Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಜಂಬುದ್ವೀಪ

ಜಂಬುದ್ವೀಪ, ಹಸ್ತಿನಾಪುರ

1

ಹಸ್ತಿನಾಪುರ ನಗರದಲ್ಲಿರುವ ಜಂಬು ದ್ವೀಪವು ದ್ವೀಪ ಮಾದರಿಯ ದೇವಾಲಯ ಸಂಕೀರ್ಣವಾಗಿದ್ದು,  ಪ್ರಸಿದ್ಧ ಜೈನ ಯಾತ್ರಾ ಕೇಂದ್ರವಾಗಿದೆ. ಮಹಾ ತ್ಯಾಗಿ ಮತ್ತು ಶ್ರಮ ಜೀವಿಯಾದ ಜೈನ ಸಾಧ್ವಿ , ಪರಮ ಪೂಜ್ಯ ಶಿರೋಮಣಿ ಶ್ರೀ ಜ್ಞಾನ ಮಾತಾಜಿಯ ಗೌರವಾರ್ಥವಾಗಿ ಮತ್ತು ಸ್ಮರಣಾರ್ಥವಾಗಿ ಮಾಡಲಾಗಿದೆ ಎಂಬ ನಂಬಿಕೆ ಇದೆ. ಸಾಧ್ವಿಯು 1965 ರಲ್ಲಿ ವಿಂದ್ಯ ಪರ್ವತದ ಮೇಲೆ ಇರುವ ಭಗವಾನ ಬಾಹುಬಲಿಯ ಪವಿತ್ರ ವಿಗ್ರಹದ ಕೆಳಗೆ ತಪಸ್ಸಿಗೆ ಕುಳಿತಿದ್ದಳು. ಆಗ ತನ್ನ ಧ್ಯಾನದಲ್ಲಿ ಭವ್ಯ ಮಧ್ಯಲೋಕ – ಮಧ್ಯಮ ವಿಶ್ವವನ್ನು , ಜೊತೆಗೆ ಹದಿಮೂರು ದ್ವೀಪಗಳನ್ನು – ತೇರಾ ದ್ವೀಪಗಳನ್ನು ಕಂಡಳಂತೆ.

ಸಾಧ್ವಿಯು ತನ್ನ ಧ್ಯಾನದಲ್ಲಿ ಕಂಡ ಲೋಕದ ವಿವರಣೆಯನ್ನು ಕುರಿತು 2000 ವರ್ಷಗಳ ಹಿಂದೆ ಬರೆಯಲಾದ ಹಳೆಯ ಜೈನ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದ್ದು, ಎರಡಕ್ಕೂ ಆಗಾಧವಾದ ಹೋಲಿಕೆಗಳಿವೆ. ಮೊದಲ ಜೈನ ತೀರ್ಥಂಕರರಾದ ಭಗವಾನ ವೃಷಭ ದೇವರು ಸಹ ತಮ್ಮ ಕನಸಿನಲ್ಲಿ ಇದೇ ದೃಶ್ಯವನ್ನು ಕಂಡರು ಎಂಬ ನಂಬಿಕೆ ಇದೆ.  ಜೈನ ಧಾರ್ಮಿಕ ಗ್ರಂಥಗಳಲ್ಲಿ ತೀರ್ಥಂಕರರಿಂದ ಉಲ್ಲೇಖಿಸಲ್ಪಟ್ಟಂತೆಯೇ, ಇಂದಿನ ಜಾಗತಿಕ ಭೌಗೋಳಿಕದ ವಿನ್ಯಾಸದ ಪರಿಕಲ್ಪನೆಯಂತೆಯೇ ಜಂಬುದ್ವೀಪವಿದೆ. ಇದು ಹಳೆಯ ರಚನೆಯನ್ನೇ ಪ್ರತಿನಿಧಿಸುತ್ತದೆ. ಈ ದ್ವೀಪದ ಮಾದರಿಯನ್ನು ಜೈನ ಧರ್ಮಗ್ರಂಥಗಳ ವಿವರಣೆಗಳ ಆಧಾರದ ಮೇಲೆ ಹಸ್ತಿನಾಪುರದ ತ್ರಿಲೋಕಶೋಧಸಂಸ್ಥಾನವು ನಿರ್ಮಿಸಿದೆ. ಇದು ದಂತಕಥೆಯಾದ ಸುಮೇರು ಪರ್ವತವನ್ನು ಒಳಗೊಂಡಿದೆ. ಇದು ಮೂಲತಃ ಎತ್ತರದ ಪರ್ವತವಾಗಿದ್ದು, ವಿಶ್ವದಲ್ಲಿಯೇ ಲಕ್ಷಾಂತರ ಮೈಲುಗಳ ಪರ್ವತ ಶ್ರೇಣಿಗಳನ್ನು ಹೊಂದಿದೆ ಎಂಬ ನಂಬಿಕೆ ಇದೆ.

ಜಂಬು ದ್ವೀಪದಲ್ಲಿರುವ ಸುಮೇರು ಪರ್ವತವು 101 ಅಡಿ ಎತ್ತರವಾಗಿದ್ದು, ಚೈತ್ಯಾಲಯಗಳು, ನದಿಗಳು, ಬೆಟ್ಟಗಳನ್ನು ಮತ್ತು ಪುರಾಣ ಪ್ರಸಿದ್ಧ ಲವಣ ಸಮುದ್ರಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun