಿಪ್ರಾಯಗಳನ್ನೂ ಸಹ ಮಂಡಿಸಲಾಗಿದೆ. ಆದರೆ ನಿರ್ಮಾಣ ಯಾರಿಂದಲೆ ಆಗಿರಲಿ, ಯಾವಾಗಲಾದರೂ ಆಗಿರಲಿ ಇಂದು ಇದು ತನ್ನ ಅಸ್ತಿತ್ವವನ್ನು ಸದೃಢವಾಗಿ ಉಳಿಸಿಕೊಂಡು ಇತಿಹಾಸ ಪ್ರಿಯ ಪ್ರವಾಸಿಗರ ಮನ ತಣಿಸುತ್ತಿರುವುದಂತೂ ನಿಜ.

ಚಿತ್ರಕೃಪೆ: Sydzo

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಕುಮಟಾ ತಾಲೂಕಿನ ಮಿರ್ಜಾನ್ ಎಂಬ ಹಳ್ಳಿಯಲ್ಲಿರುವ ಈ ಕೋಟೆಯು ಶರಾವತಿ ನದಿಯ ಉಪನದಿಯಾದ ಅಘನಾಶಿನಿ ನದಿಯ ತಟದ ಮೇಲೆ ಪ್ರಶಾಂತವಾಗಿ ನೆಲೆಸಿದ್ದು ಪ್ರವಾಸಿಗರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ.

ಚಿತ್ರಕೃಪೆ: Gandharva S

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬಳ್ಳಾರಿ ಕೋಟೆ: ಬಳ್ಳಾರಿಯಲ್ಲಿರುವ ಬಳ್ಳಾರಿ ಎಂಬ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಲಾಗಿದೆ. ಮೇಲ್ಕೋಟೆ, ತೆಳಕೋಟೆ ಎಂಬ ಎರಡು ವಿಭಾಗಗಳಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದ್ದು ಮೇಲ್ಕೋಟೆಯು ಹಲವು ನೀರಿನ ಕೊಳಗಳು ಹಾಗು ಉತ್ತಮವಾದ ವಾಸ್ತುಶಿಲ್ಪವನ್ನು ಹೊಂದಿದ್ದರೆ ಕೆಳಭಾಗದ ಕೋಟೆಯು ಶಸ್ತ್ರಾಗಾರವನ್ನು ಹೊಂದಿದೆ. ವಿಶ್ವಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಹಂಪಿಯು ಇಲ್ಲಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Marc Roberts

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಚಿತ್ರದುರ್ಗ ಕೋಟೆ : ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಪಟ್ಟಣದಲ್ಲಿರುವ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ ನೆಚ್ಚಿನ ಸ್ಥಳವಾಗಿ ಕಂಗೊಳಿಸುತ್ತದೆ. ಇದರ ಇತಿಹಾಸವನ್ನು ಸಂಕ್ಷೀಪ್ತವಾಗಿ ಕೆದಕಿದಾಗ ನಮಗೆ ತಿಳಿಯುವುದೇನೆಂದರೆ ಅಗಾಧವಾದ ಈ ಏಳು ಸುತ್ತಿನ ಕಲ್ಲಿನ ಕೋಟೆಯು ಒಂದೆ ಸಮಯದಲ್ಲಿ ನಿರ್ಮಾಣವಾಗದೆ ಕಾಲದ ಹಲವು ಸ್ತರಗಳಲ್ಲಿ ವಿವಿಧ ಆಡಳಿತಗಾರರ ಸುಪರ್ದಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ.

