Search
 • Follow NativePlanet
Share
ಮುಖಪುಟ » ಸ್ಥಳಗಳು» ಪಾಂಡಿಚೆರಿ

ಪಾಂಡಿಚೆರಿ - ವಸಾಹತು ಹಿರಿಮೆಯ ನಗರ

42

ತನ್ನದೇ ಹೆಸರಿನ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಪಾಂಡಿಚೆರಿ 2006 ದ ವರೆಗೆ ಪುದುಚೆರಿ ಎಂದು ಕರೆಯಿಸಿಕೊಳ್ಳುತ್ತಿತ್ತು. ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶಗಳೆರಡು ಪ್ರೆಂಚ್ ಸಂಸ್ಕೃತಿ ಹಾಗೂ ಸಂಪ್ರದಾಯದ ಬಹಳ ಪ್ರಭಾವಕ್ಕೆ ಒಳಗಾಗಿ ಇಂದಿಗೂ ಆ ಪ್ರಭಾವವನ್ನು ತನ್ನಲ್ಲಿ ಉಳಿಸಿಕೊಂಡಿದೆ. ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶವು ನಾಲ್ಕು ಪ್ರಾಂತ್ಯಗಳನ್ನು ಹೊಂದಿದ್ದು ಯಾಣಮ್ (ಆಂಧ್ರ ಪ್ರದೇಶ), ಪಾಂಡಿಚೆರಿ ನಗರ, ಕಾರೈಕಾಲ್ (ಎರಡೂ ತಮಿಳುನಾಡಿನ ದಡದಲ್ಲಿದೆ) ಹಾಗೂ ಮಾಹೆ (ಕೇರಳದ ಪಶ್ಚಿಮ ಕಡಲ ತೀರದಲ್ಲಿದೆ) ಹರಡಿದೆ.

ಬಂಗಾಳ ಕೊಲ್ಲಿಯ ಕೋರಮಂಡಲ ತೀರದಲ್ಲಿ ಇರುವ ಪಾಂಡಿಚೆರಿ ಚೆನ್ನೈಯಿಂದ 162 ಕಿ.ಮೀ ದೂರದಲ್ಲಿದೆ. ಇದು ಪ್ರೆಂಚರ ಅಧೀನದಲ್ಲಿದ್ದು 1670 ರಿಂದ 1954 ರ ತನಕ್ ಪ್ರೆಂಚ್ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿ ಫ್ರೆಂಚರು ಸುಮಾರು ಮೂರು ಶತಮಾನಗಳ ಕಾಲ ಆಡಳಿತ ನಡೆಸಿ ತಮ್ಮ ಸಂಸ್ಕೃತಿಯ ಗುರುತನ್ನು ಬಿಟ್ಟು ಹೋಗಿದ್ದಾರೆ.

ವೈವಿಧ್ಯಮಯ ಸ್ಥಳಗಳಿರುವ ಪ್ರವಾಸಿ ತಾಣ - ಪಾಂಡಿಚೆರಿಯ ಆಸುಪಾಸಿನ ಪ್ರವಾಸಿ ತಾಣಗಳು

ವೈವಿಧ್ಯಮಯ ಪ್ರವಾಸಿ ತಾಣಗಳನ್ನು ಒಂದೇ ಪ್ರವಾಸದಲ್ಲಿ ನೋಡಲು ಬಯಸುವ ಪ್ರವಾಸಿಗರಿಗೆ ಪಾಂಡಿಚೆರಿ ಸರಿಯಾದ ಸ್ಥಳವಾಗಿದೆ. ಇಲ್ಲಿ ಪ್ರೊಮೆಂಡೇಡ್, ಪಾರಾಡೈಸ್ ಸೆರೆನಿಟಿ ಹಾಗೂ ಔರೊವಿಲ್ಲೆಯಂತಹ ಜಗತ್ಪ್ರಸಿದ್ಧ ಕಡಲ ಕಿನಾರೆಗಳನ್ನು ಕಾಣಬಹುದು. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಶ್ರೀ ಅರಬಿಂದೋ ಆಶ್ರಮ. ಇದು ಭಾರತದ ಉತ್ತಮ ಆಶ್ರಮ ಮತ್ತು ಧ್ಯಾನ ಕೇಂದ್ರವಾಗಿದೆ.

