Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಹವಾಮಾನ

ಭುವನೇಶ್ವರ ಹವಾಮಾನ

ಭುವನೇಶ್ವರಕ್ಕೆ ಭೇಟಿ ನೀಡಲು ಅತ್ಯುತ್ತಮ ಅವಧಿಯು ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳುಗಳ ಚಳಿಗಾಲದ ಅವಧಿಯಾಗಿರುತ್ತದೆ.  ಈ ಕಾಲಾವಧಿಯಲ್ಲಿ ವಾತಾವರಣವು ಅಹ್ಲಾದಕರವಾಗಿದ್ದು, ಅಲ್ಲಿ ತಂಗಲು ಅನುಕೂಲವಾಗಿರುತ್ತದೆ.  ಸಾಮಾನ್ಯವಾಗಿ, ಈ ಅವಧಿಯಲ್ಲಿ  ತಾಪಮಾನವು ಸುಮಾರು 15 ಡಿಗ್ರಿ ಸೆಲ್ಷಿಯಸ್ ಮತ್ತು ಗರಿಷ್ಟ 20 ಡಿಗ್ರಿ ಸೆಲ್ಷಿಯಸ್ ನಷ್ಟಿರುತ್ತದೆ. ಅದ್ದರಿಂದ ಈ ಅವಧಿಯು ಭುವನೇಶ್ವರಕ್ಕೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

ಭುವನೇಶ್ವರವು ಬಿಸಿಯಾದ ಮತ್ತು ತೇವಯುಕ್ತ ಬೇಸಿಗೆಯನ್ನು ಹೊಂದಿದೆ. ಬೇಸಿಗೆ ಕಾಲವು ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡು ಏಪ್ರಿಲ್ ಮತ್ತು ಮೇ ತಿಂಗಳುಗಳ ಅವಧಿಯಲ್ಲಿ ತನ್ನ ಗರಿಷ್ಟ ಮಟ್ಟವನ್ನು ತಲುಪುತ್ತದೆ.  ಬೇಸಗೆಯಲ್ಲಿ ಉಷ್ಣತೆಯು ಸರಿಸುಮಾರು 45 ಡಿಗ್ರಿ ಸೆಲ್ಷಿಯಸ್ ನಷ್ಟು ತಲುಪಬಲ್ಲುದು.  ಬೇಸಗೆಯ ಅವಧಿಯಲ್ಲಿ ಭುವನೇಶ್ವರಕ್ಕೆ ಭೇಟಿ ನೀಡದಿರುವುದೇ ಕ್ಷೇಮ.

ಮಳೆಗಾಲ

ಬಿರುಬಿಸಿಲಿನ ಬೇಸಿಗೆಯ ನಂತರ, ಜೂನ್ ತಿಂಗಳಿನಲ್ಲಿ ಮಳೆಗಾಲದ ಆರಂಭದೊಂದಿಗೆ ಭುಬನೇಶ್ವರವು ನಿಟ್ಟುಸಿರು ಬಿಡುತ್ತದೆ.  ಮಳೆಗಾಲವು ಆಗಸ್ಟ್ ತಿಂಗಳಿನವರೆಗೆ ಮುಂದುವರೆಯುತ್ತದೆ.  ಈ ಅವಧಿಯಲ್ಲಿ ಪದೇ ಪದೇ ಮಳೆಯು ಉಂಟಾಗುತ್ತದೆ. ಉಷ್ಣತೆಯು 33 ಡಿಗ್ರಿ ಸೆಲ್ಷಿಯಸ್ ನಷ್ಟು ಕೆಳಗೆ ಇಳಿದು, ಮಳೆಗಾಲದ ಅವಧಿಯಲ್ಲಿ ಹವಾಮಾನವು ಸಹನೀಯವಾಗಿರುತ್ತದೆ. ಆದಾಗ್ಯೂ, ಈ ಅವಧಿಯೂ ಕೂಡ ಭುವನೇಶ್ವರಕ್ಕೆ ಭೇಟಿ ನೀಡಲು ಅಷ್ಟೊಂದು ಸರಿಯಾದ ಸಮಯವಲ್ಲ.

ಚಳಿಗಾಲ

ಭುವನೇಶ್ವರವು ಅತ್ಯುಲ್ಲಾಸಭರಿತ ಚಳಿಗಾಲವನ್ನು ಅನುಭವಿಸುತ್ತದೆ ಹಾಗೂ ಈ ಅವಧಿಯಲ್ಲಿ ಅತಿಯಾದ, ಅಸಹನೀಯ ಚಳಿಯೂ ಇರುವುದಿಲ್ಲ ಅಂತೆಯೇ ಅತಿಯಾದ ಉಷ್ಣತೆಯೂ ಇರುವುದಿಲ್ಲ. ಪಾದರಸವು ಅಧೋಮುಖವಾಗಿ ಕನಿಷ್ಟತಮ 7 ಡಿಗ್ರಿ ಸೆಲ್ಷಿಯಸ್ ಗೆ  ತಲುಪುತ್ತದೆ.   ಭುಬನೇಶ್ವರಕ್ಕೆ ಭೇಟಿ ನೀಡುವ ಇರಾದೆಯೇ ನಿಮ್ಮದಾಗಿದ್ದರೆ, ಚಳಿಗಾಲವು ಅತ್ಯುತ್ತಮ ಕಾಲವಾಗಿದೆ.