ಪಾಂಡಿಚೆರಿ ವಸ್ತುಸಂಗಹಾಲಯ, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಪಾಂಡಿಚೆರಿ ವಸ್ತುಸಂಗಹಾಲಯ

ಪಾಂಡಿಚೆರಿ ವಸ್ತುಸಂಗ್ರಹಾಲಯ ನೀವು ಇಲ್ಲಿ ಇರಬೇಕಾದರೆ ನೋಡಲೇ ಬೇಕಾದ ಇನ್ನೊಂದು ಪ್ರಮುಖ ಸ್ಥಳವಾಗಿದೆ. ಇಲ್ಲಿ ಒಳಗಿರುವ ಗ್ಯಾಲರಿಯಲ್ಲಿ ಇಲ್ಲಿಗೆ ಸಮೀಪವಿರುವ ಅರಿಕಮೇಡು ರೋಮನ್ ವಸತಿ ಪ್ರದೇಶದ ಬಹಳಷ್ಟು ವಾಸ್ತು ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಇದು ನಾವೆಲ್ಲ ನೋಡದೆ ಹೋದ ಕಾಲದ ಪಳೆಯುಳಿಕೆಗಳನ್ನು ಸಂಗ್ರಹಿಸಿಟ್ಟ ಜಾಗವೂ ಹೌದು. ಇಲ್ಲಿರುವ ಬಹಳಷ್ಟು ವಸ್ತುಗಳು ಚೋಳ ಮತ್ತು ಪಲ್ಲವ ರಾಜವಂಶದ ಕಾಲದ ವಸ್ತುಗಳಾಗಿವೆ. ಇವುಗಳಲ್ಲಿ ಕಂಚು ಮತ್ತು ಕಲ್ಲಿನ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿವೆ.

ಇದರ ಜೊತೆಗೆ ಇಲ್ಲಿ ಪಾಂಡಿಚೆರಿಯಿಂದ ಸಂಗ್ರಹಿಸಿ ತಂದ ಚಿಪ್ಪುಗಳ ಸಂಗ್ರಹವೂ ಇದೆ. ಇಲ್ಲಿಗೆ ಬಂದ ಪ್ರವಾಸಿಗರಿಗೆ ಪಾಂಡಿಚೆರಿಯ ಇತಿಹಾಸದ ಜೊತೆಗೆ ಫ್ರೆಂಚ್ ಆಡಳಿತದ ಬಗ್ಗೆಯೂ ಸಾಕಷ್ಟು ಮಾಹಿತಿ ಒದಗುತ್ತದೆ. ಒಮ್ಮೆ ನೀವು ಪಾಂಡಿಚೆರಿಗೆ ಹೋದಿರೆಂದರೆ ಅಲ್ಲಿಂದ ವಸ್ತುಸಂಗ್ರಹಾಲಯಕ್ಕೆ ಹೋಗುವುದು ಸುಲಭವಾಗಿದೆ. ಈ ವಸ್ತು ಸಂಗ್ರಹಾಲಯ ಭಾರತಿ ಉದ್ಯಾನದಲ್ಲಿದೆ.

Please Wait while comments are loading...