Search
  • Follow NativePlanet
Share
ಮುಖಪುಟ » ಸ್ಥಳಗಳು» ಹಸ್ತಿನಾಪುರ

ಹಸ್ತಿನಾಪುರ : ಮಹಾಭಾರತದ ಭೂಮಿಯಲ್ಲಿ

21

ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸಮೀಪದಲ್ಲಿ ಈ ಹಸ್ತಿನಾಪುರವಿದೆ. ಗಂಗಾ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ಹಸ್ತಿನಾಪುರವು ಮಹಾಭಾರತ ಕಾಲದಿಂದಲೂ ಹೆಸರುವಾಸಿಯಾಗಿದೆ. ಅದರ ಮೂಲಗಳ ಕುರಿತು ಮಾಹಿತಿ ನಮಗೆ ಮಹಾ ಭಾರತದಿಂದಲೇ ತಿಳಿದುಬರುತ್ತದೆ. ಮಹಾ ಕಾವ್ಯಗಳ ಪ್ರಕಾರ, ಇದು ಕೌರವರ ರಾಜಧಾನಿಯಾಗಿತ್ತು. ಮಹಾ ಭಾರತದ ದಂತಕಥೆಯಾದ ಮಹಾ ಕುರುಕ್ಷೇತ್ರಯುದ್ಧವು ಪಾಂಡವ ಮತ್ತುಕೌರವರ ನಡುವೆ ನಡೆಯಿತು. ಯುದ್ಧವನ್ನು ಪಾಂಡವರು ಜಯಿಸಿದರು. ಮುಂದೆ 36 ವರ್ಷಗಳವರೆಗೆ ಹಸ್ತಿನಾಪುರವನ್ನು ಆಳಿದರು. ಮುಂದೆ ಕಲಿಯುಗವು ಆರಂಭವಾಯಿತು.

ಜ್ಯೋತಿಷ್ಯ, ಭೌಗೋಳಿಕ, ಭೌತಿಕ, ಪ್ರಾಕೃತಿಕ, ಶಿಲಾ ಶಾಸನಗಳು, ಧರ್ಮಗ್ರಂಥಗಳು ಸೇರಿದಂತೆ ಅನೇಕ ಸಾಕ್ಷ್ಯಾಧಾರಗಳು ನಮ್ಮ ಈ ಮೇಲಿನ ನಂಬಿಕೆಯನ್ನು ಬಲಪಡಿಸಿವೆ. ಭಾರತದ ಪುರಾತತ್ವಇಲಾಖೆಯು ಈ ಪಟ್ಟಣದ ಅನೇಕ ಭಾಗಗಳಲ್ಲಿ ಉತ್ಖನನ ಕಾರ್ಯಗಳನ್ನು ಕೈಗೊಂಡಿದೆ ಮತ್ತು ಹಲವಾರು ದೇವಾಲಯಗಳನ್ನು ಮತ್ತು ಪ್ರಾಚೀನ ಸ್ಮಾರಕಗಳನ್ನು ಶೋಧಿಸಿದೆ.

ಹಸ್ತಿನಾಪುರವು ಜೈನರಿಗೂ ಕೂಡ ಪವಿತ್ರವಾದದ್ದು. ಏಕೆಂದರೆ ಹಸ್ತಿನಾಪುರದಲ್ಲಿಯೇ 24 ಜೈನ ತೀರ್ಥಂಕರಗಳ ಪೈಕಿ 16 ನೇ, 17ನೇ ಮತ್ತು 18ನೇ ತೀರ್ಥಂಕರರು ಹಸ್ತಿನಾಪುರದಲ್ಲಿಯೇ ಜನ್ಮ ತಾಳಿದ್ದರು. ಈ ನಗರವು ಪ್ರತಿ ವರ್ಷವು ಜೈನಯಾತ್ರಿಕರನ್ನುಅಪಾರವಾಗಿ ಆಕರ್ಷಿಸುತ್ತದೆ.