ಚಿತ್ರಕೃಪೆ: Nagarjun Kandukuru

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಇದರ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಯನ್ನು ಈ ಕೋಟೆಯ ನಿರ್ಮಾಣದಲ್ಲಿ ಧಾರೆ ಎರೆದಿದ್ದಾರೆ. ನಂತರ ನಾಯಕರ ಕೊನೆಯ ಅರಸನಾಗಿದ್ದ ಮದಕರಿ ನಾಯಕನ ನಂತರ ಹೈದರಾಲಿ ಹಾಗೂ ಆತನ ಮಗನಾದ ಟಿಪ್ಪು ಈ ಕೋಟೆಯನ್ನು ತಮ್ಮೆ ತೆಕ್ಕೆಗೆ ತೆಗೆದುಕೊಂಡರು. 15 ರಿಂದ 18 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Nagarjun Kandukuru

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಶತ್ರುಗಳನ್ನು ತನ್ನ ಒನಕೆಯಿಂದ ಸೆದೆ ಬಡಿದೆ ಒಬವ್ವ ಎಂಬ ವೀರ ಮಹಿಳೆಯ ಕಥೆಯು ಈ ಕೋಟೆಯ ಜೊತೆ ನಂಟು ಹಾಕಿಕೊಂಡಿದೆ. ಇಂದಿಗೂ ಒಬವ್ವನ ಖಿಂಡಿ ಎಂಬ ರಂಧ್ರವನ್ನು ಕೋಟೆಯ ಗೋಡೆಯಲ್ಲಿ ಕಾಣಬಹುದು. ಚಿತ್ರದುರ್ಗ ಬೆಂಗಳೂರಿನಿಂದ ಸುಮಾರು 205 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತೆರಳಬಹುದು. ಪುಣೆ ನಗರವನ್ನು ಬೆಂಗಳೂರಿನಿಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ನೇರವಾಗಿ ಚಿತ್ರದುರ್ಗವನ್ನು ತಲುಪಬಹುದು.

ಚಿತ್ರಕೃಪೆ: ZeHawk

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಏಳು ಸುತ್ತುಗಳಲ್ಲಿ ಈ ಅಗಾಧವಾದ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯು ಕೆಳ ಸ್ತರ ಹಾಗೂ ಮೇಲ್ಸ್ತರಗಳಲ್ಲಿ ವಿಂಗಡನೆಗೊಂಡಿದೆ. ಕೋಟೆಯ ಸಂಕೀರ್ಣದಲ್ಲಿ ಮಸೀದಿ, ಪುರಾತನ ದೇವಾಲಯಾದಿಗಳನ್ನು ಕಾಣಬಹುದು. ಒಟ್ಟಾರೆಯಾಗಿ 18 ದೇವಾಲಯಗಳನ್ನು ಕೋಟೆಯ ಸಂಕೀರ್ಣದಲ್ಲಿ ಕಾಣಬಹುದು. ಅಲ್ಲದೆ ಜಲ ಶೇಖರಣಾ ತೊಟ್ಟಿಗಳು ಹಾಗೂ ಇತರೆ ವಿವಿಧ ರಚನೆಗಳನ್ನು ಈ ಕೋಟೆಯಲ್ಲಿ ಕಾಣಬಹುದು.

ಚಿತ್ರಕೃಪೆ: Nagarjun Kandukuru

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ರಾಯಚೂರು ಕೋಟೆ: ಕೃಷ್ಣಾ ಹಾಗು ತುಂಗಭದ್ರಾ ನದಿಗಳ ಮಧ್ಯೆ ನೆಲೆಸಿರುವ ರಾಯಚೂರು ಬೆಂಗಳೂರಿನಿಂದ 415 ಕಿ.ಮೀ ದೂರವಿದ್ದು ಇಲ್ಲಿ ಐತಿಹಾಸಿಕ ಪ್ರಸಿದ್ಧ ರಾಯಚೂರು ಕೋಟೆಯನ್ನು ಕಾಣಬಹುದಾಗಿದೆ. ಕಾಕತೀಯ ರಾಜ ರುದ್ರನಿಂದ ಈ ಕೋಟೆಯು 1284 ರಲ್ಲಿ ನಿರ್ಮಿಸಲ್ಪಟ್ಟಿದೆ. ಕಾಕತೀಯರು, ವಿಜಯನಗರ, ಬಹುಮನಿ ಹೀಗೆ ಹಲವು ಸಾಮ್ರಾಜ್ಯಗಳಡಿಯಲ್ಲಿ ಈ ಕೋಟೆಯು ಒಳಪಟ್ಟಿತ್ತು.