ಔರೊವಿಲ್ ನಗರ ಮುಂಜಾನೆಯ ನಗರ ಎಂಬ ಹೆಸರು ಕೂಡ ಪಡೆದಿದೆ. ಇದು ಇಲ್ಲಿನ ಶ್ರೀಮಂತ ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಮೂರ್ತಿಗಳು ಮತ್ತು ಪ್ರತಿಮೆಗಳೂ ಇವೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಗಾಂಧಿ ಪ್ರತಿಮೆ, ಮಾತ್ರಿಮಂದಿರ, ಫ್ರೆಂಚ್ ಯುದ್ಧದ ಸ್ಮರಣಾರ್ಥ ಇರುವ ಕಟ್ಟಡ, ಜೋಸೆಫ್ ಫ್ರಾನ್ಕೋಯಿಸ್ ಡ್ಯುಪ್ಲೆಕ್ಸ್ ಪ್ರತಿಮೆ ಮತ್ತು ಗೌಬರ್ಟ್ ಅವೆನ್ಯು ದಲ್ಲಿರುವ ಜೊವಾನ್ ಆರ್ಕ್ ಅಮೃತಶಿಲಾ ಪ್ರತಿಮೆ ಬಹಳ ಪ್ರಖ್ಯಾತವಾಗಿವೆ. ಇಲ್ಲಿಗೆ ನಿಮ್ಮನ್ನು ಆಕರ್ಷಿಸುವ ಇತರೆ ಅಂಶಗಳೆಂದರೆ ಪಾಂಡಿಚೆರಿ ವಸ್ತುಸಂಗ್ರಹಾಲಯ, ಜವಾಹರ್ ಟಾಯ್ ಮ್ಯುಸಿಯಂ ಮತ್ತು ರಾಷ್ಟ್ರೀಯ ಉದ್ಯಾನ, ಅರಿಕಮೆಡು, ಡ್ಯುಪ್ಲೆಕ್ಸ್ ಪ್ರತಿಮೆ ಮತ್ತು ರಾಜ್ ನಿವಾಸ್.

ವಿಶಿಷ್ಟ ವಾಸ್ತುಶಿಲ್ಪದ ನಗರ

ಪಾಂಡಿಚೆರಿ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಮುದ್ರ ಕಿನಾರೆಗಳನ್ನು ಹೊಂದಿರುವ ನಗರವಾಗಿದೆ. ಇಲ್ಲಿ ನಡೆಯುತ್ತಾ ಆನಂದಿಸುವುದೆ ಒಂದು ವಿಶೇಷ ಅನುಭವವಾಗಿದೆ. ಇಡಿ ನಗರವೇ ಜಾಲರಿಯ ತರಹದಲ್ಲಿ ನಿರ್ಮಾಣವಾಗಿದೆ ಹಾಗೂ ಇಲ್ಲಿ ಫ್ರೆಂಚ ವಾಸ್ತುಶಿಲ್ಪದ ದಟ್ಟ ಪ್ರಭಾವವನ್ನು ನಾವು ಕಾಣಬಹುದಾಗಿದೆ. ಇಲ್ಲಿ ಹಲವಾರು ರಸ್ತೆಗಳು ಫ್ರೆಂಚ್ ಹೆಸರುಗಳನ್ನು ಹೊಂದಿವೆ ಹಾಗೂ ಇಲ್ಲಿನ ಭವ್ಯವಾದ ಮನೆಗಳು ಹಾಗೂ ವಿಲ್ಲಾಗಳು ನಿಮ್ಮ ಕಣ್ಮನಗಳನ್ನು ತಣಿಸುತ್ತವೆ.

ಇದು ಎರಡು ಭಾಗಗಳಾಗಿ ವಿಂಗಡನೆ ಗೊಂಡಿದೆ. ಅವುಗಳೆಂದರೆ ಫ್ರೆಂಚ್ ಭಾಗ (ಬಿಳಿ ನಗರ ಹಾಗೂ ವಿಲ್ಲೆ ಬ್ಲಾಂಚೆ ಎಂದೂ ಹೆಸರುವಾಸಿ) ಮತ್ತು ಭಾರತೀಯ ಭಾಗ (ಕಪ್ಪು ನಗರ ಅಥವಾ ನೌರಿ ವಿಲ್ಲೆ ಎಂದೂ ಪ್ರಸಿದ್ಧವಾಗಿದೆ). ಇವುಗಳಲ್ಲಿ ಮೊದಲನೆಯ ಭಾಗದಲ್ಲಿ ವಸಾಹತು ಕಾಲದ ಕಟ್ಟಗಳನ್ನು ಕಾಣಬಹುದು ಹಾಗೂ ನಂತರ ಹೆಸರಿಸಿದ ಭಾಗದಲ್ಲಿ ತಮಿಳು ಶೈಲಿಯ ಕಟ್ಟಡಗಳನ್ನು ಕಾಣಬಹುದು. ಈ ಎರಡೂ ಶೈಲಿಗಳ ಸಮ್ಮಿಲನ ಈ ನಗರಕ್ಕೆ ಒಂದು ವಿಶೇಷವಾದ ಗತ್ತನ್ನು ನೀಡಿದೆ.

