ಫ್ರೆಂಚ್ ಯುದ್ಧ ಸ್ಮಾರಕ, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಫ್ರೆಂಚ್ ಯುದ್ಧ ಸ್ಮಾರಕ

ಫ್ರೆಂಚ್ ಯುದ್ಧ ಸ್ಮಾರಕವನ್ನು ಮೊದಲ ವಿಶ್ವಯುದ್ಧದಲ್ಲಿ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಕಟ್ಟಲಾಗಿದೆ. ಇದನ್ನು 1971 ರಲ್ಲಿ ಕಟ್ಟಲಾಯಿತು ಹಾಗೂ ಪ್ರತಿ ವರ್ಷ ಬಾಸ್ಟೈಲ್ ದಿನದಂದು ಅಂದರೆ 14 ಜುಲೈ ಯಂದು ಇಲ್ಲಿ ಈ ಸ್ಮಾರಕ ಕಟ್ಟಡವನ್ನು ಸಿಂಗಾರ ಗೊಳಿಸಲಾಗುತ್ತದೆ. ಈ ದಿನದಂದು ಫ್ರೆಂಚ್ ಯುದ್ಢದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂದಿಗೂ ಪಾಂಡಿಚೆರಿ ಮತ್ತು ಫ್ರೆಂಚರ ನಡುವೆ ಇರುವ ಉತ್ತಮ ಸಂಬಂಧಕ್ಕೆ ಇದೇ ಸಾಕ್ಷಿಯಾಗಿದೆ. ಇದನ್ನು ಗೌಬರ್ಟ್ ಅವೆನ್ಯು ದಲ್ಲಿ ಕಾಣಬಹುದಾಗಿದ್ದು, ದಿನವಿಡಿ ತೆರೆದಿರುತ್ತದೆ. ಪಾಂಡಿಚೆರಿಯ ಈ ಸ್ಥಳದಲ್ಲಿ, ಕಳೆಯುವ ಒಂದು ದಿನದ ನೆನಪು ಯಾವಾಗಲೂ ಹಸಿರಾಗಿರುತ್ತದೆ.

Please Wait while comments are loading...