ಪಾಂಡಿಚೆರಿ ಕಡಲ ಕಿನಾರೆ, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಪಾಂಡಿಚೆರಿ ಕಡಲ ಕಿನಾರೆ

ಪ್ರೊಮನೆಡ್ ಬೀಚ್ ಎಂದು ಕರೆಯಿಸಿಕೊಳ್ಳುವ ಪಾಂಡಿಚೆರಿ ಕಡಲ ಕಿನಾರೆ ಒಂದು ಕಾಲದಲ್ಲಿ ಪಾಂಡಿಚೆರಿಯ ಒಂದು ಪ್ರಮುಖ ತಾಣವಾಗಿತ್ತು. ಕಡಲ ಕೊರೆತದಿಂದ ಇಲ್ಲಿನ ಕಡಲ ಕಿನಾರೆಗೆ ಕಟ್ಟಿದ ತಡೆಗೋಡೆ ಸುಂದರವಾದ ಈ ಕಡಲ ಕಿನಾರೆಯ ಕೊನೆಯಾಯಿತು. ಪ್ರಸ್ತುತ ಈ ಕಡಲ ತೀರವು ಈಜುವುದಾಗಲಿ ಅಥವಾ ಮತ್ತಿತರೆ ನೀರಿನಾಟಗಳಿಗೆ ಸೂಕ್ತವಲ್ಲದ ಪ್ರದೇಶವಾಗಿ ಮಾರ್ಪಟ್ಟಿದೆ. ಇದು ಸಂಜೆಯ ಸಮಯವನ್ನು ಕಳೆಯಲು ಅತ್ಯಂತ ಸೂಕ್ತವಾದ ಪ್ರದೇಶವಾಗಿದ್ದರೂ ಈಗ ಇಲ್ಲಿ ಸಂಜೆಯ ವೇಳೆಯಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಇದು ಸುಮಾರು 1.5 ಕಿ.ಮೀ ಹರಡಿದೆ ಹಾಗೂ ನಗರದ ಪ್ರಮುಖ ಆಕರ್ಷಣೆಗಳ ಜೊತೆ ಜೊತೆಗೆ ಸಾಗುತ್ತದೆ. ಇಂದಿಗೂ ಇದು ನೋಡಲೇ ಬೇಕಾದ ಒಂದು ಸ್ಥಳವಾಗಿದೆ.

Please Wait while comments are loading...