ವಿಶೇಷವಾದ ಆಹಾರ

ವಾಸ್ತುಶಿಲ್ಪದಲ್ಲಿ ವಿಶೇಷ ಶೈಲಿಯನ್ನು ಹೊಂದಿರುವ ಈ ನಗರ ಆಹಾರದಲ್ಲೂ ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ವಿಧವಿಧವಾದ ಆಹಾರ ಇಷ್ಟಪಡುವವರಿಗಂತೂ ಇದು ಮರೆಯಲಾಗದ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಫ್ರೆಂಚ್ ಬಾಗೆಟ್ಸ್, ಬ್ರಿಕೋಸ್ ಮತ್ತು ಪಾಸ್ಟ್ರಿಗಳ ರುಚಿ ನೋಡಬಹುದಾಗಿದೆ. ಇವುಗಳ ಜೊತೆಗೆ ಕೇರಳ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಆಹಾರಗಳಂತು ಇದ್ದೇ ಇದೆ. ಲೆ ಕ್ಲಬ್, ಬ್ಲು ಡ್ರಾಗನ್, ಸತ್ಸಂಗ, ರಾಂಡೇಜ್ವಸ್, ಸೀ ಗಲ್ಸ್, ಲೆ ಕೆಫೆ, ಲಾ ಕೋರಮಂಡಲ್ ಮತ್ತು ಲಾ ಟೆರೆಸ್ಸೆ, ಇಲ್ಲಿ ನೀವು ರುಚಿಯಾದ ಆಹಾರಕ್ಕಾಗಿ ಹುಡುಕಬಹುದಾದ ಸ್ಥಳಗಳಾಗಿವೆ.

ನಗರದ ರಸ್ತೆಗಳು ಮತ್ತು ಅಂಗಡಿಗಳು, ಇಲ್ಲಿ ಶಾಪಿಂಗ್ ನಡೆಸುವವರಿಗಾಗಿ ಒಂದು ಸ್ವರ್ಗದಂತೆಯೇ ಇದೆ. ಇಲ್ಲಿ ಕೈಮಗ್ಗ, ವಿವಿಧ ತರಹದ ಕಲ್ಲುಗಳು, ಮರದ ಕೆತ್ತನೆಗಳು, ಮಣ್ಣಿನ ಪಾತ್ರೆಗಳು, ಸುಗಂಧ ದ್ರವ್ಯಗಳು, ಕನ್ನಡಿಯ ವಿವಿಧ ಶೈಲಿಗಳು, ಕ್ಯಾಂಡಲ್ ಗಳು, ಲ್ಯಾಂಪ್ ಗಳು ಹೀಗೆ ಹಲವಾರು ರೀತಿಯ ಶಾಪಿಂಗ್ ವಸ್ತುಗಳಿವೆ. ಡಿಸೆಂಬರ್ ಅಂತಾರಾಷ್ಟ್ರೀಯ ಯೋಗ ಉತ್ಸವ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಆಹಾರ ಉತ್ಸವ ಹಾಗೂ ಜನವರಿ ತಿಂಗಳಿನಲ್ಲಿ ನಡೆಯುವ ಖರೀದಿ ಉತ್ಸವ ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಳು.

ಪಾಂಡಿಚೆರಿ ತಲುಪುವುದು ಹೇಗೆ

ಇಲ್ಲಿಗೆ ರಸ್ತೆ ಹಾಗೂ ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿನ ಹವಾಮಾನವೂ ಆಹ್ಲಾದಕರವಾಗಿರುತ್ತದೆ, ಇದರಿಂದಾಗಿಯೇ ಇಲ್ಲಿ ಜಗತ್ತಿನಾದ್ಯಂತದ ಪ್ರವಾಸಿಗರು ವರ್ಷಪೂರ್ತಿ ಕಾಣಿಸಿಕೊಳ್ಳುತ್ತಾರೆ.