ಚಿತ್ರಕೃಪೆ: Tanzeelahad

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಗುಲಬರಗಾ ಕೋಟೆ: ಉತ್ತರ ಕರ್ನಾಟಕದ ಗುಲಬರಗಾ ಜಿಲ್ಲೆಯ ಗುಲಬರಗಾ ನಗರದಲ್ಲಿರುವ ಈ ಕೋಟೆಯು 1347 ರಲ್ಲಿ ಬಹಮನಿ ಸಾಮ್ರಾಜ್ಯದ ಅಲ್ಲಾವುದ್ದಿನ್ ಬಹಮನಿಯಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಅದ್ಭುತವಾದ ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು.

ಚಿತ್ರಕೃಪೆ: Shashank stark

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬಸವಕಲ್ಯಾಣ ಕೋಟೆ: ಬೀದರ್ ಜಿಲ್ಲೆಯಲ್ಲಿನ ಬಸವಣ್ಣನವರ ಕರ್ಮಭೂಮಿ ಎಂದೆ ಪ್ರಸಿದ್ಧವಾದ ಬಸವಕಲ್ಯಾಣ ಪಟ್ಟಣದಲ್ಲಿದೆ ಈ ಕೋಟೆ. 10 ನೆಯ ಶತಮಾನದಲ್ಲಿ ನಿರ್ಮಿತವಾದ ಈ ಕೋಟೆಯು ರಕ್ಷಣಾತ್ಮಕ ತಂತ್ರಗಾರಿಕೆಯಿಂದ ಕೂಡಿದೆ. ಬಸವಕಲ್ಯಾಣವು ಗುಲಬರ್ಗಾದಿಂದ 90 ಕಿ.ಮೀ ದೂರವಿದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬಾದಾಮಿ ಕೋಟೆ : ಬಂಡೆಗಳಲ್ಲಿ ಕೆತ್ತಲಾದ ಗುಹಾಂತರ ದೇವಾಲಯಗಳಿಗೆ ಹಾಗೂ ಬನಶಂಕರಿ ದೇವಿ ನೆಲೆಸಿರುವ ಕ್ಷೇತ್ರ ಎಂಬ ಪ್ರಖ್ಯಾತಿಗೆ ಕಾರಣವಾಗಿರುವ ಬಾದಾಮಿಯಲ್ಲಿ ಕೋಟೆಯನ್ನೂ ಸಹ ಕಾಣಬಹುದಾಗಿದೆ. ಗುಹೆಗಳಿಗೆ ವಿರುದ್ಧವಾಗಿ ಬೆಟ್ಟದ ತುದಿಯೊಂದರ ಮೇಲೆ ಹಾಗೂ ಭೂತನಾಥ ದೇವಾಲಯ ಸಂಕೀರ್ಣದ ಪೂರ್ವಕ್ಕೆ ಈ ಕೋಟೆಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Praveenshivanagi

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಈ ಕೋಟೆಯನ್ನು ಏರಲು ಅನುಕೂಲವಾಗುವಂತೆ ಚೊಕ್ಕಟ್ಟಾಗಿ ಕಲ್ಲಿನಲ್ಲಿ ಮೆಟ್ಟಿಲುಗಳನ್ನು ಕೆತ್ತಲಾಗಿದ್ದು ಆ ಮಾರ್ಗವು ಸಾಕಷ್ಟು ವೀಕ್ಷಣಾ ಕೇಂದ್ರಗಳ ಮೂಲಕ ಹಾದು ಹೋಗುತ್ತದೆ. ಏರುತ್ತ ಬಾದಾಮಿಯ ಹಾಗೂ ಸುತ್ತಮುತ್ತಲಿನ ಪ್ರದೇಶದ ಅದ್ಭುತ ನೋಟವನ್ನು ಸವಿಯುತ್ತ ಸಾಗಬಹುದು.