ಹಸ್ತಿನಾಪುರ ಮತ್ತುಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಮೇಲೆ ಹೇಳಿದಂತೆ, ಹಸ್ತಿನಾಪುರವು ಹಿಂದು ಮತ್ತು ಜೈನ ಸಮುದಾಯಗಳಿಗೆ ಪವಿತ್ರವಾಗಿದೆ. ಇಲ್ಲಿ ನೋಡತಕ್ಕಂತಹ ಅನೇಕ ಸ್ಥಳಗಳಿವೆ. ಹಳೆ ಪಾಂಡೇಶ್ವರ ದೇವಸ್ಥಾನ, ಕರಣದೇವಸ್ಥಾನ ಮತ್ತು ಕಮಲ ದೇವಸ್ಥಾನ ಸೇರಿದಂತೆ ಅನೇಕ ಆಕರ್ಷಣೀಯ ಸ್ಥಳಗಳಿವೆ. ಇಲ್ಲಿರುವ ದಿಗಂಬರ ಜೈನ ಬಡಾ ಮಂದಿರ, ಜೈನ ಜಂಬುದ್ವೀಪ ಮಂದಿರ ಮತ್ತು ಶ್ರೀ ಶ್ವೇತಾಂಬರ ಜೈನ ಮಂದಿರಗಳು ಜೈನ ಸಮುದಾಯವನ್ನು ಪ್ರತಿನಿಧಿಸುತ್ತವೆ. ಕೈಲಾಶ ಪರ್ವತ, ಅಷ್ಟಪಾದ ಮತ್ತು  1986 ರಲ್ಲಿ ಸ್ಥಾಪಿತವಾದ ಹಸ್ತಿನಾಪುರ ಅಭಯಾರಣ್ಯವು ಹಸ್ತಿನಾಪುರದ ಇತರ ಪ್ರಮುಖ ಆಕರ್ಷಣೆಗಳಾಗಿವೆ.

ಹಸ್ತಿನಾ ಪುರವನ್ನುತಲುಪುವುದು ಹೇಗೆ?

ಪ್ರವಾಸಿಗರು ಹಸ್ತಿನಾಪುರವನ್ನು ವಿಮಾನ, ರೇಲ್ವೇ ಮತ್ತು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು. ಇದರಲ್ಲಿ ಯಾವುದೇ ಯೋಜನೆಯನ್ನು ಆರಿಸಿಕೊಂಡರೂ ಹಸ್ತಿನಾಪುರವನ್ನು ಸುಗಮವಾಗಿ ತಲುಪಬಹುದು.

ಹಸ್ತಿನಾಪುರಕ್ಕೆ ಭೇಟಿ ನೀಡಲುಯೋಗ್ಯವಾದ ಸಮಯ?

ಅಕ್ಟೋಬರ್ ನಿಂದ ಮಾರ್ಚ್ ವರೆಗೂ ಹಸ್ತಿನಾಪುರಕ್ಕೆ ಭೇಟಿಕೊಡಲು ಅತ್ಯಂತ ಯೋಗ್ಯವಾದ ಸಮಯವಾಗಿದೆ. ಉಳಿದ ತಿಂಗಳುಗಳು ತುಂಬಾ ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಏನೇ ಇರಲಿ, ಹಸ್ತಿನಾಪುರವು ಒಂದು ಮಹತ್ವದ ಯಾತ್ರಾ ಸ್ಥಳವಾದ್ದರಿಂದ ಇದು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹಸ್ತಿನಾಪುರ ಪ್ರಸಿದ್ಧವಾಗಿದೆ

ಹಸ್ತಿನಾಪುರ ಹವಾಮಾನ

ಉತ್ತಮ ಸಮಯ ಹಸ್ತಿನಾಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಸ್ತಿನಾಪುರ

  • ರಸ್ತೆಯ ಮೂಲಕ
    ಹಸ್ತಿನಾಪುರಕ್ಕೆ ತೆರಳಲು ದೆಹಲಿ, ಮೀರತ್ ಮತ್ತು ಉತ್ತರ ಪ್ರದೇಶದ ಅನೇಕ ನಗರಗಳಿಂದ ಬಸ್ಸುಗಳ ಸೌಲಭ್ಯ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೀರತ್ ರೇಲ್ವೆ ನಿಲ್ದಾಣವು ಹಸ್ತಿನಾಪುರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ನೀವು ಇಲ್ಲಿಂದ ಹಸ್ತಿನಾಪುರವನ್ನು ತಲುಪಲು ಟ್ಯಾಕ್ಸಿಯನ್ನು ಬಳಸಬಹುದು. ಅಷ್ಟೇ ಅಲ್ಲ, ಇಲ್ಲಿ ಬಸ್ಸುಗಳ ಸೌಕರ್ಯವೂ ಉಂಟು. ಮೀರತ್ ನಿಂದ ಹಸ್ತಿನಾಪುರಕ್ಕೆ ಸಾಕಷ್ಟು ಬಸ್ಸುಗಳು ಒಡಾಡುತ್ತವೆ. ಬೆಳಿಗ್ಗೆ 7.30 ರಿಂದ ರಾತ್ರಿ 8 ಘಂಟೆಯವರೆಗೂ ಬಸ್ಸುಗಳ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದೆಹಲಿ ವಿಮಾನ ನಿಲ್ದಾಣವು ಹಸ್ತಿನಾಪುರಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ದೆಹಲಿಯಿಂದ ನೀವು ಹಸ್ತಿನಾಪುರಕ್ಕೆ ತೆರಳಲು ಟ್ಯಾಕ್ಸಿಯನ್ನು ಬಳಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun