» » ಭಾರತದ ಮಾಂತ್ರಿಕ ವಿದ್ಯೆಯ ವಿಸ್ಮಯ ತಾಣ

ಭಾರತದ ಮಾಂತ್ರಿಕ ವಿದ್ಯೆಯ ವಿಸ್ಮಯ ತಾಣ

Written By: Sowmyabhai

ಭಾರತ ಎಷ್ಟೇ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿಗೊಂಡಿದ್ದರೂ ಕೂಡ ಅನಿಷ್ಟ ಪದ್ದತಿಗಳನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ. ಅವುಗಳಲ್ಲಿ ಈ ಜಾತಿ ಪದ್ದತಿ, ಸಾಮಾಜಿಕ ಅಸಮಾನತೆ, ಸತಿ ಪದ್ದತಿಗಳು, ಮಾಟಮಂತ್ರಗಳು ಇನ್ನೂ ಹಲವು. ಪ್ರಸುತ್ತ ಲೇಖನದಲ್ಲಿ ಸಾಮಾಜಿಕ ಪಿಡುಗಾಗಿರುವ ಮಾಟಮಂತ್ರದ ತಾಣದ ಬಗ್ಗೆ ತಿಳಿಯೋಣ.

 ಭಾರತದ ಮಾಂತ್ರಿಕ

PC: yogesh yogesh

ಮಾಂತ್ರಿಕ ವಿದ್ಯೆ ಪರಿಣಿತರನ್ನು ಅಘೋರಿಗಳು, ಮಾಂತ್ರಿಕರು ಎಂದು ಕರೆಯುವುದುಂಟು. ಆದರೆ ಇಂತವರ ಜೀವನ ನಮ್ಮ ಜೀವನಕ್ಕಿಂತ ಭಿನ್ನವಾಗಿರುತ್ತದೆ.ಇವರು ವಿದ್ಯೆಯು ಬಹಿರಂಗವಾಗಿ ಅಲ್ಲದೇ ಅಂತರಿಕವಾಗಿ ನಡೆಸಲಾಗುತ್ತದೆ. ಈ ವಿದ್ಯೆಯಿಂದ ಮಾನವನಿಗೆ ಹಲವಾರು ರೀತಿಯ ತೊಂದರೆಗಳನ್ನು ಮಾಡುವುದೇ ಆಗಿದೆ. ಈ ವಿದ್ಯೆಯು ಬಲಿ ಎಂಬ ಅನಿಷ್ಟವಾದ ಪದ್ದತಿಯನ್ನು ರೂಢಿಸಿಕೊಂಡಿವೆ. ಈ ಪದ್ದತಿಯಿಂದ ಹಲವಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಮಾಂತ್ರಿಕ ವಿದ್ಯೆಯಲ್ಲಿ ಪರಿಣಿತರಾದ ಅಘೋರಿ ಸಾಧುಗಳು ಕೆಲವು ಪ್ರದೇಶಗಳಲ್ಲಿ ಗುಪ್ತವಾಗಿ ನೆಲೆಸಿರುತ್ತಾರೆ.

ಒಡಿಸ್ಸಾದ ಕುಶಭದ್ರ ನದಿ


ಒಡಿಸ್ಸಾ ಅತ್ಯಂತ ಹಿಂದುಳಿದ ರಾಜ್ಯವಾಗಿದೆ. ಸುಮಾರು 40%ನಷ್ಟು ಜನರು ಬಡತನ ರೇಖೆಗಿಂತ ಕೆಳಗಿನವರಿದ್ದಾರೆ. ಇಲ್ಲಿ ಬಡತನ ಹಾಗೂ ಅನಕ್ಷರಸ್ಥರ ಸಂಖ್ಯೆಯು ಹೆಚ್ಚಾಗಿರುವುದರಿಂದ ಇಲ್ಲಿನ ಜನರು ಮಾಟಮಂತ್ರ ವಿದ್ಯೆಯನ್ನು ಅಳವಡಿಸಿಕೊಳ್ಳುತ್ತಾರೆ. ಈ ಕುಶಭದ್ರ ನದಿಯಲ್ಲಿ ಬಲಿ ಎಂಬ ಪದ್ದತಿ ವಾಡಿಕೆಯಲ್ಲಿದೆ. ಸುಮಾರು 20 ಮಾನವ ತಲೆಬುರುಡೆಗಳು ಹಾಗೂ ದೇಹದ ಕೆಲವು ಮೂಳೆಗಳನ್ನು ಈ ಕುಶಭದ್ರ ನದಿಯಲ್ಲಿ ತೇಲುವುದನ್ನು ಕಾಣಬಹುದು. ಕೆಲವು ಮೂಳೆಗಳು ಮಾನವರ ಹಾಗೂ ಪ್ರಾಣಿಗಳದ್ದಾಗಿರುತ್ತವೆ.