ಚಿತ್ರಕೃಪೆ: Shashidhara halady

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಧುಗಿರಿ ಕೋಟೆ : ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ಭೇಟಿ ನೀಡಬಹುದಾದ ಹಲವು ಸ್ಥಳಗಳ ಪೈಕಿ ಮಧುಗಿರಿ ಕೋಟೆಯೂ ಸಹ ಒಂದು. ಸುತ್ತಮುತ್ತಲಿನ ಪ್ರದೇಶಗಳಿಂದ ವಾರಾಂತ್ಯಗಳಂದು ಸಾಕಷ್ಟು ಯುವ ಪ್ರವಾಸಿಗರು ಈ ಕೋಟೆಯನ್ನು ಏರಲೆಂದು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Saurabh Sharan

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಧುಗಿರಿ ಕೋಟೆಯು ಬಟ್ಟದ ಮೇಲೆ ನಿರ್ಮಾಣವಾಗಿದ್ದು ದೂರದಿಂದಲೆ ಸಾಕಷ್ಟು ಗಮನ ಸೆಳೆಯುತ್ತದೆ. ಇನ್ನೂ ಕೋಟೆಯ ಮೇಲ್ಭಾಗದಿಂದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯವನ್ನು ಅದ್ಭುತವಾಗಿ ಸವಿಯಬಹುದಾಗಿದೆ.

ಚಿತ್ರಕೃಪೆ: Saurabh Sharan

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಧುಗಿರಿ ಕೋಟೆಯು ಮೂಲತಃ ಒಂದು ಮಣ್ಣಿನ ಕೋಟೆಯಾಗಿದ್ದು ಇದನ್ನು ರಾಜಾ ಹೀರಾ ಗೌಡಾ ಎಂಬಾತನು 1670 ರಲ್ಲಿ ನಿರ್ಮಿಸಿದ್ದನು. ನಂತರ ವಿಜಯನಗರ ಸಾಮ್ರಾಜ್ಯದ ಅಧಿನಕ್ಕೆ ಬಂದ ಈ ಕೋಟೆಯು ಸಾಕಷ್ಟು ಗಟ್ಟಿಮುಟ್ಟಾಗಿ ನಿರ್ಮಾಣವಾಯಿತು.

ಚಿತ್ರಕೃಪೆ: Aravindb21

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಈ ಕೋಟೆಯ ಸಂಕೀರ್ಣದಲ್ಲಿ ಜೈನ ದೇವಾಲಯಗಳಿರುವುದನ್ನೂ ಸಹ ಗಮನಿಸಬಹುದು. ತುಮಕೂರು ನಗರದಿಂದ ಉತ್ತರಕ್ಕೆ ಸುಮಾರು 43 ಕಿ.ಮೀ ಗಳಷ್ಟು ದೂರದಲ್ಲಿ ಮಧುಗಿರಿ ಪಟ್ಟಣ ಹಾಗೂ ಕೋಟೆಯು ನೆಲೆಸಿದೆ.

ಚಿತ್ರಕೃಪೆ: Saurabh Sharan

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬೆಂಗಳೂರು ಕೋಟೆ : ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಕೋಟೆಯು ಬೆಂಗಳೂರಿನ ಐತಿಹಾಸಿಕ ಮಹತ್ವ ತಿಳಿಸುವ ಒಂದು ಅದ್ಭುತ ಸ್ಮಾರಕವಾಗಿ ಇಂದು ಗಮನ ಸೆಳೆಯುತ್ತದೆ. 1537 ರ ಸಂದರ್ಭದಲ್ಲಿ ಬೆಂಗಳೂರಿನ ನಿರ್ಮಾತೃ ಎಂದೇ ಜನಜನಿತರಾದ ಮೊದಲನೆಯ ಕೆಂಪೇಗೌಡರಿಂದ ಇದೊಂದು ಮಣ್ಣಿನ ಕೋಟೆಯಾಗಿ ನಿರ್ಮಾಣ ಹೊಂದಿತು.