ಭೇಟಿ ನೀಡಲು ಸರಿಯಾದ ಸಮಯ

ಇಲ್ಲಿರುವ ಸಾಂಸ್ಕೃತಿಕ, ಸಾಂಪ್ರದಾಯಿಕ ವಿವಿಧತೆ, ಆಹಾರದಲ್ಲಿರುವ ಆಯ್ಕೆಗಳು ಮತ್ತು ಇಲ್ಲಿನ ಆಕರ್ಷಕ ಸ್ಥಳಗಳು ಇದನ್ನು ಎಲ್ಲಾ ಕಾಲದಲ್ಲಿ ಭೇಟಿ ನೀಡಬಹುದಾದ ಹಾಗು ವಿಭಿನ್ನ ಪ್ರವಾಸ ಇಷ್ಟಪಡುವವರಿಗಾಗಿ ಮೊದಲ ಆಯ್ಕೆಯ ತಾಣವನ್ನಾಗಿಸಿದೆ.

ಪಾಂಡಿಚೆರಿ ಪ್ರಸಿದ್ಧವಾಗಿದೆ

ಪಾಂಡಿಚೆರಿ ಹವಾಮಾನ

ಪಾಂಡಿಚೆರಿ
32oC / 90oF
 • Partly cloudy
 • Wind: SSE 11 km/h

ಉತ್ತಮ ಸಮಯ ಪಾಂಡಿಚೆರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಾಂಡಿಚೆರಿ

 • ರಸ್ತೆಯ ಮೂಲಕ
  ರಸ್ತೆ ಮಾರ್ಗವಾಗಿಯೂ ಪಾಂಡಿಚೆರಿ ದೇಶದ ಇತರೆ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಪಾಂಡಿಚೆರಿ ಹಲವು ಭಾಗಗಳಿಂದ ನಿರಂತರ ಬಸ್ ಸಂಪರ್ಕ ಹೊಂದಿದೆ. ತಮಿಳುನಾಡಿನ ಕೊಯಮತ್ತೂರು, ಚೆನ್ನೈ ಮತ್ತು ಮಧುರೈ ನಿಂದ ಉತ್ತಮ ಸಂಪರ್ಕ ಜಾಲ ಹೊಂದಿದೆ. ಬೆಂಗಳುರಿನಿಂದಲೂ ಇಲ್ಲಿಗೆ ಬಸ್ಸುಗಳು ಉತ್ತಮ ಸಂಖ್ಯೆಯಲ್ಲಿವೆ. ಈ ನಗರಗಳಿಂದ ಬಸ್ ದರಗಳು ರೂ 50 ರಿಂದ 500 ರ ತನಕ ಇವೆ. ಸ್ಥಳೀಯ ಸಂಚಾರಕ್ಕಾಗಿ ಬಸ್ ದರಗಳು ಕೇವಲ ರೂ 3 ಮತ್ತು 4 ರೂಪಾಯಿಗಳಾಗಿವೆ. ಬಸ್ ಮೂಲಕ ಸಂಚಾರ ಪಾಂಡಿಚೆರಿ ಸುತ್ತಲು ಉತ್ತಮ ಆಯ್ಕೆಯಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಾಂಡಿಚೆರಿ ತನ್ನದೇ ಆದ ರೈಲ್ವೆ ನಿಲ್ದಾಣವನ್ನು ಹೊಂದಿದೆ. ಪ್ರಮುಖ ಕೇಂದ್ರಾಡಳಿತ ಪ್ರದೇಶವಾದ ಕಾರಣ ಇಲ್ಲಿಗೆ ಭಾರತದ ಪ್ರಮುಖ ನಗರಗಳಿಂದ ರೈಲ್ವೆ ಸಂಪರ್ಕ ಸದಾ ಇರುತ್ತದೆ. ಇದು ಇಲ್ಲಿಗೆ ತಲುಪಲು ಇರುವ ಉತ್ತಮ ಆಯ್ಕೆಯಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಾಂಡಿಚೆರಿಗೆ ಸಮೀಪದ ವಿಮಾನ ನಿಲ್ದಾಣ ಚೆನ್ನೈ ಆಗಿದೆ. ಚೆನ್ನೈನಿಂದ ಭಾರತ ಹಾಗೂ ಪ್ರಮುಖ ವಿದೇಶಿ ನಿಲ್ದಾಣಗಳಿಗೆ ನಿರಂತರವಾದ ಸಂಪರ್ಕ ಇದೆ. ಇಲ್ಲಿಂದ ಪಾಂಡಿಚೆರಿ 139 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ

ಪಾಂಡಿಚೆರಿ ಲೇಖನಗಳು

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Apr,Wed
Return On
25 Apr,Thu
 • Today
  Pondicherry
  32 OC
  90 OF
  UV Index: 8
  Partly cloudy
 • Tomorrow
  Pondicherry
  28 OC
  83 OF
  UV Index: 8
  Partly cloudy
 • Day After
  Pondicherry
  28 OC
  83 OF
  UV Index: 8
  Partly cloudy