ಸುಲ್ತಾನ್‍ಶಾಹಿ ಹೈದ್ರಾಬಾದ್


ದಕ್ಷಿಣ ಭಾರತದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ ಕೂಡ ಈ ಮಾಟಮಂತ್ರ ವಿದ್ಯೆಯು ಬಳಕೆಯಲ್ಲಿದೆ. ಈ ಮಾಂತ್ರಿಕ ವಿದ್ಯೆಯ ಅಘೋರಿ ಸಾಧುಗಳು ಕಾಮಾಂಧರಾಗಿದ್ದು, ಮಹಿಳೆಯರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸುತ್ತಾರೆ. ಆಶ್ಚರ್ಯಕರವಾದ ಸಂಗತಿ ಎಂದರೆ ಇಂತಹ ಪದ್ದತಿಗಳನ್ನು ತಡೆಗಟ್ಟಲು ಆಂಧ್ರ ಪ್ರದೇಶ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ವಿಪರ್ಯಸ.
ಹಾಗೆಯೇ ಹೈದಾರಬಾದ್‍ನ ಮೊಗಲ್‍ಪುರ ಮತ್ತು ಚತ್ರಿನಕದಲ್ಲು ಮಾಟಮಂತ್ರದ ಪದ್ದತಿ ಅನುಸರಿಸುತ್ತಾರೆ.

 ಅಘೋರಿ ಸಾಧು

PC: CyclingForPostivity

ವಾರಾಣಾಸಿ, ಉತ್ತರ ಪ್ರದೇಶ


ಅತ್ಯಂತ ಭಯಂಕರವಾದ ಸ್ಥಳವೆಂದರೆ ಈ ವಾರಾಣಾಸಿ. ಈ ವಾರಾಣಾಸಿಯಲ್ಲಿ ಪ್ರಸಿದ್ದವಾದ ಘಾಟ್‍ಗಳಿವೆ ಈ ಘಾಟ್‍ಗಳಲ್ಲಿ ಮಾಟಮಂತ್ರ ವಿದ್ಯೆ ಪ್ರಯೋಗ ಮಾಡಲಾಗುತ್ತದೆ. ಇಲ್ಲಿನ ಮಾಟವಿದ್ಯೆಕಾರರಿಗೆ ಅಘೋರಿ ಸಾಧು ಎಂದು ಕರೆಯಲಾಗುತ್ತದೆ. ಅಘೋರಿಗಳು ಭಾರತದ ರಹಸ್ಯವಾದ ಜೀವನ ನಡೆಸುವವರು. ಹಾಗೆಯೇ ಇವರು ಕೂಡ ನರಭಕ್ಷಕರು, ಶವಕಾಮಿಗಳಾಗಿದ್ದಾರೆ. ಇವರು ತಮ್ಮ ಗಾಯವನ್ನು ಗುಣಪಡಿಸಲು ಮಾನವನ ಎಣ್ಣೆಯನ್ನು ಬಳಸುತ್ತಾರೆ.

ನಿಮ್‍ತಾಲ್ ಘಾಟ್ ಕೋಲ್ಕತ್ತ


ಭಾರತದ ಹೆಸರುವಾಸಿ ರಾಜ್ಯವಾದ ಕೋಲ್ಕತ್ತದಲ್ಲೂ ಕೂಡ ಮಾಟಮಂತ್ರ ಪದ್ದತಿ ಅಳವಡಿಸಿಕೊಂಡಿದ್ದಾರೆ. ಕೋಲ್ಕತ್ತದಲ್ಲಿ ನಿಮ್‍ತಾಲ್ ಎಂಬ ಘಾಟ್ ಇದೆ. ಇಲ್ಲಿನ ಘಾಟ್‍ಗಳಿಗೆ ರಾತ್ರಿಯ ಸಮಯದಲ್ಲಿ ಅಘೋರಿಗಳು ತೆರಳಿ ಮಾಂತ್ರಿಕ ವಿದ್ಯೆ ಪ್ರಯೋಗ ಮಾಡುತ್ತಾರೆ. ಹಾಗೆಯೇ ಸತ್ತ ಮಾನವನ ಅರೆಬೆಂದ ದೇಹವನ್ನು ಸೇವಿಸುತ್ತಾರೆ.

 ಅಘೋರಿ ಸಾಧು

PC: firoze shakir photographer

ಮಣಿಕರ್‍ಣಿಕ ಘಾಟ್,ವಾರಾಣಾಸಿ


ವಾರಾಣಾಸಿಯಲ್ಲಿ ಹಲವಾರು ಪವಿತ್ರ ಕ್ಷೇತ್ರಗಳಿವೆ. ಈ ಪವಿತ್ರ ಕ್ಷೇತ್ರಗಳೇ ಅಲ್ಲದೇ ಮಾಂತ್ರಿಕ ವಿದ್ಯೆಯಲ್ಲೂ ಪ್ರಖ್ಯಾತವಾದ ಸ್ಥಳವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಶವ ಸಂಸ್ಕಾರ ಮಾಡುವುದರಿಂದ ಮೋಕ್ಷ ದೊರೆಯುತ್ತದೆ ಎಂಬುದು ಭಾರತೀಯರ ನಂಬಿಕೆಯಾಗಿದೆ. ಆದರೆ ವಾರಾಣಾಸಿಯಲ್ಲಿ ಮಣಿಕರ್‍ಣಿಕ ಎಂಬ ಘಾಟ್ ಇದೆ. ಇಲ್ಲಿ ಅಘೋರಿಗಳು ನೆಲೆಸಿರುವ ತಾಣವಾಗಿದೆ. ಇಲ್ಲಿನ ಅಘೋರಿಗಳು ಮಾನವರನ್ನು ಕೊಲ್ಲುವ ಬದಲು ಸತ್ತ ಶವಗಳನ್ನು ನಾಶಗೊಳಿಸುತ್ತಾರೆ. ಹೀಗೆ ನಾಶಗೊಳಿಸುವುದರಿಂದ ತಮ್ಮ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ನಂಬಿಕೆ ಅವರದ್ದು.

Please Wait while comments are loading...