ಚಿತ್ರಕೃಪೆ: Pavithrah

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ನಂತರ ಹೈದರ್ ಅಲಿ ಆಡಳಿತದ ಸಮಯದಲ್ಲಿ ಅಂದರೆ 1761 ರಲ್ಲಿ ಈ ಕೋಟೆಯು ಕಲ್ಲಿನಿಂದ ಪುನರ್ ನಿರ್ಮಿಸಲ್ಪಟ್ಟಿತು. ಇಂದು ಈ ಕೋಟೆಯು ನಗರದ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿ ನೆಲೆಸಿದ್ದು ಬೆಂಗಳೂರಿನ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Omshivaprakash H L

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ದೇವನಹಳ್ಳಿ ಕೋಟೆ : ಬೆಂಗಳೂರು ನಗರದ ಉತ್ತರಕ್ಕೆ 35 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಎಂಬಲ್ಲಿ ಈ ಕೋಟೆಯಿದೆ. ಮೂಲತಃ ಈ ಕೋಟೆಯನ್ನು ಮಲ್ಲಬೈರೆಗೌಡ ಎಂಬುವವರು 1501 ರಲ್ಲಿ ನಿರ್ಮಿಸಿದ್ದಾರೆ. 1749 ರವರೆಗೆ ಅವರ ವಂಶಸ್ಥರ ಸುಪರ್ದಿಯಲ್ಲೆ ಇದ್ದ ಈ ಕೋಟೆಯು ನಂತರ ಮೈಸೂರು ಅರಸರ ಪಾಲಾಯಿತು.

ಚಿತ್ರಕೃಪೆ: Dineshkannambadi

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ಕೋಟೆಯು ಟಿಪ್ಪು ಸುಲ್ತಾನನ ಜನ್ಮ ಸ್ಥಳಕ್ಕೂ ಬಹು ಹತ್ತಿರದಲ್ಲಿದೆ. ಇಂದು ಈ ಕೋಟೆಯು ಹಿಂದಿನ ಕಥೆಯನ್ನು ಸಾರಿ ಸಾರಿ ಹೇಳುತ್ತಿರುವ ಒಂದು ಪ್ರವಾಸಿ ಆಕರ್ಷಣೆಯಾಗಿ ಉಳಿದು ಹೋಗಿದೆ.

ಚಿತ್ರಕೃಪೆ: Placidsun

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಶ್ರೀರಂಗಪಟ್ಟಣ ಕೋಟೆ : ಕರ್ನಾಟಕದ ಪ್ರಖ್ಯಾತ ಪ್ರವಾಸಿ ತಾಣವಾದ ಶ್ರೀರಂಗ ಪಟ್ಟಣದಲ್ಲಿ ಈ ಕೋಟೆಯಿದೆ. ವಿಜಯನಗರ ಸಾಮ್ರಾಜ್ಯದ ಅರಸನಾಗಿದ್ದ ತಿಮ್ಮಣ್ಣ ನಾಯಕರಿಂದ 1454 ರಲ್ಲಿ ಈ ಕೋಟೆಯ ನಿರ್ಮಾಣವಾಗಿದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Chitra sivakumar

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ನಂತರ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟ ಈ ಕೋಟೆಯು ಪ್ರವರ್ಧಮಾನಕ್ಕೆ ಬಂದಿತು. ಗಟ್ಟಿಮುಟ್ಟಾದ ಕಲ್ಲುಗಳು, ಫ್ರೆಂಚ್ ವಾಸ್ತು ಶೈಲಿಯಿಂದ ಈ ಕೋಟೆ ಗಮನಸೆಳೆಯ ತೊಡಗಿತು. ಕಾವೇರಿ ನದಿ ದಂಡೆಯ ಮೇಲೆ ಈ ಕೋಟೆಯ ನಿರ್ಮಾಣವಾಗಿದೆ.

