ಡ್ಯುಪ್ಲೆಕ್ಸ್ ಪ್ರತಿಮೆ, ಪಾಂಡಿಚೆರಿ

ಮುಖಪುಟ » ಸ್ಥಳಗಳು » ಪಾಂಡಿಚೆರಿ » ಆಕರ್ಷಣೆಗಳು » ಡ್ಯುಪ್ಲೆಕ್ಸ್ ಪ್ರತಿಮೆ

ಜೋಸೆಫ್ ಫ್ರಾನ್ಸಿಸ್ ಡ್ಯುಪ್ಲೆಕ್ಸ್, ಪಾಂಡಿಚೆರಿಯ ಗವರ್ನರ್ ಆಗಿದ್ದರು. ಇವರ ಸ್ಮರಣಾರ್ಥ ಪ್ರತಿಮೆಯನ್ನು ಇಲ್ಲಿನ ಬೀಚ್ ರಸ್ತೆಯ ಮೇಲೆ ಸ್ಥಾಪಿಸಲಾಗಿದೆ. 1742 ರಿಂದ 1754 ರ ತನಕ ಇವರು ಇಲ್ಲಿನ ಗವರ್ನರ್ ಆಗಿದ್ದರು. ಇದು ಪಾಂಡಿಚೆರಿಯ ಮಕ್ಕಳ ಉದ್ಯಾನದ ಬಳಿಯಲ್ಲಿದೆ. ಈ ಪ್ರತಿಮೆ 2.88 ಮೀ ಎತ್ತರವಿದೆ ಹಾಗೂ ಇದನ್ನು ಉದ್ಯಾನವನದ ದಕ್ಷಿಣ ತುದಿಯಲ್ಲಿದೆ. ಇದನ್ನು ಫ್ರೆಂಚ್ ಸರ್ಕಾರ, ಗವರ್ನರ್ ನ ಕೆಲಸವನ್ನು ಮೆಚ್ಚಿಕೊಂಡು ನಿರ್ಮಾಣ ಮಾಡಿತ್ತು. ಇದೇ ಅವಧಿಯಲ್ಲಿ ಫ್ರಾನ್ಸ್ ನಲ್ಲೂ ಆತನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಪ್ರತಿಮೆ ಗೋಬರ್ಟ್ ಅವೆನ್ಯೂ ದಲ್ಲಿದೆ.

ಫ್ರೆಂಚ್ ವಸಾಹತು ಭಾರತದಲ್ಲಿ ಸ್ಥಾಪನೆಯಾಗುತ್ತಿದ್ದ ಅವಧಿಯಲ್ಲಿ ಈ ಗವರ್ನರ್ ಅವರ ಸಾಧನೆ ಬಹಳ ಪ್ರಮುಖವಾಗಿತ್ತು. ಭಾರತದಲ್ಲಿ ಫ್ರೆಂಚ್ ಅಧಿಪತ್ಯವನ್ನು ಸ್ಥಾಪಿಸಲು ಇವರ ಸೇವೆ ಬಹಳ ಪ್ರಾಮುಖ್ಯವಾಗಿತ್ತು. ಪಾಂಡಿಚೆರಿಗೆ ಹೋದಾಗ ಈ ಪ್ರತಿಮೆ ಹಾಗೂ ಪ್ರತಿಮೆ ಇರುವ ಮಕ್ಕಳ ಉದ್ಯಾನವನ್ನು ನೋಡಲು ಮರೆಯದಿರಿ.

Please Wait while comments are loading...