ಸಸ್ಯಶಾಸ್ತ್ರೀಯ ಉದ್ಯಾನ ಮತ್ತು ಅಕ್ವೇರಿಯಂ, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಸಸ್ಯಶಾಸ್ತ್ರೀಯ ಉದ್ಯಾನ ಮತ್ತು ಅಕ್ವೇರಿಯಂ

ಸಿ.ಎಸ್.ಪೆರೆಟೊಟ್, 1828 ರಲ್ಲಿ ಈ ಉದ್ಯಾನವನವನ್ನು ನಿರ್ಮಿಸಿದರು. ಇಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಹೂವುಗಳನ್ನು ಕಾಣಬಹುದಾಗಿದ್ದು, ಇದೊಂದು ವಿಜ್ಞಾನ ಮತ್ತು ಸಂಶೋಧನಾ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ. ಪಾಂಡಿಚೆರಿಯ ಪ್ರಮುಖ ಬಸ್ ನಿಲ್ದಾಣದ ದಕ್ಷಿಣದ ಪ್ರವೇಶ ಸ್ಥಳದಲ್ಲಿ ಈ ಎರಡೂ ಉದ್ಯಾನ ಹಾಗು ಮತ್ಸ್ಯಾಲಯಗಳು ನೆಲೆಸಿವೆ. ಒಟ್ಟಾರೆಯಾಗಿ ಸುಮಾರು 22 ಎಕರೆ ಪ್ರದೇಶದಲ್ಲಿ ಈ ತಾಣ ಹರಡಿದೆ. ಇದು 1960 ರಿಂದ ಪಾಂಡಿಚೆರಿಯ ತೋಟಗಾರಿಕಾ ಇಲಾಖೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿರುವ ಅಕ್ವೇರಿಯಂ ನಲ್ಲಿ ವಿವಿಧ ಜಾತಿಯ ಮೀನುಗಳನ್ನು ಕಾಣಬಹುದಾಗಿದ್ದು, ಪ್ರವಾಸಿಗರು ಇಲ್ಲಿ ಜಲಜೀವಿಗಳ ವೈವಿಧ್ಯಮಯ ಲೋಕವನ್ನು ಕಣ್ಣಾರೆ ಕಂಡು ಆನಂದಿಸಬಹುದು.

ಉದ್ಯಾನವನದಲ್ಲಿ, ಮಕ್ಕಳ ರೈಲು, ನೃತ್ಯ ಕಾರಂಜಿ, ಅಕ್ವೇರಿಯಂ ಹಾಗು ಅದರಲ್ಲಿ ವಿವಿಧ ಜಾತಿಯ ನಕ್ಷತ್ರ ಮೀನುಗಳು ಇಲ್ಲಿವೆ.

Please Wait while comments are loading...