ಚಿತ್ರಕೃಪೆ: Jayanthdev

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಡಿಕೇರಿ ಕೋಟೆ : ಕೊಡಗಿನ ಮಡಿಕೇರಿ ಪಟ್ಟಣದಲ್ಲಿ ಈ ಕೋಟೆಯಿದೆ. 17 ನೆಯ ಶತಮಾನದಲ್ಲಿ ಮುದ್ದುರಾಜರಿಂದ ಈ ಕೋಟೆಯ ನಿರ್ಮಾಣವಾಗಿದೆ. ಈ ಕೋಟೆಯ ಆವರಣದಲ್ಲಿ ಅರಮನೆಯಿರುವುದನ್ನೂ ಸಹ ಗಮನಿಸಬಹುದು. ನಂತರ ಈ ಕೋಟೆಯು ಟಿಪ್ಪು ಸುಲ್ತಾನನ ಕೈಸೇರಿ ಮರು ನವೀಕರಣಕ್ಕೊಳಪಟ್ಟಿತು.

ಚಿತ್ರಕೃಪೆ: PP Yoonus

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಇಂದು ಕೋಟೆಯ ಆವರಣದಲ್ಲಿ, ಗ್ರಾನೈಟ್ ಆನೆಗಳ ರಚನೆಗಳು, ಅರಮನೆ ಹಾಗೂ ಚರ್ಚ್ ಒಂದನ್ನು ಕಾಣಬಹುದಾಗಿದೆ. ಇಂದು ಚರ್ಚ್ ಸಂಗ್ರಹಾಲಯವಾಗಿ ಪರಿವರ್ತಿತವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲದೆ ಕೋಟೆಯ ಆವರಣದಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯು ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: VASANTH S.N.

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಮಂಜರಾಬಾದ್ ಕೋಟೆ : ಹಾಸನ ಜಿಲ್ಲೆಯ ಸಕಲೇಶಪುರದ ಹೊರವಲಯದಲ್ಲಿ ಈ ಕೋಟೆಯನ್ನು ಕಾಣಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ಕ್ಕೆ ಇದು ಬಹು ಹತ್ತಿರದಲ್ಲಿದೆ. ಇಂದು ಇದು ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ಹದಿಹರೆಯದವರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: Rvsssuman

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಬೆಟ್ಟದ ಮೇಲೆ ಈ ಕೋಟೆಯನ್ನು ನಕ್ಷತ್ರದಾಕಾರದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಇದರ ಮಧ್ಯದಲ್ಲಿ ಸುರಂಗ ಮಾರ್ಗವೊಂದಿದ್ದು ಇದು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಹೇಳಲಾಗಿದೆ. ಪಲ್ಲವರ ದೊರೆಯಿಂದ ಈ ಕೋಟೆಯ ನಿರ್ಮಾಣವಾಗಿದೆ ಎಂದು ನಂಬಲಾಗಿದೆ.

ಚಿತ್ರಕೃಪೆ: Chandu6119

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಪಾರಸಗಡ್ ಕೋಟೆ : ಸವದತ್ತಿಯ ಸೊಗಲ್ ಬಳಿ ಪಾರಸಗಡ್ ಎಂಬ ಹೆಸರಿನ ಈ ಕೋಟೆಯಿದೆ.

ಚಿತ್ರಕೃಪೆ: Manjunath Doddamani

ಕರ್ನಾಟಕದ ಆಕರ್ಷಕ ಕೋಟೆಗಳು:

ಕರ್ನಾಟಕದ ಆಕರ್ಷಕ ಕೋಟೆಗಳು:

ಗಜೇಂದ್ರಗಡ್ ಕೋಟೆ : ಗದಗ ಜಿಲ್ಲೆಯ ಗಜೇಂದ್ರಗಡ್ ತಾಣವು ತನ್ನಲ್ಲಿರುವ ಕೋಟೆ ಹಾಗೂ ಕಾಲಕಾಲೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Manjunath Doddamani

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X